Facebook Twitter Instagram
    Friday, April 24
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ವಿಟ್ಲ: ಅಪಾಯಕಾರಿಯಲ್ಲಿರುವ ಕೊಳವೆ ಬಾವಿ ವಿದ್ಯುತ್ ಸಂಪರ್ಕದ ತ್ರಿ ಫೇಸ್ ವಿದ್ಯುತ್ ಬೋರ್ಡ್
    ಇತ್ತೀಚಿನ ಸುದ್ದಿ

    ವಿಟ್ಲ: ಅಪಾಯಕಾರಿಯಲ್ಲಿರುವ ಕೊಳವೆ ಬಾವಿ ವಿದ್ಯುತ್ ಸಂಪರ್ಕದ ತ್ರಿ ಫೇಸ್ ವಿದ್ಯುತ್ ಬೋರ್ಡ್

    July 13, 2023
    Share

    ವಿಟ್ಲ: ಕಳೆದ ಎರಡು ವರ್ಷಗಳಿಂದ ವೀರಕಂಬ ಗ್ರಾಮ ಪಂ.ವ್ಯಾಪ್ತಿಯ ಬೆತ್ತಸರವು ರಸ್ತೆ ಬದಿಯ ಮರವೊಂದರಲ್ಲಿ ಪಂಚಾಯತ್‌ ಕುಡಿಯುವ ನೀರಿನ ಕೊಳವೆ ಬಾವಿಯ ಸಂಪರ್ಕದ ತ್ರಿ ಫೇಸ್ ವಿದ್ಯುತ್ ಬೋರ್ಡ್ ನೇತಾಡುತ್ತಿದೆ.

    ಈ ಬಗ್ಗೆ ಪಿಡಿಒ ಗೆ ಮಾಹಿತಿ ನೀಡಿದರೂ ಇದರ ಬಗ್ಗೆ ಗಮನ ಹರಿಸದೇ ಇರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿನಿತ್ಯ ನೂರಾರು ಜನ ಓಡಾಡುತ್ತಿರುವ ರಸ್ತೆ ಬದಿಯ ಮರದಲ್ಲಿ ತ್ರಿ ಫೇಸ್ ವಿದ್ಯುತ್ ಬೋರ್ಡ್ ನೇತುಹಾಕಿದ ಸ್ಥಿತಿಯ ಬಗ್ಗೆ ಪಿಡಿಓಗೆ ಮಾಹಿತಿ ನೀಡಿ ಹದಿನೈದು ದಿನ ಕಳೆದಿದೆ.

    ಮಳೆಗಾಲದಲ್ಲಿ ಇದರಿಂದ ಪ್ರಾಣಾಪಾಯ ಆಗುವ ಸಂಭವವೂ ಹೆಚ್ಚಿದೆ. ಮಾಹಿತಿ ತಿಳಿದೂ ಇನ್ನೂ ತೆರವುಗೊಳಿಸದೇ ಬೇಜವಾಬ್ದಾರಿ ಮೆರೆದಿರುವುದು ಕಾರಣವಾಗಿದೆ.

    ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳು, ಹಿರಿಯರು, ಮಹಿಳೆಯರು ಅರಿವಿಲ್ಲದೆ ಈ ಜಾಗದಲ್ಲಿ ಓಡಾಟ ನಡೆಸಿದರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

    ಇನ್ನು ಯಾವುದಾದರೂ ದೂರು ನೀಡಲು ಪಿಡಿಓಗೆ ಕರೆ ಮಾಡುವಾಗ ಕರೆ ಎತ್ತದೆ ಸತಾಯಿಸುತ್ತಿರುವುದು ಕೂಡ ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

    ಸ್ಥಳೀಯ ಅಧಿಕಾರ ಈ ರೀತಿಯಾಗಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವುದು ಕೂಡಾ ಆಕ್ರೋಶಕ್ಕೆ ಪ್ರಮುಖ ಕಾರಣ.

    ಇನ್ನು ಬೇಸಿಗೆ ಕಾಲದಲ್ಲಿ ವೀರಕಂಬ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನೀರು ಸರಬರಾಜು ಕೂಡ ಸರಿಯಾಗಿ ಮಾಡಿರಲಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

    ಇಷ್ಟು ಮಾತ್ರವಲ್ಲದೆ ಈ ಹಿಂದೆ ಹಲವಾರು ಅಧಿಕ ಪ್ರಸಂಗ ಕೆಲಸ ಮಾಡಿ ಗ್ರಾಮಸ್ಥರಿಂದ ಉಗಿಸಿಕೊಂಡ ಘಟನೆಗಳೂ ನಡೆದಿದೆ.

    ಇದರಿಂದ ಬೇಸತ್ತ ಗ್ರಾಮಸ್ಥರು ಪಿಡಿಓ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಲು ಮುಂದಾಗಿದ್ದಾರೆ.

    Post Views: 218

    Related Posts

    DrDevansAcademy.org ನಿಂದ ವೈದ್ಯಕೀಯ ಶಿಕ್ಷಣಕ್ಕೆ ಕ್ರಾಂತಿಕಾರಿ ಕ್ಲೌಡ್ ಆಧಾರಿತ ಸಂವಾದಾತ್ಮಕ ಕಲಿಕಾ ವೇದಿಕೆ ಬಿಡುಗಡೆ

    April 23, 2026

    ವಿಡಿಯೋ ಬೆದರಿಕೆ: ₹1.5 ಕೋಟಿ ಸುಲಿಗೆ ಆರೋಪ, ಇನ್‌ಫ್ಲೂಯೆನ್ಸರ್ ಸಾಧನಾ ಶೆಟ್ಟಿ ವಿರುದ್ಧ ಪ್ರಕರಣ

    April 23, 2026

    ಚುನಾವಣಾ ಹಂತದಲ್ಲಿ ಉದ್ವಿಗ್ನತೆ: ಮತದಾನ ವೇಳೆ ಕಚ್ಚಾ ಬಾಂಬ್ ದಾಳಿ, ಹಲವರಿಗೆ ಗಾಯ

    April 23, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.