Facebook Twitter Instagram
    Thursday, April 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಅಂತಾರಾಷ್ಟ್ರೀಯ»ಕೇರಳದ ಮೊದಲ ವಂದೇ ಭಾರತ್​ ಎಕ್ಸ್​ಪ್ರೆಸ್​ಗೆ ಪ್ರಧಾನಿ ಮೋದಿ ಚಾಲನೆ
    ಅಂತಾರಾಷ್ಟ್ರೀಯ

    ಕೇರಳದ ಮೊದಲ ವಂದೇ ಭಾರತ್​ ಎಕ್ಸ್​ಪ್ರೆಸ್​ಗೆ ಪ್ರಧಾನಿ ಮೋದಿ ಚಾಲನೆ

    April 25, 2023
    Share

    ಕೇರಳ(Kerala) ದ ಮೊದಲ ವಂದೇ ಭಾರತ್ ಎಕ್ಸ್​ಪ್ರೆಸ್ (Vande Bharat Express)​ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಈ ರೈಲು ಪ್ರಮುಖವಾಗಿ 11 ಜಿಲ್ಲೆಗಳಿಗೆ ಸಂಚರಿಸಲಿದೆ, ರೈಲು ತಿರುವನಂತಪುರಂ, ಕೊಲ್ಲಂ, ಕೊಟ್ಟಾಯಂ, ಎರ್ನಾಕುಲಂ, ತ್ರಿಶೂರ್, ಪಾಲಕ್ಕಾಡ್, ಪತ್ತನಂತಿಟ್ಟ, ಮಲಪ್ಪುರಂ, ಕೋಳಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಸೇರಿದಂತೆ ವಿವಿಧ ನಗರಗಳನ್ನು ಸಂಪರ್ಕಿಸಲಿದೆ.

    ಮೊದಲ ಹಂತದ ಅಡಿಯಲ್ಲಿ ಕಾಸರಗೋಡಿನಿಂದ ತಿರುವನಂತಪುರದವರೆಗಿನ ಸಂಪೂರ್ಣ ಹಳಿಯನ್ನು ಗಂಟೆಗೆ 110 ಕಿ.ಮೀ ವೇಗಕ್ಕೆ ಪರಿವರ್ತಿಸಲು 381 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ.

    ತಿರುವುಗಳನ್ನು ನೇರಗೊಳಿಸುವುದು ಮತ್ತು ಇತರ ಅಗತ್ಯ ಹೊಂದಾಣಿಕೆಗಳನ್ನು ಒಳಗೊಂಡಿರುವ ಎರಡನೇ ಹಂತವು ಪೂರ್ಣಗೊಳ್ಳಲು ಎರಡರಿಂದ ಮೂರೂವರೆ ವರ್ಷ ಬೇಕಾಗುತ್ತದೆ. ಬಳಿಕ ಈ ಟ್ರ್ಯಾಕ್‌ನ ವೇಗವನ್ನು ಗಂಟೆಗೆ 130 ಕಿಮೀಗೆ ಹೆಚ್ಚಿಸಲಾಗುತ್ತದೆ.

    ಏಪ್ರಿಲ್ 17 ರಂದು ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು, ತಿರುವನಂತಪುರ ರೈಲು ನಿಲ್ದಾಣದಿಂದ ಬೆಳಗ್ಗೆ 5:10ಕ್ಕೆ ಆರಂಭವಾದ ಪ್ರಾಯೋಗಿಕ ರೈಲು ಓಡಾಟ ಮಧ್ಯಾಹ್ನ 12:30ಕ್ಕೆ ಕಣ್ಣೂರು ತಲುಪಿತ್ತು.

    ಆರಂಭಿಕ ಹಂತದಲ್ಲಿ, ವಂದೇ ಭಾರತ್ ಗಂಟೆಗೆ ಕೇವಲ 100 ಕಿಮೀ ವೇಗದಲ್ಲಿ ಪ್ರಯಾಣಿಸಲಿದೆ. ಒಂದು ವರ್ಷದ ಅವಧಿಯಲ್ಲಿ ವಂದೇ ಭಾರತ್ 130 ಕಿಮೀ ವೇಗದಲ್ಲಿ ಓಡಲಿದೆ. ವೇಗದ ಗುರಿಗಳನ್ನು ತಲುಪಲು ರೈಲುಗೆ ಅನುಕೂಲವಾಗುವಂತೆ ಟ್ರ್ಯಾಕ್ ಜೋಡಣೆ ಸಮೀಕ್ಷೆಯು ಸಮಾನಾಂತರವಾಗಿ ನಡೆಯುತ್ತದೆ. ಈ ರೈಲಿನಲ್ಲಿ ಆರಂಭಿಕ ಸವಾರಿಗಾಗಿ 25 ಪ್ರಯಾಣಿಕರನ್ನು ಆಯ್ಕೆ ಮಾಡಲಾಗುತ್ತದೆ.

    Post Views: 338

    Related Posts

    ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ

    April 22, 2026

    4ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್

    April 22, 2026

    ಗೃಹ ಸಚಿವ ಪರಮೇಶ್ವರ್ ಗೆ ರೂ.500 ಬೆಟ್ಟಿಂಗ್ ಸಂಕಷ್ಟ: ಎಫ್ಐಆರ್ ದಾಖಲಿಸಿ ತನಿಖೆಗೆ ಕೋರ್ಟ್ ಆದೇಶ

    April 22, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.