Facebook Twitter Instagram
    Friday, April 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ರಾಷ್ಟ್ರೀಯ ಸುದ್ದಿ»ಕೇಂದ್ರದಲ್ಲಿ ಸರ್ಕಾರ ರಚಿಸಲು ಮೋದಿಗೆ ಮಿತ್ರ ಪಕ್ಷಗಳಿಂದ ಬೆಂಬಲ ಪತ್ರ: ಇಂದು ಸಂಜೆ 7.30ಕ್ಕೆ ರಾಷ್ಟ್ರಪತಿ ಭೇಟಿ
    ರಾಷ್ಟ್ರೀಯ ಸುದ್ದಿ

    ಕೇಂದ್ರದಲ್ಲಿ ಸರ್ಕಾರ ರಚಿಸಲು ಮೋದಿಗೆ ಮಿತ್ರ ಪಕ್ಷಗಳಿಂದ ಬೆಂಬಲ ಪತ್ರ: ಇಂದು ಸಂಜೆ 7.30ಕ್ಕೆ ರಾಷ್ಟ್ರಪತಿ ಭೇಟಿ

    June 5, 2024
    Share

    ನವದೆಹಲಿ: ಇಂದು ಎನ್ ಡಿಎ ಸಂಸದ ಸಭೆ ನರೇಂದ್ರ ಮೋದಿಯವರ ನಿವಾಸದಲ್ಲಿ ನಡೆಯಿತು. ಈ ಸಭೆಯಲ್ಲಿ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಶಿಂಧೆ ಬಣದಿಂದಲೂ ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ರಚಿಸೋದಕ್ಕೆ ಬೆಂಬಲ ನೀಡಿ, ಅಧಿಕೃತ ಪತ್ರ ನೀಡಿದ್ದಾವೆ. ಹೀಗಾಗಿ ಇಂದು ಸಂಜೆ 7.30ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿಯಾಗಲಿರುವಂತ ಮೋದಿ, ಸರ್ಕಾರ ರಚಿಸೋದಕ್ಕೆ ಹಕ್ಕು ಮಂಡನೆ ಮಾಡಲಿದ್ದಾರೆ.

    ನವದೆಹಲಿಯ ಮೋದಿ ನಿವಾಸದಲ್ಲಿ ಇಂದು ಎನ್ ಡಿಎ ಮೈತ್ರಿಕೂಟಗಳ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಚಂದ್ರಬಾಬು ನಾಯ್ಡು, ನಿತೀಶ್ ಕುಮಾರ್, ಶಿಂಧೆ ಸೇರಿದಂತೆ ವಿವಿಧ ನಾಯಕರು ಭಾಗಿಯಾಗಿದ್ದರು. ಅಮಿತ್ ಶಾ ಸೇರಿದಂತೆ ವಿವಿಧ ಬಿಜೆಪಿ ಸಂಸದರು ಭಾಗಿಯಾಗಿದ್ದರು. ಈ ಸಭೆಯಲ್ಲಿ ಎನ್ ಡಿಎ ಪಕ್ಷದಿಂದ ಕೇಂದ್ರದಲ್ಲಿ ಸರ್ಕಾರ ರಚಿಸೋದಕ್ಕೆ ಬೆಂಬಲಿಸಿ ಪತ್ರವನ್ನು ಮಿತ್ರ ಪಕ್ಷಗಳಿಂದ ನೀಡಲಾಗಿದೆ.

    ಮಿತ್ರ ಪಕ್ಷಗಳು ಬಿಜೆಪಿಗೆ ಬೆಂಬಲಿಸಿದಂತ ಪತ್ರ ಮೋದಿಯವರ ಕೈ ಸೇರಿದೆ. ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಅಲ್ಲದೇ ಶಿಂಧೆ ಬಣದಿಂದಲೂ ಎನ್ ಡಿಎಗೆ ಬೆಂಬಲವನ್ನು ಸರ್ಕಾರ ರಚಿಸೋದಕ್ಕೆ ಘೋಷಣೆ ಮಾಡಿ ಅಧಿಕೃತವಾಗಿ ಪತ್ರವನ್ನು ನೀಡಲಾಗಿದೆ.

    ಈ ಹಿನ್ನಲೆಯಲ್ಲಿ ಎನ್ ಡಿಎ ಮಿತ್ರ ಪಕ್ಷಗಳೊಂದಿಗೆ ಸ್ಪಷ್ಟ ಬಹುಮತ ಸಾಧಿಸಿದ್ದು, ಇಂದು ಸಂಜೆ 7.30ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮೋದಿ ಭೇಟಿಯಾಗಲಿದ್ದಾರೆ. ಮಿತ್ರ ಪಕ್ಷಗಳ ಬೆಂಬಲ ಪತ್ರವನ್ನು, ಸರ್ಕಾರ ರಚಿಸೋದಕ್ಕೆ ಹಕ್ಕು ಮಂಡಿಸಲು ಅವಕಾಶ ಕೋರಿ ಮನವಿಯನ್ನು ಸಲ್ಲಿಸಲಿದ್ದಾರೆ. ಈ ಮೂಲಕ ಜೂನ್.8ರಂದು 3ನೇ ಬಾರಿಗೆ ಮೋದಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸೋದು ಫಿಕ್ಸ್ ಆದಂತೆ ಆಗಿದೆ.

    Post Views: 233

    Related Posts

    ಚುನಾವಣಾ ಹಂತದಲ್ಲಿ ಉದ್ವಿಗ್ನತೆ: ಮತದಾನ ವೇಳೆ ಕಚ್ಚಾ ಬಾಂಬ್ ದಾಳಿ, ಹಲವರಿಗೆ ಗಾಯ

    April 23, 2026

    ನಿವೃತ್ತ ಪೋಸ್ಟ್ ಮಾಸ್ಟರ್‌ಗೆ 6 ಕೋಟಿ ರೂ. ಬಂಪರ್ ಲಾಟರಿ

    April 23, 2026

    ಗಾಯಕಿ ಮಂಗ್ಲಿ ಹೆಸರಿನಲ್ಲಿ ನಡೆಯಿತಾ ಮಹಾಮೋಸ? 10 ಕೋಟಿ ವಂಚನೆ ; ಹಣ ವಪಾಸ್ ಕೇಳಲು ಹೋದವರಿಗೆ ಕೊಲೆ ಬೆದರಿಕೆ

    April 11, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.