Author: main-admin

ಮಂಗಳೂರು: ನಗರದ ದಕ್ಷಿಣ ಉಪವಿಭಾಗದ ಆ್ಯಂಟಿ ಡ್ರಗ್‌ ಟೀಮ್‌ನವರು ನಿಷೇಧಿತ ಎಂಡಿಎಂಎಯನ್ನು ಪೂರೈಕೆ ಮಾಡುತ್ತಿದ್ದ ಪ್ರಮುಖ ಆರೋಪಿಯನ್ನು ಕೊಣಾಜೆ ಪೊಲೀಸ್‌ ಠಾಣಾ ವ್ಯಾಪ್ತಿಯ ಮುಡಿಪುವಿನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬೆಳ್ತಂಗಡಿ ತಾಲೂಕು ಇಂದಬೆಟ್ಟು ಗ್ರಾಮದ ಮೊಹಮ್ಮದ್‌ ಅಲ್ಫಾಝ್ (24) ಎಂದು ಗುರುತಿಸಲಾಗಿದೆ. ಆತನಿಂದ 53 ಗ್ರಾಂ ಎಂಡಿಎಂಎ ಮಾದಕ ವಸ್ತು, ಸ್ಮೋಕ್‌ ಪಾಟ್‌, ಸಾಗಾಟಕ್ಕೆ ಬಳಸಿದ್ದ ಕಾರು, 2 ಮೊಬೈಲ್‌ ಸಹಿತ ಒಟ್ಟು 7,76,980 ಮೌಲ್ಯದ ಸೊತ್ತನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಣಾಜೆ ಪೊಲೀಸರು ಮುಡಿಪುವಿನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮಾಹಿತಿ ಲಭ್ಯವಾಗಿದ್ದು ಕೂಡಲೇ ಕಾರ್ಯಷಕಿತರಾದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Read More

ಉಪ್ಪಿನಂಗಡಿ: ಮಾದಕ ವಸ್ತು ಸೇವನೆ ಮತ್ತು ಮಾರಾಟಕ್ಕೆ ಯತ್ನಿಸಿದ ವ್ಯಕ್ತಿಯನ್ನುಉಪ್ಪಿನಂಗಡಿ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ ಘಟನೆ ಪೆರ್ನೆಯಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಕೌಕ್ರಾಡಿ ಗ್ರಾಮದ ದೋಂತಿಲ್ಲ ಮನೆ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಮಹಮ್ಮದ್ ತೌಫೀಕ್ (22) ಎಂದು ಗುರುತಿಸಲಾಗಿದೆ. ಗಸ್ತು ನಿರತ ಪೊಲೀಸರು ಶನಿವಾರ ಪೂರ್ವಾಹ್ನ 11 ಗಂಟೆ ಸುಮಾರಿಗೆ ಪೆರ್ನೆ ಗ್ರಾಮದ ಕಡಂಬು ಎಂಬಲ್ಲಿ ವಾಹನ ತಪಾಸಣೆ ಮಾಡುತ್ತಿದ್ದಾಗ ಆಟೋ ರಿಕ್ಷಾವೊಂದು ನಿಲ್ಲಿಸಲು ಸೂಚಿಸಿದರು. ರಿಕ್ಷಾ ಚಾಲಕ ಸೂಚನೆಯನ್ನು ಪರಗಣಿಸದೆ ಮುಂದಕ್ಕೆ ಚಲಿಸಿದಾಗ ಪೊಲೀಸರು ಬೆನ್ನಟ್ಟಿ ರಿಕ್ಷಾ ಚಾಲಕ ಮಹಮ್ಮದ್ ತೌಫೀಕ್‌ನನ್ನು ವಿಚಾರಣೆಗೊಳಪಡಿಸಿದಾಗ ತಾನು ಮಾದಕ ವಸ್ತು ಎಂಡಿಎಂಎ ನ್ನು ಸೇವಿಸಿದ್ದಾಗಿ, ತನ್ನ ಸೇವನೆ ಹಾಗೂ ಮಾರಾಟಕ್ಕಾಗಿ ಪೆರ್ನೆಯ ಸಲಿಂ ಎಂಬಾತ ಮಾದಕ ವಸ್ತುವನ್ನು ತನಗೆ ನೀಡಿದ್ದಾನೆಂದು ಪೊಲೀಸರ ವಿಚಾರಣೆ ವೇಳೆ ತಿಳಿಸಿರುತ್ತಾನೆ. ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

Read More

ಮಲ್ಪೆ: ಸೈಂಟ್‌ಮೇರಿಸ್‌ ಐಲ್ಯಾಂಡಿಗೆ ಬಂದಿದ್ದ ಮಂಡ್ಯ ಮೂಲದ ಶಾಲಾ ವಿದ್ಯಾರ್ಥಿಗೆ ರಕ್ತದೊತ್ತಡ ಕಡಿಮೆಯಾಗಿ ತೀವ್ರ ಅಸ್ವಸ್ಥಗೊಂಡಿದ್ದು, ಅವರನ್ನು ಪ್ರವಾಸಿ ಬೋಟ್‌ ನಿರ್ವಾಹಕರು ತತ್‌ಕ್ಷಣ ಸ್ಪೀಡ್‌ಬೋಟ್‌ ಮೂಲಕ ದಡ ಸೇರಿಸಿ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸಮಯ ಪ್ರಜ್ಞೆ ಮೆರೆದಿದ್ದಾರೆ. ಮಂಡ್ಯ ಜಿಲ್ಲೆ ಶಿವಳ್ಳಿ ತಾಲೂಕಿನ ಸರ್‌ ವಿಶ್ವೇಶ್ವರಯ್ಯ ಪ್ರೌಢಶಾಲೆಯ 10ನೇ ತರಗತಿಯ ಜಗದೀಶ್ವರಿ ಅಸ್ವಸ್ಥಗೊಂಡವರು. ಪ್ರವಾಸಿ ಬೋಟಿನ ನಿರ್ವಾಹಕರಾದ ಪ್ರವೀಣ್‌ ಮಲ್ಪೆ ಮತ್ತು ಶಾನ್‌ರಾಜ್‌ ಕೋಟ್ಯಾನ್‌ ಸಕಾಲದಲ್ಲಿ ನೆರವಿಗೆ ಬಂದವರು. ಶಾಲಾ ಆಡಳಿತ ಮಂಡಳಿ 3 ದಿನದ ಶೈಕ್ಷಣಿಕ ಪ್ರವಾಸ ಕೈಗೊಂಡಿತ್ತು. ಶನಿವಾರ ಮಲ್ಪೆ ಸೈಂಟ್‌ಮೇರಿಸ್‌ ದ್ವೀಪಕ್ಕೆ ಬಂದಿದ್ದ ವಿದ್ಯಾರ್ಥಿಗಳಲ್ಲಿ ಜಗದೀಶ್ವರಿಗೆ ಬಿಸಿಲಿನ ಝಳಕ್ಕೆ ಒಮ್ಮೆಲೆ ತಲೆತಿರುಗಿ ಬಂದು ವಾಂತಿ ಮಾಡಲು ಆರಂಭಿಸಿದಳು. ಬಳಿಕ ರಕ್ತದೊತ್ತಡವೂ ಕಡಿಮೆಯಾಗಿ ಕುಸಿದು ಬಿದ್ದಳು. ಗಂಭೀರ ಸ್ಥಿತಿಯಲ್ಲಿದ್ದ ಬಾಲಕಿಯನ್ನು ತಕ್ಷಣ ಅಲ್ಲೇ ಇದ್ದ ಬೋಟ್‌ ನಿರ್ವಾಹಕ ಪ್ರವೀಣ್‌ ಮಲ್ಪೆ ಅವರು ಪ್ರಾಥಮಿಕ ಚಿಕ್ಸಿತೆ ನೀಡಿ ಬಳಿಕ ಶಾನ್‌ರಾಜ್‌ ಕೋಟ್ಯಾನ್‌ ಅವರ ಸಹಕಾರದೊಂದಿಗೆ ಸ್ಪೀಡ್‌ಬೋಟ್‌ನಲ್ಲಿ…

Read More

ಮಂಗಳೂರು: ಪುತ್ತೂರು ಶಾಸಕ ಅಶೋಕ್ ರೈಯವರ ಬೇಡಿಕೆಗೆ ಅಸ್ತು ಎಂದ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಮಂಗಳೂರಿನಲ್ಲಿ ಪೊಲೀಸ್ ವಸತಿ ಸಮುಚ್ಚಯ ಉದ್ಘಾಟನೆಯ ವೇದಿಕೆಯಲ್ಲಿಯೇ ಪುತ್ತೂರಿಗೆ ಮಹಿಳಾ ಠಾಣೆಯನ್ನು ಮಂಜೂರು ಮಾಡಿ ಒಂದು ಕೋಟಿ ರೂ. ಮೊತ್ತ ಅನುದಾನ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ ಪುತ್ತೂರು ಶಾಸಕ ಅಶೋಕ್ ರೈಯವರು, ಗೃಹಸಚಿವರಲ್ಲಿ ಪುತ್ತೂರಿಗೊಂದು ಮಹಿಳಾ ಠಾಣೆಯ ಅಗತ್ಯವಿದೆ. ಈಗ ಇರುವ ಠಾಣೆಯನ್ನು ಬದಲಾವಣೆ ಮಾಡಬೇಕು. ಅದಕ್ಕಾಗಿ 9ಸೆಂಟ್ಸ್ ಜಾಗವನ್ನು ಗುರುತಿಸಿದ್ದೇವೆ. ಜೊತೆಗೆ ಎಸ್ಪಿ ಆಫೀಸನ್ನು ಪುತ್ತೂರಿಗೆ ವರ್ಗಾವಣೆ ಮಾಡಬೇಕು. ಅಧಿಕಾರಿಗಳಿಗೆ ಅದು ದೂರ ಆಗುವುದಿದ್ದಲ್ಲಿ ಕನಿಷ್ಠ ಪಕ್ಷ ಡಿಎಆರ್ ಅನ್ನಾದರೂ ನೀಡಬೇಕು. ಈಗಾಗಲೇ ಅದಕ್ಕೆ ನಾವು 2.10ಎಕ್ರೆ ಜಾಗವನ್ನು ಮೀಸಲಿಟ್ಟಿದ್ದೇವೆ‌‌. ಗುಪ್ತಚರ ಇಲಾಖೆಗೆ ದ.ಕ.ಜಿಲ್ಲೆಯಲ್ಲೊಂದು ಪ್ರತ್ಯೇಕ ಕಚೇರಿ ಮಾಡಬೇಕು ಎಂದು ಮೂರು ಬೇಡಿಕೆಗಳನ್ನು ಗೃಹಸಚಿವರ ಮುಂದಿಟ್ಟಿದ್ದರು. ಬಳಿಕ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಮಾತನಾಡಿ, ಮೊದಲನೇ ಬಾರಿಗೆ ಶಾಸಕರಾಗಿರುವ ಅಶೋಕ್ ರೈಯವರು ಬೇರೆಬೇರೆ ಕೆಲಸ ಮಾಡಬೇಕೆಂಬ ಉತ್ಸಾಹದಲ್ಲಿದ್ದಾರೆ. ನಾನೂ ಮೊದಲ ಬಾರಿ ಗೆದ್ದಾಗ ನಿಮಗಿಂತ…

Read More

ಮಂಗಳೂರು: ಶಾಲಾ-ಕಾಲೇಜುಗಳಿಗೆ ಡ್ರಗ್ಸ್ ರವಾನೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪೊಲೀಸರದ್ದಾಗಿದೆ. ಆದ್ದರಿಂದ ಡ್ರಗ್ಸ್ ದಂಧೆ ನಡೆದಲ್ಲಿ ಆಯಾ ಠಾಣಾ ವ್ಯಾಪ್ತಿಯ ಇನ್‌ಸ್ಪೆಕ್ಟರ್, ಡಿವೈಎಸ್ಪಿ, ಕಮಿಷನರ್, ಎಸ್ಪಿಗಳೇ ಕಾರಣ. ತಮ್ಮನ್ನೇ ಹೊಣೆ ಮಾಡಲಾಗುತ್ತದೆ ಎಂದು ರಾಜ್ಯ ಗೃಹಸಚಿವ ಡಾ.ಜಿ.ಪರಮೇಶ್ವರ್ ಖಡಕ್ ವಾರ್ನಿಂಗ್ ನೀಡಿದರು. ಮಂಗಳೂರು ನಗರದ ಪೊಲೀಸ್ ಲೇನ್‌ನಲ್ಲಿ ಪೊಲೀಸ್ ವಸತಿ ಸಮುಚ್ಚಯವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು, ಡ್ರಗ್ಸ್ ದಂಧೆ ಮಿತಿಮೀರಿದ್ದ, ಕಳೆದ ವರ್ಷ 200ಕೋಟಿ ಮೌಲ್ಯದ ಡ್ರಗ್ಸ್ ಹಿಡಿಯಲಾಗಿದೆ‌. ಡ್ರಗ್ಸ್ ಪೆಡ್ಲರ್‌ಗಳಿಗೆ ಯಾವುದೇ ಕ್ಷಮೆಯಿಲ್ಲ. ಡ್ರಗ್ಸ್ ವಿರುದ್ಧ ಏನುಕ್ರಮ ಕೈಗೊಳ್ಳುತ್ತೀರೋ ನಾನು ಪೊಲೀಸರೊಂದಿಗೆ ಇರುತ್ತೇನೆ. ಪ್ರತೀ ತಿಂಗಳು ಶಾಲಾ-ಕಾಲೇಜುಗಳಿಗೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಆ್ಯಂಟಿ ಡ್ರಗ್ ಕಾರ್ಯಾಚರಣೆ ನಡೆಸಬೇಕು ಎಂದರು. ಪೊಲೀಸ್ ಸಿಬ್ಬಂದಿಗೆ ಉತ್ತಮ ನಿವೇಶನ ಕಲ್ಪಿಸುವ ನಿಟ್ಟಿನಲ್ಲಿ ಸುಸಜ್ಜಿತ ಪೊಲೀಸ್ ಗೃಹ ನಿರ್ಮಿಸಿ ಕೊಡಲಾಗಿದೆ. ಪ್ರಾರಂಭದಲ್ಲಿ ಒಂದು ಯುನಿಟ್ ವೆಚ್ಚ 16-17 ಲಕ್ಷ ಇದ್ದದ್ದು ಇಂದು 27 ಲಕ್ಷ ರೂ. ಆಗಿದೆ. ಸದ್ಯ ರಾಜ್ಯದಲ್ಲಿ ಲಕ್ಷಕ್ಕೂ ಮಿಕ್ಕಿ ಪೊಲೀಸರಿದ್ದಾರೆ.…

Read More

ಧರ್ಮಸ್ಥಳ: ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ವೈಭವದಿಂದ ನಡೆಯುತ್ತಿದ್ದು, ಈ ಪ್ರಯುಕ್ತ ಸರ್ವಧರ್ಮ ಸಮ್ಮೇಳನ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಿತು. ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನದ ಉದ್ಘಾಟನೆಯನ್ನು ಗೃಹ ಸಚಿವ ಡಾ.ಜಿ. ಪರಮೇಶ್ವರ್ ನೆರವೇರಿಸಿದರು. ಕೈಲಾಸ ಆಶ್ರಮ‌ ಮಹಾಸಂಸ್ಥಾನದ ಶ್ರೀ ಜಯೇಂದ್ರ ಪುರಿ ಮಹಾಸ್ವಾಮೀಜಿ ಅಧ್ಯಕ್ಷತೆ ವಹಿಸಿ ಶುಭ ಸಂದೇಶಗೈದರು. ಇನ್ನು, ಸರ್ವಧರ್ಮ ಸಮ್ಮೇಳನದಲ್ಲಿ ಹಿಂದೂ ಧರ್ಮ ಹಾಗೂ ಸಮನ್ವಯದ ವಿಷಯದಲ್ಲಿ ಡಾ.ಜಿ.ಬಿ. ಹರೀಶ್ ಮಾತನಾಡಿದರು. ನಿವೃತ್ತ ಪ್ರಾಂಶುಪಾಲ ಡಾ.ಜೋಸೆಪ್ ಎನ್. ಎಮ್. ಕ್ರೈಸ್ತ ಧರ್ಮದಲ್ಲಿ ಸಮನ್ವಯದ ದೃಷ್ಟಿ ಎಂಬ ವಿಚಾರವಾಗಿ ಉಪನ್ಯಾಸ ನೀಡಿದರು. ಇಸ್ಲಾಂ ಹಾಗೂ ಮಾನವತೆಯ ಕುರಿತು ಮೆಹತಾಬ ಇಬ್ರಾಹಿಮ್ ಸಾಬ ಕಾಗವಾಡ ಉಪನ್ಯಾಸ ನೀಡಿದರು.

Read More

ಬಂಟ್ವಾಳ: ಸಾರ್ವಜನಿಕ ಸ್ಥಳದಲ್ಲಿ ಅಂಕೆ ಸಂಖ್ಯೆಗಳ ಮೇಲೆ ಹಣವನ್ನು ಪಣವನ್ನಾಗ್ಗಿಟ್ಟುಕೊಂಡು ಅಕ್ರಮವಾಗಿ ನಡೆಸುತ್ತಿದ್ದ ಮಟ್ಕಾ ಚೀಟಿ ದಂಧೆಗೆ ಪೊಲೀಸರು ದಾಳಿ ನಡೆಸಿ, ಆರೋಪಿಗಳ ಸಹಿತ ನಗದು ವಶ ಪಡಿಸಿಕೊಂಡ ಘಟನೆ ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ತುಂಬೆ ಜಂಕ್ಷನ್ ಬಳಿ ನಡೆದಿದೆ. ಬಂಟ್ವಾಳ ತಾಲೂಕು ಬಿ ಕಸಬಾ ಗ್ರಾಮದ ತುಂಬೆ ಜಂಕ್ಷನ್ ಬಳಿ ಹೋಟೇಲ್‌ ಸಮೀಪದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮ ಮಟ್ಕಾ ದಂಧೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯ ಪಿ.ಎಸ್.ಐ ರಾಮಕೃಷ್ಣ ನೇತೃತ್ವದ ತಂದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ದಂಧೆಯಲ್ಲಿ ಭಾಗಿಯಾದ ಉಳ್ಳಾಲ ತಾಲೂಕಿನ ಬೋಳಿಯಾರು ನಿವಾಸಿ ಅಬೂಬಕ್ಕರ್ (38), ಬಂಟ್ವಾಳ ತಾಲೂಕು ಸಜಿಪ ಮೂಡಾದ ದಿನೇಶ್ ಕುಮಾರ್ (36) ಎಂಬ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳಿಂದ 2,850/- ನಗದು ಹಣವನ್ನು ಹಾಗೂ ಮಟ್ಕಾ ಚೀಟಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ ನಂ: 180/2024 ಕಲಂ:78 ಕೆ.ಪಿ…

Read More

ಉಡುಪಿ: ಅಕ್ರಮ ಮರಳುಗಾರಿಕೆಗೆ ಸಹಕಾರ ಮಾಡಿರುವ ಆರೋಪದಲ್ಲಿ ಕಾಪು ಪೊಲೀಸ್‌ ಠಾಣೆಯ ಉಪ ನಿರೀಕ್ಷಕ ಅಬ್ದುಲ್‌ ಖಾದರ್‌ ಅವರನ್ನು ಅಮಾನತು ಮಾಡಲಾಗಿದೆ. ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆ ಬಗ್ಗೆ ಕಾಪು ಠಾಣೆಯಲ್ಲಿ ದೂರು ದಾಖಲಾಗಿತ್ತು. ಆದರೆ ಮರಳು ದಂಧೆಕೋರರೊಂದಿಗೆ ಪಿಎಸ್‌ಐ ಅಬ್ದುಲ್‌ ಖಾದರ್‌ ಸಹಕರಿಸಿದ್ದಾರೆ ಎನ್ನುವುದನ್ನು ತಿಳಿಸುವ ಆಡಿಯೋವೊಂದರ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಲಾಗಿತ್ತು. ಪ್ರಾಥಮಿಕ ತನಿಖೆ ನಡೆಸಿದ ವೇಳೆ ಕಾಪು ಠಾಣಾಧಿಕಾರಿ ವಿರುದ್ಧದ ಆರೋಪ ಮೇಲ್ನೋಟಕ್ಕೆ ಸಾಬೀತಾದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.

Read More

ಮಂಗಳೂರು: ಪ್ರತಿಭಟನೆ ನಡೆದ ವೇಳೆ ಎಎಸ್ಐ ಅವರನ್ನು ತಳ್ಳಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ ಡಿವೈಎಫ್‌ಐ ಸಂಘಟನೆಯ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನ.28ರಂದು ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಡಿವೈಎಫ್‌ಐ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಪ್ರತಿಭಟನೆ ಆಯೋಜನೆಗೊಂಡಿತ್ತು. ಈ ವೇಳೆ ಬಂದೋಬಸ್ತ್ ಕರ್ತವ್ಯನಿರತ ಕದ್ರಿ ಠಾಣೆಯ ಎಎಸ್‌ ಐ ಮುತ್ತಪ್ಪ ಗೌಡ ಬಿ. ಅವರನ್ನು ಪ್ರತಿಭಟನಾಕಾರರು ತಳ್ಳಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡ ಎಎಸ್ಐ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಎಎಸ್ಐ ಮುತ್ತಪ್ಪ ಗೌಡರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ.

Read More

ಹಾವೇರಿ: ಸಿಎಂ ಆಗಲಿಕ್ಕೆ ಆಸೆ ಇದೆ, ಅಧ್ಯಕ್ಷ ಆಗಲಿಕ್ಕೆ ಆಸೆ ಇದೆ, ಮಂತ್ರಿ ಆಗಲಿಕ್ಕೂ ಆಸೆ ಇದೆ. ಆದ್ರೆ ಅಂತಿಮವಾಗಿ ಪಕ್ಷ ತೀರ್ಮಾನ ಮಾಡಲಿ ಎಂದು ಸಚಿವ ಸತೀಶ ಜಾರಕಿಹೊಳಿ ತಿಳಿಸಿದ್ದಾರೆ. ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದಲ್ಲಿ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ಸಿಎಂ ಆಗ್ತಾರೆ ಅಂತ ಹೇಳಿ ಹೆಸರು ಓಡಾಡ್ತು. ಈಗ ಅಧ್ಯಕ್ಷ ಆಗ್ತಾರೆ ಅಂತಾ ಹೆಸರು ಓಡಾಡ್ತಾ ಇದೆ. ನಮ್ಮ ಉತ್ಸಾಹ ಅಷ್ಟೆ. ಅಂತಿಮವಾಗಿ ಪಕ್ಷ ತೀರ್ಮಾನ ಮಾಡಬೇಕು. ನಾವೆಲ್ಲಾ ಕಾದು ನೋಡಬೇಕು ಅಷ್ಟೆ. ಈ ವಿಚಾರವಾಗಿ ನಾನು ಯಾವುದೇ ರೀತಿ ಒತ್ತಡ ಹಾಕಿಲ್ಲ. ಚುನಾವಣೆಯಲ್ಲಿ ಗೆಲ್ಲಿಸಿದ್ದೀವಿ, ತೃಪ್ತಿ ಇದೆ. ಮಂತ್ರಿಯಾಗಿ ಕೆಲಸ ಮಾಡ್ತಾ ಇದ್ದೀವಿ, ತೃಪ್ತಿ ಇದೆ ಎಂದರು. ಕಾಂಗ್ರೆಸ್ ಸಮಾವೇಶ ಡಿಸೆಂಬರ್ 5 ಅಥವಾ 8 ಎಂಬುದು ಖಚಿತ ಆಗಿಲ್ಲ. ಹೇಳ್ತಾ ಇದಾರೆ. ಎಲ್ಲಿದೆ ಪತ್ರ? ಯಾರಿಗೆ ಬರೆದರು? ಯಾಕೆ ಬರೆದರು? ಏನು ಆ್ಯಕ್ಷನ್ ತಗೊಂಡ್ರು? ಬೇಕಲ್ಲಾ? ಸುಮ್ಮನೇ ಏನೋ ಒಂದು ವಾಟ್ಸಾಪ್‌ನಲ್ಲಿ ಬಂದರೆ ಇಡೀ ಪಕ್ಷದ…

Read More