Facebook Twitter Instagram
    Friday, April 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಲ್ಪೆ: ಮೀನುಗಾರಿಕಾ ಬೋಟ್‌ಗೆ ಮರದ ದಿಮ್ಮಿ ಡಿಕ್ಕಿ, ಅಪಾರ ಹಾನಿ ,ಲಕ್ಷಾಂತರ ರೂ.ನಷ್ಟ
    ಇತ್ತೀಚಿನ ಸುದ್ದಿ

    ಮಲ್ಪೆ: ಮೀನುಗಾರಿಕಾ ಬೋಟ್‌ಗೆ ಮರದ ದಿಮ್ಮಿ ಡಿಕ್ಕಿ, ಅಪಾರ ಹಾನಿ ,ಲಕ್ಷಾಂತರ ರೂ.ನಷ್ಟ

    January 8, 2025
    Share

    ಮಲ್ಪೆ: ದುರಸ್ತಿಗೆಂದು ಹೋಗಿದ್ದ ಮಲ್ಪೆ ಬಂದರಿನ ಮೀನುಗಾರಿಕಾ ಬೋಟಿಗೆ ಗಂಗೊಳ್ಳಿ ಅಳಿವೆ ಸಮೀಪ ಮರದ ದಿಮ್ಮಿ ಡಿಕ್ಕಿ ಹೊಡೆದ ಪರಿಣಾಮ ಬೋಟ್‌ ಭಾಗಶಃ ಮುಳುಗಡೆಗೊಂಡು ಅಪಾರ ನಷ್ಟ ಉಂಟಾದ ಘಟನೆ ಸಂಭವಿಸಿದೆ.

    ತವಕಲ್‌ ಎನ್ನುವ ಹೆಸರಿನ ಮೀನುಗಾರಿಕೆ ಬೋಟನ್ನು ದುರಸ್ತಿಗೆಂದು ಮೀನುಗಾರರಾದ ರವಿ ಸಾಲ್ಯಾನ್‌ ಮತ್ತು ಹರೀಶ್‌ ಅವರು ಮಲ್ಪೆ ಬಂದರಿನಿಂದ ಗಂಗೊಳ್ಳಿಗೆ ಕೊಂಡು ಹೋಗುತ್ತಿದ್ದರು. ಗಂಗೊಳ್ಳಿ ಬಂದರಿನ ಅಳಿವೆಯಿಂದ ಸುಮಾರು 2 ನಾಟಿಕಲ್‌ ಮೈಲು ದೂರದಲ್ಲಿ ಚಲಿಸುತ್ತಿರುವಾಗ ರಾತ್ರಿ 7.30ರ ವೇಳೆಗೆ ದೊಡ್ಡದಾದ ಮರದ ದಿಮ್ಮಿ ಬಂದು ಬೋಟಿಗೆ ಡಿಕ್ಕಿ ಹೊಡೆದಿದೆ.ಪರಿಣಾಮ ಬೋಟಿನ ಮುಂಭಾಗದ ತಳಬದಿಯಲ್ಲಿ ಹಾನಿಯಾಗಿ ನೀರು ಒಳ ಬರಲು ಪ್ರಾರಂಭಿಸಿತ್ತು. ನೀರಿನ ಒಳ ಹರಿವು ಜಾಸ್ತಿಯಾಗಿ ಬೋಟು ಮುಳುಗುವ ಸಂಭವ ಇರುವುದನ್ನು ಗಮನಿಸಿದ ಬೋಟಿನ ತಾಂಡೇಲ ರವಿ ಸಾಲ್ಯಾನ್‌ ಬೇರೆ ಬೋಟ್ ಗೆ ಮಾಹಿತಿ ನೀಡಿದರು‌. ಜಲರಾಣಿ ಬೋಟಿನವರು ಮುಳುಗಡೆಗೊಳ್ಳುತ್ತಿದ್ದ ಬೋಟಿನಲ್ಲಿದ್ದ ರವಿ ಸಾಲ್ಯಾನ್‌ ಮತ್ತು ಹರೀಶ್‌ ಅವರನ್ನು ರಕ್ಷಣೆ ಮಾಡಿ ಬೋಟನ್ನು ತಮ್ಮ ಬೋಟಿಗೆ ಹಗ್ಗ ಕಟ್ಟಿ ಗಂಗೊಳ್ಳಿಗೆ ಎಳೆದು ತಂದಿದ್ದಾರೆ. ಬೋಟು ಹಾನಿಗೊಂಡಿದ್ದು, ಸುಮಾರು 65 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

    Post Views: 192

    Related Posts

    ಭಾರತದ ನಕ್ಷೆಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ರಾಜಧಾನಿಗೆ ಸಂಸತ್ತಿನ ಕಾನೂನು ಮಾನ್ಯತೆ

    April 24, 2026

    ಪಾತ್ರೆಯಲ್ಲಿ ಸಿಲುಕಿದ ಪುಟ್ಟ ಮಗು: ಪೊಲೀಸರ ಸಮಯೋಚಿತ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ

    April 24, 2026

    ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು

    April 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.