ಬೆಳ್ತಂಗಡಿ: ಆಟೋ ರಿಕ್ಷಾ ಡಿಕ್ಕಿಯಾಗಿ ಮೂರು ವರ್ಷದ ಕಂದಮ್ಮ ಸಾವನ್ನಪ್ಪಿರುವ ಘಟನೆ ಸೋಣಂದೂರು ಪಣಕಜೆಯಲ್ಲಿ ನಡೆದಿದೆ.
![](https://policepatrikekarnataka.com/wp-content/uploads/2024/06/WhatsApp-Image-2024-06-03-at-2.00.46-PM.jpeg)
![](https://policepatrikekarnataka.com/wp-content/uploads/2024/04/rohan-corp1.jpeg)
![](https://policepatrikekarnataka.com/wp-content/uploads/2024/04/rohan-corp2.jpeg)
![](https://policepatrikekarnataka.com/wp-content/uploads/2024/04/rohan-corp3.jpeg)
![](https://policepatrikekarnataka.com/wp-content/uploads/2024/04/rohan-corp4.jpeg)
ಪಣಕಜೆ ಮುಂಡಾಡಿ ನಿವಾಸಿ ಚಂದ್ರಶೇಖರ್ ಮತ್ತು ಉಷಾ ದಂಪತಿಯ ಪುತ್ರ ಕೌಶಿಕ್ ಮೃತಪಟ್ಟ ಮಗು.ಮುಂಡಾಡಿಯಲ್ಲಿ ಚಂದ್ರಶೇಖರ್ ಅವರ ಮನೆ ರಸ್ತೆಯ ಹತ್ತಿರವಿದ್ದು, ಮನೆಯಲ್ಲಿದ್ದ ಮಗು ಓಡಿ ರಸ್ತೆಗೆ ಬಂದಿದೆ ಎನ್ನಲಾಗಿದೆ. ಈ ವೇಳೆ ಅದೇ ಸಮಯಕ್ಕೆ ಬಂದ ಮಗುವಿಗೆ ರಿಕ್ಷಾ ತಾಗಿ ಗಂಭೀರ ಗಾಯಗೊಂಡಿದ್ದು, ಮಗುವನ್ನು ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ದರೂ, ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿದೆ . ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರಿಗೆ ದೂರು ನೀಡಲಾಗಿದ್ದು, ಪ್ರಕರಣ ದಾಖಲಾಗಿದೆ.