Facebook Twitter Instagram
    Monday, June 15
    • About Us
    • Contact Us
    Facebook Twitter Instagram
    Police Pathrike Karnataka
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    Police Pathrike Karnataka
    Home»ಇತ್ತೀಚಿನ ಸುದ್ದಿ»ಮಂಗಳೂರು: ಎಪಿಕೆ ಫೈಲ್ ಕಳಿಸಿ ಫ್ಲಿಪ್‌ಕಾರ್ಟ್ ಖಾತೆ ಹ್ಯಾಕ್- 1,31,000 ಹಣ ವಂಚಕ ದೆಹಲಿಯಲ್ಲಿ ಅಂದರ್
    ಇತ್ತೀಚಿನ ಸುದ್ದಿ

    ಮಂಗಳೂರು: ಎಪಿಕೆ ಫೈಲ್ ಕಳಿಸಿ ಫ್ಲಿಪ್‌ಕಾರ್ಟ್ ಖಾತೆ ಹ್ಯಾಕ್- 1,31,000 ಹಣ ವಂಚಕ ದೆಹಲಿಯಲ್ಲಿ ಅಂದರ್

    December 7, 2024
    Share

    ಮಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ಎಪಿಕೆ ಫೈಲ್‌ ಅನ್ನು ವಾಟ್ಸ್ಆ್ಯಪ್‌ಗೆ ಕಳುಹಿಸಿ ಮಂಗಳೂರಿನ ಯುವಕನೊಬ್ಬನಿಗೆ 1.31 ಲಕ್ಷ ರೂ. ವಂಚಿಸಿದ ಆರೋಪಿಯನ್ನು ಮಂಗಳೂರು ಸೆನ್ ಕ್ರೈಂ ಪೊಲೀಸರು ದೆಹಲಿಯಲ್ಲಿ ಬಂಧಿಸಿದ್ದಾರೆ. ದೆಹಲಿಯ ಮಾಳವೀಯಾ ನಗರದ ಪಂಚಶೀಲ ವಿಹಾರದ ಗೌರವ್ ಮಕ್ವಾನ್(25) ಬಂಧಿತ ಆರೋಪಿ. ಮಂಗಳೂರಿನ ಕೊಟ್ಟಾರದ ಯದುನಂದನ್ ಆಚಾರ್ಯ ಎಂಬವರ ವಾಟ್ಸ್ಆ್ಯಪ್‌ಗೆ VAHAN PARIVAHAN.apk ಫೈಲ್ ಬಂದಿತ್ತು. ಆ ಫೈಲ್ ಅನ್ನು ಡೌನ್‌ಲೋಡ್ ಮಾಡುತ್ತಿದ್ದಂತೆ ಅವರ ಫ್ಲಿಪ್‌ಕಾರ್ಟ್ ಖಾತೆ ಹ್ಯಾಕ್ ಆಗಿದೆ. ಸೈಬರ್ ವಂಚಕರು ಈ ಖಾತೆಯನ್ನು ಬಳಸಿಕೊಂಡು ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳಿಂದ 1,31,000 ರೂ. ಮೌಲ್ಯದ 2 ಮೊಬೈಲ್ ಪೋನ್ 1 ಏರ್ ಪ್ಯಾಡ್ ಹಾಗೂ ಗಿಫ್ಟ್ ವೋಚರ್ ಗಳನ್ನು ಖರೀದಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡಿದ್ದು, ಫ್ಲಿಪ್ ಕಾರ್ಟ್ ಕಂಪೆನಿಯಿಂದ ಮಾಹಿತಿಯನ್ನು ಪಡೆದುಕೊಂಡು, ಪ್ರಕರಣ ದಾಖಲಿಸಲಾಗಿತ್ತು. ತಕ್ಷಣ ಸೆನ್ ಕ್ರೈಂ ಪೊಲೀಸ್ ಠಾಣಾ ಪಿಎಸ್ಐ ಗುರಪ್ಪ ಕಾಂತಿ ಹಾಗೂ ಪಿಸಿ ತಿಪ್ಪಾರೆಡ್ಡಿಯವರು ದೆಹಲಿಗೆ ವಿಶೇಷ ಕರ್ತವ್ಯದಲ್ಲಿ ತೆರಳಿ ಆರೋಪಿ ಗೌರವ್ ಮಕ್ವಾನ್‌ನನ್ನು ಪ್ರಕರಣ ದಾಖಲಾದ 48 ಗಂಟೆಯೊಳಗೆ ಬಂಧಿಸಿದ್ದಾರೆ. ಆರೋಪಿಯಿಂದ ಪ್ರಕರಣಕ್ಕೆ ಸಂಬಂ‍ಧಿಸಿದ 2 ಅಂಡ್ರಾಯ್ಡ್ ಫೋನ್ ಸೇರಿದಂತೆ 5 ಐಫೋನ್-15, ಎರಡು ಏರ್‌ಪ್ಯಾಡ್ ಸಹಿತ ಆರೋಪಿ ಕೃತ್ಯಕ್ಕೆ ಬಳಸಿದ ಮೊಬೈಲ್ ಸೇರಿದಂತೆ ಒಟ್ಟು 4,00,000 ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

    Post Views: 383

    Related Posts

    ಪಿಕಪ್ ಪಲ್ಟಿ; ಅಕ್ರಮ ಜಾನುವಾರು ಸಾಗಾಟ ಬಯಲು – ಇಬ್ಬರ ವಿರುದ್ಧ ಪ್ರಕರಣ ದಾಖಲು

    June 15, 2026

    ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕನಿಗೆ ಹೊಸ ಬದುಕು; ಕುಟುಂಬದೊಂದಿಗೆ ಪುನರ್ಮಿಲನ

    June 15, 2026

    ಆರೋಪಿಯಿಂದಲೇ ಹಣಕ್ಕೆ ಬೇಡಿಕೆ ಇಟ್ಟ ಹೆಚ್‌ಎಎಲ್ ಪೊಲೀಸರು: ಪಿಎಸ್ಐ ಸೇರಿ ಮೂವರು ಎಸಿಬಿ ಬಲೆಗೆ

    June 15, 2026
    ನಮ್ಮ ಬಗ್ಗೆ
    ನಮ್ಮ ಬಗ್ಗೆ

    ನಮ್ಮ ' ಪೊಲೀಸ್ ಪತ್ರಿಕೆ ಕರ್ನಾಟಕ ' ಸುದ್ದಿವಾಹಿನಿಯು ಸರಕಾರದ ಎಲ್ಲಾ ಇಲಾಖೆಗಳ ನೆಚ್ಚಿನ ಸಂಬಂಧ ಹಾಗೂ ಸಹಕಾರಗಳೊಂದಿಗೆ, ಅಪರಾಧ ಸುದ್ದಿಗಳಿಗೆ ಹೆಚ್ಚಿನ ಶ್ರದ್ದೆಯನ್ನು ಕೊಡುತ್ತಾ, ಅದರೊಂದಿಗೆ ಕರಾವಳಿ ಸುದ್ದಿ, ರಾಜ್ಯ ಸುದ್ದಿ, ರಾಷ್ಟೀಯ ಸುದ್ದಿ, ಅಂತಾರಾಷ್ಟ್ರೀಯ ಸುದ್ದಿ, ರಾಜಕೀಯ, ಸಿನಿಮಾ, ಕ್ರೀಡೆ ಮತ್ತು ಅರೋಗ್ಯ ಸುದ್ದಿಗಳನ್ನು ನಿಮ್ಮ ಮುಂದಿಡುತಿದ್ದೇನೆ.

    Facebook WhatsApp
    ಇತ್ತೀಚಿನ ಸುದ್ದಿ

    ಪಿಕಪ್ ಪಲ್ಟಿ; ಅಕ್ರಮ ಜಾನುವಾರು ಸಾಗಾಟ ಬಯಲು – ಇಬ್ಬರ ವಿರುದ್ಧ ಪ್ರಕರಣ ದಾಖಲು

    June 15, 2026

    ಮಾನಸಿಕ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯುವಕನಿಗೆ ಹೊಸ ಬದುಕು; ಕುಟುಂಬದೊಂದಿಗೆ ಪುನರ್ಮಿಲನ

    June 15, 2026

    ಆರೋಪಿಯಿಂದಲೇ ಹಣಕ್ಕೆ ಬೇಡಿಕೆ ಇಟ್ಟ ಹೆಚ್‌ಎಎಲ್ ಪೊಲೀಸರು: ಪಿಎಸ್ಐ ಸೇರಿ ಮೂವರು ಎಸಿಬಿ ಬಲೆಗೆ

    June 15, 2026
    ಲಿಂಕ್ಸ್
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    Facebook WhatsApp
    • ಮುಖಪುಟ
    • ರಾಜ್ಯ ಸುದ್ದಿ
    • ರಾಷ್ಟ್ರೀಯ ಸುದ್ದಿ
    • ಅಂತಾರಾಷ್ಟ್ರೀಯ
    • ರಾಜಕೀಯ
    • ಕ್ರೈಂ ಸ್ಟೋರಿ
    • ಸಿನಿಮಾ
    • ಕ್ರೀಡೆ
    • ಆರೋಗ್ಯ
    • ಕರಾವಳಿ ಸುದ್ದಿ
    • About Us
    • Contact Us
    © 2026 policepatrikekarnataka.com | All Rights Reserved | Powered By Blueline Computers

    Type above and press Enter to search. Press Esc to cancel.