Facebook Twitter Instagram
    Saturday, April 25
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ರೈಲಿನಿಂದ ಹೊಳೆಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ : ನೀರಿಗೆ ಹಾರಿ ಬಂಧಿಸಿದ ಪೊಲೀಸರು
    ಇತ್ತೀಚಿನ ಸುದ್ದಿ

    ರೈಲಿನಿಂದ ಹೊಳೆಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ : ನೀರಿಗೆ ಹಾರಿ ಬಂಧಿಸಿದ ಪೊಲೀಸರು

    November 12, 2024
    Share

    ಕುಂಬಳೆ: ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾಗಿ ಕಾಸರಗೋಡಿನಿಂದ ಆಲುವಾ ನ್ಯಾಯಾಲಯಕ್ಕೆ ಸಾಗಿಸುತ್ತಿದ್ದಾಗ ಆರೋಪಿ ದಾರಿ ಮಧ್ಯೆ ರೈಲಿನಿಂದ ಹೊಳೆಗೆ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ, ಈ ವೇಳೆ ಪೊಲೀಸರು ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೊಳೆಗೆ ಹಾರಿ ಆತನನ್ನು ಬಂಧಿಸಿದ ಘಟನೆ ನಡೆದಿದೆ.

    ಇಡುಕ್ಕಿ ನಿವಾಸಿ ಸನೀಶ್‌ (40) ಹೊಳೆಗೆ ಹಾರಿದ ಆರೋಪಿ. ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿ ಈತನನ್ನು ಕುಂಬಳೆ ಪೊಲೀಸರು ಬಂಧಿಸಿದ್ದರು. 

    ಈತನನ್ನು ಇಬ್ಬರು ಪೊಲೀಸರ ಭದ್ರತೆಯೊಂದಿಗೆ ಮಂಗಳೂರು-ತಿರುವನಂತಪುರ ಏರನಾಡು ಎಕ್ಸ್‌ಪ್ರೆಸ್‌ ರೈಲಿನಲ್ಲಿ ಆಲುವಾಕ್ಕೆ ಸಾಗಿಸಲಾಗುತ್ತಿತ್ತು. ರೈಲು ಶೋರ್ನೂರು ಭಾರತಪುಳದ ಸೇತುವೆ ಬಳಿ ತಲುಪಿದಾಗ ಆರೋಪಿ ತನಗೆ ಶೌಚಾಲಯಕ್ಕೆ ಹೋಗಬೇಕೆಂದು ಪೊಲೀಸರಲ್ಲಿ ತಿಳಿಸಿದ್ದಾನೆ. ಆಗ ಪೊಲೀಸರು ಆತನ ಕೈಕೋಳ ಕಳಚಿ ಶೌಚಾಲಯ ಬಳಿ ಸಾಗಿಸಲೆತ್ನಿಸಿದಾಗ ಪೊಲೀಸರ ಕೈಯಿಂದ ತಪ್ಪಿಸಿ ಸೇತುವೆಯಿಂದ ನದಿಗೆ ಹಾರಿದ್ದ. ಕೂಡಲೇ ಪೊಲೀಸರೂ ಹೊಳೆಗೆ ಹಾರಿ ಆತನನ್ನು ಬಂಧಿಸಿದರು. ರೈಲು ಸೇತುವೆಯಲ್ಲಿ ಸಾಗುವಾಗ ವೇಗವನ್ನು ಕಡಿಮೆಗೊಳಿಸಲಾಗಿತ್ತು.

    ಹೊಳೆಗೆ ಹಾರಿದ ಸನೀಶ್‌ ಪ್ರಜ್ಞೆ ತಪ್ಪಿದ್ದು, ತೃಶ್ಶೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

    Post Views: 159

    Related Posts

    ಭಾರತದ ನಕ್ಷೆಯಲ್ಲಿ ಮಹತ್ವದ ಬದಲಾವಣೆ: ರಾಜ್ಯ ರಾಜಧಾನಿಗೆ ಸಂಸತ್ತಿನ ಕಾನೂನು ಮಾನ್ಯತೆ

    April 24, 2026

    ಪಾತ್ರೆಯಲ್ಲಿ ಸಿಲುಕಿದ ಪುಟ್ಟ ಮಗು: ಪೊಲೀಸರ ಸಮಯೋಚಿತ ರಕ್ಷಣಾ ಕಾರ್ಯಕ್ಕೆ ಶ್ಲಾಘನೆ

    April 24, 2026

    ವಿದ್ಯುತ್ ಅವಘಡದಲ್ಲಿ ನವವಿವಾಹಿತ ಸೇರಿದಂತೆ ಇಬ್ಬರ ಸಾವು

    April 24, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.