Facebook Twitter Instagram
    Tuesday, June 9
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕಟೀಲು ದೇವಳಕ್ಕೂ ವ್ಯಾಪಿಸಿದ ಮನಿ ಮಾಫಿಯಾ, 100 ರೂ ಕೊಟ್ಟರೆ ಶೀಘ್ರದರ್ಶನ
    ಇತ್ತೀಚಿನ ಸುದ್ದಿ

    ಕಟೀಲು ದೇವಳಕ್ಕೂ ವ್ಯಾಪಿಸಿದ ಮನಿ ಮಾಫಿಯಾ, 100 ರೂ ಕೊಟ್ಟರೆ ಶೀಘ್ರದರ್ಶನ

    October 9, 2022
    Share

    ಪ್ರತಿನಿತ್ಯ ಸಾವಿರಾರು ಭಕ್ತರು ಯಾವುದೇ ನೂಕು ನುಗ್ಗಲು ಇಲ್ಲದೇ ಸಾವಕಾಶವಾಗಿ ಪಡೆಯುತ್ತಿದ್ದ ದುರ್ಗೆಯ ದರ್ಶನಕ್ಕೆ ಈಗ ಮೊತ್ತ ವಿಧಿಸಲಾಗಿದೆ.

    ಕ್ಷೇತ್ರದಲ್ಲಿ ಇದೀಗ ಶೀಘ್ರ ದರ್ಶನ ವ್ಯವಸ್ಥೆಯನ್ನು ಜಾರಿ ಮಾಡಲಾಗಿದ್ದು, ಶೀಘ್ರ ದರ್ಶನ ಪಡೆಯುವ ಪ್ರತಿಯೋರ್ವ ಭಕ್ತನು ನೂರು ರೂಪಾಯಿ ಪಾವತಿಸಿ ದೇವಸ್ಥಾನದ ಒಳಗೆ ಪ್ರವೇಶ ಮಾಡಬಹುದಾಗಿದೆ.

    ನವರಾತ್ರಿ ಯ ಬಳಿಕ ಈ ಹೊಸ ನಿಯಮವನ್ನು ಕ್ಷೇತ್ರದಲ್ಲಿ ತರಲಾಗಿದೆ. ಸಾವಿರಾರು ಭಕ್ತರು ಸೇರಿದರೂ ಯಾವುದೇ ಗೊಂದಲ, ನೂಕು ನುಗ್ಗಲು ಆಗದಂತೆ ನಡೆಯುತ್ತಿದ್ದ ವ್ಯವಸ್ಥೆಗೆ ಈಗ ಶೀಘ್ರ ದರ್ಶನ ಎಂಬುದನ್ನು ಸೇರಿಸಿ ನೂರು ರೂಪಾಯಿ ಮೊತ್ತ ಹಾಕಲಾಗುತ್ತಿದೆ. ಈ ಹಿಂದೆ ಪಾರ್ಕಿಂಗ್ ಮೊತ್ತವನ್ನು ಹಾಕಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನ ಮಾಡಿತ್ತು. ಈ ನಿಯಮಕ್ಕೆ ಕ್ಷೇತ್ರದ ಭಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಭಕ್ತರ ವಿರೋಧ ಹಿನ್ನಲೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಈ ನಿರ್ಧಾರವನ್ನು ಹಿಂಪಡೆದಿತ್ತು. ಈಗ ಶೀಘ್ರ ದರ್ಶನದ ಹೆಸರಿನಲ್ಲಿ ಮತ್ತೆ ಹಣ ಮಾಡುವ ದಂಧೆಗೆ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವುದು ಕ್ಷೇತ್ರದ ಭಕ್ತರ ಅಸಮಾಧಾನವಾಗಿದೆ.

    ಶುಕ್ರವಾರ ಅತೀ ಹೆಚ್ಚು ಭಕ್ತರು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸುತ್ತಾರೆ. ರಜಾದಿನದಲ್ಲೂ ಭಕ್ತರ ಸಂಖ್ಯೆ ಹೆಚ್ಚಳವಾಗುತ್ತದೆ‌. ಹೀಗಾಗಿ ಹಲವು ಭಕ್ತರಿಗೆ ಸರತಿಸಾಲಿನಲ್ಲಿ‌ ನಿಂತು ದರ್ಶನ ಪಡೆಯಲು ಸಾಧ್ಯವಾಗದ ಕಾರಣ ಶೀಘ್ರ ದರ್ಶನ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಷೇತ್ರದ ಆಡಳಿತ ಮಂಡಳಿ ವಾದವಾಗಿದೆ.

    ಇತರ ದೇವಸ್ಥಾನದಲ್ಲಿ ಇರುವಂತೆ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶೀಘ್ರ ದರ್ಶನ ವ್ಯವಸ್ಥೆ ಮಾಡುವ ಅವಶ್ಯಕತೆ ಇಲ್ಲ ಎನ್ನುವುದು ದೇವಳದ ಭಕ್ತರ ಅಭಿಪ್ರಾಯವಾಗಿದೆ. ದೇವಳದ ಒಳಾಂಗಣ ವಿಶಾಲವಾಗಿರೋದರಿಂದ ವಿಶೇಷ ದರ್ಶನದಲ್ಲಿ ಬರುವ ಭಕ್ತನಿಗೂ ಸಾಮಾನ್ಯ ಸರತಿಸಾಲಿನಿಂದ ಬರುವ ಭಕ್ತನಿಗೂ ಯಾವುದೇ ವ್ಯತ್ಯಾಸ ಇಲ್ಲದೇ ದೇವರ ದರ್ಶನವನ್ನು ಪಡೆಯಬಹುದಾಗಿದೆ. ನೇರವಾಗಿ ದೇವಸ್ಥಾನದ ಒಳಗೆ ಪ್ರವೇಶಕ್ಕೆ ಮಾತ್ರ ಶೀಘ್ರ ದರ್ಶನ ಟಿಕೆಟ್ ಸಹಾಯವಾಗಬಲ್ಲದು, ಅದರ ಹೊರತು ಇದರಿಂದ ಯಾವುದೇ ಪ್ರಯೋಜನ ಇಲ್ಲ ಎನ್ನುವುದು ಕ್ಷೇತ್ರದ ಭಕ್ತರೋರ್ವರ ಅಭಿಪ್ರಾಯವಾಗಿದೆ

    Post Views: 194

    Related Posts

    ಮಂಗಳೂರು: ಐದು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಬಂಧನ

    June 9, 2026

    ವೆನ್‌ಲಾಕ್ ಆಸ್ಪತ್ರೆಯಲ್ಲಿ ಕನ್ನಡ ಕಡ್ಡಾಯ: ವೈದ್ಯರಿಗೆ ಅಧೀಕ್ಷಕರ ಕಟ್ಟುನಿಟ್ಟಿನ ಸೂಚನೆ

    June 9, 2026

    ಮಹಿಳಾ ಐಪಿಎಸ್ ಅಧಿಕಾರಿಯ ರಹಸ್ಯ ಎಂಟ್ರಿ; ಪಬ್‌ನ ಕರಾಳ ಮುಖ ಅನಾವರಣ

    June 8, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.