Facebook Twitter Instagram
    Friday, April 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಶ್ರೀಕ್ಷೇತ್ರ ಕುದ್ರೋಳಿಯಲ್ಲಿ 900 ಕೆಜಿ ಧಾನ್ಯಗಳಿಂದ ಬೃಹತ್ ತಿರಂಗ
    ಇತ್ತೀಚಿನ ಸುದ್ದಿ

    ಮಂಗಳೂರು: ಶ್ರೀಕ್ಷೇತ್ರ ಕುದ್ರೋಳಿಯಲ್ಲಿ 900 ಕೆಜಿ ಧಾನ್ಯಗಳಿಂದ ಬೃಹತ್ ತಿರಂಗ

    August 14, 2022
    Share

    ಮಂಗಳೂರು: ಈ ಬಾರಿ ನಾವು ದೇಶ ಸ್ವಾತಂತ್ರ್ಯ ಅಮೃತೋತ್ಸವದ ಸಡಗರದಲ್ಲಿದೆ. ಗಲ್ಲಿಗಲ್ಲಿಗಳಲ್ಲಿ ತಿರಂಗ ರಾರಾಜಿಸುತ್ತಿದೆ. ಶ್ರೀಕ್ಷೇತ್ರ ಕುದ್ರೋಳಿಯ ರಾಜಗೋಪುರದ ಮುಂಭಾಗದ ನೆಲದಲ್ಲಿ ಮೂಡಿರುವ 900 ಕೆಜಿ ಧಾನ್ಯಗಳ ಬೃಹತ್ ತಿರಂಗ ಭಕ್ತರ ಗಮನಸೆಳೆಯಿತು.

    ಈ ಬೃಹತ್ ತಿರಂಗ 38 ಫೀಟ್ ಅಗಲವನ್ನು ಹೊಂದಿದೆ. ತಲಾ 300 ಕೆಜಿ ಮಸ್ಸೂರು ದಾಲ್, ಸಬ್ಬಕ್ಕಿ, ಹೆಸರು ಕಾಳುಗಳನ್ನು ಬಳಸಲಾಗಿದೆ. ಫೋಮ್ ನಲ್ಲಿ ರಚಿಸಿರುವ ಅಶೋಕ ಚಕ್ರ 8 ಫೀಟ್ ಅಗಲವಿದೆ. ಅಲ್ಲದೆ ತಿರಂಗದ ಅಲಂಕಾರಕ್ಕೆ 54 ಕಲಶ, 138 ಬಾಳೆ ಎಲೆಯಲ್ಲಿ ಅಕ್ಕಿ ಎಲೆಯಡಿಕೆ, ಚೆಂಡು ಹೂಗಳನ್ನು ಬಳಸಲಾಗಿದೆ. ಜೊತೆಗೆ ಕ್ಯಾರೆಟ್, ಮೂಲಂಗಿ, ಬೆಂಡೆಯಿಂದ ಮಾಡಿರುವ 75 ಅಕ್ಷರದಲ್ಲೂ ತಿರಂಗದ ಕಲ್ಪನೆಯನ್ನು ಮೂಡಿಸಲಾಗಿದೆ.

    ಫೋಟೋ ಜರ್ನಲಿಸ್ಟ್ ಸತೀಶ್ ಇರಾ ಅವರ ಪರಿಕಲ್ಪನೆ ಹಾಗೂ ಖ್ಯಾತ ಫೋಟೋ ಗ್ರಾಫರ್, ಕಲಾವಿದ ಪುನೀತ್ ಶೆಟ್ಟಿಯವರ ಕೈಚಳದಲ್ಲಿ ಈ ಬೃಹತ್ ತಿರಂಗವು ಅದ್ಭುತವಾಗಿ ಮೂಡಿ ಬಂದಿದೆ. ಶ್ರೀಕ್ಷೇತ್ರದ ಗುರು ಬೆಳದಿಂಗಳು ಹಾಗೂ ಗೋಕರ್ಣನಾಥ ಸೇವಾದಳ ತಂಡ ಸಹಕರಿಸಿದೆ. ಆ.13ರ ಮಧ್ಯಾಹ್ನದಿಂದಲೇ ಈ ತಿರಂಗ ರಚನೆಗೆ ಸಾಮಾಗ್ರಿಗಳನ್ನು ಖರೀದಿಸಲಾಗಿದೆ. ರಾತ್ರಿ 9ರಿಂದ ತಿರಂಗದ ಸ್ಕೆಚ್ ತಯಾರಿಸಲಾಗಿದ್ದು, ಆ.14ರ ಬೆಳಗ್ಗೆ 11ರ ವೇಳೆಗೆ ತಿರಂಗ ಸಂಪೂರ್ಣಗೊಂಡಿದೆ. ಇಂದು ಬೆಳಗ್ಗೆ ಸ್ವಲ್ಪ ಮಳೆ ಬಂದರೂ ಅದೃಷ್ಟವಶಾತ್ ತಿರಂಗ ಹಾಳಾಗದಿರುವುದು ವಿಶೇಷವೆನಿಸಿದೆ. ಕೇಂದ್ರದ ಮಾಜಿ ಸಚಿವ, ಶ್ರೀಕ್ಷೇತ್ರ ಕುದ್ರೋಳಿಯ ಅಭಿವೃದ್ಧಿ ರೂವಾರಿ ಜನಾರ್ದನ ಪೂಜಾರಿಯವರು ಈ ಬೃಹತ್ ತಿರಂಗವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    Post Views: 190

    Related Posts

    ಪಾತ್ರೆಯಲ್ಲಿ ಸಿಲುಕಿದ ಪುಟ್ಟ ಮಗು: ಪೊಲೀಸರ ಸಮಯೋಚಿತ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ

    April 24, 2026

    ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು

    April 24, 2026

    ರಾತ್ರಿ ವೇಳೆ ದೇವಾಲಯ ಪ್ರವೇಶಿಸಿದ ವ್ಯಕ್ತಿಯಿಂದ ವಿಗ್ರಹ ಧ್ವಂಸ

    April 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.