ಪುತ್ತೂರು : ನಿನ್ನೆ ಸಂಜೆ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿದ ಭಾರಿ ಮಳೆ ಅವಾಂತರ ಸೃಷ್ಟಿಸಿದೆ. ಸೇತುವೆ ಮೇಲೆ ಸಂಚರಿಸುತ್ತಿದ್ದ ಪಿಕಪ್ ವಾಹನವೊಂದು ಹಠಾತ ಏರಿಕೆಯಾದ ಹೊಳೆಯ ನೀರಿಗೆ ಸಿಲುಕಿದ ಘಟನೆ ಸುಬ್ರಹ್ಮಣ್ಯ ಸಮೀಪದ ಕಲ್ಮಕಾರಿನಲ್ಲಿ ನಡೆದಿದೆ.
![](https://policepatrikekarnataka.com/wp-content/uploads/2024/06/WhatsApp-Image-2024-06-03-at-2.00.46-PM.jpeg)
![](https://policepatrikekarnataka.com/wp-content/uploads/2024/04/rohan-corp1.jpeg)
![](https://policepatrikekarnataka.com/wp-content/uploads/2024/04/rohan-corp2.jpeg)
![](https://policepatrikekarnataka.com/wp-content/uploads/2024/04/rohan-corp3.jpeg)
![](https://policepatrikekarnataka.com/wp-content/uploads/2024/04/rohan-corp4.jpeg)
ನಿನ್ನೆ ಸಂಜೆ ಸುಬ್ರಹ್ಮಣ್ಯ ಪರಿಸದಲ್ಲಿ ಬಾರೀ ಮಳೆಯಾಗಿತ್ತು, ಒಂದೇ ಸಮನೆ ಸುರಿದ ಮಳೆಗೆ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಹೊಳೆಯ ನೀರು ಏರಿಕೆಯಾಗಿತ್ತು. ಈ ನಡುವೆ ಸುಬ್ರಹ್ಮಣ್ಯ ಸಮೀಪದ ಕಲ್ಮಕಾರಿನಲ್ಲಿ ಸುರಿದ ಭಾರೀ ಮಳೆಗೆ ಕಲ್ಮಕಾರು ಹೊಳೆಗೆ ನಿರ್ಮಿಸಲಾದ ಸೇತುವೆ ಮೇಲೆ ಹಠಾತ ಪ್ರವಾಹ ಬಂದಿತ್ತು. ಈ ವೇಳೆ ಸೇತುವೆ ದಾಟುತ್ತಿದ್ದ ಪಿಕಪ್ ವಾಹನವೊಂದು ಸಿಕ್ಕಿಹಾಕಿಕೊಂಡಿತ್ತು. ತೆಂಗಿನಕಾಯಿ ಲೋಡ್ ಮಾಡಿಕೊಂಡು ಹೊಳೆ ದಾಟುತ್ತಿದ್ದ ಪಿಕ್ ಅಪ್ ವಾಹನ ಹೊಳೆಯಲ್ಲಿ ಏಕಾಏಕಿ ನೀರು ಹರಿದ ಪರಿಣಾಮ ಕೊಚ್ಚಿಹೋಗು ಸ್ಥಿತಿಗೆ ತಲುಪಿತ್ತು, ಈ ವೇಳೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯರು ವಾಹನದಿಂದ ತೆಂಗಿನ ಕಾಯಿಯನ್ನು ತೆಗೆದು, ವಾಹನ ಮತ್ತು ಚಾಲಕನನ್ನು ರಕ್ಷಣೆ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಪ್ರವಾಹದಿಂದಾಗಿ ಕಲ್ಮಕಾರು ಪ್ರದೇಶ ಸಾಕಷ್ಡು ಹಾನಿ ಅನುಭವಿಸಿದೆ.