ಮಂಗಳೂರು: ಶಬರಿಮಲೆ ಅಯ್ಯಪ್ಪ ಸ್ವಾಮಿ ಮಾಲಾಧಾರಿಯ ವೇಷ ಹಾಕಿಕೊಂಡು ಮನೆ ಮನೆಗೆ ತೆರಳಿ ಹಣ ಸಂಗ್ರಹ ಮಾಡುತ್ತಿದ್ದ ಇಬ್ಬರು ಯುವಕರನ್ನು ಗ್ರಾಮಸ್ಥರು ಹಿಡಿದು ಪ್ರಶ್ನಿಸುತ್ತಿರುವ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.ಈ ನಕಲಿ ಸ್ವಾಮಿಗಳ ಬಳಿ ಗುರುತು ಚೀಟಿ, ರಶೀದಿ ಪುಸ್ತಕ, ಫೋಟೊಗಳು, ಸರ್ಟಿಫಿಕೆಟ್‌ಗಳು. ಆಧಾರ್ ಕಾರ್ಡ್ ಪ್ರತಿಗಳು ಪತ್ತೆಯಾಗಿದ್ದು, ಅವೆಲ್ಲವೂ ನಕಲಿ ಎನ್ನಲಾಗಿದೆ. ಈ ಯುವಕರನ್ನು ಎಲ್ಲಿಂದ ಬಂದಿದ್ದೀರಿ ಎಂದು ಪ್ರಶ್ನಿಸಿದಾಗ ಮೂಡುಬಿದಿರೆ, ವಿಟ್ಲ, ಮಂಜೇಶ್ವರ, ಧರ್ಮಸ್ಥಳ ಮುಂತಾದ ಹೆಸರುಗಳನ್ನು ಅವರು ಹೇಳುತ್ತಾರೆ. ಸೇವಾಲಯ ಎಂಬ ಹೆಸರಿನ ಮೂಲಕ ಧನಸಹಾಯಕ್ಕೆ ಬರುವ ಈ ಸ್ವಾಮಿಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು, ಯಾರೂ ಮೋಸ ಹೋಗ ಬಾರದು ಎಂದು ಗ್ರಾಮಸ್ಥರು ಮನವಿ ಮಾಡುತ್ತಿರುವುದು ಈ ವೀಡಿಯೋದಲ್ಲಿದೆ.