Facebook Twitter Instagram
    Monday, September 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರಿಗೆ ಆಗಮಿಸಿದ 86 ಸಾವಿರ ಮೆಟ್ರಿಕ್‌ ಟನ್‌ ತೈಲ ತುಂಬಿರುವ ಹಡಗು
    ಇತ್ತೀಚಿನ ಸುದ್ದಿ

    ಮಂಗಳೂರಿಗೆ ಆಗಮಿಸಿದ 86 ಸಾವಿರ ಮೆಟ್ರಿಕ್‌ ಟನ್‌ ತೈಲ ತುಂಬಿರುವ ಹಡಗು

    March 22, 2026
    Share

    ಮಂಗಳೂರು: ಚೀನಾಕ್ಕೆ ಹೊರಟಿದ್ದ ರಷ್ಯಾದ ತೈಲ ತುಂಬಿದ ಟ್ಯಾಂಕರ್ ಹಡಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆದ ಮಹತ್ವದ ಬೆಳವಣಿಗೆಯಿಂದ ಯುಟರ್ನ್ ಹೊಡೆದು ಶನಿವಾರ ಮಂಗಳೂರಿಗೆ ಆಗಮಿಸಿದೆ.

    ರಷ್ಯಾದ ಅಕ್ವಾ ಟೈಟಾನ್‌ ಹಡಗು ಸುಮಾರು 86 ಸಾವಿರ ಮೆಟ್ರಿಕ್ ಟನ್ ತೈಲ ಹೊತ್ತು ಮಂಗಳೂರಿಗೆ ಆಗಮಿಸಿದೆ. ಚೀನಾಕ್ಕೆ ಹೊರಟ ಈ ಹಡಗಿಗೆ ಜನವರಿಯಲ್ಲಿ ತೈಲ ತುಂಬಲಾಗಿದ್ದು, ಮಾರ್ಚ್ ಮಧ್ಯದಲ್ಲಿ ಆಗ್ನೇಯ ಏಷ್ಯಾದಲ್ಲಿ ಸಂಚರಿಸುತ್ತಿತ್ತು. ಈ ಸಂದರ್ಭ ಚೀನಾದ ರಿಝಾವೊ ಬಂದರು ತನ್ನ ಗಮ್ಯ ಸ್ಥಾನ ಎಂದು ಈ ಟೈಟಾನ್‌ ತೋರಿಸುತ್ತಿತ್ತು. ಆದರೆ ಈ ಮಧ್ಯೆ ಭಾರತವು ರಷ್ಯಾಕ್ಕೆ ತುರ್ತು ತೈಲ ಪೂರೈಕೆಗೆ ಬೇಡಿಕೆಯಿರಿಸಿದ ಹಿನ್ನೆಲೆಯಲ್ಲಿ ಈ ಹಡಗು ಯೂಟರ್ನ್‌ ಹೊಡೆದಿದ್ದು ಮಾರ್ಚ್‌ 21 ರಂದು ರಾತ್ರಿ ಮಂಗಳೂರಿಗೆ ಆಗಮಿಸಿದೆ. ಮಂಗಳೂರು ಸಮುದ್ರ ವ್ಯಾಪ್ತಿಯಲ್ಲಿ ನಿಂತು ತೇಲು ಜೆಟ್ಟಿಯಲ್ಲಿ ತೈಲವನ್ನು ಖಾಲಿ ಮಾಡಿ ಎಂಆರ್‌ಪಿಎಲ್‌ಗೆ ಸರಬರಾಜು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

    ಜಾಗತಿಕ ತೈಲ ಮಾರುಕಟ್ಟೆಯಲ್ಲಿನ ಬದಲಾವಣೆ ಮತ್ತು ಮಧ್ಯಪ್ರಾಚ್ಯದ ಪೂರೈಕೆ ಕೊರತೆಯನ್ನು ನೀಗಿಸಲು ಭಾರತವು ರಷ್ಯಾದಿಂದ ತನ್ನ ತೈಲ ಆಮದನ್ನು ಗಣನೀಯವಾಗಿ ಹೆಚ್ಚಿಸಿದೆ. ಇದರಿಂದ ರಷ್ಯಾದ ಮತ್ತಷ್ಟು ಟ್ಯಾಂಕರ್‌ಗಳು ಮಧ್ಯದಲ್ಲೇ ಗಮ್ಯಸ್ಥಾನವನ್ನು ಬದಲಾಯಿಸಿ ಭಾರತದತ್ತ ಬರುತ್ತಿವೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಈ ಬದಲಾವಣೆಗಳು ಭಾರತದ ಇಂಧನ ಭದ್ರತೆ ಹಾಗೂ ಆಮದು ತಂತ್ರಕ್ಕೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    Post Views: 163

    Related Posts

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.