Facebook Twitter Instagram
    Sunday, September 13
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪುತ್ತೂರು: ಬಸ್ – ಆ್ಯಕ್ಟೀವಾ ಡಿಕ್ಕಿ: ಮಾಸ್ಟರ್ ಪ್ಲಾನರಿ ಕಾರ್ಮಿಕ ಮೃತ್ಯು
    ಇತ್ತೀಚಿನ ಸುದ್ದಿ

    ಪುತ್ತೂರು: ಬಸ್ – ಆ್ಯಕ್ಟೀವಾ ಡಿಕ್ಕಿ: ಮಾಸ್ಟರ್ ಪ್ಲಾನರಿ ಕಾರ್ಮಿಕ ಮೃತ್ಯು

    February 26, 2024
    Share

    ಪುತ್ತೂರು:ಕಬಕ ಸಮೀಪದ ಪೋಳ್ಯದಲ್ಲಿ ಎವಿಯೇಟರ್ ಸ್ಕೂಟರ್ ಮತ್ತು ಮಿನಿ ಟೂರಿಸ್ಟ್ ಬಸ್ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಫೆ.25ರಂದು ನಡೆದಿದೆ. ಮಾಸ್ಟರ್ ಪ್ಲಾನರಿಯಲ್ಲಿ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಅಳಕೆಮಜಲು ನಿವಾಸಿ ಕ್ಲಿಫರ್ಡ್ ಮೊರಾಸ್  ರಾಜ(45ವ. )ಮೃತಪಟ್ಟವರು.ಸ್ಕೂಟರ್ ಸಹಸವಾರರಾಗಿದ್ದ, ಬಿಹಾರ ಮೂಲದವರಾಗಿದ್ದು ಮುರದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸ್ತವ್ಯ ಹೊಂದಿರುವ ಸುರೇಂದರ್ (29ವ) ಮತ್ತು ಸನ್ನೀಫ್ (28ವ)ಗಾಯಗೊಂಡಿದ್ದಾರೆ.ಕ್ಲಿಫರ್ಡ್ ಮೊರಾಸ್  ಅವರು ಆದಿತ್ಯವಾರ ಮಾಸ್ಟರ್ ಪ್ಲಾನರಿ ಸಂಸ್ಥೆಗೆ ರಜೆಯಾದ್ದರಿಂದ, ಅಳಕೆಮಜಲಿನಲ್ಲಿ ಖಾಸಗಿ ಕೆಲಸ ನಿರ್ವಹಿಸಲೆಂದು ಬಿಹಾರ ಮೂಲದ ಕಾರ್ಮಿಕರಾದ ಸುರೇಂದರ್ ಮತ್ತು ಸನ್ನೀಫ್‌ರನ್ನು ಕರೆಸಿಕೊಂಡಿದ್ದರು. ರಾತ್ರಿ ವೇಳೆ ಅವರನ್ನು ಮುರ ರೂಮ್ ಗೆ ಬಿಡಲೆಂದು ಸ್ಕೂಟರ್‌ನಲ್ಲಿ ಪುತ್ತೂರು ಕಡೆ ಬರುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಾಜ ಅವರು ಚಲಾಯಿಸುತ್ತಿದ್ದ ಸ್ಕೂಟರ್ ಹಾಗೂ ಮಡಿಕೇರಿಯಿಂದ ಮಂಗಳೂರು ಕಡೆ ಹೋಗುತ್ತಿದ್ದ ಮಿನಿ ಬಸ್ ನಡುವೆ ಪೋಳ್ಯ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ರಾಜ ಅವರ ತೊಡೆಯ ಮೇಲೆಯೇ ಬಸ್ ಹರಿದು ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟರ್ ಸಹ ಸವಾರರಾಗಿದ್ದ ಸುರೇಂದರ್ ಅವರ ಎಡ ಕಾಲು ಮುರಿತಕ್ಕೊಳಗಾಗಿದ್ದು, ಸನ್ನೀಫ್ ಅವರ ಮುಖಕ್ಕೆ ಗಾಯವಾಗಿದೆ. ಗಾಯಾಳುಗಳಿಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮೃತ ರು  ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ಸಂಚಾರ ಪೊಲೀಸರು ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.

    Post Views: 221

    Related Posts

    ಮಂಗಳೂರು: ಸಾರ್ವಜನಿಕವಾಗಿ ತಲಾವಾರು ಹಿಡಿದು ಗ್ಯಾಂಗ್ ವಾರ್ ಗೆ ಯತ್ನ..!! ಪೊಲೀಸರಿಂದ ಸ್ವಯಂಪ್ರೇರಿತ ಪ್ರಕರಣ ದಖಾಲು

    September 13, 2026

    ಬೆಳ್ತಂಗಡಿ: ಕೃಷಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಜಾತಿನಿಂದನೆ, ಜೀವ ಬೆದರಿಕೆ: ಆರೋಪಿ ಬಂಧನ

    September 13, 2026

    ಮಂಗಳೂರು: ನಾನು ಮೀಡಿಯಾದವನು ಎಂದು ಬೆದರಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ- ಪ್ರಕರಣ ದಾಖಲು

    September 12, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಂಗಳೂರು: ಸಾರ್ವಜನಿಕವಾಗಿ ತಲಾವಾರು ಹಿಡಿದು ಗ್ಯಾಂಗ್ ವಾರ್ ಗೆ ಯತ್ನ..!! ಪೊಲೀಸರಿಂದ ಸ್ವಯಂಪ್ರೇರಿತ ಪ್ರಕರಣ ದಖಾಲು

    September 13, 2026

    ಬೆಳ್ತಂಗಡಿ: ಕೃಷಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಜಾತಿನಿಂದನೆ, ಜೀವ ಬೆದರಿಕೆ: ಆರೋಪಿ ಬಂಧನ

    September 13, 2026

    ಮಂಗಳೂರು: ನಾನು ಮೀಡಿಯಾದವನು ಎಂದು ಬೆದರಿಸಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ- ಪ್ರಕರಣ ದಾಖಲು

    September 12, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.