Facebook Twitter Instagram
    Friday, April 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉಡುಪಿ: ಮಹಿಳೆಯ ಮೊಬೈಲ್‌ ಮತ್ತು ಪರ್ಸ್ ಎಗರಿಸಿದ ಆರೋಪಿ ಬಂಧನ
    ಇತ್ತೀಚಿನ ಸುದ್ದಿ

    ಉಡುಪಿ: ಮಹಿಳೆಯ ಮೊಬೈಲ್‌ ಮತ್ತು ಪರ್ಸ್ ಎಗರಿಸಿದ ಆರೋಪಿ ಬಂಧನ

    March 25, 2025
    Share

    ಉಡುಪಿಯ ಕೆಳಾರ್ಕಳಬೆಟ್ಟು- ಸಂತೆಕಟ್ಟೆ ರಸ್ತೆಯಲ್ಲಿ ನಾಲ್ಕು ದಿನಗಳ ಹಿಂದೆ ಪಾದಚಾರಿ ಮಹಿಳೆಯ ಮೊಬೈಲ್‌ ಫೋನ್‌ ಮತ್ತು ಪರ್ಸ್ ಎಗರಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

    ಮಲ್ಪೆಯ ತೊಟ್ಟಂ ನಿವಾಸಿ ದರ್ಶನ್‌ ಕುಮಾರ್ ಬಂಧಿತ ಆರೋಪಿಯಾಗಿದ್ದಾನೆ. ಬಾಗಲ್ಕೋಟೆ ಮೂಲದ ಮಹಿಳೆ ಸರಸ್ವತಿ (21) ಎಂಬವರು ಮಾರ್ಚ್ 21 ರಂದು ಬೆಳಿಗ್ಗೆ 11:45 ಗಂಟೆಗೆ ಸಂತೆಕಟ್ಟೆಯಲ್ಲಿನ ವೈದ್ಯರ ಬಳಿ ಹೋಗಲು ತನ್ನ ಮಗನನ್ನು ಎತ್ತಿಕೊಂಡು ಕೆಳಾರ್ಕಳಬೆಟ್ಟುವಿನ ತನ್ನ ತಾಯಿಯ ಮನೆಯಿಂದ ಹೊರಟು ಕೆಳಾರ್ಕಳಬೆಟ್ಟು- ಸಂತೆಕಟ್ಟೆ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದಾಗ ಸುಲಿಗೆ ನಡೆದಿತ್ತು. ಅಪರಿಚಿತ ಮೋಟಾರ್‌ ಸೈಕಲ್‌ ಸವಾರನೊಬ್ಬ ಹಿಂಬದಿಯಿಂದ ಬಂದು ಸರಸ್ವತಿ ಅವರ ಕೈಯಲ್ಲಿದ್ದ ಚೀಲವನ್ನು ಬಲತ್ಕಾರವಾಗಿ ಕಸಿದುಕೊಂಡು ಕೆಮ್ಮಣ್ಣು ಕಡೆಗೆ ಪರಾರಿಯಾಗಿದ್ದನು. ಅಪರಿಚಿತ ವ್ಯಕ್ತಿ ಎಗರಿಸಿದ್ದ ಚೀಲದಲ್ಲಿ ಮೊಬೈಲ್‌ ಪೋನ್‌ ಮತ್ತು 2500 ರೂಪಾಯಿ ಹಣವಿದ್ದ ಸಣ್ಣ ಪರ್ಸ್‌ ಇತ್ತು. ಈ ಬಗ್ಗೆ ಸರಸ್ವತಿ ಅವರು ಮಲ್ಪೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಮಾರ್ಚ್ 24 ರಂದು ಬಂಧಿಸಿ ಆತನಿಂದ 13,000 ರೂಪಾಯಿ ಬೆಲೆಯ ರೆಡ್ಮಿ ಮೊಬೈಲ್ ಫೋನ್‌ ಮತ್ತು 2,500 ನಗದು ಹಾಗೂ ಲೇಡೀಸ್ ಪರ್ಸನ್ನು ವಶಪಡಿಸಿಕೊಂಡಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯ ಸಬ್‌ ಇನ್ಸ್‌ ಪೆಕ್ಟರ್ ರವಿ ಮತ್ತು ಸಿಬಂದಿ ಕಾರ್ಯಾಚರಣೆ ನಡೆಸಿದ್ದರು.

    Post Views: 152

    Related Posts

    ಭಾರತದ ನಕ್ಷೆಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ರಾಜಧಾನಿಗೆ ಸಂಸತ್ತಿನ ಕಾನೂನು ಮಾನ್ಯತೆ

    April 24, 2026

    ಪಾತ್ರೆಯಲ್ಲಿ ಸಿಲುಕಿದ ಪುಟ್ಟ ಮಗು: ಪೊಲೀಸರ ಸಮಯೋಚಿತ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ

    April 24, 2026

    ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು

    April 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.