Facebook Twitter Instagram
    Wednesday, September 16
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಲೋನ್ ಆ್ಯಪ್ ದಂಧೆ, ಸಾಲ ಪಡೆದಾತನ ಅಶ್ಲೀಲ ಫೋಟೋ ವೈರಲ್ – ದೂರು ದಾಖಲು
    ಇತ್ತೀಚಿನ ಸುದ್ದಿ

    ಮಂಗಳೂರು: ಲೋನ್ ಆ್ಯಪ್ ದಂಧೆ, ಸಾಲ ಪಡೆದಾತನ ಅಶ್ಲೀಲ ಫೋಟೋ ವೈರಲ್ – ದೂರು ದಾಖಲು

    July 29, 2023
    Share

    ಮಂಗಳೂರು: ಲೋನ್ ಆ್ಯಪ್‌ ದಂಧೆಕೋರರು ಸಾಲ ಪಡೆದವರ ಜೀವ ಹಿಂಡುತ್ತಿರುವುದು ಸುದ್ದಿಯಾಗುತ್ತಲೇ ಇದೆ‌. ಇದೀಗ ಲೋನ್ ಪಡೆದ ವ್ಯಕ್ತಿಯ ಭಾವಚಿತ್ರವನ್ನು ಲೋನ್ ಆ್ಯಪ್ ನವರು ಅಶ್ಲೀಲವಾಗಿ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಬಗ್ಗೆ ಮಂಗಳೂರಿನ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರುದಾರರು ಲೋನ್ ಆ್ಯಪ್ ನಲ್ಲಿ 3500 ರೂ. ಸಾಲಕ್ಕೆ ಅರ್ಜಿ ಹಾಕಿದ್ದರು. ಲೋನ್ ಮಂಜೂರು ಆಗಿ ಬ್ಯಾಂಕ್ ಖಾತೆಗೆ 2800 ರೂ. ಸಾಲ ಜಮಾ ಆಗಿದೆ. ಈ ಸಾಲವನ್ನು ಜು.26ಕ್ಕೆ ಮುಂಚಿತವಾಗಿ ಮರುಪಾವತಿ ಮಾಡಬೇಕಿತ್ತು. ಆದ್ದರಿಂದ ಜು.19ರಂದು 1400 ರೂ. ಬ್ಯಾಂಕ್ ಖಾತೆಯಿಂದ ಪಾವತಿ ಮಾಡಿದ್ದಾರೆ. ಉಳಿದ ಹಣವನ್ನು ಜು.26ರಂದು ಲೋನ್ ಕಳುಹಿಸಿಕೊಟ್ಟ ವ್ಯಕ್ತಿಗೆ ಹಂತಹಂತವಾಗಿ 4,200 ರೂ. ಪಾವತಿ ಮಾಡಿರುತ್ತಾರೆ. ಆದರೂ ಲೋನ್ ನೋಡಿರುವ ಅಪರಿಚಿತ ದೂರುದಾರರ ಮೊಬೈಲ್ ಕಾಂಟಾಕ್ಟ್ ಲೀಸ್ಟ್‌ನಲ್ಲಿರುವ ಅವರ ತಂದೆಯ, ಸಂಬಂಧಿಕರ ಕಾಲೇಜು ಅಧ್ಯಾಪಕರ ಹಾಗೂ ಸಂಪರ್ಕದಲ್ಲಿರುವ ಇತರರ ವಾಟ್ಸ್ಆ್ಯಪ್ ಗೆ ಎಡಿಟ್ ಮಾಡಿದ ಅಶ್ಲೀಲ ಭಾವಚಿತ್ರವನ್ನು ರವಾನಿಸಿದ್ದಾರೆ. ಅಲ್ಲದೆ ದೂರುದಾರ ಲೋನ್ ಪಾವತಿ ಮಾಡಿರುವುದಿಲ್ಲವೆಂದು ಅಶ್ಲೀಲ ಸಂದೇಶ ರವಾನೆ ಮಾಡಿರುತ್ತಾರೆ. ದೂರುದಾರರು ಲೋನ್ ಪಡೆಯುವ ವೇಳೆ ಆ್ಯಪ್‌ ಅನ್ನು ಇನ್‌ಸ್ಟಾಲ್ ಮಾಡುವ ಸಂದರ್ಭ ಅಪರಿಚಿತ ವ್ಯಕ್ತಿ ಅವರ ಮೊಬೈಲ್‌ನಲ್ಲಿ ಶೇಖರಣೆಗೊಂಡಿದ್ದ ಮೊಬೈಲ್ ನಂಬರ್ ಗಳನ್ನು ಅವರ ಅರಿವಿಗೆ ಬಾರದಂತೆ ಶೇಖರಿಸಿಕೊಂಡಿದ್ದಾನೆ‌. ಬಳಿಕ ತೊಂದರೆ ನೀಡುವ ಉದ್ದೇಶದಿಂದಲೇ ಭಾವಚಿತ್ರವನ್ನು ಹಾಗೂ ಸಂಪರ್ಕದಲ್ಲಿರುವ ಇತರರ ಭಾವಚಿತ್ರಗಳನ್ನು ಅಶ್ಲೀಲ ರೀತಿಯಲ್ಲಿ ಎಡಿಟ್ ಮಾಡಿ ವಾಟ್ಸ್ಆ್ಯಪ್ ಮೂಲಕ ವೈರಲ್ ಮಾಡಿದ್ದಾರೆ. ಈ ಬಗ್ಗೆ ದೂರುದಾರರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    Post Views: 241

    Related Posts

    ಬಂಟ್ವಾಳ: 6 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ವಿಮಾನ ನಿಲ್ದಾಣದಲ್ಲಿ ಬಂಧನ

    September 16, 2026

    ಉಡುಪಿ: ದೇವಸ್ಥಾನದ ಹುಂಡಿ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    September 15, 2026

    ಬಂಟರು ನಾಯಕತ್ವ ಗುಣ ಉಳ್ಳವರು, ಎಲ್ಲಾ ರಂಗಗಳ ಸಾಧಕರು : ಇನಾಯತ್ ಆಲಿ

    September 15, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಬಂಟ್ವಾಳ: 6 ವರ್ಷಗಳಿಂದ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ವಿಮಾನ ನಿಲ್ದಾಣದಲ್ಲಿ ಬಂಧನ

    September 16, 2026

    ಉಡುಪಿ: ದೇವಸ್ಥಾನದ ಹುಂಡಿ ಕಳವು ಪ್ರಕರಣ – ಇಬ್ಬರು ಆರೋಪಿಗಳ ಬಂಧನ

    September 15, 2026

    ಬಂಟರು ನಾಯಕತ್ವ ಗುಣ ಉಳ್ಳವರು, ಎಲ್ಲಾ ರಂಗಗಳ ಸಾಧಕರು : ಇನಾಯತ್ ಆಲಿ

    September 15, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.