Facebook Twitter Instagram
    Friday, April 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»Uncategorized»ವೃದ್ಧೆಯನ್ನು ಕೊಂದು ಮೃತದೇಹವನ್ನು ಹಿತ್ತಿಲಿನಲ್ಲಿ ಹೂತು ಹಾಕಿದ ಪ್ರಕರಣ- ಮಣಿಪಾಲದಲ್ಲಿ ಇಬ್ಬರ ಬಂಧನ
    Uncategorized

    ವೃದ್ಧೆಯನ್ನು ಕೊಂದು ಮೃತದೇಹವನ್ನು ಹಿತ್ತಿಲಿನಲ್ಲಿ ಹೂತು ಹಾಕಿದ ಪ್ರಕರಣ- ಮಣಿಪಾಲದಲ್ಲಿ ಇಬ್ಬರ ಬಂಧನ

    September 14, 2024
    Share

    ಕಾಸರಗೋಡು: ಕೊಚ್ಚಿ ನಿವಾಸಿ ಸುಭದ್ರಾ (73) ಅವರನ್ನು ಕೊಂದು ಮೃತದೇಹವನ್ನು ಹಿತ್ತಿಲಿನಲ್ಲಿ ಹೂತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ದಂಪತಿಯನ್ನು ಕರ್ನಾಟಕದ ಮಣಿಪಾಲದಿಂದ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

    ಕಾಟೂರು ಪಳ್ಳಿಪರಂಬಿಲ್‌ನ ಮ್ಯಾಥ್ಯೂಸ್‌ ಯಾನೆ ನಿತಿನ್‌(35) ಮತ್ತು ಪತ್ನಿ ಕರ್ನಾಟಕದ ಉಡುಪಿ ನಿವಾಸಿ ಶರ್ಮಿಳಾ(36)ನನ್ನು ಮಣ್ಣಾಂ ಚೇರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಉಡುಪಿಯಲ್ಲಿದ್ದಾರೆ ಎಂಬ ಮಾಹಿತಿ ಆಧಾರದಲ್ಲಿ ಅವರ ಮೊಬೈಲ್‌ ಲೊಕೇಶನ್‌ ಕೇಂದ್ರೀಕರಿಸಿ ಪೊಲೀಸರು ಅವರ ಬೆನ್ನು ಬಿದ್ದಿದ್ದರು. ಸೆ.12ರಂದು ಬೆಳಗ್ಗೆ ಮಂಗಳೂರಿನಲ್ಲಿ ಶರ್ಮಿಳಾ ಫೋನ್‌ ಆನ್‌ ಆಗಿತ್ತು. ಕೂಡಲೇ ಪೊಲೀಸರು ಉಡುಪಿ ಹಾಗೂ ಮಂಗಳೂರು ಮೊದಲಾದೆಡೆ ಕೆಲವರನ್ನು ಸಂಪರ್ಕಿಸಿ ಆರೋಪಿಗಳ ಮೇಲೆ ನಿಗಾ ಇರಿಸುವಂತೆ ಸೂಚನೆ ನೀಡಿದ್ದರು.

    ಮಧ್ಯಾಹ್ನ ಶರ್ಮಿಳಾ ಫೋನ್‌ ಮಣಿಪಾಲದಲ್ಲಿ ಕಾರ್ಯಾಚರಿಸಿದೆ. ಆಕೆ ಈ ಹಿಂದೆ ವಾಸಿಸಿದ್ದ ಪೆರಂಪಳ್ಳಿಯ ಮಹಿಳೆಯೊಬ್ಬರ ಮನೆಗೆ ಬಂದಿದ್ದನ್ನು ಪೊಲೀಸರು ತಿಳಿದುಕೊಂಡು ಅಲ್ಲಿಂದ ಅವರನ್ನು ಬಂಧಿಸಲಾಯಿತು. ಆರೋಪಿಗಳ ಶೋಧ ಕಾರ್ಯಕ್ಕೆ ಮಣಿಪಾಲ ಪೊಲೀಸರು ಸಹಕರಿಸಿದ್ದರು ಎಂದು ಮಾಹಿತಿ ತಿಳಿಯಲಾಗಿದೆ.

    Post Views: 203

    Related Posts

    ಕಾಪು: ಸ್ಕೂಟಿಗೆ ಬಸ್ ಡಿಕ್ಕಿ- ಬಾಲಕಿ ಸಾವು

    April 22, 2026

    ಸುಳ್ಯ : ಕಂಬಕ್ಕೆ ಬೈಕ್ ಡಿಕ್ಕಿ- ಮೆಸ್ಕಾಂ ಸಿಬ್ಬಂದಿ ಮೃತ್ಯು

    March 25, 2026

    ಏಪ್ರಿಲ್ 1, 2026 ರಿಂದ ಟೋಲ್ ದರ ಏರಿಕೆ: ₹3,000 ದಿಂದ ₹3,075 ಗೆ ವಾರ್ಷಿಕ ಪಾಸ್?

    March 14, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.