Facebook Twitter Instagram
    Friday, July 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರಿನಲ್ಲಿ ಸಿಸಿಬಿ ಬೃಹತ್ ದಾಳಿ..! ಆರು ಮಂದಿ ಬಂಧನ, ಎಂಡಿಎಂಎ, ಕೊಕೇನ್ ವಶ
    ಇತ್ತೀಚಿನ ಸುದ್ದಿ

    ಮಂಗಳೂರಿನಲ್ಲಿ ಸಿಸಿಬಿ ಬೃಹತ್ ದಾಳಿ..! ಆರು ಮಂದಿ ಬಂಧನ, ಎಂಡಿಎಂಎ, ಕೊಕೇನ್ ವಶ

    September 23, 2025
    Share

    ಮಂಗಳೂರು: ನಗರದಲ್ಲಿ ಮಾದಕ ವಸ್ತು ಮಾರಾಟ ಜಾಲವನ್ನು ಪತ್ತೆ ಹಚ್ಚಿದ ಸಿಸಿಬಿ ಘಟಕದ ಪೊಲೀಸರು ಭಾನುವಾರ (ಸೆಪ್ಟೆಂಬರ್ 21) ಮತ್ತು ಸೋಮವಾರ ನಡೆಸಿದ ದಾಳಿಯಲ್ಲಿ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ ₹24 ಲಕ್ಷಕ್ಕೂ ಹೆಚ್ಚು ಮೌಲ್ಯದ ಎಂಡಿಎಂಎ ಹಾಗೂ ಕೊಕೇನ್ ವಶಪಡಿಸಿಕೊಳ್ಳಲಾಗಿದೆ.

    ಬಂಧಿತರನ್ನು ಚಿರಾಗ್ ಸನಿಲ್ – ಗಾಂಧಿನಗರ, ಕಾವೂರು, ಆಲ್ವಿನ್ ಕ್ಲಿಂಟನ್ ಡಿ’ಸೋಜಾ – ಅಶೋಕನಗರ, ಅಬ್ದುಲ್ ಕರೀಂ ಇ.ಕೆ (52) – ಮಲ್ಲಾಪುರಂ ಜಿಲ್ಲೆ, ಕೇರಳ, ಜಾನನ್ ಜಗನ್ನಾಥ (28) – ಕುಲಶೇಖರ, ಮಂಗಳೂರು, ರಾಜೇಶ್ ಬಂಗೇರ (30) – ಬೋಳೂರು ಪರಪು, ಮಂಗಳೂರು, ವರುಣ್ ಗಾಣಿಗ (28) – ಅಶೋಕನಗರ, ಮಂಗಳೂರು ಎಂದು ಗುರುತಿಸಲಾಗಿದೆ

    ಕಾವೂರು ಗಾಂಧಿನಗರದ ಮಲ್ಲಿ ಲೇಔಟ್‌ನಲ್ಲಿ ದಾಳಿ ನಡೆಸಿದ ವೇಳೆ, ಚಿರಾಗ್ ಸನಿಲ್ ಮತ್ತು ಆಲ್ವಿನ್ ಕ್ಲಿಂಟನ್ ಡಿ’ಸೋಜಾ ಎಂಬ ಇಬ್ಬರನ್ನು ವಶಕ್ಕೆ ಪಡೆದು, ಅವರ ಬಳಿ ಇದ್ದ 111.83 ಗ್ರಾಂ ಎಂಡಿಎಂಎ (ಮೌಲ್ಯ ₹22.3 ಲಕ್ಷ)ವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡರು. ಪ್ರಾಥಮಿಕ ವಿಚಾರಣೆಯಲ್ಲಿ, ಆರೋಪಿ ಚಿರಾಗ್ ಸನಿಲ್ ಮುಂಬೈನಲ್ಲಿ ವಾಸವಿರುವ ಆಫ್ರಿಕನ್ ಪ್ರಜೆ ಬೆಂಜಮಿನ್‌ನಿಂದ ಎಂಡಿಎಂಎ ಖರೀದಿಸಿದ್ದು, ಇದಕ್ಕೆ ಅಗತ್ಯ ಹಣವನ್ನು ಕೇರಳದ ಅಬ್ದುಲ್ ಕರೀಂ ಇ.ಕೆ. ಒದಗಿಸಿದ್ದಾನೆ ಎಂಬುದು ಬಹಿರಂಗವಾಯಿತು. ಬಳಿಕ ಕರೀಂನನ್ನು ಮಂಗಳೂರಿನ ಕೇಂದ್ರ ರೈಲ್ವೆ ನಿಲ್ದಾಣದ ಬಳಿ ಬಂಧಿಸಲಾಯಿತು.

    ಇದಾದ ನಂತರ, ಆರೋಪಿ ಬಳಗವು ಈಗಾಗಲೇ ಕೊಕೇನ್ ಮಾರಾಟ ಮಾಡಿರುವ ಮಾಹಿತಿ ಆಧಾರದಲ್ಲಿ, ಪೊಲೀಸರು ಮಣ್ಣಗುಡ್ಡೆಯ ಸೆಂಟ್ರಲ್ ವೇರ್‌ಹೌಸ್ ಬಳಿ ದಾಳಿ ನಡೆಸಿ ಜಾನನ್ ಜಗನ್ನಾಥ, ರಾಜೇಶ್ ಬಂಗೇರ ಮತ್ತು ವರುಣ್ ಗಾಣಿಗ ಎಂಬ ಮೂವರನ್ನು ಬಂಧಿಸಿದರು. ಅವರ ಬಳಿ ಇದ್ದ 21.03 ಗ್ರಾಂ ಕೊಕೇನ್ (ಮೌಲ್ಯ ₹1.9 ಲಕ್ಷ) ವಶಪಡಿಸಿಕೊಳ್ಳಲಾಯಿತು.

    ಒಟ್ಟು ಆರು ಮಂದಿಯ ವಿರುದ್ಧ ಕಾವೂರು ಹಾಗೂ ಬರ್ಕೆ ಪೊಲೀಸ್ ಠಾಣೆಗಳಲ್ಲಿ NDPS ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

    ಪೊಲೀಸರು ಮಾದಕ ವಸ್ತು ಪೂರೈಕೆದಾರರು, ಖರೀದಿದಾರರು ಮತ್ತು ಪೆಡ್ಲರ್‌ಗಳ ಸಂಪೂರ್ಣ ಜಾಲದ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.

    Post Views: 167

    Related Posts

    ಬೆಳ್ತಂಗಡಿ: ಮಹಿಳೆಗೆ ಬೆದರಿಕೆ, ನಗದು ಕಳವು ಆರೋಪ- ಇಬ್ಬರ ವಿರುದ್ಧ FIR

    July 24, 2026

    AI ಬಳಸಿ 121 ನಕಲಿ ಬ್ಯಾಂಕಿಂಗ್ ಆ್ಯಪ್ ತಯಾರಿ : 17 ವರ್ಷದ ಬಾಲಕನಿಂದ ₹64.38 ಕೋಟಿ ವಂಚನೆ!!

    July 23, 2026

    ಪುತ್ತೂರು: ವಿವಾಹಿತ ಮಹಿಳೆ ಶಂಕಾಸ್ಪದ ಸಾವು ಪ್ರಕರಣ- ಅತ್ತೆ, ಮಾವ, ನಾದಿನಿ ಅರೆಸ್ಟ್

    July 23, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಬೆಳ್ತಂಗಡಿ: ಮಹಿಳೆಗೆ ಬೆದರಿಕೆ, ನಗದು ಕಳವು ಆರೋಪ- ಇಬ್ಬರ ವಿರುದ್ಧ FIR

    July 24, 2026

    AI ಬಳಸಿ 121 ನಕಲಿ ಬ್ಯಾಂಕಿಂಗ್ ಆ್ಯಪ್ ತಯಾರಿ : 17 ವರ್ಷದ ಬಾಲಕನಿಂದ ₹64.38 ಕೋಟಿ ವಂಚನೆ!!

    July 23, 2026

    ಪುತ್ತೂರು: ವಿವಾಹಿತ ಮಹಿಳೆ ಶಂಕಾಸ್ಪದ ಸಾವು ಪ್ರಕರಣ- ಅತ್ತೆ, ಮಾವ, ನಾದಿನಿ ಅರೆಸ್ಟ್

    July 23, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.