Facebook Twitter Instagram
    Sunday, August 16
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರಿನ ಸಿಟಿ ಸೆಂಟರ್ KFCಗೆ ಆಹಾರ ಸುರಕ್ಷತಾ ಇಲಾಖೆ ದಿಢೀರ್ ದಾಳಿ- 9 ತಿಂಗಳ ಹಿಂದಿನ ಮಾಂಸ ಪತ್ತೆ..! ಆರೋಗ್ಯಾಧಿಕಾರಿಗಳಿಂದ ಮಳಿಗೆಗೆ ಬೀಗ
    ಇತ್ತೀಚಿನ ಸುದ್ದಿ

    ಮಂಗಳೂರಿನ ಸಿಟಿ ಸೆಂಟರ್ KFCಗೆ ಆಹಾರ ಸುರಕ್ಷತಾ ಇಲಾಖೆ ದಿಢೀರ್ ದಾಳಿ- 9 ತಿಂಗಳ ಹಿಂದಿನ ಮಾಂಸ ಪತ್ತೆ..! ಆರೋಗ್ಯಾಧಿಕಾರಿಗಳಿಂದ ಮಳಿಗೆಗೆ ಬೀಗ

    August 16, 2026
    Share

    ಮಂಗಳೂರು: ನಗರದ ಕೆ.ಎಸ್. ರಾವ್ ರಸ್ತೆಯಲ್ಲಿರುವ ಕೆಎಫ್‌ಸಿ (KFC) ಮಳಿಗೆಯಿಂದ ಆನ್‌ಲೈನ್ ಮೂಲಕ ತರಿಸಿಕೊಂಡ ಚಿಕನ್ ದುರ್ವಾಸನೆ ಬೀರುತ್ತಿದೆ ಎಂಬ ಗ್ರಾಹಕರ ದೂರಿನ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿಗಳು ಶನಿವಾರ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತಾಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದ ಅಧಿಕಾರಿಗಳ ತಂಡವು ಮಳಿಗೆಯ ಅಡುಗೆ ಕೋಣೆ, ಕೋಲ್ಡ್ ಸ್ಟೋರೇಜ್, ಡೀಪ್ ಫ್ರೀಜರ್ ಹಾಗೂ ಚಿಕನ್ ಕರಿಯಲು ಬಳಸುವ ಎಣ್ಣೆಯ ಗುಣಮಟ್ಟವನ್ನು ಕೂಲಂಕಷವಾಗಿ ತಪಾಸಣೆ ನಡೆಸಿತು.

    ಆಗಸ್ಟ್ 15ರಂದು ಗ್ರಾಹಕರೊಬ್ಬರು ಈ ಮಳಿಗೆಯಿಂದ ಆನ್‌ಲೈನ್ ಮೂಲಕ ‘ಪೆರಿ ಪೆರಿ ಚಿಕನ್’ ಆರ್ಡರ್ ಮಾಡಿದ್ದರು. ಮನೆಗೆ ತಲುಪಿದ ಚಿಕನ್ ದುರ್ವಾಸನೆ ಬೀರುತ್ತಿದ್ದು, ಆಹಾರ ಹಾಳಾಗಿರುವ ಶಂಕೆ ವ್ಯಕ್ತಪಡಿಸಿ ಅವರು ತಕ್ಷಣವೇ ಆಹಾರ ಸುರಕ್ಷತಾ ಇಲಾಖೆಗೆ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು, ಮಳಿಗೆಯಲ್ಲಿದ್ದ ಫ್ರೋಝನ್ ಲೆಗ್ ಪೀಸ್ ಚಿಕನ್, ತಾಪಮಾನ ಸಮತೋಲನಗೊಳಿಸಿದ ಚಿಕನ್ ಹಾಗೂ ಮಸಾಲೆ ಬೆರೆಸಿದ ಚಿಕನ್ ಸೇರಿದಂತೆ ಮೂರು ಬಗೆಯ ಚಿಕನ್ ಮಾದರಿಗಳನ್ನು ಹಾಗೂ ಕರಿಯಲು ಬಳಸುತ್ತಿದ್ದ ಎಣ್ಣೆಯ ಮಾದರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

    ಸಂಗ್ರಹಿಸಿದ ಎಲ್ಲಾ ಮಾದರಿಗಳನ್ನು ಗುಣಮಟ್ಟ ಹಾಗೂ ಬ್ಯಾಕ್ಟೀರಿಯಾ ಪರೀಕ್ಷೆಗಾಗಿ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ. ತಪಾಸಣೆ ವೇಳೆ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಪ್ಯಾಕ್ ಮಾಡಲಾಗಿದ್ದ ಚಿಕನ್ ದಾಸ್ತಾನು ಪತ್ತೆಯಾಗಿದ್ದು, ಈ ಉತ್ಪನ್ನಗಳ ಶೆಲ್ಫ್ ಲೈಫ್ ಆರು ತಿಂಗಳಿಗಿಂತ ಹೆಚ್ಚಿರುತ್ತದೆ ಎಂದು ಮಳಿಗೆಯ ಸಿಬ್ಬಂದಿ ಅಧಿಕಾರಿಗಳಿಗೆ ವಿವರಣೆ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತಾಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್., ಮಳಿಗೆಯಲ್ಲಿ ಸೂಕ್ತ ಸ್ವಚ್ಛತೆ ಕಾಪಾಡುವಂತೆ ಹಾಗೂ ಹಳಸಿದ ಅಥವಾ ಅನುಮಾನಾಸ್ಪದ ಆಹಾರ ಪದಾರ್ಥಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು. ಅಲ್ಲದೆ ಮಳಿಗೆಗೆ ಅಧಿಕೃತ ನೋಟಿಸ್ ನೀಡಲಾಗುತ್ತಿದ್ದು, ಸಂಸ್ಥೆಯ ಉತ್ತರ ಹಾಗೂ ಪ್ರಯೋಗಾಲಯದ ವರದಿ ಆಧರಿಸಿ ಜಿಲ್ಲಾಧಿಕಾರಿ ಅಥವಾ ಅಪರ ಜಿಲ್ಲಾಧಿಕಾರಿಗಳ ನ್ಯಾಯಾಲಯ

    Post Views: 6

    Related Posts

    ಮಂಗಳೂರು: ಪೇಸ್ ನಾಲೆಡ್ಜ್ ಸಿಟಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

    August 16, 2026

    ಪುತ್ತೂರು: ಅಕ್ರಮ ಮರ ಸಾಗಾಟ-ಲಾರಿ ಸಹಿತ ಆರೋಪಿ ವಶಕ್ಕೆ

    August 15, 2026

    ಉಡುಪಿ: ಉದ್ಯಮಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ- ಮತ್ತಿಬ್ಬರು ಅರೆಸ್ಟ್!!

    August 15, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಂಗಳೂರು: ಪೇಸ್ ನಾಲೆಡ್ಜ್ ಸಿಟಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

    August 16, 2026

    ಮಂಗಳೂರಿನ ಸಿಟಿ ಸೆಂಟರ್ KFCಗೆ ಆಹಾರ ಸುರಕ್ಷತಾ ಇಲಾಖೆ ದಿಢೀರ್ ದಾಳಿ- 9 ತಿಂಗಳ ಹಿಂದಿನ ಮಾಂಸ ಪತ್ತೆ..! ಆರೋಗ್ಯಾಧಿಕಾರಿಗಳಿಂದ ಮಳಿಗೆಗೆ ಬೀಗ

    August 16, 2026

    ಪುತ್ತೂರು: ಅಕ್ರಮ ಮರ ಸಾಗಾಟ-ಲಾರಿ ಸಹಿತ ಆರೋಪಿ ವಶಕ್ಕೆ

    August 15, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.