Facebook Twitter Instagram
    Friday, October 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಶಿರೂರು ಗುಡ್ಡ ಕುಸಿತ; ಮೂರನೇ ಹಂತದ ಕಾರ್ಯಾಚರಣೆ ವೇಳೆ ಸಿಕ್ಕಿತು ಮೂಳೆ..!
    ಇತ್ತೀಚಿನ ಸುದ್ದಿ

    ಶಿರೂರು ಗುಡ್ಡ ಕುಸಿತ; ಮೂರನೇ ಹಂತದ ಕಾರ್ಯಾಚರಣೆ ವೇಳೆ ಸಿಕ್ಕಿತು ಮೂಳೆ..!

    September 23, 2024
    Share

    ಅಂಕೋಲಾ: ಶಿರೂರು ಗುಡ್ಡ ಕುಸಿತದ ಮೂರನೇ ಹಂತದ ಮೂರನೇ ದಿನದ ಶೋಧ ಕಾರ್ಯಾಚರಣೆ ವೇಳೆ ಮೂಳೆಯೊಂದು ಸಿಕ್ಕಿದೆ.

    ಗಂಗಾವಳಿ ನದಿಯ ಆಳದಿಂದ ಮೇಲೆತ್ತಲಾದ ಮಣ್ಣು ರಾಶಿಯಲ್ಲಿ ಮೂಳೆಯ ತುಂಡೊಂದು ಪತ್ತೆಯಾಗಿದ್ದು, ಇದು ಜುಲೈ 16 ರಂದು ನಡೆದ ದುರ್ಘಟನೆಯಲ್ಲಿ ಕಣ್ಮರೆಯಾಗಿ ಇದುವರೆಗೂ ಪತ್ತೆಯಾಗದ ಮೂವರಲ್ಲಿ ಯಾರದಾದರೂ ಆಗಿರಬಹುದೇ ಎಂಬ ಜಿಜ್ಞಾಸೆ ಆರಂಭವಾಗಿದೆ. ಇದು ಮನುಷ್ಯರ ಮೂಳೆಯೇ ಅಥವಾ ಯಾವುದೋ ಪ್ರಾಣಿಯ ಮೂಳೆಯೇ ಎನ್ನುವ ಪ್ರಶ್ನೆಯೂ ಕಾಡಲಾರಂಭಿಸಿದ.

    ಶಿರೂರು ದುರಂತದಲ್ಲಿ ಕಣ್ಮರೆಯಾಗಿರುವ ಶಿರೂರಿನ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ, ಮತ್ತು ಕೇರಳದ ಲಾರಿ ಚಾಲಕ ಅರ್ಜುನ್ ಅವರ ಮೃತದೇಹಗಳು ಘಟನೆ ಸಂಭವಿಸಿ ಎರಡು ತಿಂಗಳು ಕಳೆದರೂ ಪತ್ತೆಯಾಗಿಲ್ಲ. ಕಣ್ಮರೆಯಾದವರ ಎಲುಬಿನ ತುಂಡಾದರೂ ಸಿಕ್ಕರೆ ಸಂಸ್ಕಾರ ಕಾರ್ಯ ನಡೆಸುವ ನಿರೀಕ್ಷೆಯಲ್ಲಿ ಅವರ ಕುಟುಂಬದವರಿದ್ದಾರೆ.

    ಹೀಗಾಗಿ ಪ್ರತಿದಿನ ಶೋಧ ಕಾರ್ಯಾಚರಣೆ ಸ್ಥಳದಲ್ಲಿ ಕುಟುಂಬದವರು ಹಾಜರಿರುವುದು ಕಂಡುಬರುತ್ತಿದೆ. ವೈಜ್ಞಾನಿಕ ಪರೀಕ್ಷೆ ಬಳಿಕವೇ ಈ ಮೂಳೆಯ ಕುರಿತು ನಿಖರವಾದ ಮಾಹಿತಿ ಸಿಗಲಿದೆ.

    Post Views: 267

    Related Posts

    ಅ.23 ರಂದು ಬನ ತುಳು ಸಿನೆಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ

    October 22, 2026

    ನೆಲ್ಯಾಡಿ ಬಳಿ ಭೀಕರ ಅಪಘಾತ: ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ, ವಿದ್ಯಾರ್ಥಿ ಸಾವು

    October 22, 2026

    ಮಣಿಪಾಲ: ಮಾನವ ಅಸ್ಥಿಪಂಜರದ ಕೆಲವು ಭಾಗಗಳು ಪತ್ತೆ!!

    October 22, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಅ.23 ರಂದು ಬನ ತುಳು ಸಿನೆಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ

    October 22, 2026

    ನೆಲ್ಯಾಡಿ ಬಳಿ ಭೀಕರ ಅಪಘಾತ: ಗ್ಯಾಸ್ ಟ್ಯಾಂಕರ್‌ಗೆ ಕಾರು ಡಿಕ್ಕಿ, ವಿದ್ಯಾರ್ಥಿ ಸಾವು

    October 22, 2026

    ಮಣಿಪಾಲ: ಮಾನವ ಅಸ್ಥಿಪಂಜರದ ಕೆಲವು ಭಾಗಗಳು ಪತ್ತೆ!!

    October 22, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.