Facebook Twitter Instagram
    Saturday, July 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಪುತ್ತೂರು : ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ- ಸಂತ್ರಸ್ತೆ, ಮಗು ಹಾಗೂ ಆರೋಪಿಯ ಡಿಎನ್‌ಎ ಪರೀಕ್ಷೆ
    ಇತ್ತೀಚಿನ ಸುದ್ದಿ

    ಪುತ್ತೂರು : ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ- ಸಂತ್ರಸ್ತೆ, ಮಗು ಹಾಗೂ ಆರೋಪಿಯ ಡಿಎನ್‌ಎ ಪರೀಕ್ಷೆ

    August 20, 2025
    Share

    ಪುತ್ತೂರು : ಸಹಪಾಠಿ ಯುವತಿಗೆ ವಿವಾಹದ ಆಮೀಷವೊಡ್ಡಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಮದುವೆಯಾಗಲು ನಿರಾಕರಿಸಿದ ಪ್ರಕರಣದಲ್ಲಿ, ಬಿಜೆಪಿ ಮುಖಂಡನ ಪುತ್ರ ಶ್ರೀಕೃಷ್ಣ ಜೆ.ರಾವ್ ವಿರುದ್ಧ ಮಹತ್ವದ ಬೆಳವಣಿಗೆ ನಡೆದಿದೆ.

    ಸಂತ್ರಸ್ತೆ ಜೂನ್ 27ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಹಿನ್ನೆಲೆಯಲ್ಲಿ, ಮಗು 50 ದಿನಗಳಾದ ನಂತರ ಇಂದು (ಆ.19) ಪುತ್ತೂರಿನ ನ್ಯಾಯಾಲಯದಲ್ಲಿ ಸಂತ್ರಸ್ತೆ, ಮಗು ಹಾಗೂ ಆರೋಪಿ ಮೂವರ ಡಿಎನ್‌ಎ ಪರೀಕ್ಷೆ ನಡೆಯಿತುಮಂಗಳೂರಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಪೊಲೀಸರು ಮಧ್ಯಾಹ್ನ ನ್ಯಾಯಾಲಯಕ್ಕೆ ಕರೆ ತಂದರು. ಈ ಸಂದರ್ಭದಲ್ಲಿ ಸಂತ್ರಸ್ತೆ ಯುವತಿ, ಮಗು ಮತ್ತು ಯುವತಿಯ ತಾಯಿ ಹಾಜರಿದ್ದರು. ನ್ಯಾಯಾಧೀಶರ ಸಮ್ಮುಖದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರ ನೇತೃತ್ವದಲ್ಲಿ ವಿಧಿವಿಜ್ಞಾನ ಇಲಾಖೆಯ ಸಿಬ್ಬಂದಿ ಮೂವರ ರಕ್ತದ ಮಾದರಿಗಳನ್ನು ಸಂಗ್ರಹಿಸಿದರು.

    ಸಂಗ್ರಹಿಸಿದ ಮಾದರಿಗಳನ್ನು ಡಿ.ಎನ್‌ಎ ಪರೀಕ್ಷೆಗಾಗಿ ಬೆಂಗಳೂರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮಹಿಳಾ ಠಾಣೆಯ ಪೊಲೀಸ್ ಸಿಬ್ಬಂದಿ ಬಸ್ ಮೂಲಕ ಅವುಗಳನ್ನು ಬೆಂಗಳೂರಿಗೆ ಸಾಗಿಸಿದರು. ಸಂತ್ರಸ್ತೆಯ ತಾಯಿಯೂ ಮಾದರಿಗಳ ಭದ್ರತೆಗಾಗಿ ಅವರೊಂದಿಗೆ ತೆರಳಿದ್ದಾರೆ.

    ಈ ಮೊದಲು ಸಂತ್ರಸ್ತೆಯ ತಾಯಿ “ಡಿಎನ್‌ಎ ತಿರುಚುವ ಆತಂಕ” ವ್ಯಕ್ತಪಡಿಸಿದ್ದರಿಂದಲೇ ಈ ಬಾರಿ ಸ್ವತಃ ಮಾದರಿಗಳೊಂದಿಗೆ ಬೆಂಗಳೂರಿಗೆ ತೆರಳಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.ಒಂದು ವಾರದಲ್ಲಿ ಎಫ್‌ಎಸ್‌ಎಲ್ ವರದಿ ಬರುವ ಸಾಧ್ಯತೆ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದ ದೋಷಾರೋಪಣ ಪಟ್ಟಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

    Post Views: 161

    Related Posts

    ನಕಲಿ ಪಿಎಚ್‌ಡಿ ಹಗರಣ ಬಯಲು: 249 ಅತಿಥಿ ಉಪನ್ಯಾಸಕರಿಗೆ ವಜಾ, FIR ಆದೇಶ

    July 25, 2026

     ಜಂತರ್ ಮಂತರ್ ನಲ್ಲಿ 2500ಕ್ಕೂ ಹೆಚ್ಚು ಅಪರಾಧ ಹಿನ್ನೆಲೆ ಉಳ್ಳವರು ಪತ್ತೆ!!

    July 25, 2026

    ಖೋಟಾ ನೋಟು ಚಲಾಯಿಸಲು ಯತ್ನ : ಇಬ್ಬರು ಅರೆಸ್ಟ್!

    July 25, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ನಕಲಿ ಪಿಎಚ್‌ಡಿ ಹಗರಣ ಬಯಲು: 249 ಅತಿಥಿ ಉಪನ್ಯಾಸಕರಿಗೆ ವಜಾ, FIR ಆದೇಶ

    July 25, 2026

     ಜಂತರ್ ಮಂತರ್ ನಲ್ಲಿ 2500ಕ್ಕೂ ಹೆಚ್ಚು ಅಪರಾಧ ಹಿನ್ನೆಲೆ ಉಳ್ಳವರು ಪತ್ತೆ!!

    July 25, 2026

    ಖೋಟಾ ನೋಟು ಚಲಾಯಿಸಲು ಯತ್ನ : ಇಬ್ಬರು ಅರೆಸ್ಟ್!

    July 25, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.