Facebook Twitter Instagram
    Saturday, April 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಉಪ್ಪಿನಂಗಡಿ :ಯುವತಿ ಸ್ನಾನ ಮಾಡುತ್ತಿದ್ದಾಗ ಇಣುಕಿ ನೋಡಲೆತ್ನಿಸಿದ 2 ಮಕ್ಕಳ ತಂದೆ; ಅಬ್ದುಲ್ ರಹಿಮಾನ್ʼನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
    ಇತ್ತೀಚಿನ ಸುದ್ದಿ

    ಉಪ್ಪಿನಂಗಡಿ :ಯುವತಿ ಸ್ನಾನ ಮಾಡುತ್ತಿದ್ದಾಗ ಇಣುಕಿ ನೋಡಲೆತ್ನಿಸಿದ 2 ಮಕ್ಕಳ ತಂದೆ; ಅಬ್ದುಲ್ ರಹಿಮಾನ್ʼನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

    July 22, 2024
    Share

    ಉಪ್ಪಿನಂಗಡಿ : ಯುವತಿ  ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಕಿಟಕಿಯಿಂದ ನೋಡಲೆತ್ನಿಸಿದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಉಪ್ಪಿನಂಗಡಿ ಹೊರ ವಲಯದ ಪೆರಿಯಡ್ಕ ಎಂಬಲ್ಲಿ ಆದಿತ್ಯವಾರ ರಾತ್ರಿ ನಡೆದಿದೆ. ಅಬ್ದುಲ್ ರಹಿಮಾನ್ (41 ವ.) ಪೊಲೀಸ್‌ ವಶದಲ್ಲಿರುವ ಆರೋಪಿ.

    ಯುವತಿ ಸ್ನಾನ ಮಾಡುತ್ತಿದ್ದಾಗ ಕಿಟಕಿ ಬಳಿ ಶಬ್ಧ ಉಂಟಾಗಿದ್ದು, ತಕ್ಷಣ ಅತ್ತ ನೋಡಿದಾಗ ಕಿಟಕಿ ಬಾಗಿಲು ತೆರೆಯಲು ಯಾರೋ ಯತ್ನಿಸಿದ್ದು ಗೋಚರವಾಗಿದೆ. ತಕ್ಷಣ ಯುವತಿ ತನ್ನ ತಾಯಿ ಬಳಿ ಇದನ್ನು ಹೇಳಿಕೊಂಡಿದ್ದಾರೆ. ಆಗ ತಾಯಿ ಕಿಟಕಿ ಸುತ್ತಾಮುತ್ತ ಪರಿಶೀಲನೆ ನಡೆಸಿದ್ದು, ಅಬ್ದುಲ್ ರಹಿಮಾನ್‌ ಪರಾರಿಯಾಗುತ್ತಿರುವುದು ಅವರ ಗಮನಕ್ಕೆ ಬಂದಿದೆ ಎನ್ನಲಾಗಿದೆ.

    ತಕ್ಷಣ ಯುವತಿಯ ತಾಯಿ ಬೊಬ್ಬೆ ಹೊಡೆದಿದ್ದು, ಸ್ಥಳೀಯರು ಮಾಹಿತಿ ಪಡೆದುಕೊಂಡು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೃತ್ಯ ಎಸಗಿದ ಆರೋಪಿ ಎರಡು ಮಕ್ಕಳ ತಂದೆಯಾಗಿದ್ದು ಆತನಿಗೆ   16 ಹಾಗೂ 9 ವರ್ಷದ   ಮಕ್ಕಳಿದ್ದಾರೆ  

    ಆರೋಪಿ ಕೃತ್ಯ ಎಸಗಿ ಬಚ್ಚಲು ಮನೆ ಬಳಿಯಿಂದ ಪರಾರಿ ಯಾಗುತ್ತಿರುವುದನ್ನು ಸಂತ್ರಸ್ತೆಯ ತಾಯಿ ನೋಡಿದರೂ, ಈ ಬಗ್ಗೆ ಅರಿವಿಲ್ಲದ ಅಬ್ದುಲ್ ರಹಿಮಾನ್ ಯುವತಿಯ ತಾಯಿ ಬೊಬ್ಬೆ ಹೊಡೆದಾಗ ಸುಭಗನಂತೆ ವಿಚಾರಿಸಲು ಮನೆಗೆ ಬಂದಿದ್ದ. ಏನಾಯಿತು ? ಬಾಗಿಲು ತೆಗೆಯಿರಿ ಎಂದು ಸಜ್ಜನನಂತೆ ಫೋಸ್‌ ಕೊಟ್ಟು ಮನೆಗೆ ಮೊದಲಾಗಿ ಬಂದ ಆರೋಪಿಯನ್ನು, ಸ್ಥಳೀಯರು  ನೆರವಿನಿಂದ ಮನೆಯವರು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

    ಸ್ಥಳೀಯ ಬಿಜೆಪಿ ಮುಖಂಡರಾದ ಸುರೇಶ್ ಅತ್ರೆಮಜಲು, ಆನಂದ ಕುಂಟೆನಿ, ಸಂತೋಷ್ ಕುಮಾರ್ ಪರಂದಾಜೆ, ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್.ಸೇರಿದಂತೆ ಹಲವರು ಪೊಲೀಸ್ ಠಾಣೆಗೆ ಭೇಟಿ ನೀಡಿ,ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು, ಆರೋಪಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

    Post Views: 229

    Related Posts

    ಭಾರತದ ನಕ್ಷೆಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ರಾಜಧಾನಿಗೆ ಸಂಸತ್ತಿನ ಕಾನೂನು ಮಾನ್ಯತೆ

    April 24, 2026

    ಪಾತ್ರೆಯಲ್ಲಿ ಸಿಲುಕಿದ ಪುಟ್ಟ ಮಗು: ಪೊಲೀಸರ ಸಮಯೋಚಿತ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ

    April 24, 2026

    ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು

    April 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.