Author: main-admin

ಕಡಬ ಸಮೀಪ ಯುವತಿಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಕಾಣಿಯೂರಿನಲ್ಲಿ ನಡೆದಿದೆ. ಮೃತಪಟ್ಟವರು ಕಾಣಿಯೂರು ಗ್ರಾಮದ ಅನಿಲ ಮನೆ ಪದ್ಮಯ್ಯ ಗೌಡ ಅವರ ಪುತ್ರಿ ದಿವ್ಯಾ ಶ್ರೀ(26) ಎಂದು ಗುರುತಿಸಲಾಗಿದೆ. ತಮ್ಮ ಮನೆಯ ಅಡುಗೆ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದು, ತಕ್ಷಣ ಗಮನಿಸಿದ ಮನೆಯವರು ಆಸ್ಪತ್ರೆಗೆ ದಾಖಲಿಸಿದರೂ ಯುವತಿ ಮೃತಪಟ್ಟರೆನ್ನಲಾಗಿದೆ. ಮೇಲ್ನೋಟಕ್ಕೆ ಅಪಪ್ರಚಾರಕ್ಕೆ ಮನನೊಂದು ಯುವತಿ ಜೀವಾಂತ್ಯ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಯುವತಿಯ ತಂದೆ ಪದ್ಮಯ್ಯ ಗೌಡ ಅನಿಲ ಎಂಬವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Read More

ಕಡಬ: ದ್ವಿತೀಯ ಪಿಯುಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಮೂವರು ವಿಧ್ಯಾರ್ಥಿನಿಯರ ಮೇಲೆ ಆ್ಯಸಿಡ್ ದಾಳಿ ನಡೆಸಿದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಕೇರಳದ ಮಲಪ್ಪುರಂ ಜಿಲ್ಲೆಯ ನೆಲಂಬೂರು ತಾಲೂಕಿನ ಎಂ.ಬಿ.ಎ. ವಿದ್ಯಾರ್ಥಿ ಅಬೀನ್ (23ವ) ಎಂದು ಗುರುತಿಸಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯುತ್ತಿದ್ದು, ಕಾಲೇಜಿಗೆ ಬೇರೆ ಬೇರೆ ಕಾಲೇಜುಗಳಿಂದ ವಿದ್ಯಾರ್ಥಿಗಳು ಬಂದಿದ್ದು ಈತ ಕೂಡ ಕಾಲೇಜಿಗೆ ಸಮವಸ್ತ್ರದಲ್ಲಿ ಬಂದು ಕಾದು ಕುಳಿತ್ತಿದ್ದ, ಇದೇ ವೇಳೆ ಅಲೀನಾ ಸಿಬಿ ಎಂಬಾಕೆ ಮೇಲೆ ಆ್ಯಸಿಡ್ ದಾಳಿ ಮಾಡಿದ್ದಾನೆ. ಆಕೆಯ ಪಕ್ಕದಲ್ಲೇ ಕುಳಿತಿದ್ದ ಅರ್ಚನಾ ಮತ್ತು ಅಮೃತ ಆ್ಯಸಿಡ್ ದಾಳಿಗೆ ಒಳಗಾಗಿದ್ದಾರೆ. ರಾತ್ರಿಯೇ ಕೇರಳದಿಂದ ಬಂದಿದ್ದ ಯುವಕ ದೂರದ ಸಂಬಂಧಿ ಅಲೀನಾ ಸಿಬಿ ಎಂಬಾಕೆಯನ್ನು ಎರಡು ವರ್ಷದಿಂದ ಪ್ರೀತಿಸುತ್ತಿದ್ದ ಎನ್ನಲಾಗಿದ್ದು, ಪ್ರೀತಿ ನಿರಾಕರಿಸಿದ ಹಿನ್ನಲೆಯಲ್ಲಿ ಈ ಆ್ಯಸಿಡ್ ದಾಳಿ ಮಾಡಿದ್ದಾನೆ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಡಿ ವೈ ಎಸ್‌ ಪಿ ಅರುಣ್ ನಾಗೇಗೌಡ, ಪುತ್ತೂರು ಉಪ ವಿಭಾಗಾಧಿಕಾರಿ ಜೊಬಿನ್ ಮಹಾಪಾತ್ರ ಸ್ಥಳಕ್ಕೆ ಭೇಟಿ…

Read More

ಕಡಬ: ಕಾಲೇಜು ಆವರಣದಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರ ಮೇಲೆ ಅಪರಿಚಿತ ವ್ಯಕ್ತಿಯಿಂದ ಆಯಸಿಡ್‌ ದಾಳಿಯಾಗಿರುವ ಘಟನೆ ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು(ಮಾ.04) ನಡೆದಿದೆ. ಘಟನೆಯಲ್ಲಿ ಅಲೀನಾ ಸಿಬಿ, ಅರ್ಚನಾ, ಅಮೃತ ಎಂಬ ವಿದ್ಯಾರ್ಥಿನಿಯರ ಮೇಲೆ ದಾಳಿ ನಡೆದಿದ್ದು, ಮೂವರು ವಿದ್ಯಾರ್ಥಿನಿಯರ ಮುಖಕ್ಕೆ ಗಂಭೀರ ಗಾಯವಾಗಿದೆ. ಕಡಬ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಹೆಚ್ಚಿನ ಚಿಕಿತ್ಸೆ ಗಾಗಿ ಮಂಗಳೂರಿಗೆ ರವಾನೆಗೆ ಸಿದ್ದತೆ ಮಾಡಿಕೊಂಡಿದ್ದಾರೆ. ವಿದ್ಯಾರ್ಥಿನಿಯರು ಎಲ್ಲರೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿದ್ದಾರೆ. ವಿದ್ಯಾರ್ಥಿಗಳು ಶಾಲಾ ವರಾಂಡದಲ್ಲಿ ಪರೀಕ್ಷಾ ತಯಾರಿ ನಡೆಸುವ ವೇಳೆ ಘಟನೆ ನಡೆದಿದೆ. ಇನ್ನು ಆರೋಪಿ ಕೇರಳದಾತ ಎಂಬುದಾಗಿ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.

Read More

ಬಂಟ್ವಾಳ: ಕಾರು ಅಪಘಾತ ಸಂಭವಿಸಿದ ಪ್ರಕರಣವೊಂದರಲ್ಲಿ ಕಾರು ಚಾಲಕ ತಂದೆಯ ಮೇಲೆ ಮಗನೇ ದೂರು ನೀಡಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.ಬೆಳ್ತಂಗಡಿ ತಾಲೂಕಿನ ಬಂದಾರು ನರಮಜೆ ನಿವಾಸಿ ಹನೀಫ್ ಎಂಬವರು ಆತನ ತಂದೆಯಾದ ಹಮೀದ್ ಎಂಬವರ ಮೇಲೆ ಮೆಲ್ಕಾರ್ ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.ಘಟನೆಯ ವಿವರ:ಹಮೀದ್ ಅವರು ಬೆಳ್ತಂಗಡಿಯಿಂದ ಉಳ್ಳಾಲ ದರ್ಗಾಕ್ಕೆ ಹೋಗುವರಿದ್ದು, ಕಾರಿನಲ್ಲಿ ಪತ್ನಿ ಜಮೀಳಾ, ಮಕ್ಕಳಾದ ಮೊಹಮ್ಮದ್ ಅನಿಝ್, ಹಮೀದ್, ಅಜ್ಮಿಯಾ ಹಾಗೂ ಮಗಳ ಮಗ ಮೊಹಮ್ಮದ್ ಝಯಾನ್ಅವರನ್ನು ಕರೆದುಕೊಂಡು ಹೋಗುತ್ತಿದ್ದ ವೇಳೆ ಸಜೀಪ ನಡು ಗ್ರಾಮದ ಕೋಟೆ ಕಣಿ ಎಂಬಲ್ಲಿ ಕಾರು ಸ್ಕಿಡ್ ಆಗಿ ರಸ್ತೆ ಬದಿಯ ಗುಂಡಿಗೆ ಬಿದ್ದಿದೆ .ಘಟನೆಯಿಂದ ಕಾರಿನಲ್ಲಿದ್ದ ಎಲ್ಲರಿಗೂ ಗಾಯವಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಆದರೆ ಹಮೀದ್ ಅವರು ಕಾರನ್ನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿದ ಕಾರಣ ಕಾರು ಗುಂಡಿಗೆ ಬಿದ್ದಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ.ಘಟನಾ ಸ್ಥಳಕ್ಕೆ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

ಮಂಗಳೂರಿನ ಹೊರವಲಯದ ಪಣಂಬೂರು ಬೀಚ್‌ ನಲ್ಲಿ ಮೂವರು ಯುವಕರು ನೀರುಪಾಲಾಗಿರುವಂತಹ ಘಟನೆ ನಡೆದಿದೆ. ಮೃತರನ್ನು ಮಿಲನ್(20), ಲಿಖಿತ್(18), ನಾಗರಾಜ್(24) ಎಂದು ತಿಳಿದುಬಂದಿದೆ. ಮಿಲನ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ , ಲಿಖಿತ್ ಕೈಕಂಬದ ಖಾಸಗಿ ಕಾಲೇಜಿನ ಪಿಯುಸಿ ವಿದ್ಯಾರ್ಥಿ ಹಾಗೂ ನಾಗರಾಜ್ ಕಂಪನಿಯೊಂದರಲ್ಲಿ ಸೂಪರ್‌ವೈಸರ್ ಆಗಿದ್ದ ಎನ್ನಲಾಗಿದೆ. ಶೋಧ ಕಾರ್ಯ ನಡೆಯುತ್ತಿದ್ದು, ಪಣಂಬೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಉಡುಪಿ: ವೈಯಕ್ತಿಕ ದ್ವೇಷಕ್ಕೆ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಮಾಸುವ ಮುನ್ನವೇ ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಭೀಕರ ಕೃತ್ಯ ನಡೆದಿದೆ. ಮಾರ್ಚ್ 02ರ​​ ಶನಿವಾರ ರಾತ್ರಿ ನಡೆದ ಘಟನೆಗೆ ಉಡುಪಿ ಜಿಲ್ಲೆಯ ಜನ ಬೆಚ್ಚಿಬಿದ್ದಿದ್ದಾರೆ. ಮನೆಗೆ ನುಗ್ಗಿ ಯುವಕನನ್ನು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ಬ್ರಹ್ಮಾವರ ತಾಲೂಕಿನ ಹನೆಹಳ್ಳಿಯಲ್ಲಿ ನಡೆದಿದೆ. ಕೃಷ್ಣ (36) ಕೊಲೆಯಾದ ಯುವಕ ಎಂದು ಗುರುತಿಸಲಾಗಿದೆ. ಹನೆಹಳ್ಳಿಯಲ್ಲಿ ಮೃತ ಕೃಷ್ಣ ಮನೆಯಲ್ಲಿ ಏಕಾಂಗಿಯಾಗಿ ವಾಸವಾಗಿದ್ದನು ಆತ ಮಣಿಪಾಲದಲ್ಲಿ ಕೆಲಸ ಮಾಡುತ್ತಿದ್ದನು ಎನ್ನುವ ಪ್ರಾಥಮಿಕ ಮಾಹಿತಿಯನ್ನು ಸ್ಥಳೀಯ ನಿವಾಸಿಗಳು ನೀಡಿದ್ದಾರೆ. ಕೃಷ್ಣ ಎಂದಿನಂತೆ ಶನಿವಾರ ರಾತ್ರಿ ಮನೆಗೆ ಬಂದು ಊಟ ಮಾಡುವಾಗ ಏಕಾಏಕಿ ನುಗ್ಗಿದ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಶನಿವಾರ ರಾತ್ರಿ 9:30ರ ಸುಮಾರಿಗೆ ಫೈರಿಂಗ್ ಶಬ್ದ ಕೇಳಿ ಬಂದಿದೆ. ನಾವು ಮೊದಲು ಪಟಾಕಿಯ ಶಬ್ದವೆಂದು ಸುಮ್ಮನಾದೆವು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಇಂದು(ಮಾರ್ಚ್​​ 03) ಕೃಷ್ಣ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ. ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ…

Read More

ಪುತ್ತೂರು : ನಾಪತ್ತೆಯಾಗಿದ್ದ ಪಿಎಚ್.ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ವಿದೇಶಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದ್ದು ಪೊಲೀಸ್ ಮೂಲಗಳು ಈ ವಿಷಯವನ್ನು ಧೃಡಿಕರಿಸಿವೆ. ದಕ್ಷಿಣ ಕನ್ನಡ ಪುತ್ತೂರಿನ ಪುರುಷರಕಟ್ಟೆ ನಿವಾಸಿ ಚೈತ್ರಾ ಹೆಬ್ಬಾರ್ ಬಂಟ್ವಾಳ ತಾಲೂಕಿನ ನೇರಳಕಟ್ಟೆ ನಿವಾಸಿ ಶಾರೂಕ್ ಶೇಖ್ ಸ್ನೇಹಿತನ ನೆರವಿನಲ್ಲಿ ವಿದೇಶಕ್ಕೆ ವಿಸಿಟಿಂಗ್ ವೀಸಾದಲ್ಲಿ ಚೈತ್ರಾ ಹೆಬ್ಬಾರ್ ಹಾರಿದ್ದಾಳೆ ಎಂದು ತಿಳಿದು ಬಂದಿದೆ. ಮಂಗಳೂರಿನ ಉಳ್ಳಾಲ ಕೋಟೆಕಾರು ಮಾಡೂರಿನ ಪಿಜಿಯಿಂದ ಫೆ.17 ಕ್ಕೆ ಪಿಹೆಚ್‌ಡಿ ವ್ಯಾಸಆಂಗ ಮಾಡುತ್ತಿದ್ದ ಚೈತ್ರಾ ಏಕಾಎಕಿ ನಾಪತ್ತೆಯಾಗಿದ್ದಳು. ಫೆ.18 ಕ್ಕೆ ಶಾರೂಕ್ ಶೇಖ್ ಕೂಡಾ ನಾಪತ್ತೆಯಾಗಿದ್ದು ಬಳಿಕ ಇವರು ಬೆಂಗಳೂರಿಗೆ ತೆರಳಿದ್ದರು. ಅಲ್ಲಿಂದ ಹಿಮಾಚಲ ಪ್ರದೇಶದ ಮನಾಲಿಗೆ ತೆರಳಿದ್ದರು ಅಲ್ಲಿಂದ ಬಳಿಕ ದೆಹಲಿ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ಚೈತ್ರಾ ಮಾತ್ರ ಹಾರಿದ್ದಾಳೆ. ಚೈತ್ರಾ‌ ವಿದೇಶಕ್ಕೆ ಹಾರಿದ ಬಳಿಕ ಶಾರೂಕ್ ಶೇಖ್ ನನ್ನು ಪೊಲೀಸರು ಪತ್ತೆ ಹಚ್ಚಿವಿಚಾರಣೆಗೆಂದು ಉಳ್ಳಾಲ ಪೋಲೀಸ್‌ ಠಾಣೆಗೆ ಕರೆ ತಂದಿದ್ದರು. ಆದ್ರೆ ಚೈತ್ರಾ ಶಾರೂಕ್ ಜೊತೆ ಇದ್ದ ಎನ್ನುವುದಕ್ಕೆ ಯಾವುದೇ…

Read More

ಬೆಳ್ತಂಗಡಿ ಸಮೀಪ ಕೊಕ್ಕಡದಲ್ಲಿ ನೀರಿನ ಟ್ಯಾಂಕರ್‌ ಪಲ್ಟಿಯಾಗಿ ಕಾರ್ಮಿಕ, ಹಾವೇರಿ ನಿವಾಸಿ ಸುರೇಶ್‌ ಮಲ್ಲಪ್ಪ ಹೊಸಮನಿ ಮೃತಪಟ್ಟ ಘಟನೆ ನಡೆದಿದೆ. ಕೊಕ್ಕಡ ಗ್ರಾಮದ ಮೈಪಾಳದಲ್ಲಿ ವೆಂಟೆಡ್‌ ಡ್ಯಾಮಿನ ಕಾಮಗಾರಿ ನಡೆಯುತ್ತಿದೆ. ನೀರು ತುಂಬಿಕೊಂಡು ಬರುತ್ತಿದ್ದಾಗ ಚಾಲಕ ಸುರೇಶ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮವಾಗಿ ಟ್ಯಾಂಕರ್‌ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.ಟ್ಯಾಂಕರ್‌ನಡಿಯಲ್ಲಿ ಸಿಲುಕಿದ ಸುರೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಗ್ಗೆ ಮಂಜಪ್ಪ ಅವರು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read More

ಬೆಳ್ತಂಗಡಿ ಸಮೀಪ ಬಸ್‌ ಮತ್ತು ಬೈಕ್‌ ನಡುವೆ ನಡೆದ ಅಪಘಾತದಲ್ಲಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮಂಗಳೂರಿನ ಕಂಕನಾಡಿ ಸಮೀಪ ಸಂಭವಿಸಿದೆ. ಮೃತಪಟ್ಟ ವಿದ್ಯಾರ್ಥಿ ಕಕ್ಕಿಂಜೆ ಸಮೀಪದ ಚಾರ್ಮಾಡಿ ಜಲಾಲಿಯಾ ನಗರದ ನಿವಾಸಿ, ವಹೀದಾ ಅವರ ಪುತ್ರ ಮಂಗಳೂರಿನ ಯೇನಪೊಯ ಕಾಲೇಜಿನ ವಿಧ್ಯಾರ್ಥಿ ಸಿನಾನ್‌ (21) ಎಂದು ತಿಳಿದು ಬಂದಿದೆ. ಬಡಕುಟುಂಬದ ಸಿನಾನ್‌ ಪಾರ್ಟ್‌ ಟೈಮ್‌ ಆಗಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದರು. ತನ್ನ ಕುಟುಂಬಕ್ಕೆ ಆಧಾರಸ್ತಂಭವಾಗಿದ್ದ ಅವರು, ವಿದ್ಯಾಭ್ಯಾಸವನ್ನು ತನ್ನ ಖರ್ಚಿನಿಂದಲೇ ನಿಭಾಯಿಸುತ್ತಿದ್ದರು. ಇದೇ ರೀತಿ ರಾತ್ರಿ ವೇಳೆ ಫುಡ್‌ ಡೆಲಿವರಿ ಮಾಡುತ್ತಿದ್ದಾಗ ವಾಹನ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಬೈಕನ್ನು ಓವರ್‌ ಟೇಕ್‌ ಮಾಡುವ ಭರದಲ್ಲಿ ಬಸ್‌ ಬೈಕಿನ ಹ್ಯಾಂಡಲ್‌ಗೆ ತಾಗಿದೆ. ಪರಿಣಾಮ ಬೈಕ್‌ ಸವಾರ ಬಸ್ಸಿನಡಿಗೆ ಬಿದ್ದು, ದಾರುಣವಾಗಿ ಮೃತಪಟ್ಟಿದ್ದಾರೆ. ಮೃತರು ತಂದೆ, ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

Read More

 ವಿಟ್ಲ ಮನೆಲಾ ಚರ್ಚ್‌ ವ್ಯಾಪ್ತಿಯಲ್ಲಿ ವೃದ್ಧ ದಂಪತಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಚರ್ಚ್ ಪಾದ್ರಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ ಆದೇಶ ಹೊರಡಿಸಿದೆ. ಘಟನೆಯ ಆರೋಪಿಯಾಗಿರುವ ಮನೆಲಾ ಚರ್ಚ್ ಧರ್ಮಗುರು ಫಾ. ನೆಲ್ಸನ್ ಓಲಿವೆರಾ ಅವರ ಚರ್ಚಿನ ಧಾರ್ಮಿಕ ಕರ್ತವ್ಯಗಳಿಗೆ ಬೇರೋಬ್ಬ ಧರ್ಮಗುರುವನ್ನು ನೇಮಕ ಮಾಡಲಾಗಿದೆ. ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ ಆಡಳಿತ ಹಲ್ಲೆ ಬಗ್ಗೆ ಕಾನೂನಿನಡಿ ಪ್ರಕರಣ ದಾಖಲಾಗಿದ್ದು ಕಾನೂನು ಒಂದು ಕಡೆ ತನಿಖೆ ನಡೆಸುತ್ತಿದ್ದರೆ ಧರ್ಮ ಪ್ರಾಂತ ಕೂಡ ತನ್ನ ಆಂತರಿಕ ತನಿಖೆಯನ್ನು ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.

Read More