Facebook Twitter Instagram
    Thursday, July 23
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಕರಾವಳಿ ಸುದ್ದಿ»ಮಂಗಳೂರು:’ವೈಲ್ಡ್ ಟೈಗರ್ ಸಫಾರಿ’ ಸಿನಿಮಾದ ಪತ್ರಿಕಾಗೋಷ್ಠಿ
    ಕರಾವಳಿ ಸುದ್ದಿ

    ಮಂಗಳೂರು:’ವೈಲ್ಡ್ ಟೈಗರ್ ಸಫಾರಿ’ ಸಿನಿಮಾದ ಪತ್ರಿಕಾಗೋಷ್ಠಿ

    March 10, 2025
    Share

    ಮಂಗಳೂರು: ವಿ.ಕೆ ಫಿಲ್ಸ್ ತನ್ನ ಎರಡನೇ ದೊಡ್ಡ ಪ್ರಾಜೆಕ್ಟ್ “ವೈಲ್ಡ್ ಟೈಗರ್ ಸಫಾರಿ” ಚಲನಚಿತ್ರವನ್ನು ಘೋಷಿಸಿದೆ. ಈ ಸಂಸ್ಥೆಯ ಮೊದಲ ಚಿತ್ರ”ಕರಾವಳಿ” ಆಗಿದ್ದು, ಅದರಲ್ಲಿ ಶಿಥಿಲ್ ಪೂಜಾರಿ ಮುಖ್ಯ ಪಾತ್ರನಿರ್ವಹಿಸಿದ್ದರು. ಈ ಹೊಸ ಸಿನಿಮಾ ವಿನೋದ್‌ ಕುಮಾರ್ ಅವರ
    ಪ್ರೊಡಕ್ಷನ್ ಅಡಿಯಲ್ಲಿ ಮೂಡಿ ಬರುತ್ತಿದ್ದು, ಅವರು ಸಿನಿಮಾ ಕ್ಷೇತ್ರದ ಬಗ್ಗೆ ಅಪಾರವಾದ ಆಸಕ್ತಿಯನ್ನು ಹೊಂದಿದ್ದಾರೆ.

    ಶಿಥಿಲ್ ಪೂಜಾರಿ ಅವರು “ಕರಾವಳಿ” ಸಿನಿಮಾದಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದ್ದು, 2019ರಲ್ಲಿ Mr. MH International UAE ಹಾಗೂ
    Mr. Billava ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
    ಧರ್ಮೇಶ್ ಯೆಲಂದೆ ಅವರು ಭಾರತದ ಪ್ರಸಿದ್ಧ ನೃತ್ಯಗಾರ ಹಾಗೂ ಕೊರಿಯೋಗ್ರಾಫರ್‌ ಆಗಿದ್ದಾರೆ.

    ಸುಶಾಂತ್ ಪೂಜಾರಿ “ABCD” ಮತ್ತು ಇತರೆ ಸಿನಿಮಾದಲ್ಲಿ ನಟಿಸಿದ್ದರು ಹಾಗೂ ಒಬ್ಬ ನೃತ್ಯಗಾರ.
    ನಿಮಿಕಾ ರತ್ನಾಕರ್ “Shake It Pushpavathi” ಗೀತೆಯಿಂದ ಖ್ಯಾತಿಯನ್ನು ಗಳಿಸಿದವರು. ಅವರು ನಟಿಯಾಗಿದ್ದು ಮಾತ್ರವಲ್ಲ,
    ಗಾಯಕಿ ಹಾಗೂ Miss India Super Talent ನಲ್ಲಿ ಬಾಗಿಯಾಗಿದ್ದಾರೆ.
    ಅಚೂತ್ ರಾವ್ ತಮ್ಮ ವಿಭಿನ್ನ ಅಭಿನಯ ಶೈಲಿಗೆ ಪ್ರಸಿದ್ಧ. ಮತ್ತು ಯಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗಲಿರುವ ”ವೈಲ್ಡ್ ಟೈಗರ್ ಸಫಾರಿ“ ಸಿನಿಮಾದ ಮುಹೂರ್ತ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ಕದ್ರಿ ದೇವಸ್ಥಾನದಲ್ಲಿ ಜರುಗಿತು.

    ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಚಿತ್ರದ ನಿರ್ದೇಶಕ ಚಂದ್ರಮೌಳಿ ಅವರು, ”ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವ ಕಥಾಹಂದರವನ್ನು ಈ ಸಿನಿಮಾ ಹೊಂದಿದ್ದು ಸಿನಿಮಾದ ಮುಹೂರ್ತ ಕಾರ್ಯಕ್ರಮ ಇಂದು ನಡೆದಿದೆ. ಮಂಗಳೂರು ಮೂಲದ ಕಥೆಯಲ್ಲಿ ಹುಲಿ ವೇಷಕ್ಕೆ ಪ್ರಾಧಾನ್ಯತೆ ಇರಲಿದೆ. ಮುಂದೆ ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಲಿದ್ದು ಶೀಘ್ರದಲ್ಲಿ ಸಿನಿಮಾ ತೆರೆಗೆ ಬರಲಿದೆ“ ಎಂದರು.

    ಬಳಿಕ ಮಾತಾಡಿದ ನಾಯಕ ನಟ ಶಿಥಿಲ್ ಕುಮಾರ್, ”ಸಿನಿಮಾಕ್ಕೆ ಬೇಕಾಗಿ ಸಾಕಷ್ಟು ಸಿದ್ಧತೆಯನ್ನು ಮಾಡಿಕೊಂಡಿದ್ದೇನೆ. ಲವ್, ಆಕ್ಷನ್ ಸಿನಿಮಾ ಇದಾಗಿದ್ದು ವೀಕ್ಷಕರಿಗೆ ಮನೋರಂಜನೆ ಬೇಕಾದ ಎಲ್ಲವನ್ನು ಒಳಗೊಂಡಿದೆ. ಕಥೆ ಕೇಳಿ ಥ್ರಿಲ್ ಆಗಿದ್ದೇನೆ“ ಎಂದರು. ರಾಜೇಶ್ ಭಟ್ ಸಿನಿಮಾಕ್ಕೆ ಕೆಮರಾ ಕ್ಲಾಫ್ ಮಾಡಿದರು. ಸಿನಿಮಾ ನಿರ್ಮಾಪಕ ವಿನೋದ್ ಕುಮಾರ್, ನಾಯಕಿ ನಿಮಿಕಾ ರತ್ನಾಕರ್, ಬಾಲಿವುಡ್ ನ ಖ್ಯಾತ ನೃತ್ಯ ನಿರ್ದೇಶಕರಾದ ಧರ್ಮೇಶ್, ಸುಶಾಂತ್, ಕೆಮರಾಮ್ಯಾನ್ ಎಜೆ ಶೆಟ್ಟಿ, ಕಲಾ ನಿರ್ದೇಶಕ ಶಿವು, ದೇವಳದ ಮೆನೇಜರ್ ಜಗದೀಶ್ ಕದ್ರಿ, ಕಿಶೋರ್ ಕುಮಾರ್, ರತ್ನಾಕರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

    Post Views: 337

    Related Posts

    ಫರಂಗಿಪೇಟೆ ಬ್ಯಾಂಕ್‌ ಕಳ್ಳತನ ಯತ್ನ ಪ್ರಕರಣ: ಆರೋಪಿಗಳ ಪತ್ತೆಗೆ ಪ್ರತ್ಯೇಕ ವಿಶೇಷ ತಂಡ

    July 22, 2026

    ಬೆಳ್ತಂಗಡಿ: ಖೋಟಾ ನೋಟು ದಂಧೆ ಪ್ರಕರಣ : ನಾಲ್ವರಿಗೆ ಮತ್ತೆ ಪೊಲೀಸ್ ಕಸ್ಟಡಿ : ಮೂವರಿಗೆ ನ್ಯಾಯಾಂಗ ಬಂಧನ

    July 22, 2026

    ಮಂಗಳೂರು: ಮನೆ ದುರಸ್ತಿ ಕಾಮಗಾರಿಗೆ ಬಂದ ಕಾರ್ಮಿಕನಿಂದ ₹6.37 ಲಕ್ಷ ಮೌಲ್ಯದ ಚಿನ್ನಾಭರಣ ಕಳವು..!! ಆರೋಪಿಯ ಬಂಧನ

    July 22, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

     ಶಾಸಕ ಬಿಪಿ ಹರೀಶ್ ಗೆ ಮೊಟ್ಟೆ ಎಸೆತ : ಕಮಿಷನರ್ ಗೆ ಬಿಜೆಪಿ ನಾಯಕರಿಂದ ದೂರು ಸಲ್ಲಿಕೆ

    July 22, 2026

    ಫರಂಗಿಪೇಟೆ ಬ್ಯಾಂಕ್‌ ಕಳ್ಳತನ ಯತ್ನ ಪ್ರಕರಣ: ಆರೋಪಿಗಳ ಪತ್ತೆಗೆ ಪ್ರತ್ಯೇಕ ವಿಶೇಷ ತಂಡ

    July 22, 2026

    ಬೆಳ್ತಂಗಡಿ: ಖೋಟಾ ನೋಟು ದಂಧೆ ಪ್ರಕರಣ : ನಾಲ್ವರಿಗೆ ಮತ್ತೆ ಪೊಲೀಸ್ ಕಸ್ಟಡಿ : ಮೂವರಿಗೆ ನ್ಯಾಯಾಂಗ ಬಂಧನ

    July 22, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.