Facebook Twitter Instagram
    Sunday, September 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಕರಾವಳಿ ಸುದ್ದಿ»ಪುಷ್ಪಲತಾ ಹತ್ಯೆ: ಹನ್ನೊಂದು ವರ್ಷವಾದರೂ ಪತ್ತೆಯಾಗದ ಹಂತಕ
    ಕರಾವಳಿ ಸುದ್ದಿ

    ಪುಷ್ಪಲತಾ ಹತ್ಯೆ: ಹನ್ನೊಂದು ವರ್ಷವಾದರೂ ಪತ್ತೆಯಾಗದ ಹಂತಕ

    June 6, 2025
    Share

    ಉಪ್ಪಿನಂಗಡಿ:ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಹಿರೆಬಂಡಾಡಿ ಸರಕಾರಿ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಪತ್ನಿ ಪುಷ್ಪಲತಾ (34) ಅವರನ್ನು ಹಾಡುಹಗಲೇ ಉಪ್ಪಿನಂಗಡಿಯ ಅವರ ವಾಸ್ತವ್ಯದ ಮನೆಯಲ್ಲಿ ಕತ್ತು ಕೊಯ್ದು ಕೊಲೆಗೈದ ಪ್ರಕರಣ ನಡೆದು ಇದೀಗ ಸರಿಯಾಗಿ ಹನ್ನೊಂದು ವರ್ಷ ಪೂರ್ಣಗೊಂಡರೂ ಹಂತಕನ ಪತ್ತೆ ಅಸಾದ್ಯವಾಗಿರುವುದು ಪೊಲೀಸ್‌ ವ್ಯವಸ್ಥೆ ಮೇಲಿನ ನಂಬಿಕೆಗೆ ಚ್ಯುತಿಯುಂಟಾಗಿದೆ.

    ಅಂದು ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಹಿರೆಬಂಡಾಡಿ ಸರಕಾರಿ ಪ್ರೌಢ ಶಾಲಾ ಮುಖ್ಯೋಪಧ್ಯಾಯರಾಗಿದ್ದ ಗುರುಮೂರ್ತಿ ಎಂಬವರ ಮಡದಿ ಇಬ್ಬರು ಮಕ್ಕಳ ತಾಯಿಯಾಗಿರುವ ಪುಷ್ಪಲತಾ ರವರು ಮೈಸೂರು ಮೂಲದವರಾಗಿದ್ದು, ,ತನ್ನ ವಾಸ್ತವ್ಯದ ಉಪ್ಪಿನಂಗಡಿ ಕ್ರೆçಸ್ತ ದೇಗುಲದ ಒಡೆತನದ ಬಾಡಿಗೆ ಮನೆಯಲ್ಲಿ ದಿನಾಂಕ 5/6/2014 ರ ಗುರುವಾರದಂದು ಮಾರಕಾಯುಧದಿಂದ ಕತ್ತು ಕೊಯ್ದ ಸ್ಥಿತಿಯಲ್ಲಿ ಕೊಲೆಗೀಡಾಗಿದ್ದರು.

    ಪತಿ ಮತ್ತು ಮಕ್ಕಳು ಶಾಲೆಗೆ ಹೋದ ಬಳಿಕ ಎಂದಿನಂತೆ ಬಟ್ಟೆ ಬರೆಗಳನ್ನು ಒಗೆಯುವ ಕಾರ್ಯದಲ್ಲಿ ನಿರತಳಾಗಿದ್ದ ಈಕೆಯನ್ನು ಹಂತಕ ನೆಂಟನಂತೆಯೋ , ಪರಿಚಯಸ್ಥನಂತೆಯೋ ಬಂದು ಕೊಲೆಗೈದಿರುವ ಸಾಧ್ಯತೆಯನ್ನು ಮನೆಯಲ್ಲಿ ಕಂಡು ಬಂದ ತುಂಪು ಪಾನೀಯವನ್ನು ಲೋಟ ಶಂಕಿಸುವಂತೆ ಮಾಡಿತ್ತು. ತನ್ನ ವಾಸ್ತವ್ಯದ ಮನೆಯ ಅಡುಗೆ ಕೋಣೆಯಲ್ಲಿ ಕೊಲೆಯಾಗಿ ಬಿದ್ದಿದ್ದ ಪುಷ್ಪಲತಾ ಕೊಸರಾಡಿಕೊಂಡ ಯಾ ಸಾವಿನ ಸಂಧರ್ಭದಲ್ಲಿ ಪ್ರಾಣ ಉಳಿಸಿಕೊಳ್ಳುವ ಸಹಜ ಯತ್ನವನ್ನಾಗಲಿ ಮಾಡಿರುವ ಯಾವ ಕುರುಹು ಅಲ್ಲಿ ಕಂಡು ಬಂದಿರಲಿಲ್ಲ. ಕೊಲೆಗೀಡಾದಾಗ ಧರಿಸಿದ ಬಟ್ಟೆಯ ಮೇಲ್ಭಾಗದಲ್ಲಿ ರಕ್ತದಕಲೆಯಾಗಲಿ ಕಂಡು ಬರಲಿಲ್ಲ. ಹಂತಕ ಬಲಿಷ್ಠವಾಗಿ ಹಿಡಿದಿಟ್ಟುಕೊಂಡು, ಅಥವ ಪ್ರಜ್ಞೆ ತಪ್ಪಿಸಿ ಈ ಕೃತ್ಯವೆಸಗಿರುವ ಸಾಧ್ಯತೆಯನ್ನೂ ಶಂಕಿಸುವಂತಿತ್ತು.

    ಸಹಜವೆಂಬಂತೆ ಈ ಪ್ರಕರಣದಲ್ಲಿ ತನಿಖೆಯ ಸಂಶಯದ ಕಣ್ಣು ಕೊಲೆಗೀಡಾದಾಕೆಯ ಪತಿ ಗುರುಮೂರ್ತಿಯ ಮೇಲೆ ಇತ್ತಾದರೂ , ನಡೆಸಿದ ವಿಚಾರಣೆಯಲ್ಲಿ ಪೂರಕವಾದ ಯಾವುದೇ ಮಾಹಿತಿ ಪೊಲೀಸರಿಗೆ ದೊರೆತಿಲ್ಲವೆನ್ನಲಾಗಿದೆ. ಅಂದಾಜಿನ ಪ್ರಕಾರ ಕೊಲೆ ನಡೆದ ಸಮಯ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 11 ಗಂಟೆಯ ಮಧ್ಯೆಯಾಗಿದ್ದರೆ ಸದ್ರಿ ಸಮಯದಲ್ಲಿ ಆಕೆ ಪತಿ ಹಿರೆಬಂಡಾಡಿ ಶಾಲೆಯಲ್ಲೇ ಕರ್ತವ್ಯದಲ್ಲಿರುವುದು ದೃಢಪಟ್ಟಿದೆ. ಪದೇ ಪದೇ ಮಾನಸಿಕ ಖನ್ನತೆಗೆ ತುತ್ತಾಗುವ ಪತ್ನಿಯ ಚಿಕಿತ್ಸೆಗೆ ಪತಿ ಬಹಳಷ್ಟು ಶ್ರಮಿಸುತ್ತಿರುವುದು, ಆಧ್ಯಾತ್ಮಿಕ ಕಾರ್ಯಗಳಿಗೆ ಕರೆದೊಯ್ಯುತ್ತಿದ್ದುದ್ದು ಕೂಡಾ ಪ್ರಕರಣದಲ್ಲಿ ಪತಿಯ ಪಾತ್ರದ ಸಾಧ್ಯತೆಯನ್ನು ಕ್ಷೀಣಿಸಿತ್ತು.

    ಗೃಹಿಣಿ ಪುಷ್ಪಲತಾ ಕೊಲೆಯ ಪ್ರಕರಣವನ್ನು ಅಮೂಲಾಗ್ರ ತನಿಖೆಗೆ ಒಳಪಡಿಸಬೇಕೆಂದು ಪುತ್ತೂರಿನ ಅಂದಿನ ಶಾಸಕಿ ಶಕುಂತಳಾ ಶೆಟ್ಟಿ ಅದೇ ದಿನ ಜಿಲ್ಲಾ ಪೊಲೀಸ್‌ ವರಿಷ್ಠರನ್ನು ಒತ್ತಾಯಿಸಿದ್ದು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯವರ ಸೂಚನೆ ಮೇರೆಗೆ ಶವದ ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನ ಪ್ರತಿಷ್ಠಿತ ವೈದ್ಯ ಸಂಸ್ಥೆಯಲ್ಲಿ ನಡೆಸಲಾಗಿತ್ತು. ಆದಾಗ್ಯೂ ಮರಣೋತ್ತರ ಪರೀಕ್ಷೆ ತನಿಖೆಯಲ್ಲಿ ಫ‌ಲಿತಾಂಶವನ್ನು ಒದಗಿಸಲು ಸಹಕಾರಿಯಾಗಿಲ್ಲ ಎನ್ನುವುದು ಈ ವರೆಗಿನ ಬೆಳವಣಿಗೆಯಿಂದ ದೃಢಪಟ್ಟಿದೆ.

    ಕೊಲೆಗೀಡಾದ ಶವದ ಮರಣೋತ್ತರ ಪರೀಕ್ಷೆ ನಡೆಸುವಾಗ ಶವದ ಅಂಗಾಂಗಗಳ ಸ್ಥಿತಿಗತಿಯನ್ನಾಧ‌ರಿಸಿ ಮರಣೋತ್ತರ ಪರೀಕ್ಷೆಯ ಫ‌ಲಿತಾಂಶಗಳನ್ನು ದಾಖಲಿಸುವುದು ಸಾಮಾನ್ಯ ನಡೆಯಾಗಿದೆ. ಆದರೆ, ಈ ಪ್ರಕರಣದಲ್ಲಿ ವೈದ್ಯಾಧಿಕಾರಿಗಳ ತಂಡವೊಂದು ಘಟನಾ ಸ್ಥಳವನ್ನೂ ಕೂಡಾ ಪರಿಶೀಲನೆ ನಡೆಸಿದೆ. ಇಲ್ಲಿ ಘಟನಾ ಸ್ಥಳದ ಪರಿಶೀಲನೆ ತನಿಖಾಧಿಕಾರಿಗಳಿಗೆ ಪ್ರಮುಖವಾಗಿರುತ್ತದೆಯೇ ವಿನಃ ವೈದ್ಯಾಧಿಕಾರಿಗಳಿಗೆ ಯಾವ ಮಟ್ಟದಲ್ಲಿ ಪ್ರಮುಖವಾಗಿರುತ್ತದೆ ಎನ್ನುವುದು ಅರ್ಥವಾಗದ ವಿಚಾರ.

    ಇದೇ ಸಂಧರ್ಭದಲ್ಲಿ ವೈದ್ಯರೊಬ್ಬರು ಮಾನಸಿಕ ಖನ್ನತೆಯ ವ್ಯಕ್ತಿ ಸ್ವಇಚ್ಚೆಯಿಂದಲೇ ಕುತ್ತಿಗೆಗೆ ಇರಿದು ಸಾವನ್ನಪ್ಪುವ ಸಾಧ್ಯತೆಯೂ ಇದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆನ್ನಲಾಗಿದೆ. ಆದರೆ ಈ ಸಾಧ್ಯತೆ ನಿಜವಾಗಿದ್ದರೂ, ಪುಷ್ಪಲತಾ ಪ್ರಕರಣದಲ್ಲಿ ಮಾತ್ರ ಅದು ನಿಜವಾಗಿಲ್ಲ .ಯಾಕೆಂದರೆ ಸ್ವತಃ ಇರಿದುಕೊಂಡು ಸಾವನ್ನಪ್ಪಿದ್ದರೆ ಇರಿದುಕೊಳ್ಳಲು ಬಳಸಿದ್ದ ಆಯುಧವೂ ಪತ್ತೆಯಾಗಬೇಕಿತ್ತು. ಮಾತ್ರವಲ್ಲದೆ ಒಂದೇ ಬಾಗಿಲು ಇರುವ ಈ ಮನೆಯಲ್ಲಿ ಬಾಗಿಲಿಗೆ ಬೀಗ ಹಾಕುವ ಸಾಧ್ಯತೆಯೂ ಇರುತ್ತಿರಲಿಲ್ಲ. ಆ ಮನೆಗೆ ಬರಬಹುದಾಗಿದ್ದ ವ್ಯಕ್ತಿಗಳ ಬಗ್ಗೆ ಸಹಜ ಸಂಶಯ ಮೂಡುತ್ತಿದ್ದು, ಅಪರಿಚಿತರು ಬಂದಿದ್ದಲ್ಲಿ ಅವರನ್ನು ಮನೆಯೊಳಗೆ ಕರೆದು ಪಾನೀಯವನ್ನು ನೀಡುವ ಸಾಧ್ಯತೆ ಇಲ್ಲವಾಗಿದ್ದು, ಪಾನೀಯದ ಸತ್ಕಾರವನ್ನು ಪಡೆದಿರಬೇಕಾದರೆ ಹಂತಕ ಪರಿಚಿತನೇ ಆಗಿರುವ ಸಾಧ್ಯತೆ ದಟ್ಟವಾಗಿತ್ತು. ಮಾತ್ರವಲ್ಲದೆ ತಾನು ಬಟ್ಟೆ ಒಗೆಯುವ ಸಂಧರ್ಭದಲ್ಲಿ ಬಂದಿದ್ದ ಹಂತಕನನ್ನು ಸತ್ಕರಿಸುವ ಸಲುವಾಗಿ ಆಕೆ ಬಟ್ಟೆ ಒಗೆಯುವ ಸ್ಥಳದಿಂದ ಮನೆಗೆ ನಿರ್ಗಮಿಸಿರುವುದು ಕಂಡು ಬಂದಿತ್ತು.

    ಪುಷ್ಪಲತಾ ಕೊಲೆ ಪ್ರಕರಣದ ಹಂತಕರನ್ನು ಪತ್ತೆ ಹಚ್ಚಲು ಅಗ್ರಹಿಸಿ ಮಹಿಳಾ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರೂ ಈ ಹನ್ನೊಂದು ವರ್ಷದ ಅವಧಿಯಲ್ಲಿ ಯಾವುದೇ ಫ‌ಲಶ್ರುತಿ ಕಾಣಿಸದಿರುವುದು ವ್ಯವಸ್ಥೆಯೊಳಗಿನ ದೋಷವಾಗಿದೆ.

    Post Views: 338

    CrimeNews karnataka mangalore uppinangady

    Related Posts

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.