Facebook Twitter Instagram
    Tuesday, November 17
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ : SIT ಮುಖ್ಯಸ್ಥರಿಂದ ಮೆಡಿಕಲ್ ಬೋರ್ಡ್ ರಚನೆ
    ಇತ್ತೀಚಿನ ಸುದ್ದಿ

    ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ : SIT ಮುಖ್ಯಸ್ಥರಿಂದ ಮೆಡಿಕಲ್ ಬೋರ್ಡ್ ರಚನೆ

    November 17, 2026
    Share

    ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಬೆಳ್ತಂಗಡಿ ತಾಲೂಕಿನ ಪಾಂಗಳದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯನ್ನು ಎಸ್ಐಟಿ (SIT) ಮತ್ತಷ್ಟು ಚುರುಕುಗೊಳಿಸಿದೆ. ಪ್ರಕರಣದ ವೈಜ್ಞಾನಿಕ ಹಾಗೂ ತಾಂತ್ರಿಕ ಅಂಶಗಳನ್ನು ಪರಿಶೀಲಿಸಲು ಎಸ್ಐಟಿ ಮುಖ್ಯಸ್ಥ ಚೇತನ್ ಸಿಂಗ್ ರಾಠೋಡ್ ಅವರು ಇದೀಗ ಮೂವರು ನುರಿತ ವಿಧಿವಿಜ್ಞಾನ (FSL) ವೈದ್ಯರನ್ನೊಳಗೊಂಡ ವಿಶೇಷ ‘ಮೆಡಿಕಲ್ ಬೋರ್ಡ್’ ರಚನೆ ಮಾಡಿದ್ದಾರೆ. ಈ ತಂಡದಲ್ಲಿ ಬೆಂಗಳೂರು, ಹಾವೇರಿ ಮತ್ತು ಬೆಳಗಾವಿಯ ತಲಾ ಒಬ್ಬೊಬ್ಬ ತಜ್ಞ ವೈದ್ಯರಿದ್ದು, ಓರ್ವ ಮಹಿಳಾ ವೈದ್ಯೆ ಹಾಗೂ ಇಬ್ಬರು ಪುರುಷ ವೈದ್ಯರನ್ನು ಒಳಗೊಂಡಿದೆ ಎಂದು ಎಸ್ಐಟಿ ಮುಖ್ಯಸ್ಥರು ಮಾಹಿತಿ ನೀಡಿದ್ದಾರೆ.

    ಈ ನೂತನ ಮೆಡಿಕಲ್ ಬೋರ್ಡ್ ತಂಡವು ಶೀಘ್ರದಲ್ಲೇ ಸೌಜನ್ಯ ಶವ ಪತ್ತೆಯಾಗಿದ್ದ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಮಣ್ಣಸಂಕದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ಘಟನೆ ನಡೆದ ಸಂದರ್ಭದಲ್ಲಿ ಶವ ಪತ್ತೆಯಾದ ಜಾಗದಲ್ಲಿ ತೆಗೆಯಲಾಗಿದ್ದ ಫೋಟೋ ಮತ್ತು ವಿಡಿಯೋ ದಾಖಲೆಗಳನ್ನು ಹಿಡಿದು, ಅದೇ ಸ್ಥಳದಲ್ಲಿ ನಿಂತು ವೈದ್ಯರ ತಂಡವು ಸೂಕ್ಷ್ಮವಾಗಿ ವಿಶ್ಲೇಷಣೆ ನಡೆಸಲಿದೆ.

    ಪ್ರಮುಖವಾಗಿ, ಸೌಜನ್ಯಳನ್ನು ಶವ ಪತ್ತೆಯಾದ ಮಣ್ಣಸಂಕದ ಸ್ಥಳದಲ್ಲೇ ಕೊಲೆ ಮಾಡಲಾಗಿತ್ತೇ ಅಥವಾ ಬೇರೆ ಎಲ್ಲಾದರೂ ಹತ್ಯೆಗೈದು ಬಳಿಕ ಸಾಕ್ಷ್ಯ ನಾಶಪಡಿಸಲು ಇಲ್ಲಿ ತಂದು ಶವ ಎಸೆಯಲಾಗಿತ್ತೇ ಎಂಬ ಮಹತ್ವದ ಪ್ರಶ್ನೆಗೆ ಈ ತಂಡವು ವೈಜ್ಞಾನಿಕ ಉತ್ತರವನ್ನು ಕಂಡುಕೊಳ್ಳಲಿದೆ. ಮೆಡಿಕಲ್ ಬೋರ್ಡ್‌ನ ಈ ಸ್ಥಳ ಪರಿಶೀಲನೆ ಮತ್ತು ವರದಿಯು ಪ್ರಕರಣದ ಮುಂದಿನ ತನಿಖೆಯಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸಲಿದೆ.

    Post Views: 11

    Related Posts

    ಮಂಗಳೂರು: ಮೊಟ್ಟೆ ಸಾಗಾಟದ ವಾಹನದಲ್ಲಿ 16 ಜಾನುವಾರುಗಳ ಅಕ್ರಮ ಸಾಗಣೆ – ಇಬ್ಬರ ಬಂಧನ

    November 17, 2026

    ಮಂಗಳೂರು ವಿಮಾನ ನಿಲ್ದಾಣ: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ- 236 ಮಂದಿ ಪ್ರಾಣಾಪಾಯದಿಂದ ಪಾರು

    November 17, 2026

    ಮಂಗಳೂರು: ಊರಿಗೆ ತೆರಳುವುದಾಗಿ ಹೇಳಿ ಬಸ್ ಹತ್ತಿದ ಯುವತಿ ನಾಪತ್ತೆ!

    November 17, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಂಗಳೂರು: ಮೊಟ್ಟೆ ಸಾಗಾಟದ ವಾಹನದಲ್ಲಿ 16 ಜಾನುವಾರುಗಳ ಅಕ್ರಮ ಸಾಗಣೆ – ಇಬ್ಬರ ಬಂಧನ

    November 17, 2026

    ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ : SIT ಮುಖ್ಯಸ್ಥರಿಂದ ಮೆಡಿಕಲ್ ಬೋರ್ಡ್ ರಚನೆ

    November 17, 2026

    ಮಂಗಳೂರು ವಿಮಾನ ನಿಲ್ದಾಣ: ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ- 236 ಮಂದಿ ಪ್ರಾಣಾಪಾಯದಿಂದ ಪಾರು

    November 17, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.