Facebook Twitter Instagram
    Sunday, September 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಕ್ರೈಂ ಸ್ಟೋರಿ»ಬೆಳ್ತಂಗಡಿ: ಮಾರ್ಗ ದುರಸ್ತಿ ಮಾಡುವ ವಿಚಾರಕ್ಕೆ ಹೊಡೆದಾಡಿಕೊಂಡು ಆಸ್ಪತ್ರೆಗೆ ಸೇರಿದ ಸಂಬಂಧಿಕರು
    ಕ್ರೈಂ ಸ್ಟೋರಿ

    ಬೆಳ್ತಂಗಡಿ: ಮಾರ್ಗ ದುರಸ್ತಿ ಮಾಡುವ ವಿಚಾರಕ್ಕೆ ಹೊಡೆದಾಡಿಕೊಂಡು ಆಸ್ಪತ್ರೆಗೆ ಸೇರಿದ ಸಂಬಂಧಿಕರು

    June 4, 2023
    Share

    ಬೆಳ್ತಂಗಡಿ :ನಡ ಗ್ರಾಮದ ದೇರ್ಲಕ್ಕಿಯ ಭೀಮಂಡೆ ಎಂಬಲ್ಲಿ ರಸ್ತೆ ವಿಚಾರದಲ್ಲಿ ಸಂಬಂಧಿಕರೇ ಹೊಡೆದಾಟ ನಡೆಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ. ಮಾರ್ಗ ದುರಸ್ತಿ ಮಾಡುವ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕತ್ತಿ ದೊಣ್ಣೆಯಿಂದ ಹೊಡೆದಾಡಿಕೊಂಡಿದ್ದು ಇತ್ತಂಡಗಳ 7 ಮಂದಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ದೆರ್ಲಕ್ಕಿ ಸಮೀಪದ ಭೀಮಂಡೆ ಎಂಬಲ್ಲಿ ಕಳೆದ 32 ವರ್ಷಗಳಿಂದ ಮಾರ್ಗದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಾಗದ ತಕರಾರು ಇದ್ದು ಇಂದು ಬೆಳಗ್ಗೆ ಓಬಯ್ಯ ಗೌಡ (60)ಹಾಗೂ ಅವರ ತಮ್ಮಂದಿರಾದ ಕೃಷ್ಣಪ್ಪ ಗೌಡ(50), ಕೇಶವ ಗೌಡ (47)ಹಾಗೂ ಕೃಷ್ಣಪ್ಪ ಅವರ ಪತ್ನಿ ಭವಾನಿ (40) ಅವರು ಮನೆಗೆ ಹೋಗುವ ರಸ್ತೆಗೆ ಪಿಕಪ್‌ನಲ್ಲಿ ಚರಲು ತಂದು ಹಾಕಿ ದುರಸ್ತಿ ಮಾಡಲು ತೆರಳಿದ ಸಂದರ್ಭ ಅವರ ಸಂಬಂಧಿಕರಾದ ಪೂವಪ್ಪ ಗೌಡ(70) ಅವರ ಪತ್ನಿ ಲಲಿತ(65) ಹಾಗೂ ಅವರ ಮಗ ವಿಜಯ ಗೌಡ(38) ಇವರುಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ಲಲಿತಾ ಕಡೆಯವರು ಕತ್ತಿ ,ದೊಣ್ಣೆ, ಹಾರೆ ,ಕಲ್ಲುಗಳಿಂದ ಹಲ್ಲೆ ಮಾಡಿದ್ದಾರೆ.

    ಈ ವೇಳೆ ಎರಡು ತಂಡದ ನಡುವೆ ಹೊಡೆದಾಟ ನಡೆಸಿದ್ದಾರೆ. ಈ ವೇಳೆ ಕೃಷ್ಣಪ್ಪ ಅವರಿಗೆ ಕೈಗೆ ,ಸೊಂಟಕ್ಕೆ , ಓಬಯ್ಯ ಅವರಿಗೆ ತಲೆಗೆ ಕೈ ಮತ್ತು , ಬೆನ್ನಿಗೆ ಗಾಯ , ಕೇಶವ ಅವರಿಗೆ ತಲೆಗೆ, ಭವಾನಿ ಅವರಿಗೆ ತಲೆ ಹಾಗೂ ಕೈಗೆ ಗಾಯಗಳಾಗಿದೆ.

    ಇನ್ನೊಂದು ತಂಡದ ಪೂವಪ್ಪ ಗೌಡ (75) ಲಲಿತ (65) ವಿಜಯ ಗೌಡ (38) ಅವರಿಗೂ ಸಣ್ಣಪುಟ್ಟ ಗಾಯಗಳಾಗಿದೆ. ಎರಡು ತಂಡದ ಏಳು ಮಂದಿ ಗಾಯಗೊಂಡವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.ಈ ಬಗ್ಗೆ ಎರಡು ಕಡೆಯವರು ಬೆಳ್ತಂಗಡಿ ಠಾಣೆಯಲ್ಲಿ ದೂರು ನೀಡಲಾಗಿದೆ.

    Post Views: 237

    Related Posts

    ಉಡುಪಿ: ಹೆತ್ತವರನ್ನೇ ಸುತ್ತಿಗೆಯಿಂದ ಹೊಡೆದು ಕೊಂದ ಪಾಪಿ ಮಗ

    August 24, 2026

    ಬಂಟ್ವಾಳ: ಎರಡು ಬೈಕ್‌ಗಳಲ್ಲಿ ಬೆನ್ನಟ್ಟಿ ಬಂದು ದರೋಡೆ: ₹8 ಲಕ್ಷ ನಗದು ಕಳವು

    August 20, 2026

    ಬಾಳೆಹಣ್ಣಿಗೆ ರಾಸಾಯನಿಕ, ಕೃತಕ ಬಣ್ಣ ಬಳಕೆ ಆರೋಪ; ಅಧಿಕಾರಿಗಳಿಂದ ದಾಳಿ

    August 20, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026

    ಮಂಗಳೂರು : ಭಜನೆ ಮಾಡುತ್ತಲೇ ಕುಸಿದು ಬಿದ್ದ ಯುವಕ, ಹೃದಯಾಘಾತದಿಂದ ಸಾವು

    September 5, 2026

    ಕಾಸರಗೋಡು: ರಕ್ತದ ಮಡುವಿನಲ್ಲಿ ಕಾರ್ಮಿಕನ ಮೃತದೇಹ ಪತ್ತೆ- ಕೊಲೆ ಶಂಕಿಸಿ ತನಿಖೆ, ಇಬ್ಬರು ಪರಾರಿ

    September 5, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.