Facebook Twitter Instagram
    Saturday, July 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಗಸ್ತು ನಿರತ ಪೊಲೀಸರಿಗೆ ಜೀವ ಬೆದರಿಕೆ – ಆರೋಪಿ ಅರೆಸ್ಟ್
    ಇತ್ತೀಚಿನ ಸುದ್ದಿ

    ಮಂಗಳೂರು: ಗಸ್ತು ನಿರತ ಪೊಲೀಸರಿಗೆ ಜೀವ ಬೆದರಿಕೆ – ಆರೋಪಿ ಅರೆಸ್ಟ್

    September 5, 2025
    Share

    ಮಂಗಳೂರು: ಗಸ್ತು ನಿರತ ಕಂಕನಾಡಿ ನಗರ ಠಾಣೆ ಎಎಸ್ಸೈ ಅಶೋಕ್ ಕೆ. ಮತ್ತು ಸಿಬ್ಬಂದಿ ಸುರೇಂದ್ರ ಕುಮಾರ್‌ ಅವರಿಗೆ ವ್ಯಕ್ತಿಯೊಬ್ಬ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿರುವ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಹಾಸನ ಜಿಲ್ಲೆಯ ಸಕಲೇಶಪುರದ ಹಲಸೋಗೆ ಗ್ರಾಮದ ನಿವಾಸಿ ಸುಲೈಮಾನ್ (42) ಜೀವ ಬೆದರಿಕೆ ಹಾಕಿದ ಆರೋಪಿಯಾಗಿದ್ದು, ಈತನನ್ನು ಬಂಧಿಸಲಾಗಿದೆ.

    ಸೆ.2ರಂದು ರಾತ್ರಿ 12:45ಕ್ಕೆ ಅಶೋಕ್ ಅವರು ಸಿಬ್ಬಂದಿಯೊಂದಿಗೆ ರೌಂಡ್ಸ್‌ನಲ್ಲಿದ್ದಾಗ ನಾಗುರಿಯಲ್ಲಿ ಚಿಕ್ ಗ್ರಿಲ್ ಎಂಬ ಅಂಗಡಿ ಬಳಿ ಓಣಿಯಲ್ಲಿ ಐದಾರು ದ್ವಿಚಕ್ರ ವಾಹನಗಳ ಸಮೇತ ಏಳೆಂಟು ಮಂದಿಯನ್ನು ನಿಂತಿದ್ದರು. ತಕ್ಷಣ ಎಎಸ್ಸೈ ಯಾಕೆ ಇಲ್ಲಿ ನಿಂತಿದ್ದೀರಿ ಎಂದು ಪ್ರಶ್ನಿಸಿದಾಗ ಹಿಂಬದಿಯ ಅಡುಗೆ ಕೋಣೆಯಿಂದ ಏಕಾಏಕಿ ಬಂದ ಸುಲೈಮಾನ್ ಎಂಬಾತ ನಮ್ಮನ್ನು ಕೇಳಲು ನೀವು ಯಾರು? ಎಂದು ಪ್ರಶ್ನಿಸಿ ಅಶೋಕ್‌ ಅವರಿಗೆ ಹಲ್ಲೆಗೆ ಯತ್ನಿಸಿದ್ದಾನೆ. ಅಲ್ಲದೆ ಎಸ್ಸೈಯ ಮೊಬೈಲ್‌ಗೆ ಅಳವಡಿಸಿದ್ದ ಫಿಂಗರ್ ಪ್ರಿಂಟ್ ಸ್ಕ್ಯಾನರನ್ನು ಆರೋಪಿ ಹಿಡಿದು ಎಳೆದು ತುಂಡು ಮಾಡಿ ನೆಲಕ್ಕೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.

    ತಕ್ಷಣ ಪೊಲೀಸ್ ವಾಹನದಲ್ಲಿ ಚಾಲಕ ಸುರೇಂದ್ರ ಕುಮಾರ್ ಮಧ್ಯ ಪ್ರವೇಶಿಸಿದಾಗ ಸುಲೈಮಾನ್ ಹೊಟ್ಟೆ ಮತ್ತು ಸೊಂಟಕ್ಕೆ ಒದ್ದು ನೆಲಕ್ಕೆ ಬೀಳಿಸಿ ಕೈಯಿಂದ ಬೆನ್ನಿಗೆ ಮತ್ತು ಕುತ್ತಿಗೆಗೆ ಹಲ್ಲೆ ಮಾಡಿದ್ದಾನೆ ಎಂದು ದೂರಲಾಗಿದೆ. ಬಳಿಕ ಆರೋಪಿ ಸುಲೈಮಾನ್‌ನನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    Post Views: 191

    Related Posts

    ಖೋಟಾ ನೋಟು ಚಲಾಯಿಸಲು ಯತ್ನ : ಇಬ್ಬರು ಅರೆಸ್ಟ್!

    July 25, 2026

    ಕಾಸರಗೋಡಿನಲ್ಲಿ ಆರ್‌ವಿಆರ್ ನ್ಯೂರೋ-ಆಂಕಾಲಜಿ ಕೇಂದ್ರ ಆರಂಭ.ದೇಶಾದ್ಯಂತ ‘ಆರೋಗ್ಯ ಬೈ ಆರ್‌ವಿಆರ್’ ವಿಸ್ತರಣೆ.ಕೈಗೆಟುಕುವ ದರದಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಆರ್‌ವಿಆರ್ ಹೆಲ್ತ್‌ಕೇರ್

    July 24, 2026

    ನೀಟ್ ಪ್ರತಿಭಟನೆ ಕುರಿತು ವಿವಾದಾತ್ಮಕ ಪೋಸ್ಟ್; ವಿಟ್ಲದಲ್ಲಿ ವ್ಯಕ್ತಿಯ ಅರೆಸ್ಟ್

    July 24, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಖೋಟಾ ನೋಟು ಚಲಾಯಿಸಲು ಯತ್ನ : ಇಬ್ಬರು ಅರೆಸ್ಟ್!

    July 25, 2026

    ಕಾಸರಗೋಡಿನಲ್ಲಿ ಆರ್‌ವಿಆರ್ ನ್ಯೂರೋ-ಆಂಕಾಲಜಿ ಕೇಂದ್ರ ಆರಂಭ.ದೇಶಾದ್ಯಂತ ‘ಆರೋಗ್ಯ ಬೈ ಆರ್‌ವಿಆರ್’ ವಿಸ್ತರಣೆ.ಕೈಗೆಟುಕುವ ದರದಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಆರ್‌ವಿಆರ್ ಹೆಲ್ತ್‌ಕೇರ್

    July 24, 2026

    ನೀಟ್ ಪ್ರತಿಭಟನೆ ಕುರಿತು ವಿವಾದಾತ್ಮಕ ಪೋಸ್ಟ್; ವಿಟ್ಲದಲ್ಲಿ ವ್ಯಕ್ತಿಯ ಅರೆಸ್ಟ್

    July 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.