Facebook Twitter Instagram
    Friday, July 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಸುರತ್ಕಲ್‌ ಟೋಲ್‌ ವಿರೋಧಿ ಹೋರಾಟ: ಹೋರಾಟಗಾರರ ಮನೆಗೆ ನುಗ್ಗಿ ಮಧ್ಯರಾತ್ರಿ ಪೊಲೀಸ್‌ ಕಾರ್ಯಾಚರಣೆ
    ಇತ್ತೀಚಿನ ಸುದ್ದಿ

    ಸುರತ್ಕಲ್‌ ಟೋಲ್‌ ವಿರೋಧಿ ಹೋರಾಟ: ಹೋರಾಟಗಾರರ ಮನೆಗೆ ನುಗ್ಗಿ ಮಧ್ಯರಾತ್ರಿ ಪೊಲೀಸ್‌ ಕಾರ್ಯಾಚರಣೆ

    October 16, 2022
    Share

    ಮಂಗಳೂರು: ಸುರತ್ಕಲ್‌ ಟೋಲ್‌ ವಿರೋಧಿ ಹೋರಾಟವು ನಿರ್ಣಾಯಕ ಹಂತ ತಲುಪುತ್ತಿದ್ದಂತೆ ಇಂದು ತಡರಾತ್ರಿಯಲ್ಲಿ ಪೊಲೀಸರು ಹೋರಾಟಗಾರರ ಮೇಲೆ ಮುಗಿಬಿದ್ದಿದ್ದಾರೆ. ಮಧ್ಯರಾತ್ರಿ 12 ಗಂಟೆಯ ವೇಳೆಗೆ ನೂರಕ್ಕೂ ಹೆಚ್ಚು ಮಂದಿ ಹೋರಾಟಗಾರರ ವಿಳಾಸ ಹಿಡಿದು ಮನೆಮನೆಗೆ ನುಗ್ಗಿ ನೊಟೀಸ್‌ ನೀಡತೊಡಗಿದ್ದಾರೆ. ಹೋರಾಟಗಾರರು ಎರಡು ಲಕ್ಷದ ಬಾಂಡ್‌ ನೊಂದಿಗೆ, ಸರ್ಕಾರಿ ಜಾಮೀನಿನೊಂದಿಗೆ ನಾಳೆ ಬೆಳಿಗ್ಗೆ ಪೊಲೀಸ್‌ ಕಮಿಷನರ್‌ ಕಚೇರಿಗೆ ಹಾಜರಾಗುವಂತೆ ತಾಕೀತು ಮಾಡಿದ್ದಾರೆ.

    ಈ ಹೋರಾಟಕ್ಕೆ ಬಿಜೆಪಿಯೇತರ ಎಲ್ಲ ರಾಜಕೀಯ ಪಕ್ಷಗಳೂ ಬೆಂಬಲ ನೀಡಿದ್ದವು. ದಿನ ಕಳೆದಂತೆ ಈ ಟೋಲ್‌ ವಿರೋಧಿ ಹೋರಾಟವು ಆಳುವ ಬಿಜೆಪಿ ಸರ್ಕಾರವ ಮೇಲೆ ಒತ್ತಡ ತರುತ್ತಿದ್ದಂತೆ ಹೋರಾಟವನ್ನೇ ಬಗ್ಗುಬಡಿಯುವ ಸರ್ವಾಧಿಕಾರಿ ಧೋರಣೆಯನ್ನು ಮಂಗಳೂರು ಪೊಲೀಸರು ತೋರುತ್ತಿದ್ದಾರೆ. ರಾತ್ರೋರಾತ್ರಿ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು ಮಹಿಳಾ ಹೋರಾಟಗಾರರ ಮನೆಗೂ ಮಧ್ಯರಾತ್ರಿ ತೆರಳಿ ನೋಟೀಸ್‌ ನೀಡಿದ್ದಾರೆ. ಹೋರಾಟಗಾರ್ತಿ ಪ್ರತಿಭಾ ಕುಳಾಯಿ ಮನೆಗೂ ಮಧ್ಯರಾತ್ರಿ ಹನ್ನೆರಡು ಗಂಟೆಯಲ್ಲಿ ಹೋಗಿರುವುದು ತಿಳಿದು ಬಂದಿದೆ. ತುರ್ತು ಪರಿಸ್ಥಿತಿಯನ್ನು ನೆನಪಿಸುವ ಪೊಲೀಸರ ಈ ದಮನಕಾಂಡದ ಕುರಿತು ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿರುವ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್‌ ಕಾಟಿಪಳ್ಳ ʼಪೊಲೀಸರ ಬೆದರಿಕೆಗೆ ನಾವು ಅಂಜುವುದಿಲ್ಲ. ತುಳುನಾಡ ಜನರು ಎಚ್ಚತ್ತಿದ್ದಾರೆ. ಟೋಲ್‌ ವಿರೋಧಿ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲʼ ಎಂದು ಸಾಮಾಜಿಕ ಮಾಧ್ಯಮದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಮಧ್ಯರಾತ್ರಿ ಪೊಲೀಸರನ್ನು ಹೋರಾಟಗಾರರ ಮನೆಗಳಿಗೆ ಕಳುಹಿಸುತ್ತೀರಾ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತರೆ ? ಮಹಿಳಾ ಹೋರಾಟಗಾರರ ಮನೆಗೂ ಕಾಳರಾತ್ರಿ “ಗಂಡಸು” ಪೊಲೀಸರ ದಂಡು !! ಅದಕ್ಕೆಲ್ಲ ಜನ ಹೆದರುವ ಕಾಲ ಮುಗಿದಿದೆ. ತುಳುನಾಡಿನ ಮುಂದೆ ಬೆತ್ತಲಾಗುತ್ತಿದ್ದೀರಿ ಬಿಜೆಪಿಗರೆ ಎಚ್ಚರ” ಎಂದು ಅವರು ತಮ್ಮ ಫೇಸ್ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

    Post Views: 189

    Related Posts

    ಪುತ್ತೂರು: ರಸ್ತೆಯಂಚಿಗೆ ಇಳಿದು ಟಾಟಾ ಏಸ್ ಪಲ್ಟಿ-ಅಪಾಯದಿಂದ ಪಾರಾದ ಬಾಲಕ

    July 24, 2026

    ಬೆಳ್ತಂಗಡಿ: ಮಹಿಳೆಗೆ ಬೆದರಿಕೆ, ನಗದು ಕಳವು ಆರೋಪ- ಇಬ್ಬರ ವಿರುದ್ಧ FIR

    July 24, 2026

    AI ಬಳಸಿ 121 ನಕಲಿ ಬ್ಯಾಂಕಿಂಗ್ ಆ್ಯಪ್ ತಯಾರಿ : 17 ವರ್ಷದ ಬಾಲಕನಿಂದ ₹64.38 ಕೋಟಿ ವಂಚನೆ!!

    July 23, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪುತ್ತೂರು: ರಸ್ತೆಯಂಚಿಗೆ ಇಳಿದು ಟಾಟಾ ಏಸ್ ಪಲ್ಟಿ-ಅಪಾಯದಿಂದ ಪಾರಾದ ಬಾಲಕ

    July 24, 2026

    ಬೆಳ್ತಂಗಡಿ: ಮಹಿಳೆಗೆ ಬೆದರಿಕೆ, ನಗದು ಕಳವು ಆರೋಪ- ಇಬ್ಬರ ವಿರುದ್ಧ FIR

    July 24, 2026

    AI ಬಳಸಿ 121 ನಕಲಿ ಬ್ಯಾಂಕಿಂಗ್ ಆ್ಯಪ್ ತಯಾರಿ : 17 ವರ್ಷದ ಬಾಲಕನಿಂದ ₹64.38 ಕೋಟಿ ವಂಚನೆ!!

    July 23, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.