Facebook Twitter Instagram
    Sunday, September 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಕ್ರೈಂ ಸ್ಟೋರಿ»ತಾಯಿಯ ಹತ್ಯೆ ಮಾಡಿ ಸುಟ್ಟುಹಾಕಿ ಪರಾರಿಯಾಗಿದ್ದ ಪಾಪಿ ಮಗ ಬೈಂದೂರಿನಲ್ಲಿ ಸೆರೆ!
    ಕ್ರೈಂ ಸ್ಟೋರಿ

    ತಾಯಿಯ ಹತ್ಯೆ ಮಾಡಿ ಸುಟ್ಟುಹಾಕಿ ಪರಾರಿಯಾಗಿದ್ದ ಪಾಪಿ ಮಗ ಬೈಂದೂರಿನಲ್ಲಿ ಸೆರೆ!

    June 28, 2025
    Share

    ಕಾಸರಗೋಡು ಜೂನ್ 28: ಹೆತ್ತ ತಾಯಿಯನ್ನೇ ಕೊಲೆ ಮಾಡಿ ಪೆಟ್ರೋಲ್ ಹಾಕಿ ಸುಟ್ಟು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸ್ ವಶದಲ್ಲಿರುವ ಮಗ ಕೊಲೆಗೆ ಕಾರಣ ತಿಳಿಸಿದ್ದಾನೆ. ಸಾಲ ಪಡೆಯಲು ಮನೆಯ ಪತ್ರ ನೀಡದ ಕಾರಣ ತಾಯಿಯನ್ನು ಕೊಲೆ ಮಾಡಿದ್ದೇನೆ ಎಂದು ಮಂಜೇಶ್ವರ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

    ಕೇರಳದ ಕಾಸರಗೋಡು ಜಿಲ್ಲೆಯ ವರ್ಕಾಡಿಯಲ್ಲಿ ಈತ ತನ್ನ ತಾಯಿ 60 ವರ್ಷದ ಹಿಲ್ಡಾ ಜೊತೆ ಈ ಮನೆಯಲ್ಲಿ ವಾಸವಿದ್ದ ಆರೋಪಿ ಮೆಲ್ವಿನ್ ಜೂನ್ 25 ಮದ್ಯರಾತ್ರಿ ಒಂದು ಗಂಟೆಗೆ ತಾಯಿ ಹಿಲ್ಡಾಳ ತಲೆಗೆ ಮಗ ಮೆಲ್ವಿನ್ ಮಾರಕಾಸ್ತ್ರದಿಂದ ಹೊಡೆದಿದ್ದಾನೆ. ಬಳಿಕ ಅಲ್ಲಿಂದ ಎಳೆದುಕೊಂಡು ಮನೆಯ ಹಿಂಭಾಗಕ್ಕೆ ಹೋಗಿ ಕಾಡಿನಂತಹ ಜಾಗದಲ್ಲಿ ಎಸೆದಿದ್ದಾನೆ. ಬಳಿಕ ಪೆಟ್ರೋಲ್ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿದ್ದ. ಬಳಿಕ ಮನೆಯ ಹತ್ತಿರದಲ್ಲಿದ್ದ ಆತನ ಸಂಬಂಧಿ ಲೊಲಿಟಾ ಮನೆಯ ಬಾಗಿಲು ಬಡಿದಿದ್ದಾನೆ. ಲೊಲಿಟಾಳಿಗೆ ತನ್ನ ತಾಯಿಗೆ ಹುಷಾರಿಲ್ಲ.

    ಸೀರಿಯಸ್ ಆಗಿದ್ದಾಳೆ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಲೊಲಿಟಾ ಮಗುವನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಓಡೋಡಿ ಬಂದಿದ್ದಾಳೆ. ಮನೆಗೆ ಬಂದ ಲೊಲಿಟಾಳಿಗೆ ಹೊಡೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಆಗ ಅಲ್ಲಿಂದಲೊಲಿಟಾ ತಪ್ಪಿಸಿಕೊಂಡು ಕಾಡಿಗೆ ಓಡಿದ್ದಾಳೆ. ಮುಂಜಾನೆ 5 ಗಂಟೆಗೆ ಒಂದು ಮನೆ ಬಳಿ ಹೋದಾಗ ಅಲ್ಲಿಯವರು ನೋಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಸಿದ್ದಾರೆ. ಸದ್ಯ ಲೊಲಿಟಾ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

    ಕೊಲೆ ಮಾಡಿದ ಬಳಿಕ ಆರೋಪಿ ಮೆಲ್ವಿನ್ 2 ಕಿಲೋಮೀಟರ್ ಓಡಿ ಹೋಗಿ ಆಟೋ ಹಿಡಿದು ಹೊಸಂಗಡಿಗೆ ತಲುಪಿದ್ದಾನೆ. ಬಳಿಕ ಮಂಗಳೂರು ಬಸ್ ಹತ್ತಿ ಮಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್ ನಲ್ಲಿ ಇಳಿದಿದ್ದಾನೆ. ಅಲ್ಲಿಂದ ಕುಂದಾಪುರ ಬಸ್ ಹತ್ತಿ ಬೈಂದೂರು ತಲುಪಿದ್ದಾನೆ. ಮೆಲ್ವಿನ್ ಅರ್ಥ್ ಮೂವರ್ಸ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಬೈಂದೂರು ಸುತ್ತಾಮುತ್ತಾ ಕಲ್ಲಿನಕೋರೆಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ. ಆದ್ರಿಂದ ಆ ಜಾಗಕ್ಕೆ ಹೋಗಲು ಆತನ ಇಲ್ಲಿಗೆ ಬಂದಿದ್ದ. ಇನ್ನು ಒಂದು ಅಂಗಡಿಯಲ್ಲಿ ಕುಳಿತುಕೊಂಡಿದ್ದಾಗ ಬೈಂದೂರು ಪೊಲೀಸರ ಸಹಕಾರದಿಂದ ಕೇರಳ ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಮೆಲ್ವಿನ್ ವಿಚಾರಣೆ ನಡೆಸಿದ ವೇಳೆ ತಾನು ನಿರುದ್ಯೋಗದಿಂದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದೆ. ₹1 ಲಕ್ಷ ಸಾಲ ಪಡೆಯಲು ದಾಖಲೆ ಪತ್ರ ಕೇಳಿದಾಗ ತಾಯಿ ಒಪ್ಪಿರಲಿಲ್ಲ. ಜೊತೆಗೆ ಸಂಬಂಧಿಕರೇ ಆಗಿರುವ ನೆರೆಮನೆಯ ಲೋಲಿತಾ ಅವರೂ ಈ ವಿಚಾರದಲ್ಲಿ ತನ್ನ ತಾಯಿಗೆ ಬೆಂಬಲ ನೀಡಿದ ಕಾರಣ ಅವರನ್ನೂ ಕೊಲೆ ಮಾಡಲು ಯತ್ನಿಸಿದ್ದೆ ಎಂದು ಹೇಳಿಕೆ ನೀಡಿದ್ದಾನೆ.

    Post Views: 726

    Related Posts

    ಉಡುಪಿ: ಹೆತ್ತವರನ್ನೇ ಸುತ್ತಿಗೆಯಿಂದ ಹೊಡೆದು ಕೊಂದ ಪಾಪಿ ಮಗ

    August 24, 2026

    ಬಂಟ್ವಾಳ: ಎರಡು ಬೈಕ್‌ಗಳಲ್ಲಿ ಬೆನ್ನಟ್ಟಿ ಬಂದು ದರೋಡೆ: ₹8 ಲಕ್ಷ ನಗದು ಕಳವು

    August 20, 2026

    ಬಾಳೆಹಣ್ಣಿಗೆ ರಾಸಾಯನಿಕ, ಕೃತಕ ಬಣ್ಣ ಬಳಕೆ ಆರೋಪ; ಅಧಿಕಾರಿಗಳಿಂದ ದಾಳಿ

    August 20, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು: ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದು ವಿದ್ಯಾರ್ಥಿ ಮೃತ್ಯು

    September 6, 2026

    ಪುತ್ತೂರು: ಪೊಲೀಸ್ ಸಿಬ್ಬಂದಿಗೆ ಹಲ್ಲೆ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ: ಮೂವರ ವಿರುದ್ಧ ಪ್ರಕರಣ

    September 6, 2026

    ಕಂಬಳ ಅಭಿವೃದ್ಧಿಗೆ ₹5 ಕೋಟಿ ವಿಶೇಷ ಅನುದಾನ: ಸಿಎಂ ಡಿ.ಕೆ. ಶಿವಕುಮಾರ್ ಭರವಸೆ

    September 5, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.