Facebook Twitter Instagram
    Monday, June 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಒಂಟಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಮೂವರು ಸಹೋದರಿಯರು
    ಇತ್ತೀಚಿನ ಸುದ್ದಿ

    ಒಂಟಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಮೂವರು ಸಹೋದರಿಯರು

    January 20, 2023
    Share

    ಒಂಟಿ ಮನೆಯಲ್ಲಿ ಒಂದೇ ಕುಟುಂಬದ ಮೂವರು ಸಹೋದರಿಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಒಂಬತ್ತು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

    ರಂಜಿತಾ (24), ಬಿಂದು (21), ಚಂದನ (18) ಆತ್ಮಹತ್ಯೆಗೆ ಶರಣಾದ ಸಹೋದರಿಯರಾಗಿದ್ದಾರೆ. ಈ ವಿಷಯ ಗುರುವಾರ (ಜ.19) ಬೆಳಕಿಗೆ ಬಂದಿದೆ. ಅನೇಕ ವರ್ಷಗಳ ಹಿಂದೆ ಪೋಷಕರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಅಂದಿನಿಂದ ಅಜ್ಜಿ ಜತೆಯಲ್ಲಿ ಇವರು ವಾಸವಿದ್ದರು.

    ಇತ್ತೀಚೆಗೆ ಅಜ್ಜಿ ಕೂಡ ಮೃತಪಟ್ಟಿದ್ದರು. ಅಜ್ಜಿ ಮರಣದ ಬಳಿಕ ಮಾನಸಿಕ ಖಿನ್ನತೆಗೆ ಇವರು ಒಳಗಾಗಿದ್ದರು ಎನ್ನಲಾಗಿದೆ. ಕಿಬ್ಬನಹಳ್ಳಿ ಬಳಿಯ ಗಾರ್ಮೆಂಟ್ಸ್‌ನಲ್ಲಿ ಇಬ್ಬರು ಸಹೋದರಿಯರು ಕೆಲಸ ಮಾಡುತ್ತಿದ್ದರು. 9 ದಿನಗಳ ಹಿಂದೆ ಒಂಟಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಶವ ಕೊಳೆತು ವಾಸನೆ ಬಂದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Post Views: 190

    Related Posts

    ಚಪ್ಪರದಡಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರ ಮುತ್ತಿಗೆ; ಕಿಂಗ್‌ಪಿನ್‌ಗಳಿಗಾಗಿ ಹುಡುಕಾಟ

    June 8, 2026

    ಹುಲಿಕಲ್ ಘಾಟ್‌ನಲ್ಲಿ ಖಾಸಗಿ ಬಸ್‌ಗೆ ಬೆಂಕಿ; 17 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

    June 7, 2026

    ಆನ್‌ಲೈನ್ ಗೇಮ್ ವ್ಯಸನದ ಭೀಕರ ಅಂತ್ಯ: ತಂದೆ-ಅಕ್ಕನನ್ನೇ ಚಾಕುವಿನಿಂದ ಕೊಂದ ಪುತ್ರ

    June 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.