Facebook Twitter Instagram
    Tuesday, October 6
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಲೇಡೀಗೋಶನ್ ನಲ್ಲಿ ವಿಶ್ವ ಫಾರ್ಮಸಿಸ್ಟ್ಸ್ ದಿನದಂದು ಫಾರ್ಮಸಿ ಅಧಿಕಾರಿಗಳಿಗೆ ಗೌರವ ಪುರಸ್ಕಾರ
    ಇತ್ತೀಚಿನ ಸುದ್ದಿ

    ಮಂಗಳೂರು: ಲೇಡೀಗೋಶನ್ ನಲ್ಲಿ ವಿಶ್ವ ಫಾರ್ಮಸಿಸ್ಟ್ಸ್ ದಿನದಂದು ಫಾರ್ಮಸಿ ಅಧಿಕಾರಿಗಳಿಗೆ ಗೌರವ ಪುರಸ್ಕಾರ

    October 6, 2026
    Share

    ಮಂಗಳೂರು: ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ವಿಶ್ವ ಫಾರ್ಮಸಿಸ್ಟ್ಸ್ ದಿನಾಚರಣೆಯನ್ನು ವಿನೂತನವಾಗಿ ನಡೆಸಿಕೊಡಲಾಯಿತು.ಫಾರ್ಮಸಿ ಅಧಿಕಾರಿಗಳಲ್ಲಿ ವೃತ್ತಿ ನೈಪುಣ್ಯತೆಯ ಅಗತ್ಯ ಮತ್ತು ಅವರ ಸಾಮಾಜಿಕ ಜವಾಬ್ದಾರಿಯನ್ನು ಮನಮುಟ್ಟುವಂತೆ ತಿಳಿಹೇಳಿದ ಸರಕಾರಿ ಲೇಡಿಗೋಷನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ/ದುರ್ಗಾಪ್ರಸಾದ್.ಎಂ.ಆರ್ .ಅವರು ಅನುಭವಿ ಫಾರ್ಮಸಿಸ್ಟ್ಸ್ ಗಳ ಪ್ರೇರಣಾದಾಯಕ ಮನೋಭಾವನೆಯಿಂದ ಭಾನುವಾರದಂದು ಲೇಡಿಗೋಷನ್ ಆಸ್ಪತ್ರೆಯಲ್ಲಿ ಸಾರ್ವತ್ರಿಕ ಮೆಚ್ಚುಗೆಯನ್ನು ಪಡೆದ ವಿಶಾಲವಾದ ಫಾರ್ಮಸಿ ಮತ್ತು ಮುಖ್ಯ ಉಗ್ರಾಣವನ್ನು ಪ್ರಾರಂಭಿಸಲು ಸಾಧ್ಯವಾಯಿತು ಎಂದರು.

    ನಿವಾಸಿ ವೈದ್ಯಾಧಿಕಾರಿಗಳಾದ ಡಾ/ಜಗದೀಶ್ ಅವರು ಫಾರ್ಮಸಿ ಅಧಿಕಾರಿಗಳ ಸಮರ್ಪಣಾ ಮನೋಭಾವವನ್ನು ಕೊಂಡಾಡಿದರು.ಹಿರಿಯ ಫಾರ್ಮಸಿ ಅಧಿಕಾರಿಗಳಾದ ಶ್ರೀಮತಿ ಸಂಧ್ಯಾ,ಶ್ರೀಮತಿ ಮಹಾಲಕ್ಷ್ಮಿ ,ಶ್ರೀಮತಿ ಲಾವಣ್ಯ, ಶ್ರೀ ಮೋಹನ್ ದಾಸ್ ,ಶ್ರೀಮತಿ ಪುಷ್ಪಲತಾ,ಶ್ರೀಮತಿ ರೇಖಾ ಅಲ್ಲದೆ ಕಿರಿಯ ಫಾರ್ಮಸಿಸ್ಟ್ ಗಳಾದ ಕುಮಾರಿ ಅಕ್ಷತಾ,ಕುಮಾರಿ ರಿಶಾನಾ,ಶ್ರೀಮತಿ ಸಕೀನಾ ಇವರೆಲ್ಲರುಗಳನ್ನು ಅವರವರ ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ, ಶ್ರದ್ಧಾಪೂರ್ವಕವಾದ ಸರಕಾರಿ ಸೇವೆಯನ್ನು ಗುರುತಿಸಿ ಗೌರವಾದರಗಳೊಂದಿಗೆ ಹೂ ಹಾರ,ಶಾಲು, ಫಲಪುಷ್ಪ ಹಾಗೂ ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.ತಮ್ಮ ಅನಿಸಿಕೆಗಳನ್ನು ತಿಳಿಸಿದ ಫಾರ್ಮಸಿ ಅಧಿಕಾರಿಗಳು, ಇದುವರೆಗಿನ ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಹಿಂದೆಂದೂ ಕಾಣದಿರುವ ಹಾಗೂ ತಮ್ಮನ್ನು ಗೌರವಿಸಿ ಪುರಸ್ಕರಿಸಿದ ಈ ಕ್ಷಣಗಳು ಅನಿರ್ವಚನೀಯ ಮತ್ತು ಚಿರಸ್ಮರಣೀಯ ಎಂದರು.ಇಂಥಹ ಅಭಿಮಾನದ ಕಾರ್ಯಕ್ರಮಗಳು ಸಿಬ್ಬಂದಿಗಳಲ್ಲಿ ಮತ್ತಷ್ಟು ವೃತ್ತಿ ಪರ ಸ್ಫೂರ್ತಿಯನ್ನು ದ್ವಿಗುಣಗೊಳಿಸುತ್ತದೆ ಎಂದು ಹೇಳಿದ ಫಾರ್ಮಸಿ ಅಧಿಕಾರಿಗಳು ತಮ್ಮ ಮನದಾಳದ ಭಾವನೆಗಳನ್ನು ಬಿಚ್ಚಿಟ್ಟರು.


    ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಪ್ರಸೂತಿ ತಜ್ಞ ಡಾ/ದಯಾನಂದ್,ಮಕ್ಕಳ ತಜ್ಞೆ ಡಾ/ಮನಿಷಾ,ಸಹಾಯಕ ಆಡಳಿತಾಧಿಕಾರಿ ಶ್ರೀಮತಿ ಅನಿತಾ ಸತ್ಯನ್,ನರ್ಸಿಂಗ್ ಸುಪರಿಂಟೆಂಡೆಂಟ್ ಶ್ರೀಮತಿ ಗೀತಾ,ಕೆ.ಎಂ.ಸಿ.ನರ್ಸಿಂಗ್ ಸುಪರ್ ವೈಸರ್ ಶ್ರೀಮತಿ ಮಲ್ಲಿಕಾ, ಆಫೀಸ್ ಸುಪರಿಂಟೆಂಡೆಂಟ್ ಶ್ರೀ .ಶಂಕರ್ ಉಪಸ್ಥಿತರಿದ್ದರು.ಶುಶ್ರೂಷಾಧಿಕಾರಿಯಾದ ಶ್ರೀಮತಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು.ಹಿರಿಯ ಶುಶ್ರೂಧಿಕಾರಿ ಶ್ರೀಮತಿ ಮಹಾಲಕ್ಷ್ಮೀ ಸ್ವಾಗತಿಸಿದರು.ಶುಶ್ರೂಷಾಧಿಕಾರಿ ಶ್ರೀಮತಿ ಸರೋಜಾ ಧನ್ಯವಾದವನ್ನಿತ್ತರು.ಅಪೂರ್ವ ಪ್ರಾರ್ಥನೆ ಗೈದರು.ಶ್ರೀಮತಿ ಭವ್ಯಾ ಮತ್ತು ಹೇಮಂತ್ ತಾಂತ್ರಿಕ ಸಹಕಾರವನ್ನಿತ್ತರು.*

    Post Views: 13

    Related Posts

    ನಕಲಿ ಸುಪ್ರೀಂ ಕೋರ್ಟ್ ಆದೇಶ ಸೃಷ್ಠಿಸಿ ಜೀವಾವಧಿ ಕೈದಿ ಬಿಡುಗಡೆಗೆ ಯತ್ನಿಸಿದ DIG ಅರೆಸ್ಟ್!

    October 6, 2026

    ವಿಟ್ಲ: 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

    October 6, 2026

    ಮಣಿಪಾಲ: 18 ವರ್ಷದಿಂದ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳು ಅರೆಸ್ಟ್…!!

    October 6, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ನಕಲಿ ಸುಪ್ರೀಂ ಕೋರ್ಟ್ ಆದೇಶ ಸೃಷ್ಠಿಸಿ ಜೀವಾವಧಿ ಕೈದಿ ಬಿಡುಗಡೆಗೆ ಯತ್ನಿಸಿದ DIG ಅರೆಸ್ಟ್!

    October 6, 2026

    ವಿಟ್ಲ: 15 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

    October 6, 2026

    ಮಂಗಳೂರು: ಲೇಡೀಗೋಶನ್ ನಲ್ಲಿ ವಿಶ್ವ ಫಾರ್ಮಸಿಸ್ಟ್ಸ್ ದಿನದಂದು ಫಾರ್ಮಸಿ ಅಧಿಕಾರಿಗಳಿಗೆ ಗೌರವ ಪುರಸ್ಕಾರ

    October 6, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.