Facebook Twitter Instagram
    Saturday, March 7
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಲ್ಪೆ ಸೈಂಟ್‌ಮೇರಿಸ್‌ ದ್ವೀಪಕ್ಕೆ ಬಂದಿದ್ದ ಶಾಲಾ ಬಾಲಕಿ ಅಸ್ವಸ್ಥ..!
    ಇತ್ತೀಚಿನ ಸುದ್ದಿ

    ಮಲ್ಪೆ ಸೈಂಟ್‌ಮೇರಿಸ್‌ ದ್ವೀಪಕ್ಕೆ ಬಂದಿದ್ದ ಶಾಲಾ ಬಾಲಕಿ ಅಸ್ವಸ್ಥ..!

    December 1, 2024
    Share

    ಮಲ್ಪೆ: ಸೈಂಟ್‌ಮೇರಿಸ್‌ ಐಲ್ಯಾಂಡಿಗೆ ಬಂದಿದ್ದ ಮಂಡ್ಯ ಮೂಲದ ಶಾಲಾ ವಿದ್ಯಾರ್ಥಿಗೆ ರಕ್ತದೊತ್ತಡ ಕಡಿಮೆಯಾಗಿ ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಪ್ರವಾಸಿ ಬೋಟ್‌ ನಿರ್ವಾಹಕರು ತತ್‌ಕ್ಷಣ ಸ್ಪೀಡ್‌ಬೋಟ್‌ ಮೂಲಕ ದಡ ಸೇರಿಸಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ.

    ಮಂಡ್ಯ ಜಿಲ್ಲೆ ಶಿವಳ್ಳಿ ತಾಲೂಕಿನ ಸರ್‌ ವಿಶ್ವೇಶ್ವರಯ್ಯ ಪ್ರೌಢಶಾಲೆಯ 10ನೇ ತರಗತಿಯ ಜಗದೀಶ್ವರಿ ಅಸ್ವಸ್ಥಗೊಂಡವರು. ಪ್ರವಾಸಿ ಬೋಟಿನ ನಿರ್ವಾಹಕರಾದ ಪ್ರವೀಣ್‌ ಮಲ್ಪೆ ಮತ್ತು ಶಾನ್‌ರಾಜ್‌ ಕೋಟ್ಯಾನ್‌ ಸಕಾಲದಲ್ಲಿ ನೆರವಿಗೆ ಬಂದವರು.

    ಶಾಲಾ ಆಡಳಿತ ಮಂಡಳಿ 3 ದಿನದ ಶೈಕ್ಷಣಿಕ ಪ್ರವಾಸ ಕೈಗೊಂಡಿತ್ತು. ಶನಿವಾರ ಮಲ್ಪೆ ಸೈಂಟ್‌ಮೇರಿಸ್‌ ದ್ವೀಪಕ್ಕೆ ಬಂದಿದ್ದ ವಿದ್ಯಾರ್ಥಿಗಳಲ್ಲಿ ಜಗದೀಶ್ವರಿಗೆ ಬಿಸಿಲಿನ ಝಳಕ್ಕೆ ಒಮ್ಮೆಲೆ ತಲೆತಿರುಗಿ ಬಂದು ವಾಂತಿ ಮಾಡಲು ಆರಂಭಿಸಿದಳು. ಬಳಿಕ ರಕ್ತದೊತ್ತಡವೂ ಕಡಿಮೆಯಾಗಿ ಕುಸಿದು ಬಿದ್ದಳು. ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ತಕ್ಷಣ ಅಲ್ಲೇ ಇದ್ದ ಬೋಟ್‌ ನಿರ್ವಾಹಕ ಪ್ರವೀಣ್‌ ಮಲ್ಪೆ ಅವರು ಪ್ರಾಥಮಿಕ ಚಿಕ್ಸಿತೆ ನೀಡಿ ಬಳಿಕ ಶಾನ್‌ರಾಜ್‌ ಕೋಟ್ಯಾನ್‌ ಅವರ ಸಹಕಾರದೊಂದಿಗೆ ಸ್ಪೀಡ್‌ಬೋಟ್‌ನಲ್ಲಿ ದಡ ಸೇರಿಸಿ ಆ್ಯಂಬುಲೆನ್ಸ್‌ ಮೂಲಕ ಉಡುಪಿ ಆದರ್ಶ್‌ ಆಸ್ಪತೆಗೆ ದಾಖಲಿಸಿದ್ದಾರೆ. ಅಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಗೆ ಸ್ಪಂದಿಸಿದ ಬಾಲಕಿ ಇದೀಗ ಗುಣಮುಖ ಹೊಂದಿದ್ದು, ಬಾಲಕಿಯ ಚಿಕಿತ್ಸೆಗೆ ಬೇಕಾದ ಎಲ್ಲ ವೆಚ್ಚವನ್ನು ಸೀವಾಕ್‌ ಬಳಿಯ ಪ್ರವಾಸಿ ಬೋಟಿನವರು ಭರಿಸಿದ್ದಾರೆ.

    Post Views: 209

    Related Posts

    ವಿಟ್ಲ: ಸೈಕಲ್ ನಿಂದ ಬಿದ್ದು ಬಾಲಕ ಮೃತ್ಯು!

    March 7, 2026

    ಬಂಟ್ವಾಳ: ನದಿ ದಡದಲ್ಲಿ ಆಧಾರ್ ಕಾರ್ಡ್ ಪತ್ತೆ ಪ್ರಕರಣ – ಅಂಚೆ ಇಲಾಖೆ ವಿರುದ್ಧ ಕೇಸ್‌

    March 7, 2026

    ಕಾರ್ಕಳ: ಹಲವು ವರ್ಷಗಳಿಂದ ತಲೆಮಾರಿಸಿಕೊಂಡಿದ್ದ ಆರೋಪಿ ಅರೆಸ್ಟ್

    March 7, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.