Facebook Twitter Instagram
    Wednesday, November 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಇಸ್ರೇಲ್‌ನಲ್ಲಿ ನಾಪತ್ತೆಯಾಗಿದ್ದ ಮಂಗಳೂರಿನ ಕಾರ್ಮಿಕ ಸಾವು – 37 ದಿನಗಳ ಬಳಿಕ ತಾಯ್ನಾಡಿಗೆ ಪಾರ್ಥಿವ ಶರೀರ
    ಇತ್ತೀಚಿನ ಸುದ್ದಿ

    ಇಸ್ರೇಲ್‌ನಲ್ಲಿ ನಾಪತ್ತೆಯಾಗಿದ್ದ ಮಂಗಳೂರಿನ ಕಾರ್ಮಿಕ ಸಾವು – 37 ದಿನಗಳ ಬಳಿಕ ತಾಯ್ನಾಡಿಗೆ ಪಾರ್ಥಿವ ಶರೀರ

    November 25, 2026
    Share

    ಮಂಗಳೂರು :  ಉದ್ಯೋಗ ಅರಸಿ ಇಸ್ರೇಲ್‌ಗೆ ತೆರಳಿದ್ದ ಮಂಗಳೂರಿನ ಶಕ್ತಿನಗರದ ಕಾರ್ಮಿಕ ಕಾಲೋನಿ ನಿವಾಸಿ ಶಡ್ರಕ್ ಇಮ್ಯಾನುವಲ್ (41) ಅಲ್ಲಿ ಸಾವನ್ನಪ್ಪಿರುವುದು ದೃಢಪಟ್ಟಿದೆ. ಪಡೀಲ್ ಸಮೀಪದ ಕಣ್ಣೂರು ಕೊಡೆಕ್ಕಲ್ ಮೂಲದವರಾದ ಇವರು ಅಕ್ಟೋಬರ್ 16ರಿಂದ ನಿಗೂಢವಾಗಿ ನಾಪತ್ತೆಯಾಗಿದ್ದರು. ಕಣ್ಮರೆಯಾದ ಮೂರು ದಿನಗಳ ಬಳಿಕ ಅಂದರೆ ಅಕ್ಟೋಬರ್ 19ರಂದೇ ಅವರು ಮೃತಪಟ್ಟಿದ್ದಾರೆ ಎಂದು ಟೆಲ್ ಅವೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ದಾಖಲೆಗಳು ಸ್ಪಷ್ಟಪಡಿಸಿವೆ.

    2025ರ ಮೇ 16ರಂದು ಮಂಗಳೂರಿನ ಏಜೆನ್ಸಿಯೊಂದರ ಮೂಲಕ ಉದ್ಯೋಗ ವೀಸಾ ಪಡೆದು ಇಸ್ರೇಲ್‌ಗೆ ಹೋಗಿದ್ದ ಶಡ್ರಕ್, ನಜರೆತ್ ಹತ್ತಿರದ ನೊಫ್ ಹಗಲಿಲ್‌ನ ‘ಯುಸಿಟಿ ಲಿಕ್ವಿಡ್/ಫ್ಲೂಯಿಡ್ ಸೊಲ್ಯೂಷನ್ಸ್’ ಸಂಸ್ಥೆಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. 2026ರ ಅಕ್ಟೋಬರ್ 16ರ ರಾತ್ರಿ 8:05ರ ಸುಮಾರಿಗೆ ತಮ್ಮ ಪತ್ನಿ ಹಾಗೂ ಮನೆಯವರೊಂದಿಗೆ 22 ನಿಮಿಷಗಳ ಕಾಲ ವಾಟ್ಸ್‌ಆ್ಯಪ್ ವಿಡಿಯೋ ಕರೆಯಲ್ಲಿ ಮಾತನಾಡಿದ ಬಳಿಕ ಅವರ ಸಂಪರ್ಕ ಕಡಿತಗೊಂಡಿತ್ತು. ಕೆಲಸಕ್ಕೂ ಹಾಜರಾಗದೆ ನಾಪತ್ತೆಯಾಗಿದ್ದರಿಂದ ಕಂಗಾಲಾಗಿದ್ದ ಪತ್ನಿ ಡೇಸಿ ಇಮ್ಯಾನುವಲ್ ಮತ್ತು ಸಹೋದರಿ ಸವಿತಾ ಅವರು ಮಂಗಳೂರು ಪೊಲೀಸ್ ಆಯುಕ್ತರು, ಜನಪ್ರತಿನಿಧಿಗಳು ಹಾಗೂ ಭಾರತೀಯ ರಾಯಭಾರ ಕಚೇರಿಗೆ ದೂರು ಸಲ್ಲಿಸಿ ಹುಡುಕಾಟಕ್ಕೆ ನೆರವು ಕೋರಿದ್ದರು. ಆದರೆ, ಸಂಪರ್ಕ ತಪ್ಪಿದ ಮೂರೇ ದಿನಗಳಲ್ಲಿ ಅವರು ಇಹಲೋಕ ತ್ಯಜಿಸಿರುವ ವಿಚಾರ ತಿಳಿದು ಕುಟುಂಬಸ್ಥರು ಶೋಕಸಾಗರದಲ್ಲಿ ಮುಳುಗಿದ್ದಾರೆ.

    ನವೆಂಬರ್ 9, 2026ರಂದು ಟೆಲ್ ಅವೀವ್‌ನ ಭಾರತೀಯ ರಾಯಭಾರ ಕಚೇರಿಯ ಕೌನ್ಸಿಲರ್ ವಿಭಾಗವು ಮೃತದೇಹವನ್ನು ಭಾರತಕ್ಕೆ ರವಾನಿಸಲು ನಿರಾಕ್ಷೇಪಣಾ ಪತ್ರ (NOC) ನೀಡಿತ್ತು. ಪತ್ನಿ ಡೇಸಿ ಅವರ ಕೋರಿಕೆಯಂತೆ, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲು ಸಹೋದರಿ ಸವಿತಾ ಕೆ.ಎಸ್. ಮತ್ತು ಚಂದ್ರಮೋಹನ ಚಂದ್ರನ್ ಅವರಿಗೆ ರಾಯಭಾರ ಕಚೇರಿ ಅನುಮತಿ ನೀಡಿತ್ತು. ಅದರಂತೆ 37 ದಿನಗಳ ಬಳಿಕ ಶರೀರವನ್ನು ಮಂಗಳೂರಿಗೆ ತರಲಾಗಿದೆ.

    ಇಂದು (ಬುಧವಾರ, ನವೆಂಬರ್ 25) ಮಧ್ಯಾಹ್ನ 3:00 ಗಂಟೆಗೆ ಶಕ್ತಿನಗರದ ಕಾರ್ಮಿಕ ಕಾಲೋನಿ 1ನೇ ಕ್ರಾಸ್‌ನಲ್ಲಿರುವ ‘ಅಮೇಜಿಂಗ್ ಗ್ರೇಸ್’ ಮನೆಗೆ ಮೃತದೇಹವನ್ನು ತರಲಾಗುತ್ತದೆ. ನಂತರ ಸಂಜೆ 4:00 ಗಂಟೆಗೆ ಅಂತಿಮ ಯಾತ್ರೆ ನಡೆಸಿ, ಮಂಗಳೂರಿನ ಗೋರಿಗುಡ್ಡೆ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.

    Post Views: 4

    Related Posts

    ಬೃಹತ್‌ ಡ್ರಗ್ಸ್ ಜಾಲ ಪತ್ತೆ: 11 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ, ಇಬ್ಬರು ಅರೆಸ್ಟ್!!

    November 25, 2026

    ಪುತ್ತೂರು: ಮೆಸ್ಕಾಂ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ – ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು

    November 25, 2026

    ವಿಟ್ಲ: ಕೌಟುಂಬಿಕ ಕಲಹ- ಚಿಕ್ಕಪ್ಪನನ್ನು ಕೊಲೆಗೈದ ಅಣ್ಣನ ಮಗಳು

    November 25, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಬೃಹತ್‌ ಡ್ರಗ್ಸ್ ಜಾಲ ಪತ್ತೆ: 11 ಕೋಟಿ ರೂ. ಮೌಲ್ಯದ ಎಂಡಿಎಂಎ ವಶ, ಇಬ್ಬರು ಅರೆಸ್ಟ್!!

    November 25, 2026

    ಪುತ್ತೂರು: ಮೆಸ್ಕಾಂ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ – ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲು

    November 25, 2026

    ಇಸ್ರೇಲ್‌ನಲ್ಲಿ ನಾಪತ್ತೆಯಾಗಿದ್ದ ಮಂಗಳೂರಿನ ಕಾರ್ಮಿಕ ಸಾವು – 37 ದಿನಗಳ ಬಳಿಕ ತಾಯ್ನಾಡಿಗೆ ಪಾರ್ಥಿವ ಶರೀರ

    November 25, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.