Facebook Twitter Instagram
    Saturday, April 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಸುಂಟರಗಾಳಿಗೆ ಬೆಚ್ಚಿಬಿದ್ದ ಜನ: ಧರೆಗುರುಳಿದ ಮರಗಳು ಅಪಾರ ಹಾನಿ..!!
    ಇತ್ತೀಚಿನ ಸುದ್ದಿ

    ಸುಂಟರಗಾಳಿಗೆ ಬೆಚ್ಚಿಬಿದ್ದ ಜನ: ಧರೆಗುರುಳಿದ ಮರಗಳು ಅಪಾರ ಹಾನಿ..!!

    April 15, 2025
    Share

    ಉಡುಪಿ : ಉಡುಪಿ ಜಿಲ್ಲೆಯಲ್ಲಿ ಮಧ್ಯಾಹ್ನದ ಬಳಿಕ ಸುಂಟರಗಾಳಿ ಸಹಿತ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೆ ದಿಢೀರ್ ಬಿಸಿದ ಸುಂಟರಗಾಳಿಗೆ ಜನರು ಭಯಭೀತರಾಗಿದ್ದು, ರಸ್ತೆಗಳಲ್ಲಿ ಧೂಳಿನಿಂದಾಗಿ ಸಂಚಾರಕ್ಕೆ ಸಂಕಷ್ಟವಾಗಿತ್ತು.

    ಹಿರಿಯಡಕದಲ್ಲಿ ಮಧ್ಯಾಹ್ನ ಬೀಸಿದ ಭಾರೀ ಗಾಳಿಗೆ ಪಡುಭಾಗ ಗರಡಿ ರಸ್ತೆಯಲ್ಲಿ ಮರ ಬಿದ್ದು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಮುಂಡುಜೆ ವಿದ್ಯುತ್ ಕಂಬದ ಮೇಲೆ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

    ಕುಯಿಲಾಡಿ ಭಾಗದಲ್ಲಿ ಗಾಳಿಗೆ ನೂರಾರು ಅಡಿಕೆ ಮರಗಳು ಬಿದ್ದು ಭಾರಿ ನಷ್ಟ ಉಂಟಾಗಿದೆ. ಕಾರ್ಕಳ, ಮಣಿಪಾಲ, ಹಿರಿಯಡ್ಕ, ಉಡುಪಿ ಪಟ್ಟಣ ಮತ್ತು ಬ್ರಹ್ಮಾವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಯಿತು.

    ಗಾಳಿ ವಿಶೇಷವಾಗಿ ಪ್ರಬಲವಾಗಿದ್ದ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು. ಬಲವಾದ ಗಾಳಿಯ ನಂತರ ತಕ್ಷಣವೇ ಮಳೆ ಪ್ರಾರಂಭವಾಯಿತು.


    ಮಲ್ಪೆ ಪರಿಸರದಲ್ಲೂ ಸುಂಟರಗಾಳಿ ಸಹಿತ ಮಳೆ ಸುರಿದಿದ್ದು ಮರಗಳು ಧರೆಗೆ ಒರಗಿ ಮನೆಗಳಿಗೆ ಹಾನಿಯಾಗಿವೆ.ನೂರಾರು ಕಡ ವಿದ್ಯುತ್ ತಂತಿಗಳ ಮೇಲೆ ಮರಗಳು ಒರಗಿದ್ದು, ವ್ಯಾಪಕ ಹಾನಿ ಸಂಭವಿಸಿದೆ. ವಿದ್ಯುತ್ ವ್ಯತ್ಯಯದಿಂದ ಜನರು ಪರದಾಡಬೇಕಾದ ಸ್ಥಿತಿ ಬಂದಿದೆ. ಮಳೆ ಸುರಿದ ಬಳಿಕ ಬೇಸಗೆಯಲ್ಲಿ ತಣ್ಣನೆಯ ವಾತಾವರಣ ನಿರ್ಮಾಣವಾಗಿದೆ.

    ಉಡುಪಿ ನಗರದಾದ್ಯಂತ ಹಲವಾರು ಫ್ಲೆಕ್ಸ್ ಹೋರ್ಡಿಂಗ್‌ಗಳು ಮತ್ತು ಬ್ಯಾನರ್‌ಗಳು ಹರಿದುಹೋಗಿವೆ. ಮಣಿಪಾಲ ಮತ್ತು ನಗರ ಬಸ್ ನಿಲ್ದಾಣದಲ್ಲಿ, ಬಲವಾದ ಗಾಳಿಯಿಂದಾಗಿ ಫ್ಲೆಕ್ಸ್ ಬ್ಯಾನರ್‌ಗಳು ಮತ್ತು ಕಂಬಗಳು ಸಂಪೂರ್ಣವಾಗಿ ನೆಲಕ್ಕುರುಳಿವೆ.

    Post Views: 161

    Related Posts

    ಭಾರತದ ನಕ್ಷೆಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ರಾಜಧಾನಿಗೆ ಸಂಸತ್ತಿನ ಕಾನೂನು ಮಾನ್ಯತೆ

    April 24, 2026

    ಪಾತ್ರೆಯಲ್ಲಿ ಸಿಲುಕಿದ ಪುಟ್ಟ ಮಗು: ಪೊಲೀಸರ ಸಮಯೋಚಿತ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ

    April 24, 2026

    ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು

    April 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.