Facebook Twitter Instagram
    Tuesday, July 28
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕುತ್ಲೂರಿನ ಮನೆಗೆ ತಡರಾತ್ರಿ ನಕ್ಸಲರ ಭೇಟಿ ವದಂತಿ – ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಸ್ಪಷ್ಟನೆ
    ಇತ್ತೀಚಿನ ಸುದ್ದಿ

    ಕುತ್ಲೂರಿನ ಮನೆಗೆ ತಡರಾತ್ರಿ ನಕ್ಸಲರ ಭೇಟಿ ವದಂತಿ – ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಸ್ಪಷ್ಟನೆ

    November 23, 2023
    Share

    ಬೆಳ್ತಂಗಡಿ: ಕುತ್ಲೂರಿನಲ್ಲಿ ಮನೆಯೊಂದಕ್ಕೆ ಮಂಗಳವಾರ ತಡರಾತ್ರಿ ನಕ್ಸಲರು ಭೇಟಿ ನೀಡಿದ್ದರು ಎಂಬ ವದಂತಿಯೊಂದು ಬುಧವಾರ ಬೆಳಗ್ಗೆ ಸೃಷಿಯಾಗಿತ್ತು. ಆದರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಿಷ್ಯಂತ್‌ ಮತ್ತು ಮಂಗಳೂರು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್‌ವಾಲ್‌ ಅವರು ಸ್ಪಷ್ಟನೆ ನೀಡಿದ್ದು, ಪ್ರಕರಣವೊಂದರ ತನಿಖೆಗಾಗಿ ಮೂಡುಬಿದಿರೆ ಪೊಲೀಸರು ಅಲ್ಲಿಗೆ ತೆರಳಿದ್ದರು ಎಂದು ತಿಳಿಸಿದ್ದಾರೆ.

    ಕುತ್ಲೂರು ಗ್ರಾಮದ ನಿವಾಸಿ ಜೋಸಿ ಆಂಟೋನಿ ತನ್ನ ಮನೆಗೆ ರಾತ್ರಿಯ ವೇಳೆ ಮಹಿಳೆ ಸೇರಿದಂತೆ ಅಪರಿಚಿತರ ತಂಡ ಬಂದು ಬಾಗಿಲು ಬಡಿದಿದೆ; ಆದರೆ ನಾನು ಬಾಗಿಲು ತೆರೆಯಲಿಲ್ಲ ಎಂದು ನ. 21ರ ರಾತ್ರಿ ಪೊಲೀಸರ ತುರ್ತು ಸಹಾಯವಾಣಿ 112ಕ್ಕೆ ಕರೆಮಾಡಿ ಹೇಳಿದ್ದರು. ಅವರು ಪೊಲೀಸರು ಎಂದು ಹೇಳಿದರೂ ಸಮವಸ್ತ್ರದಲ್ಲಿರದ ಕಾರಣ ಅನುಮಾನವಿದೆ, ನಕ್ಸಲರಾಗಿ ರಬಹುದು ಎಂಬ ಹೇಳಿಕೆಯನ್ನು ನೀಡಿದ್ದು ಇದು ಹಲವಾರು ಗೊಂದಲ ಗಳಿಗೆ ಕಾರಣವಾಗಿತ್ತು.

    ಮಾಹಿತಿ ತಿಳಿದ ತತ್‌ಕ್ಷಣ ಬೆಳ್ತಂಗಡಿ ವೃತ್ತನಿರೀಕ್ಷಕ ನಾಗೇಶ್‌ ಕದ್ರಿ, ವೇಣೂರು ಹಾಗೂ ಬೆಳ್ತಂಗಡಿ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.

    ನಿಜ ವಿಚಾರ ಏನು?
    ಇಲ್ಲಿನ ಜೋಸಿ ಆಂಟೋನಿ ತನ್ನ ಒಂದು ಜಾಗವನ್ನು ಬೆಂಗಳೂರಿನ ಸುಹನಾ ಅವರಿಗೆ 45 ಲಕ್ಷಕ್ಕೆ ರೂ.ಗೆ ಅಗ್ರಿಮೆಂಟ್‌ ಮಾಡಿದ್ದು 24 ಲಕ್ಷ ರೂ. ಚೆಕ್‌ ಮೂಲಕ ಪಡೆದಿದ್ದರು. ಅಂತೆಯೇ ಬೆಂಗಳೂರಿನ ಶರತ್‌ ಅವರಿಗೆ 48 ಲಕ್ಷ ರೂ.ಗೆ ಅಗ್ರಿಮೆಂಟ್‌ ಮಾಡಿ 19 ಲಕ್ಷ ರೂ. ಚೆಕ್‌ ಮೂಲಕ ಪಡೆದು ವಂಚಿಸಿದ್ದರು ಎನ್ನಲಾಗುತ್ತಿದೆ. ಈ ಬಗ್ಗೆ ನ. 17ರಂದು ಮೂಡುಬಿದಿರೆ ಪೊಲೀಸ್‌ ಠಾಣೆಗೆ ಸಂತ್ರಸ್ತರಿಂದ ದೂರು ಬಂದಿದ್ದು, ವಿಚಾರಣೆಗಾಗಿ ಪೊಲೀಸರು ಫೋನ್‌ ಮೂಲಕ ಸಂಪರ್ಕಸಿದಾಗ ಆತ ಸಂರ್ಪಕಕ್ಕೆ ಸಿಕ್ಕಿರಲಿಲ್ಲ. ಅಂದೇ ಮಧ್ಯಾಹ್ನ ಠಾಣೆಯ ಸಿಬಂದಿ ದೂರುದಾರ ರೊಂದಿಗೆ ಜೋಸಿಯ ಮನೆಗೆ ನೋಟಿಸ್‌ ನೀಡಲು ತೆರಳಿದ್ದು ಆಗಲೂ ಆತ ಮನೆಯಲ್ಲಿ ಇರಲಿಲ್ಲ. ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದ. ಸ್ಥಳೀಯರಲ್ಲಿ ವಿಚಾರಿಸಿದಾಗ ಆತ ಹಗಲು ವೇಳೆ ಮನೆಯಲ್ಲಿ ಇರುವುದಿಲ್ಲ. ರಾತ್ರಿ 9ರ ಬಳಿಕ ಮನೆಗೆ ಬರುತ್ತಾನೆ ಎಂದು ತಿಳಿಸಿದ್ದರು. ಅದರಂತೆ ನ. 21ರಂದು ರಾತ್ರಿ 9 ಗಂಟೆಯ ಅನಂತರ ಪೊಲೀಸರು ಜೋಸಿಯ ಮನೆಗೆ ಹೋಗಿದ್ದರು. ಬಾಗಿಲು ತೆರೆಯದ ಕಾರಣ ನೋಟಿಸ್‌ ಜಾರಿ ಮಾಡದೆ ವಾಪಸಾಗಿದ್ದಾರೆ. ಇದನ್ನು ಜೋಸಿ ತಪ್ಪಾಗಿ ಗ್ರಹಿಸಿ ನಕ್ಸಲರು ಬಂದಿದ್ದಾರೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಉಭಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

    Post Views: 190

    Related Posts

    ಮಗನ ವಂಚನೆಗೆ ಪೋಷಕರ ಮೇಲೆ ಕೇಸ್ ಹಾಕುವುದು ತಪ್ಪು : ಕರ್ನಾಟಕ ಹೈಕೋರ್ಟ್ 

    July 28, 2026

    ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಆಸ್ಪತ್ರೆಯಿಂದ ಡಿಸ್ಚಾರ್ಜ್, ಪೊಲೀಸರ ವಶಕ್ಕೆ!!

    July 28, 2026

    ಮಂಗಳೂರು: ಹಂಪನಕಟ್ಟೆಯಲ್ಲಿ ಶೂ ಅಂಗಡಿ ಬೆಂಕಿಗಾಹುತಿ- ಅಪಾರ ನಷ್ಟ!!

    July 28, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಮಗನ ವಂಚನೆಗೆ ಪೋಷಕರ ಮೇಲೆ ಕೇಸ್ ಹಾಕುವುದು ತಪ್ಪು : ಕರ್ನಾಟಕ ಹೈಕೋರ್ಟ್ 

    July 28, 2026

    ಲಾವಣ್ಯ ಹತ್ಯೆ ಪ್ರಕರಣದ ಆರೋಪಿ ಆಸ್ಪತ್ರೆಯಿಂದ ಡಿಸ್ಚಾರ್ಜ್, ಪೊಲೀಸರ ವಶಕ್ಕೆ!!

    July 28, 2026

    ಮಂಗಳೂರು: ಹಂಪನಕಟ್ಟೆಯಲ್ಲಿ ಶೂ ಅಂಗಡಿ ಬೆಂಕಿಗಾಹುತಿ- ಅಪಾರ ನಷ್ಟ!!

    July 28, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.