Facebook Twitter Instagram
    Sunday, March 8
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಆನ್‌ಲೈನ್ ಟ್ರೇಡಿಂಗ್ – ಹಂತಹಂತವಾಗಿ 1.25 ಕೋಟಿ ರೂಪಾಯಿ ವರ್ಗಾಯಿಸಿ ವಂಚನೆ
    ಇತ್ತೀಚಿನ ಸುದ್ದಿ

    ಮಂಗಳೂರು: ಆನ್‌ಲೈನ್ ಟ್ರೇಡಿಂಗ್ – ಹಂತಹಂತವಾಗಿ 1.25 ಕೋಟಿ ರೂಪಾಯಿ ವರ್ಗಾಯಿಸಿ ವಂಚನೆ

    October 20, 2024
    Share

    ಮಂಗಳೂರು: ಆನ್‌ಲೈನ್ ಟ್ರೇಡಿಂಗ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುವುದಾಗಿ ವಾಟ್ಸಾಪ್‌ ಚಾಟಿಂಗ್‌ನಲ್ಲಿ ಅಪರಿಚಿತರು ಹೇಳಿರುವುದನ್ನು ನಂಬಿ 1,25,67, 726 ರೂ. ಕಳೆದುಕೊಂಡಿರುವ ಕುರಿತಂತೆ ಮಂಗಳೂರಿನ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರುದಾರರ ವಾಟ್ಸಾಪ್‌ಗೆ ಆನ್‌ಲೈನ್ ಟ್ರೇಡಿಂಗ್ ಕುರಿತಂತೆ ಮೆಸೇಜ್ ಬಂದಿದ್ದು, ಮೆಸೇಜ್ ಮಾಡಿದ ವ್ಯಕ್ತಿ ಚಾಟಿಂಗ್‌ನಲ್ಲಿ ತಿಳಿಸಿದಂತೆ ಹೂಡಿಕೆ ಮಾಡಲು ಒಪ್ಪಿಕೊಂಡಿದ್ದಾರೆ. ಅನಂತರ ವಿಐಪಿ ಎಚ್2 ಶೇರ್‌ಖಾನ್ ಕ್ಯಾಪಿಟಲ್ ಎಂಬ ವಾಟ್ಸಾಪ್ ಗ್ರೂಪ್‌ ಗೆ ದೂರುದಾರರನ್ನು ಸೇರಿಸಲಾಗಿದೆ. ಬಳಿಕ ಲಿಂಕ್ ಒಂದನ್ನು ಕಳುಹಿಸಿದ್ದು, ಅದನ್ನು ಒತ್ತುವ ಮೂಲಕ ಶೇರ್‌ಖಾನ್ ಇಂಟರ್‌ನ್ಯಾಷನಲ್ ಸೆಕ್ಯೂರಿಟಿ ಫ್ಲಾಟ್‌ ಫಾರಂಗೆ ಸೇರಿಸಿದ್ದಾರೆ. ಮೊದಲಿಗೆ 2024ರ -ಸೆ.1ರಂದು 1 ಲಕ್ಷ ರೂ. ಅನ್ನು ಅವರು ತಿಳಿಸಿದಂತೆ ಅವರ ಖಾತೆಗೆ ಯುಪಿಐ ಮಾಡಿದ್ದಾರೆ. ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ದೊರೆಯುತ್ತದೆ ಎಂದು ತಿಳಿಸಿದಂತೆ ಸೆ.1ರಿಂದ 15ರ ನಡುವೆ ಒಟ್ಟು 25 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಆ ಹಣವನ್ನು ವಿತ್ ಡ್ರಾ ಮಾಡಲು ಪ್ರಯತ್ನಿಸಿದಾಗ ಅಕೌಂಟ್ ನಂಬರ್ ತಪ್ಪಾಗಿದೆ, ಪ್ರೊಟೆಕ್ಷನ್ ಮೆಕ್ಯಾನಿಸಮ್ ಆ್ಯಕ್ಟಿವೇಟ್ ಆಗಿದೆ ಪುನಃ 35 ಲಕ್ಷ ರೂ. ವರ್ಗಾವಣೆ ಮಾಡಬೇಕು ಎಂದು ಸೂಚನೆ ಬಂದಿದೆ. ಅದರಂತೆ ತಲಾ 35 ಲಕ್ಷ ರೂ. ಅನ್ನು ಎರಡು ಬಾರಿ, ಆರ್‌ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ. ಆ ಬಳಿಕವೂ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಸಾಧ್ಯವಾಗಿಲ್ಲ. ಈ ಬಗ್ಗೆ ಸ್ನೇಹಿತರಲ್ಲಿ ವಿಚಾರಿಸಿದಾಗ ಮೋಸ ಹೋಗಿರುವ ವಿಚಾರ ತಿಳಿದು ಬಂದಿದೆ. ಹೀಗೆ ಆನ್‌ಲೈನ್ ಟ್ರೇಡಿಂಗ್ ಮೂಲಕ ಹೆಚ್ಚಿನ ಲಾಭದ ಆಮಿಷ ತೋರಿಸಿ ಒಟ್ಟು 1,25,67, 726 ರೂ. ಹಣವನ್ನು ವರ್ಗಾಯಿಸಿಕೊಂಡು ವಂಚನೆ ಮಾಡಿದ್ದಾರೆ ಎಂದು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

    Post Views: 176

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.