Facebook Twitter Instagram
    Wednesday, October 21
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು ದಸರಾ: ಇಂದು ಸಂಜೆ 4ರಿಂದ ವಾಹನ ಸಂಚಾರ ಮಾರ್ಗ ಬದಲಾವಣೆ
    ಇತ್ತೀಚಿನ ಸುದ್ದಿ

    ಮಂಗಳೂರು ದಸರಾ: ಇಂದು ಸಂಜೆ 4ರಿಂದ ವಾಹನ ಸಂಚಾರ ಮಾರ್ಗ ಬದಲಾವಣೆ

    October 21, 2026
    Share

    ಮಂಗಳೂರು: ದಸರಾ ಪ್ರಯುಕ್ತ ದಿನಾಂಕ: 21-10-2026 ರಂದು ಬುಧವಾರ ಸಂಜೆ 4-00 ಗಂಟೆಯಿಂದ ದಿನಾಂಕ 22-10-2026 ರಂದು ಬೆಳಿಗ್ಗೆ 6-00 ಗಂಟೆಯ ವರೆಗೆ* ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದೇವರ ಮೆರವಣೆಗೆ ಮತ್ತು ಟ್ಯಾಬುಲುಗಳು *ಕುದ್ರೋಳಿ ದೇವಸ್ಥಾನದ ದ್ವಾರ – ಮಣ್ಣಗುಡ್ಡೆ ಜಂಕ್ಷನ್ – ನಾರಾಯಣಗುರು ವೃತ್ತ (ಲೇಡಿಹಿಲ್) – ಲಾಲ್‌ಭಾಗ್ – ಬಳ್ಳಾಲ್ ಭಾಗ್ – ಪಿ. ವಿ.ಎಸ್.ಜಂಕ್ಷನ್ – ನವಭಾರತ ವೃತ್ತ -ಸಿಟಿ ಸೆಂಟರ್ – ಹಂಪನಕಟ್ಟೆ- ಕೆಬಿ ಕಟ್ಟೆ – ಕಾರ್ ಸ್ಟ್ರೀಟ್- ನ್ಯೂಚಿತ್ರಾ ಜಂಕ್ಷನ್ – ಕುದ್ರೋಳಿ ದ್ವಾರದ* ಮೂಲಕ ದೇವಸ್ಥಾನಕ್ಕೆ ಸಂಚರಿಸಲಿರುತ್ತದೆ. ಸದರಿ ದಿವಸ ಮಧ್ಯಾಹ್ನ 2 ಗಂಟೆಯಿಂದ ನಗರದ ರಸ್ತೆಗಳಲ್ಲಿ ವಾಹನ ದಟ್ಟಣೆಯಿಂದ ಸಂಚಾರಕ್ಕೆ ಅಡಚಣೆ* ಉಂಟಾಗಲಿದೆ.

    ಸಾರ್ವಜನಿಕರಿಗೆ ಸುರಕ್ಷತೆಗಾಗಿ ಸಾರ್ವಜನಿಕರು ಸದ್ರಿ ಮಾರ್ಗವನ್ನು ಉಪಯೋಗಿಸದೇ ಪರ್ಯಾಯ ಮಾರ್ಗಗಳನ್ನು ಅನುಸರಿಸಲು ಮತ್ತು ಮೆರವಣಿಗೆ ಸಾಗುವ ಸದರಿ ರಸ್ತೆಯ ಬದಿಗಳಲ್ಲಿ ವಾಹನಗಳನ್ನು ಪಾರ್ಕ್ ಮಾಡದಂತೆ ತಿಳಿಸಲಾಗಿದೆ.*

    ಕುದ್ರೋಳಿ ದಸರಾ ಮೆರವಣಿಗೆಯ ಸಮಯ ವಾಹನ ಸಂಚಾರದ ಮಾರ್ಪಾಡಿನ ವಿವರ:-

    •  ಕೊಟ್ಟಾರ ಚೌಕಿ ಜಂಕ್ಷನ್ ನಿಂದ ಲೇಡಿಹಿಲ್ ಮುಖಾಂತರ ಮಂಗಳೂರು ನಗರಕ್ಕೆ ಬರುವ ಎಲ್ಲಾ ತರಹದ ವಾಹನಗಳು ಬದಲಿ ಮಾರ್ಗವಾದ ಕುಂಟಿಕಾನ- ಕೆಪಿಟಿ – ನಂತೂರು ಮುಖೇನ ಮಂಗಳೂರು ನಗರಕ್ಕೆ ಸಂಚರಿಸುವುದು.
    •  ಬಂಟ್ಸ್ ಹಾಸ್ಟೆಲ್ ನಿಂದ ಪಿವಿಎಸ್ ಮುಖಾಂತರ ಎಂ.ಜಿ ರಸ್ತೆಯಲ್ಲಿ ಸಂಚರಿಸುವ ಎಲ್ಲಾ ವಾಹನಗಳು ಬಂಟ್ಸ್ ಹಾಸ್ಟೆಲ್ – ಭಾರತ್ ಬೀಡಿ -ಬಟ್ಟಗುಡ್ಡ -ಕೆಪಿಟಿ ಮುಖೇನ ಅಥವಾ ಬಂಟ್ಸ್ ಹಾಸ್ಟೆಲ್- ಭಾರತ್ ಬೀಡಿ-ಮಲ್ಲಿಕಟ್ಟೆ ಮಾರ್ಗವಾಗಿ ಸಂಚರಿಸುವುದು.
    •  ಕೆಎಸ್‌ಆರ್‌ಟಿಸಿ ಜಂಕ್ಷನ್ ನಿಂದ ಲಾಲ್ ಬಾಗ್ ಕಡೆಗೆ ಬರುವ ವಾಹನಗಳು ಕೆ.ಎಸ್.ಅರ್.ಟಿ.ಸಿ ಜಂಕ್ಷನ್ – ಕಾಪಿಕಾಡ್- ಕುಂಟಿಕಾನ ಮೂಲಕ ಅಥವಾ ಕೆ.ಎಸ್.ಆರ್.ಟಿ.ಸಿ ಜಂಕ್ಷನ್ -ಬಿಜೈ ಬಟ್ಟಗುಡ್ಡ ಮಾರ್ಗವಾಗಿ ಸಂಚರಿಸುವುದು.
    • ಎಲ್ಲಾ ಕೆ.ಎಸ್.ಆರ್.ಟಿ.ಸಿ ಬಸ್ಸುಗಳು ಕೆ.ಎಸ್.ಆರ್.ಟಿ.ಸಿ ಜಂಕ್ಷನ್ ನಿಂದ – ಕಾಪಿಕಾಡ್- ಕುಂಟಿಕಾನ ಮೂಲಕ ಅಥವಾ ಬಿಜೈ ಬಟ್ಟಗುಡ್ಡ ಮೂಲಕ ಸಂಚರಿಸುವುದು.
    • ಹಂಪನಕಟ್ಟೆ ಕಡೆಯಿಂದ ಕೆ.ಎಸ್.ಆರ್ ರಸ್ತೆ- ನವಭಾರತ್ ವೃತ್ತದ ಮೂಲಕ ಪಿವಿಎಸ್ ಜಂಕ್ಷನ್ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಹಂಪನಕಟ್ಟೆ- ಎಲ್.ಹೆಚ್.ಹೆಚ್ – ಅಂಬೇಡ್ಕರ್ ಜಂಕ್ಷನ್ ಮೂಲಕ ಸಂಚರಿಸುವುದು.
    •  ನ್ಯೂ ಚಿತ್ರಾ ಜಂಕ್ಷನ್‌ನಿಂದ ನವಭಾರತ ಕಡೆಗೆ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುವುದು.
    •  ಲೇಡಿಹಿಲ್ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಮಣ್ಣಗುಡ್ಡೆ ಜಂಕ್ಷನ್ -ದುರ್ಗಾಮಹಲ್-ಕುದ್ರೋಳಿ ದೇವಸ್ಥಾನ ಕಡೆಗೆ ಸಂಚರಿಸುವ ಎಲ್ಲಾ ತರಹದ ವಾಹನಗಳು ಬದಲಿ ಮಾರ್ಗದಲ್ಲಿ ಸಂಚರಿಸುವುದು.
    • • *ಮಂಗಳೂರು ದಸರಾ ಮೆರವಣಿಗೆ ನೋಡಲು ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಈ ಕೆಳಕಂಡಂತೆ ನಿಗಧಿಪಡಿಸಿದ ಪಾರ್ಕಿಂಗ್ ಸ್ಥಳಗಳಲ್ಲಿ ನಿಲುಗಡೆ ಮಾಡುವುದು.*
    • 📍 ಕರಾವಳಿ ಮೈದಾನ ಪಾರ್ಕಿಂಗ್
      📍ಅಳಕೆ ಮಾರ್ಕೆಟ್ ಪಾರ್ಕಿಂಗ್
      📍ಉರ್ವ ಮಾರ್ಕೆಟ್ ಮೈದಾನ
      📍ಉರ್ವ ಕೆನರಾ ಸ್ಕೂಲ್ ಪಾರ್ಕಿಂಗ್
      📍ಕೆನರಾ ಡೊಂಗರಕೇರಿ ಸ್ಕೂಲ್ ಪಾರ್ಕಿಂಗ್
      📍ಪೊಂಪೈ ಚರ್ಚ್ ಪಾರ್ಕಿಂಗ್
      📍ದುರ್ಗಾಮಹಲ್ ಹೊಟೇಲ್ ಪಾರ್ಕಿಂಗ್
      📍 ಕುದ್ರೋಳಿ ನಾರಾಯಣ ಕಾಲೇಜು ಪಾರ್ಕಿಂಗ್
      📍ಬಿ ಇ ಎಂ ಸ್ಕೂಲ್ ಪಾರ್ಕಿಂಗ್
      📍 ಸರಕಾರಿ ಹೆಣ್ಣುಮಕ್ಕಳ ಪ್ರೌಢ ಶಾಲೆ ಕಾರ್ ಸ್ಟ್ರೀಟ್
      📍 ಹೊಟೇಲ್ ವಿಮಲೇಶ್ ಪಾರ್ಕಿಂಗ್

    *ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ವಿನಂತಿ.*
    “ಸಂಚಾರ ನಿಯಮಗಳನ್ನು ಪಾಲಿಸಿ, ಸುರಕ್ಷಿತರಾಗಿರಿ”

    *ಪೊಲೀಸ್ ಆಯುಕ್ತರು*
    *ಮಂಗಳೂರು ನಗರ*

    Post Views: 6

    Related Posts

    ಕಡಬ: ವೃದ್ಧೆಯ ಮೇಲೆ ಕಲ್ಲು ಎಸೆದು ಹಲ್ಲೆ – ಸೊಸೆಯ ವಿರುದ್ಧ ಪ್ರಕರಣ ದಾಖಲು

    October 21, 2026

    ಮಂಗಳೂರು: ಬೋಳಿಯಾರ್ ಅಪಘಾತ ಪ್ರಕರಣ- ಕೊಲೆ ಆರೋಪದಲ್ಲಿ ಪಿಕಪ್ ಚಾಲಕನ ಬಂಧನ

    October 21, 2026

    ಮಂಗಳೂರು: ಬೋಳಿಯಾರ್ ಅಪಘಾತ ಪ್ರಕರಣದಲ್ಲಿ ಟ್ವೀಸ್ಟ್- ಪಿಕಪ್ ಚಾಲಕನ ವಿರುದ್ಧ ಕೊಲೆ ಪ್ರಕರಣ ದಾಖಲು

    October 20, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಕಡಬ: ವೃದ್ಧೆಯ ಮೇಲೆ ಕಲ್ಲು ಎಸೆದು ಹಲ್ಲೆ – ಸೊಸೆಯ ವಿರುದ್ಧ ಪ್ರಕರಣ ದಾಖಲು

    October 21, 2026

    ಮಂಗಳೂರು ದಸರಾ: ಇಂದು ಸಂಜೆ 4ರಿಂದ ವಾಹನ ಸಂಚಾರ ಮಾರ್ಗ ಬದಲಾವಣೆ

    October 21, 2026

    ಮಂಗಳೂರು: ಬೋಳಿಯಾರ್ ಅಪಘಾತ ಪ್ರಕರಣ- ಕೊಲೆ ಆರೋಪದಲ್ಲಿ ಪಿಕಪ್ ಚಾಲಕನ ಬಂಧನ

    October 21, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.