ಪುತ್ತೂರು: ಗರ್ಭಿಣಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ನಗರದ ಹೊರವಲಯದ ಚಿಕ್ಕಪುತ್ತೂರು ಎಂಬಲ್ಲಿ ರವಿವಾರ ತಡರಾತ್ರಿ ನಡೆದಿದೆ. ಚಿಕ್ಕಪುತ್ತೂರಿನ ನಿವಾಸಿ, ಚಿಂತನ್ ಎಂಬವರ ಪತ್ನಿ ರೇಷ್ಮಾ (28) ಆತ್ಮಹತ್ಯೆ ಮಾಡಿಕೊಂಡವರು. ರೇಷ್ಮಾ ಏಳು ತಿಂಗಳ ಗರ್ಭಿಣಿಯಾಗಿದ್ದರು. ಸುರತ್ಕಲ್ ಮೂಲದ ರೇಷ್ಮಾರನ್ನು ನಾಲ್ಕು ವರ್ಷಗಳ ಹಿಂದೆ ಚಿಕ್ಕಪುತ್ತೂರಿನ ಚಿಂತನ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಓರ್ವ ಪುತ್ರಿಯಿದ್ದಾಳೆ. ಚಿಂತನ್, ರೇಷ್ಮಾ ಮತ್ತು ಅವರ ಪುತ್ರಿ ಚಿಕ್ಕಪುತ್ತೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪುತ್ತೂರು ನಗರ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.
Author: main-admin
ಉಡುಪಿ : ನಗರದ ಸಮೀಪ ಉದ್ಯಾವರ ಎಂಬಲ್ಲಿ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ತೋಡಿಗೆ ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತಪಟ್ಟವರು ಉದ್ಯಾವರ ಕೇದಾರ್ ನಿವಾಸಿ ರೊನಾಲ್ಡ್ ಫೆರ್ನಾಂಡಿಸ್ (52) ಎಂದು ತಿಳಿಯಲಾಗಿದೆ. ಇವರು ಕೆಲಸ ಮುಗಿಸಿ ಮನೆ ಬಳಿ ಬರುತ್ತಿದ್ದಾಗ, ಮನೆ ಹಿಂಬದಿಯ ತೋಡಿ ಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಮೃತರು ಅವಿವಾಹಿತರು. ತಾಯಿ ಸಹೋದರರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.
ಮಂಗಳೂರು ಕಥೋಲಿಕ್ ಕೋ ಅಪರೇಟಿವ್ (ಎಮ್.ಸಿ.ಸಿ.) ಬ್ಯಾಂಕಿನ ವಾರ್ಷಿಕ ಪ್ರಗತಿ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವು ದಿನಾಂಕ 14.06.2025ರಂದು ಬ್ಯಾಂಕಿನ ಪಿ.ಎಫ್.ಎಕ್ಸ್. ಸಲ್ಡಾನ್ಹಾ ಮೆಮೊರಿಯಲ್ ಸಭಾಂಗಣದಲ್ಲಿ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಮಂಗಳೂರು ಧರ್ಮ ಪ್ರಾಂತ್ಯದ ರೊಸಾರಿಯೊ ಕಾಥೆದ್ರಾಲ್ ಚರ್ಚಿನ ರೆಕ್ಟರ್ ಹಾಗೂ ಪ್ರಧಾನ ಧರ್ಮಗುರುಗಳಾದ ವಂದನೀಯ ವಲೇರಿಯ ಡಿಸೋಜ ಇವರು ದೀಪ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದ ವಂದನೀಯ ವಲೇರಿಯ ಡಿಸೋಜ ಕಳೆದ ದಶಕದಲ್ಲಿ ಬ್ಯಾಂಕಿನ ಇತ್ತೀಚಿಗಿನ ಬೆಳವಣಿಗೆಯ ಬಗ್ಗೆ ಅಪಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅವರು ಆಡಳಿತ ಮಂಡಳಿ ಮತ್ತು ಸಿಬ್ಬಂದಿಯ ಸಮರ್ಪಣೆಯನ್ನು ಶ್ಲಾಘಿಸಿದರು ಮತ್ತು ಬಾಹ್ಯ ಯಶಸ್ಸನ್ನು ಸಾಧಿಸುವಲ್ಲಿ ಆಂತರಿಕ ಶಕ್ತಿ ಮತ್ತು ವಿಶ್ವಾಸದ ಮಹತ್ವವನ್ನು ಒತ್ತಿ ಹೇಳಿದರು, “ನೀವು ನಿಮ್ಮ ಕಾರ್ಯಕ್ಷೇತ್ರದಲ್ಲಿ ಗೆದ್ದಾಗ ಮಾತ್ರ ಯಶಸ್ಸನ್ನು ಪಡೆಯಬಹುದು” ಎಂದು ಹೇಳಿದರು. ಅಧ್ಯಕ್ಷ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ತಮ್ಮ ಅಧ್ಯಕ್ಷೀಯ…
ಕಾಸರಗೋಡು, ಜೂ. 14 : ಕಂಟೈನರ್ ಲಾರಿಯಲ್ಲಿ ಬೆಂಕಿ ಅನಾಹುತ ಉಂಟಾದ ಘಟನೆ ಕಾಸರಗೋಡು – ಕಾಞಾಂಗಾಡ್ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಪುಣೆಯಿಂದ ಕೋಜಿಕ್ಕೋಡ್‌ಗೆ ರೆಫ್ರಿಜರೇಟರ್ ಸಾಗಿಸುತ್ತಿದ್ದ ಲಾರಿಯಲ್ಲಿ ಈ ಅನಾಹುತ ನಡೆದಿದೆ. ರಾಜ್ಯ ಹೆದ್ದಾರಿಯ ಕೂವತ್ತೊಟ್ಟಿ ಎಂಬಲ್ಲಿ ಈ ಘಟನೆ ನಡೆದಿದೆ. ವಿದ್ಯುತ್ ತಂತಿ ಮೇಲ್ಭಾಗಕ್ಕೆ ತಗಲಿದ ಪರಿಣಾಮ ಬೆಂಕಿ ತಗಲಿ ರಬಹುದು ಎಂದು ಶಂಕಿಸಲಾಗಿದೆ. ಕಾಸರಗೋಡಿನಿಂದ ಆಗಮಿಸಿದ ಅಗ್ನಿ ಶಾಮಕ ದಳದ ಸಿಬಂದಿ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು.ಕಂಟೈನರ್‌ನೊಳಗಿದ್ದ ಹತ್ತಕ್ಕೂ ಅಧಿಕ ರೆಫ್ರಿಜರೇಟರ್ ಭಾಗಶಃ ಬೆಂಕಿಯಿಂದ ಹಾನಿಗೊಳಗಾಗಿದೆ. ಕಂಟೈನರ್‌ನ ಲಾಕರ್ ಮುರಿದು ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಬೆಂಕಿ ನಂದಿಸಿದ ಬಳಿಕ ರೆಫ್ರಿಜರೇಟರನ್ನು ಹೊರತೆಗೆದರೂ ಹತ್ತರಷ್ಟು ರೆಫ್ರಿಜರೇಟರ್‌ಗಳು ಹಾನಿಗೊಂಡಿದೆ. ಉಳಿದ ರೆಫ್ರಿಜರೇಟರ್‌ಗಳನ್ನು ಕಂಟೈನರ್‌ನಿಂದ ಕೆಳಗಿಸಿ ಅನಾಹುತದಿಂದ ತಪ್ಪಿಸಲಾಯಿತು.
ಕರ್ನಾಟಕ ಬ್ಯಾಂಕ್ ತನ್ನ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್ಆರ್) ಉಪಕ್ರಮದಡಿ, ಸ್ನೇಹಾಲಯ ಮನೋ-ಸಾಮಾಜಿಕ ಪುನರ್ವಸತಿ ಕೇಂದ್ರಕ್ಕೆ ಉದಾರವಾದ ಕೊಡುಗೆ ನೀಡಿ, ಮಾನವ ಘನತೆ, ಚೇತರಿಕೆ ಮತ್ತು ದುರ್ಬಲರಿಗೆ ಕಾಳಜಿಯ ತನ್ನ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಿದೆ. ತೊರೆಯಲ್ಪಟ್ಟವರಿಗೆ ಮತ್ತು ಮಾನಸಿಕವಾಗಿ ಅಸ್ವಸ್ಥರಿಗೆ ಆಶ್ರಯವಾಗಿರುವ ಸ್ನೇಹಾಲಯಕ್ಕೆ, ಕರ್ನಾಟಕ ಬ್ಯಾಂಕ್ 50 ಬೆಚ್ಚಗಿನ ಕೋಟ್ಗಳು, ಹಾಸಿಗೆಗಳು, ದಿಂಬುಗಳು ಮತ್ತು 700ಕ್ಕೂ ಅಧಿಕ ಹಾಸಿಗೆ ಹೊದಿಕೆಗಳು ಹಾಗೂ ದಿಂಬು ಕವರ್ಗಳನ್ನು ದಾನವಾಗಿ ನೀಡಿತು. ₹10.57 ಲಕ್ಷ ಮೌಲ್ಯದ ಈ ಅಮೂಲ್ಯ ಕೊಡುಗೆ, ನಿವಾಸಿಗಳಿಗೆ ಸೌಕರ್ಯ, ಆರಾಮ ಮತ್ತು ಮಾನವ ಘನತೆಯ ಭಾವನೆಯನ್ನು ಒದಗಿಸಿ, ಅವರ ಚೇತರಿಕೆ ಮತ್ತು ಪರಿವರ್ತನೆಯ ಪಯಣವನ್ನು ಮತ್ತಷ್ಟು ಸಮೃದ್ಧಗೊಳಿಸಿತು. ಈ ಭಾವನಾತ್ಮಕ ಕಾರ್ಯಕ್ರಮವು ಜೂನ್ 12, 2025ರಂದು ಸ್ನೇಹಾಲಯದ ವೃದ್ಧರ ವಿಭಾಗದಲ್ಲಿ ನಡೆಯಿತು. ಕರ್ನಾಟಕ ಬ್ಯಾಂಕಿನ ಸಹಾಯಕ ಜನರಲ್ ಮ್ಯಾನೇಜರ್ ಶ್ರೀ ವಿಶ್ವನಾಥ್ ಎಸ್.ಆರ್. ಮತ್ತು ಉಚ್ಚಿಲ ಶಾಖೆಯ ಮ್ಯಾನೇಜರ್ ಶ್ರೀ ಶಾಮ್ ಕುಮಾರ್ ಉಪಸ್ಥಿತರಿದ್ದರು. ಸ್ನೇಹಾಲಯದ ಚಾಪ್ಲಿನ್ ವ. ಫಾದರ್ ಸಿರಿಲ್…
ಉಡುಪಿ, ಜೂನ್ 13 : ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ-ಮಲ್ಪೆ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ಮಳೆಯಿಂದಾಗಿ ಮತ್ತು ಭಾರಿ ವಾಹನಗಳ ಓಡಾಟದಿಂದ ಅಲ್ಲಲ್ಲಿ ರಸ್ತೆ ಬದಿಯಲ್ಲಿ ಭೂಕುಸಿತ ಆಗುವ ಸಂಭವ ಇರುವ ಹಿನ್ನೆಲೆ, ಸಾರ್ವಜನಿಕ ಹಿತದೃಷ್ಠಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ಕಲಂ 221 (ಎ) (2) ಮತ್ತು (5) ರನ್ವಯ, ರಾಷ್ಟ್ರೀಯ ಹೆದ್ದಾರಿ 169 ಎ ಆಗುಂಬೆ ಘಾಟಿಯ ಮೂಲಕ ಜೂನ್ 15 ರಿಂದ ಸೆಪ್ಟಂಬರ್ 30 ರ ವರೆಗೆ ಲಘು ವಾಹನ ಸಂಚಾರಕ್ಕೆ ಮಾತ್ರ ಅನುವು ಮಾಡಿ, ಭಾರಿ ವಾಹನ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ. ಉಡುಪಿಯಿಂದ ತೀರ್ಥಹಳ್ಳಿಗೆ ಸಂಚರಿಸುವ ಭಾರಿ ವಾಹನಗಳು ಬದಲಿ ಮಾರ್ಗವಾಗಿ ಉಡುಪಿ-ಕುಂದಾಪುರ-ಸಿದ್ಧಾಪುರ-ಮಾಸ್ತಿಕಟ್ಟೆ-ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.
ಮಂಗಳೂರು ಜೂನ್ 14: ಗುಜರಿ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಗುಜರಿ ಅಂಗಡಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ನಗರದ ಹಂಪನಕಟ್ಟೆಯ ಯುನಿವರ್ಸಿಟಿ ಕಾಲೇಜ್ ಮುಂಭಾಗ ಗುಜಿರಿ ಅಂಗಡಿ ಬಳಿ ಇಂದು ಬೆಳಿಗ್ಗೆ 4 ಘಂಟೆ ಸುಮಾರಿಗೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿ ಕೊಂಡಿದ್ದು, ಅದರ ಪಕ್ಕದಲ್ಲಿರುವ ಅಂಗಡಿಗೂ ಬೆಂಕಿ ಆವರಿಸಿ ಕೊಂಡಿದೆ. ಬಾರಿ ದೊಡ್ಡ ಪ್ರಮಾಣದಲ್ಲಿ ಬೆಂಕಿಯಿಂದಾಗಿ ಬಾರಿ ಪ್ರಮಾಣದ ಸೊತ್ತು ಹಾನಿಯಾಗಿದೆ. ಬೆಂಕಿ ನಂದಿಸುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿಗಳು ಬೆಂಕಿ ಆರಿಸುವಲ್ಲಿ ಹರಸಾಹಸ ಪಡಬೇಕಾಯಿತು. ಮೇಲ್ನೋಟಕ್ಕೆ ಗುಜಿರಿ ಅಂಗಡಿಯಲ್ಲಿ ಶಾರ್ಟ್ ಸಕ್ಯೂಟ್ ನಿಂದಾಗಿ ಅನಾಹುತ ನಡೆದಿರಬಹುದು ಎಂದು ಹೇಳಲಾಗಿದೆ.
ಬ್ಯಾಂಕಾಕ್,ಜೂ. 12ಬಾಂಬ್ ಬೆದರಿಕೆ ಬಂದ ಹಿನ್ನೆಲೆ ಥೈಲ್ಯಾಂಡ್ ನಲ್ಲಿ ಮತ್ತೊಂದು ‘ಏರ್ ಇಂಡಿಯಾ ವಿಮಾನ’ ತುರ್ತು ಭೂಸ್ಪರ್ಶ ಮಾಡಿದೆ. ಥಾಯ್ಲೆಂಡ್ನ ಫುಕೆಟ್ ದ್ವೀಪದಿಂದ ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ನಂತರ ಶುಕ್ರವಾರ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಫುಕೆಟ್ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ. ತುರ್ತು ಯೋಜನೆಗಳಿಗೆ ಅನುಗುಣವಾಗಿ, ಥೈಲ್ಯಾಂಡ್ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಾಥಮಿಕ ಶೋಧದ ನಂತರ ಸಂಬಂಧಪಟ್ಟ ಏರ್ ಇಂಡಿಯಾ ವಿಮಾನದೊಳಗೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ ಎಂದು ನಂತರ ವರದಿಯಾಗಿದೆ. ವಿಮಾನದಲ್ಲಿ 156 ಪ್ರಯಾಣಿಕರಿದ್ದರು ಮತ್ತು ವಿಮಾನದಲ್ಲಿ ಬಾಂಬ್ ಬೆದರಿಕೆ ಬಂದಿದೆ ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಶುಕ್ರವಾರ ಬೆಳಿಗ್ಗೆ 9:30 ಕ್ಕೆ (0230) ಫುಕೆಟ್ ವಿಮಾನ ನಿಲ್ದಾಣದಿಂದ ಭಾರತದ ರಾಜಧಾನಿಗೆ ವಿಮಾನವು ಹೊರಟಿತು, ಆದರೆ ಅಂಡಮಾನ್ ಸಮುದ್ರದ ಸುತ್ತಲೂ ವಿಶಾಲವಾದ ಸುತ್ತು ಹಾಕಿ ಥಾಯ್ ದ್ವೀಪದಲ್ಲಿ ಮತ್ತೆ ಇಳಿಯಿತು ಎಂದು ಫ್ಲೈಟ್ ಟ್ರ್ಯಾಕರ್ ಫ್ಲೈಟ್ರಾಡರ್ 24…
ಬೆಂಗಳೂರು, ಜೂ. 13: ಹೋಟೆಲ್ ರೂಮ್‌ನಲ್ಲಿ ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿದ್ದ ಆರೋಪಿಯನ್ನು ಕಮರ್ಷಿಯಲ್ ಸ್ಟ್ರೀಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕ್ರಿಷ್ ಮಾಲಿ (23) ಬಂಧಿತ ಆರೋಪಿ.ಟಸ್ಕರ್ ಟೌನ್‌ನಲ್ಲಿರುವ ಹೋಟೆಲ್‌ನಲ್ಲಿ ಜೂನ್ 1ರಂದು ರೂಮ್ ಬುಕ್ ಮಾಡಿದ್ದ ಆರೋಪಿ, ಖೋಟಾ ನೋಟುಗಳನ್ನು ಪ್ರಿಂಟ್ ಮಾಡಿದ್ದ. ಅಲ್ಲದೇ ಜೂನ್ 7ರಂದು ಹೋಟೆಲ್‌ನಿಂದ ಚೆಕ್ ಔಟ್ ಆಗುವಾಗ ನಕಲಿ ನೋಟುಗಳ ಮೂಲಕ ಬಿಲ್ ಪಾವತಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಟೆಕ್ಸ್ ಟೈಲ್ಸ್ ಉದ್ಯಮಿಯೊಬ್ಬರ ಮಗನಾಗಿರುವ ಕ್ರಿಷ್ ಮಾಲಿ, ಮನೆಯಲ್ಲಿ ಕ್ಷುಲ್ಲಕ ವಿಚಾರಕ್ಕೆ ಜಗಳ ಮಾಡಿಕೊಂಡು ಆನ್‌ಲೈನ್ ಮೂಲಕ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದ. ತನ್ನ ಬಳಿಯಿರುವ ಹಣ ಎಷ್ಟು ದಿನಗಳ ಕಾಲ ಸಾಲಬಹುದು ಎಂದು ಯೋಚಿಸಿದ್ದ ಆರೋಪಿ, ಅದಕ್ಕಾಗಿ ತಾನೇ ಖೋಟಾ ನೋಟುಗಳನ್ನು ಪ್ರಿಂಟ್ ಮಾಡಲು ಯೋಚಿಸಿದ್ದ.ಬ್ಯಾಗ್‌ನಲ್ಲಿ ಪ್ರಿಂಟರ್, ಸ್ಕ್ಯಾನರ್‌ಗಳನ್ನು ತಂದಿದ್ದ ಆರೋಪಿ ಹೋಟೆಲ್‌ನಲ್ಲಿ ಕುಳಿತೇ 500 ರೂ. ಮುಖಬೆಲೆಯ ನಕಲಿ ನೋಟುಗಳನ್ನು ಕಲರ್ ಜೆರಾಕ್ಸ್ ಮಾಡಿದ್ದ. ಬಳಿಕ ಜೂನ್ 7ರಂದು ಮಧ್ಯಾಹ್ನ ಹೋಟೆಲ್‌ನಿಂದ ಚೆಕ್ ಔಟ್…
ಉಳ್ಳಾಲ ಜೂನ್ 13: ಅಪಾರ್ಟ್ ಮೆಂಟ್ ಒಂದರ 12ನೇ ಮಹಡಿಯಿಂದ ಆಕಸ್ಮಿಕವಾಗಿ ಬಿದ್ದು ಬಾಲಕಿಯೊಬ್ಬಳು ಸಾವನಪ್ಪಿದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕುತ್ತಾರ್ ನಲ್ಲಿರುವ ಸಿಲಿಕೋನಿಯಾ ವಸತಿ ಸಂಕೀರ್ಣದಲ್ಲಿ ಜೂನ್ 12ರ ಗುರುವಾರ ತಡರಾತ್ರಿ ಸಂಭವಿಸಿದೆ. ಮೃತ ಬಾಲಕಿಯನ್ನು ಯೆನೆಪೋಯ ವೈದ್ಯಕೀಯ ಆಸ್ಪತ್ರೆಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ವೈದ್ಯ ದಂಪತಿ ಡಾ. ಮಮ್ತಾಝ್ ಅಹ್ಮದ್ ಮತ್ತು ಡಾ. ಕಮ್ರಾ ಜ್ ದಂಪತಿ ಪುತ್ರಿ ಹಿಬಾ ಐಮನ್ (15) ಎಂದು ಗುರುತಿಸಲಾಗಿದೆ. 18ನೇ ಮಹಡಿ ಹೊಂದಿರುವ ಸಿಲಿಕೋನಿಯಾ ವಸತಿ ಸಂಕೀರ್ಣದ 12 ಮಹಡಿಯಲ್ಲಿ ವೈದ್ಯ ದಂಪತಿ ವಾಸವಿದ್ದರು. ರಾತ್ರಿ ವೈದ್ಯ ದಂಪತಿಗಳಿಬ್ಬರು ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಯಲ್ಲಿ ಕಾರ್ಯನಿರ್ವಹಿಸುತಿದ್ದು, ಹಿಬಾ ಬಾಲ್ಕನಿಯಲ್ಲಿ ಸ್ಟೂಲ್ ಇಟ್ಟು ಬೆಡ್ ಶೀಟ್ ಒಣಗಿಸಲು ಯತ್ನಿಸುತ್ತಿದ್ದಾಗ ಮೇಲಿಂದ ಕೆಳ ಬಿದ್ದು ಸಾವನ್ನಪ್ಪಿದ್ದಾಳೆ. ಯೆನೆಪೋಯ ಶಾಲೆಯಲ್ಲಿ 10ನೇ ತರಗತಿಯಲ್ಲಿ ಹಿಬಾ ವಿದ್ಯಾರ್ಥಿನಿಯಾಗಿದ್ದಳು. ತಂದೆ, ತಾಯಿ, ಸಹೋದರನನ್ನು ಅಗಲಿದ್ದಾಳೆ. ಉಳ್ಳಾಲ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







