Facebook Twitter Instagram
    Saturday, July 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಚೂರಿ ಇರಿತ ಪ್ರಕರಣ: ಯುವತಿ ಚಿಕಿತ್ಸೆ ಫಲಿಸದೆ ಸಾವು- ಯುವಕ ಆತ್ಮಹತ್ಯೆ
    ಇತ್ತೀಚಿನ ಸುದ್ದಿ

    ಚೂರಿ ಇರಿತ ಪ್ರಕರಣ: ಯುವತಿ ಚಿಕಿತ್ಸೆ ಫಲಿಸದೆ ಸಾವು- ಯುವಕ ಆತ್ಮಹತ್ಯೆ

    September 13, 2025
    Share

    ಬ್ರಹ್ಮಾವರ: ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಕ್ಕರ್ಣೆಯ ಪುತ್ತನಕಟ್ಟೆ ಬಳಿ ನಿನ್ನೆ ಬೆಳಗ್ಗೆ ನಡೆದ ಯುವತಿಗೆ ಯುವಕ ಚೂರಿ ಇರಿತ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿ ರಕ್ಷಿತಾ ಪೂಜಾರಿ (24) ಚಿಕಿತ್ಸೆ ಫಲಕಾರಿಯಾಗದೆ ಸಂಜೆ ವೇಳೆಗೆ ಮೃತಪಟ್ಟರೆ ಚಾಕುವಿನಿಂದ ಇರಿದ ಆರೋಪಿ ಕಾರ್ತಿಕ್ ಪೂಜಾರಿ (26) ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಕಾರ್ತಿಕ್ ಮತ್ತು ರಕ್ಷಿತಾ ಅಕ್ಕ ಪಕ್ಕದ ಮನೆಯವರು ಬಾಲ್ಯದಿಂದಲೂ ಒಟ್ಟಿಗೆ ಬೆಳೆದವರು. ಒಂದೇ ಜಾತಿ ಪರಸ್ಪರ ಸಂಬಂಧಿಕರೂ ಆಗಿದ್ದರು. ಕಳೆದ ಐದು ವರ್ಷಗಳಿಂದ ಇವರ ನಡುವೆ ಪ್ರೀತಿ ಇತ್ತು. ಆತ ಆಕೆಯನ್ನು ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿದ್ದನು. ಆದರೆ ಕಾರ್ತಿಕ್‌ಗೆ ಸರಿಯಾದ ಉದ್ಯೋಗ ಇಲ್ಲದ ಕಾರಣ ರಕ್ಷಿತಾ ಮನೆಯಲ್ಲಿ ಈ ಮದುವೆಗೆ ಒಪ್ಪಿಗೆ ಇರಲಿಲ್ಲ.

    ಹದಿನೈದು ದಿನಗಳ ಹಿಂದೆ ಮಾತುಕತೆ ನಡೆದು ಆತನಿಂದ ಪ್ರಮಾಣ ಮಾಡಿಸಲಾಗಿತ್ತು. ಯಾವುದೇ ಕಾರಣಕ್ಕೂ ಆಕೆಯ ಬದುಕಿನಲ್ಲಿ ನಾನು ಬರಲ್ಲ, ಆಹ್ವಾನ ಕೊಟ್ಟರೆ ಮದುವೆಗೆ ಬಂದು ಊಟ ಮಾಡಿ ಹೋಗುತ್ತೇನೆ ಎಂದು ಕಾರ್ತಿಕ್ ಭರವಸೆ ನೀಡಿದ್ದ. ಮನೆಯವರ ಆಗ್ರಹದಂತೆ ರಕ್ಷಿತಾ ಆತನನ್ನು ಬ್ಲಾಕ್ ಮಾಡಿದ್ದಳು. ಆಕೆ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಆತ ಫಾಲೋ ಮಾಡಿದ್ದಾನೆ. ಬಸ್‌ತಂಗುದಾಣ ಸಮೀಪಿಸುತ್ತಿದ್ದಂತೆ ಆತ ಆಕೆಯ ಬಳಿ ತೆರಳಿ ತನ್ನನ್ನು ಮದುವೆಯಾಗುವಂತೆ ಆತ ಪೀಡಿಸಿದ್ದಾನೆ. ಆಕೆ ನಿರಾಕರಿಸಿದ್ದಾಳೆ. ಮಾತಿಗೆ ಮಾತು ಬೆಳೆದು ಜಗಳವಾಗಿ ಕಾರ್ತಿಕ್ ಸ್ಥಳದಲ್ಲೇ ರಕ್ಷಿತಾಳನ್ನು ಚಾಕುವಿನಿಂದ ಇರಿದಿದ್ದಾನೆ

    ಗಂಭೀರ ಗಾಯಗೊಂಡ ರಕ್ಷಿತಾ ಸ್ಥಳದಲ್ಲೇ ಕುಸಿದು ಬಿದ್ದಿದ್ದಾಳೆ. ಕೂಡಲೇ ಆಕೆಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದರೂ ಸಂಜೆ ವೇಳೆಗೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ. ಚೂರಿ ಇರಿತದ ಬಳಿಕ ಅಲ್ಲಿಂದ ತಪ್ಪಿಸಿಕೊಂಡಿದ್ದ ಕಾರ್ತಿಕ್ ಸ್ನೇಹಿತನ ಬೈಕ್ ಹತ್ತಿ ಪರಾರಿಯಾಗಿದ್ದನು. ಆದರೆ ಸಂಜೆ ವೇಳೆಗೆ ಕಾರ್ತಿಕ್‌ನ ಮೃತ ದೇಹ ಮನೆ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಆತ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

    ಮದುವೆಗೆ ಒಪ್ಪದ ಕಾರಣಕ್ಕಾಗಿ ಯುವತಿಗೆ ಚೂರಿ ಇರಿದು ಹತ್ಯೆಗೈದ ಯುವಕ ಬಳಿಕ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    Post Views: 150

    Related Posts

    ಕಾಸರಗೋಡಿನಲ್ಲಿ ಆರ್‌ವಿಆರ್ ನ್ಯೂರೋ-ಆಂಕಾಲಜಿ ಕೇಂದ್ರ ಆರಂಭ.ದೇಶಾದ್ಯಂತ ‘ಆರೋಗ್ಯ ಬೈ ಆರ್‌ವಿಆರ್’ ವಿಸ್ತರಣೆ.ಕೈಗೆಟುಕುವ ದರದಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಆರ್‌ವಿಆರ್ ಹೆಲ್ತ್‌ಕೇರ್

    July 24, 2026

    ನೀಟ್ ಪ್ರತಿಭಟನೆ ಕುರಿತು ವಿವಾದಾತ್ಮಕ ಪೋಸ್ಟ್; ವಿಟ್ಲದಲ್ಲಿ ವ್ಯಕ್ತಿಯ ಅರೆಸ್ಟ್

    July 24, 2026

    ಪುತ್ತೂರು: ರಸ್ತೆಯಂಚಿಗೆ ಇಳಿದು ಟಾಟಾ ಏಸ್ ಪಲ್ಟಿ-ಅಪಾಯದಿಂದ ಪಾರಾದ ಬಾಲಕ

    July 24, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಕಾಸರಗೋಡಿನಲ್ಲಿ ಆರ್‌ವಿಆರ್ ನ್ಯೂರೋ-ಆಂಕಾಲಜಿ ಕೇಂದ್ರ ಆರಂಭ.ದೇಶಾದ್ಯಂತ ‘ಆರೋಗ್ಯ ಬೈ ಆರ್‌ವಿಆರ್’ ವಿಸ್ತರಣೆ.ಕೈಗೆಟುಕುವ ದರದಲ್ಲಿ ವಿಶ್ವದರ್ಜೆಯ ಆರೋಗ್ಯ ಸೇವೆಗೆ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಆರ್‌ವಿಆರ್ ಹೆಲ್ತ್‌ಕೇರ್

    July 24, 2026

    ನೀಟ್ ಪ್ರತಿಭಟನೆ ಕುರಿತು ವಿವಾದಾತ್ಮಕ ಪೋಸ್ಟ್; ವಿಟ್ಲದಲ್ಲಿ ವ್ಯಕ್ತಿಯ ಅರೆಸ್ಟ್

    July 24, 2026

    ಪುತ್ತೂರು: ರಸ್ತೆಯಂಚಿಗೆ ಇಳಿದು ಟಾಟಾ ಏಸ್ ಪಲ್ಟಿ-ಅಪಾಯದಿಂದ ಪಾರಾದ ಬಾಲಕ

    July 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.