Facebook Twitter Instagram
    Tuesday, June 9
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಕೋಸ್ಟಲ್‌ವುಡ್‌ಗೆ ಹೊಸ ಚೈತನ್ಯ ನೀಡಲಿದೆ ‘90ಎಂಎಲ್ – ಕುಲ್ಲುಗನಾ…?’- ಏಪ್ರಿಲ್ 10 ರಂದು ರಾಜ್ಯಾದ್ಯಂತ ಬಿಡುಗಡೆ
    ಇತ್ತೀಚಿನ ಸುದ್ದಿ

    ಕೋಸ್ಟಲ್‌ವುಡ್‌ಗೆ ಹೊಸ ಚೈತನ್ಯ ನೀಡಲಿದೆ ‘90ಎಂಎಲ್ – ಕುಲ್ಲುಗನಾ…?’- ಏಪ್ರಿಲ್ 10 ರಂದು ರಾಜ್ಯಾದ್ಯಂತ ಬಿಡುಗಡೆ

    April 3, 2026
    Share

    ತುಳು ಚಲನಚಿತ್ರರಂಗದಲ್ಲಿ ವಿಭಿನ್ನ ಶೀರ್ಷಿಕೆ ಹಾಗೂ ವಿನೂತನ ಕಥಾಹಂದರದಿಂದಲೇ ಕುತೂಹಲ ಮೂಡಿಸಿರುವ “90ಎಂಎಲ್ – ಕುಲ್ಲುಗನಾ…?” ಸಿನಿಮಾ ಇದೇ ಏಪ್ರಿಲ್ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಕರಾವಳಿಯ ಸೊಗಡನ್ನು ಹಾಸ್ಯ, ಭಾವನೆ ಮತ್ತು ಸಾಮಾಜಿಕ ಸಂದೇಶದೊಂದಿಗೆ ಬೆರೆಸಿಕೊಂಡಿರುವ ಈ ಚಿತ್ರ, ಕೋಸ್ಟಲ್‌ವುಡ್‌ಗೆ ಹೊಸ ಚೈತನ್ಯ ತುಂಬುವ ನಿರೀಕ್ಷೆ ಮೂಡಿಸಿದೆ.

    ಡಿಡಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಡೋಲ್ಫಿ ಡಿಸೋಜ ನಿರ್ಮಿಸಿರುವ ಈ ಚಿತ್ರವನ್ನು ರಂಜಿತ್ ಸಿ. ಬಜಾಲ್ ನಿರ್ದೇಶಿಸಿದ್ದಾರೆ. ಹಲವು ವರ್ಷಗಳ ಸಹಾಯಕ ನಿರ್ದೇಶಕರಾಗಿ ಅನುಭವ ಪಡೆದಿರುವ ಅವರು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ. ತುಳಸಿದಾಸ್ ಮಂಜೇಶ್ವರ ರವರ ಸಂಭಾಷಣೆ ಚಿತ್ರಕ್ಕೆ ಜೀವ ತುಂಬಿದರೆ, ವಿಶಾಲ್ ದೇವಾಡಿಗ ಸಂಕಲನ ಹಾಗೂ ಪ್ರತಿಭಾವಂತರ ತಂಡ ಚಿತ್ರಕ್ಕೆ ಕೈಜೋಡಿಸಿದೆ.

    ಮನರಂಜನೆ ಜೊತೆಗೆ ಸಂದೇಶ : ‘90 ಎಂಎಲ್’ ಕೇವಲ ಹಾಸ್ಯಚಿತ್ರವಲ್ಲ. ಕುಟುಂಬ ಮನರಂಜನೆ, ಪ್ರೀತಿ, ಸ್ನೇಹ ಮತ್ತು ಜೀವನ ಮೌಲ್ಯಗಳನ್ನು ಒಳಗೊಂಡ ಕಥಾಹಂದರ ಹೊಂದಿದೆ. ಮದ್ಯಪಾನದಂತಹ ಸೂಕ್ಷ್ಮ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು, ಅದರ ಪರಿಣಾಮಗಳು ಕುಟುಂಬ ಹಾಗೂ ಯುವಜನರ ಮೇಲೆ ಹೇಗೆ ಬೀರುತ್ತವೆ ಎಂಬುದನ್ನು ಮನರಂಜನಾತ್ಮಕವಾಗಿ, ಆದರೆ ಚಿಂತನೆಗೆ ಹಚ್ಚುವ ರೀತಿಯಲ್ಲಿ ನಿರೂಪಿಸಲಾಗಿದೆ. ವಿಶೇಷವಾಗಿ ಹದಿಹರೆಯದವರ ಮನಸ್ಥಿತಿಯ ದ್ವಂದ್ವಗಳನ್ನು ಹಾಸ್ಯದ ಲೇಪನದೊಂದಿಗೆ ಪರಿಣಾಮಕಾರಿಯಾಗಿ ತೋರಿಸುವುದು ಚಿತ್ರದ ಪ್ರಮುಖ ವಿಶೇಷತೆ. ಚಿತ್ರ ಈಗಾಗಲೇ ಕನ್ನಡದಲ್ಲೂ ಡಬ್ಬಿಂಗ್ ಆಗಿದ್ದು, ಶೀಘ್ರದಲ್ಲೇ ಕನ್ನಡದಲ್ಲೂ ಬಿಡುಗಡೆಗೊಳಿಸುವ ಯೋಜನೆಯಿದೆ ಎಂದು ಚಿತ್ರತಂಡ ತಿಳಿಸಿದೆ.

    ತಾರಾಬಳಗವೇ ಬಲ : ಚಿತ್ರದಲ್ಲಿ ವಿನೀತ್ ಕುಮಾರ್ ನಾಯಕನಾಗಿ ಅಭಿನಯಿಸಿದ್ದು, ರುಹಾನಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ನವೀನ್ ಡಿ. ಪಡೀಲ್, ಅರವಿಂದ್ ಬೋಳಾರ್, ರೋಶನ್ ಶೆಟ್ಟಿ, ದೀಪಕ್ ರೈ ಪಣಾಜೆ, ಉಮೇಶ್ ಮಿಜಾರ್, ಪುಷ್ಪರಾಜ್ ಬೊಳ್ಳೂರು ಸೇರಿದಂತೆ ಕರಾವಳಿಯ ಜನಪ್ರಿಯ ಕಲಾವಿದರು ವಿಭಿನ್ನ ಪಾತ್ರಗಳಲ್ಲಿ ಮೆರೆದಿದ್ದಾರೆ. ಈ ಬಹುನಟರ ಬಳಗವೇ ಚಿತ್ರದ ಪ್ರಮುಖ ಶಕ್ತಿಯಾಗಿದೆ.

    ಹಾಡುಗಳಿಂದಲೇ ಹೈಪ್ : ಚಿತ್ರದ ‘ಎನ್ನಾಲ್ ಎನ್ನಾಲ್’ ಲಿರಿಕಲ್ ಹಾಡು ಈಗಾಗಲೇ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದು, ಇತ್ತೀಚೆಗೆ ಬಿಡುಗಡೆಯಾದ ‘ಶನಿವಾರ ಬಯ್ಯ’ ಹಾಡು ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲೆಡೆ ವೈರಲ್ ಆಗುತ್ತಿದೆ. ಸಂಗೀತ ನಿರ್ದೇಶಕ ಸೃಜನ ಕುಮಾರ್ ತೋನ್ಸೆ ರಚಿಸಿರುವ ಹಾಡುಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿವೆ.

    ಕರಾವಳಿಯ ಸೌಂದರ್ಯ ತೆರೆಗೆ : ಸುಮಾರು 35 ದಿನಗಳ ಕಾಲ ಇರಾ, ಶಕ್ತಿನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ನಾನಾ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಛಾಯಾಗ್ರಾಹಕ ಅರ್ಜುನ್ ಎಂ.ವಿ ಅವರ ಕ್ಯಾಮೆರಾ ಕಣ್ಣಿನಲ್ಲಿ ಕರಾವಳಿಯ ನೈಜ ಸೌಂದರ್ಯ, ಜೀವನ ಶೈಲಿ ಮತ್ತು ಸಂಸ್ಕೃತಿ ಜೀವಂತವಾಗಲಿದೆ.

    ಇತ್ತೀಚಿನ ವರ್ಷಗಳಲ್ಲಿ ತುಳು ಸಿನಿಮಾ ಕ್ಷೇತ್ರ ಹೊಸ ಪ್ರಯೋಗಗಳ ಮೂಲಕ ಚೇತರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ‘90 ಎಂಎಲ್’ ಸಿನಿಮಾ 2026ರ ಪ್ರಮುಖ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಮನರಂಜನೆ, ಸ್ಥಳೀಯತೆ ಮತ್ತು ಸಾಮಾಜಿಕ ಜಾಗೃತಿಯ ಸಮನ್ವಯದೊಂದಿಗೆ ಈ ಸಿನಿಮಾ ತುಳು ಸಿನಿಪ್ರಿಯರ ಮನಗೆಲ್ಲುವ ವಿಶ್ವಾಸ ಚಿತ್ರತಂಡದಲ್ಲಿದೆ. ಒಟ್ಟಿನಲ್ಲಿ ಹಾಸ್ಯ, ಭಾವನೆ ಮತ್ತು ಕರಾವಳಿ ಸೊಗಡಿನ ಸಂಯೋಜನೆಯೊಂದಿಗೆ ‘90 ಎಂಎಲ್’ ಸಿನಿಮಾ ಪ್ರೇಕ್ಷಕರಿಗೆ ವಿಭಿನ್ನ ಸಿನಿ ಅನುಭವ ನೀಡಲು ಸಜ್ಜಾಗಿದೆ.

    2019ರಲ್ಲಿ ಈ ಚಿತ್ರದ ಕಾನ್ಸೆಪ್ಟ್ ರೂಪುಗೊಂಡಿದ್ದು, ಈಗ ಬಿಡುಗಡೆಯ ಹಂತಕ್ಕೆ ತಲುಪಿದ್ದೇವೆ. ಸಾಮಾನ್ಯ ಜನರಿಗೆ ಕನೆಕ್ಟ್ ಆಗುವ ಕಥೆಯಾಗಿದ್ದು, ಹಾಡು ಮತ್ತು ಚಿತ್ರಕಥೆ ಎರಡೂ ಚೆನ್ನಾಗಿ ಮೂಡಿಬಂದಿವೆ. ನಿರ್ಮಾಪಕರಾಗಿ ಇದು ನನ್ನ ಮೊದಲ ಪ್ರಯತ್ನ ಇದಾಗಿದ್ದು, ತುಳುನಾಡಿನ ಜನರಿಂದ ಉತ್ತಮ ಪ್ರತಿಕ್ರಿಯೆ ಹಾಗೂ ಬೆಂಬಲ ಸಿಗಲಿದೆ ಎಂಬ ನಂಬಿಕೆಯಿದೆ

    — ಡೋಲ್ಫಿ ಡಿಸೋಜ, ನಿರ್ಮಾಪಕ

    ಟೈಟಲ್ ನೋಡಿದಾಗ ಇದು ಕೇವಲ ಕುಡಕರ ಸಿನಿಮಾ ಅನ್ನಿಸಬಹುದು. ಆದರೆ ಹೀರೋ ಯಾಕೆ ಕುಡಿಯುತ್ತಾನೆ, ಅದರ ಪರಿಣಾಮಗಳು ಏನು ಎಂಬುದನ್ನು ಕಾಮಿಡಿಯೊಂದಿಗೆ ಬಿಂಬಿಸಿದ್ದೇವೆ. ಎಲ್ಲ ವರ್ಗದ ಪ್ರೇಕ್ಷಕರು ನೋಡಬಹುದಾದ ಒಳ್ಳೆಯ ಕಥೆ ಇದೆ

    — ರಂಜಿತ್ ಸಿ. ಬಜಾಲ್, ನಿರ್ದೇಶಕ

    ವರದಿ: ಧನುಷ್ ಕುಲಾಲ್ ಶಕ್ತಿನಗರ

    Post Views: 177

    Related Posts

    ಮಹಿಳಾ ಐಪಿಎಸ್ ಅಧಿಕಾರಿಯ ರಹಸ್ಯ ಎಂಟ್ರಿ; ಪಬ್‌ನ ಕರಾಳ ಮುಖ ಅನಾವರಣ

    June 8, 2026

    ಆಂಬ್ಯುಲೆನ್ಸ್ ಸಿಗದೆ ಹೃದಯಾಘಾತ ರೋಗಿ ಸಾವು; ಕೊಕ್ಕಡ ಆರೋಗ್ಯ ವ್ಯವಸ್ಥೆ ವಿರುದ್ಧ ಆಕ್ರೋಶ

    June 8, 2026

    ಹಠಾತ್ ಹವಾಮಾನ ವೈಪರೀತ್ಯದ ಹೊಡೆತ: ದೆಹಲಿ ಏರ್‌ಪೋರ್ಟ್‌ನಲ್ಲಿ 3 ವಿಮಾನಗಳು ಜಖಂ

    June 8, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.