Facebook Twitter Instagram
    Wednesday, May 20
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಹೋಟೆಲ್ ರೂಮ್‌ನಲ್ಲಿ ಲೈವ್ ಬುಲೆಟ್ ಬಿಟ್ಟು ಹೋದ ಆರೋಪಿ ಪೊಲೀಸರ ಬಲೆಗೆ
    ಇತ್ತೀಚಿನ ಸುದ್ದಿ

    ಹೋಟೆಲ್ ರೂಮ್‌ನಲ್ಲಿ ಲೈವ್ ಬುಲೆಟ್ ಬಿಟ್ಟು ಹೋದ ಆರೋಪಿ ಪೊಲೀಸರ ಬಲೆಗೆ

    May 19, 2026
    Share

    ಬೆಂಗಳೂರು: ನಗರದ ಪ್ರತಿಷ್ಠಿತ ಹೋಟೆಲ್‌ನಲ್ಲಿ ಅಮೆರಿಕ ನಿರ್ಮಿತ ಜೀವಂತ ಗುಂಡುಗಳಿದ್ದ ಪಿಸ್ತೂಲ್ ಮ್ಯಾಗಜೀನ್ ಪತ್ತೆಯಾಗಿದ್ದು, ಈ ಸಂಬಂಧ ಜೆ.ಸಿ. ನಗರ ಪೊಲೀಸರು ಆರೋಪಿ ಅರ್ಮಾನ್ ಮುತಾಹರ್ ಎಂಬಾತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ. ಯುವತಿಯೊಬ್ಬಳೊಂದಿಗೆ ಲಾಡ್ಜ್​ಗೆ ಬಂದಿದ್ದ ಆರೋಪಿ, ಪಿಸ್ತೂಲ್ ಮ್ಯಾಗಜೀನ್ ಅನ್ನು ರೂಮ್​ನಲ್ಲಿಯೇ ಬಿಟ್ಟು ಹೋಗಿದ್ದ. ಅದನ್ನು ವಾಪಸ್ ತೆಗೆದುಕೊಂಡು ಹೋಗುವಂತೆ ಪದೇ ಪದೇ ಕೇಳಿದರೂ ಸರಿಯಾಗಿ ಸ್ಪಂದಿಸದ ಕಾರಣ ಹೋಟೆಲ್ ಮ್ಯಾನೇಜರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ನಡೆದಿದ್ದೇನು?ಕಳೆದ ಏಪ್ರಿಲ್ 27ರಂದು ರಾತ್ರಿ ಆರೋಪಿ ಅರ್ಮಾನ್ ಮುತಾಹರ್ ಯುವತಿಯೊಬ್ಬಳ ಜೊತೆ ಬಂದು ಜಯಮಹಲ್ ಪ್ಯಾಲೇಸ್ ಹೋಟೆಲ್‌ನಲ್ಲಿ ರೂಂ ಒಂದನ್ನು ಬುಕ್ ಮಾಡಿದ್ದ. ಆತನೊಂದಿಗೆ ಓರ್ವ ಯುವತಿಯೂ ಅದೇ ರೂಮ್​ನಲ್ಲಿ ತಂಗಿದ್ದಳು ಎಂದು ಲಾಡ್ಜ್​ನ ಮ್ಯಾನೇಜರ್ ತಿಳಿಸಿದ್ದಾರೆ. ಗುರುತಿನ ಚೀಟಿಗಾಗಿ ತನ್ನ ಪಾಸ್‌ಪೋರ್ಟ್ ನೀಡಿದ್ದ ಆತ, ಮರುದಿನ (ಏಪ್ರಿಲ್ 28) ಬೆಳಗ್ಗೆ ಕೊಠಡಿಯಿಂದ ಚೆಕ್-ಔಟ್ ಆಗಿದ್ದ.“ಬುಲೆಟ್ ಇಟ್ಟಿದ್ದೀನಿ, ಎತ್ತಿಡಿ” ಎಂದು ಕರೆ ಮಾಡಿದ ಆರೋಪಿಹೋಟೆಲ್‌ನಿಂದ ಹೋದ ಸ್ವಲ್ಪ ಹೊತ್ತಿನ ಬಳಿಕ ರಿಸೆಪ್ಷನ್‌ಗೆ ಕರೆ ಮಾಡಿದ ಅರ್ಮಾನ್, ಜೀವಂತ ಗುಂಡುಗಳಿರುವ ನನ್ನ ಪಿಸ್ತೂಲಿನ ಮ್ಯಾಗಜೀನ್ ಅನ್ನು ರೂಮ್‌ನಲ್ಲೇ ಮರೆತು ಬಿಟ್ಟು ಬಂದಿದ್ದೇನೆ. ಅದನ್ನು ಎತ್ತಿಡಿ ಎಂದು ತಿಳಿಸಿದ್ದ. ಅದಾದ ನಂತರ ಆತ ತಂಗಿದ್ದ ಕೊಠಡಿಯನ್ನು ಹೌಸ್ ಕೀಪಿಂಗ್ ಸಿಬ್ಬಂದಿ ಪರಿಶೀಲಿಸಿದಾಗ ಜೀವಂತ ಗುಂಡುಗಳಿದ್ದ ಮ್ಯಾಗಜೀನ್ ಪತ್ತೆಯಾಗಿದೆ. ಒಂದೆರಡು ದಿನಗಳಲ್ಲಿ ಬಂದು ಪಡೆದುಕೊಳ್ಳುತ್ತೇನೆ ಎಂದಿದ್ದ ಆರೋಪಿ, ಹೋಟೆಲ್ ಸಿಬ್ಬಂದಿ ಹಲವು ಬಾರಿ ಕರೆ ಮಾಡಿದರೂ ವಾಪಸ್ ಬಂದಿರಲಿಲ್ಲ.ಪೊಲೀಸ್ ಠಾಣೆ ಮೆಟ್ಟಿಲೇರಿದ ಮ್ಯಾನೇಜರ್ಕೊನೆಗೆ ಮೇ 4ರಂದು ಹೋಟೆಲ್ ಮ್ಯಾನೇಜರ್ ಕರೆ ಮಾಡಿ, ನಿಮ್ಮ ಮ್ಯಾಗಜೀನ್ ಅನ್ನು ಪೊಲೀಸರಿಗೆ ಒಪ್ಪಿಸುತ್ತಿದ್ದೇವೆ ಎಂದಾಗ, ಸರಿ, ನಾನು ಪೊಲೀಸ್ ಠಾಣೆಯಿಂದಲೇ ಪಡೆದುಕೊಳ್ಳುತ್ತೇನೆ ಎಂದು ಅರ್ಮಾನ್ ಉತ್ತರ ನೀಡಿದ್ದ. ಅದಾದ ಬಳಿಕ ಹೋಟೆಲ್ ಮ್ಯಾನೇಜರ್ ಜೆ.ಸಿ. ನಗರ ಪೊಲೀಸ್ ಠಾಣೆಗೆ ದೂರು ನೀಡಿ ಮ್ಯಾಗಜೀನ್ ಹಸ್ತಾಂತರಿಸಿದ್ದಾರೆ.ಅವರ ದೂರಿನ ಮೇರೆಗೆ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಅದು ಅಮೇರಿಕಾದಲ್ಲಿ ತಯಾರಿಸಲಾದ ಬುಲೆಟ್‌ಗಳು ಎಂಬುದು ಪತ್ತೆಯಾಗಿದೆ. ಅಧಿಕಾರಿಗಳ ಕಣ್ಣು ತಪ್ಪಿಸಿ ಈತ ದೇಶದೊಳಗೆ ಹಾಗೂ ಹೋಟೆಲ್‌ಗೆ ಇವುಗಳನ್ನು ಹೇಗೆ ತಂದಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Post Views: 36

    karnataka PoliceInvestigation

    Related Posts

    ಬೆಳ್ತಂಗಡಿ–ಉಪ್ಪಿನಂಗಡಿಯಲ್ಲಿ ಸರಣಿ ಕಳ್ಳತನ: ಕೇರಳದ ಕುಖ್ಯಾತ ಶಂಕಿತನಿಗಾಗಿ ಪೊಲೀಸರ ಹುಡುಕಾಟ

    May 20, 2026

    ಬೆಳ್ತಂಗಡಿಯಲ್ಲಿ ಬೆಚ್ಚಿಬೀಳಿಸಿದ ಕಳ್ಳತನ – ಒಂದೇ ರಾತ್ರಿ ಹಲವು ಅಂಗಡಿಗಳಿಗೆ ಕನ್ನ

    May 19, 2026

    24 ಗಂಟೆಯೊಳಗೆ ಕೊಲೆ ಆರೋಪಿಗಳ ಬಂಧನ: ಬದಿಯಡ್ಕ ಪೊಲೀಸರ ಚುರುಕಿನ ಕಾರ್ಯಾಚರಣೆ

    May 19, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.