Author: main-admin

ಬೆಂಗಳೂರು: ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ 108 ರಿಂದ 114 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಐಪಿಎಸ್‌ಎಸ್ ತಂಡದ ಸಹಯೋಗದೊಂದಿಗೆ ಹೈದರಾಬಾದ್ ನ ಎಸ್‌ಎಎಸ್ ಗುಂಪು ನಡೆಸಿದ ಸಮೀಕ್ಷೆಯಲ್ಲಿ ಈ ಅಂಶಗಳು ಬಹಿರಂಗವಾಗಿದ್ದು, ಕಾಂಗ್ರೆಸ್ ನ ಮತಗಳಿಕೆಯಲ್ಲೂ ಹೆಚ್ಚಳದ ಸಾಧ್ಯತೆ ಇದೆ ಎನ್ನಲಾಗಿದೆ. ರಾಜ್ಯದಲ್ಲಿ ಆಡಳಿತಾರೂಢ ಬಿಡೆಪಿ 65 ರಿಂದ 75 ಮತ್ತು ಜೆಡಿಎಸ್ 24 ರಿಂದ 34 ಸ್ಥಾನಗಳನ್ನು ಗೆಲ್ಲಲಿದೆ ಎಂದು ಸಮೀಕ್ಷೆ ತಿಳಿಸಿದೆ. ಇದಲ್ಲದೆ ಸಣ್ಣ ಪಕ್ಷಗಳು ಮತ್ತು ಸ್ವತಂತ್ರರು ಏಳು ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ ಎಂದು ಸಮೀಕ್ಷೆ ಹೇಳಿದೆ.

Read More

ಮಂಗಳೂರು: ತಿಂಗಳ ಮೂರನೇ ಶನಿವಾರವಾದ ಜ.21ರ ಬೆಳಿಗ್ಗೆ 11 ಗಂಟೆಯಿಂದ ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಮುರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಅಲ್ಲಿನ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲಿದ್ದಾರೆ. ಆದಕಾರಣ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಅಲ್ಲಿ ಹಾಜರಿರುವಂತೆ ಅಪರ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಮಂಗಳೂರು: ಗಸ್ತು ನಿರತ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ ಅವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ ಆರೋಪದಡಿ ಐವರ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯ ಮಲ್ಲಿಕಾರ್ಜುನ ಅಂಗಡಿ ಎಂಬವರು ಪೊಲೀಸ್ ಕಾನ್‌ಸ್ಟೇಬಲ್ ಪ್ರದೀಪ್ ನಾಗನ ಗೌಡರೊಂದಿಗೆ ಜ.20ರ ಮುಂಜಾವ 2ಕ್ಕೆ ಅರ್ಕುಳ ಜಂಕ್ಷನ್‌ನಿಂದ ತುಪ್ಪೆಕಲ್ಲು ಕಡೆಗೆ ಹೋಗುತ್ತಿದ್ದರು. ಈ ವೇಳೆ ರೈಲ್ವೆ ಹಳಿಯ ಪಕ್ಕದಲ್ಲಿರುವ ಕಾಂಕ್ರಿಟ್ ರಸ್ತೆಯ ಬಳಿಯ ಖಾಲಿ ಸ್ಥಳದಲ್ಲಿ ಬಿಳಿ ಬಣ್ಣದ ಆಲ್ಟೋ ಕಾರೊಂದರ ಬಳಿ ಇಬ್ಬರು ಮತ್ತು ಕಾರಿನೊಳಗೆ ಮೂವರಿದ್ದರು ಎನ್ನಲಾಗಿದೆ. ಗಸ್ತುನಲ್ಲಿದ್ದ ಮಲ್ಲಿಕಾರ್ಜುನ ಅಂಗಡಿಯವರು ‘ನೀವು ಇಲ್ಲಿ ಏನು ಮಾಡುತ್ತಿದ್ದೀರಿ? ಎಂದು ಕೇಳಿ ಅವರ ಕಡೆಗೆ ಟಾರ್ಚ್ ಹಾಯಿಸಿದ್ದಾರೆ. ಆಗ ಕಾರಿನ ಹೊರಗಡೆ ನಿಂತಿದ್ದ ಇಬ್ಬರು ಪೊಲೀಸರತ್ತ ಕಲ್ಲುಗಳನ್ನು ಎತ್ತಿ ಎಸೆದಿದ್ದಾರೆ ಎನ್ನಲಾಗಿದೆ. ಅವರು ಎಸೆದ ಕಲ್ಲುಗಳು ಇಬ್ಬರು ಪೊಲೀಸರ ಕೈಗೆ ತಾಗಿ ತರಚಿದ ಗಾಯಗಳಾಗಿವೆ. ಕಾರಿನ ಹೊರಗಡೆ ಇದ್ದ ಇಬ್ಬರು ಕಾರಿಗೆ…

Read More

ಬಿಜೆಪಿ ಮುಖಂಡ ಪ್ರವೀಣ್‌ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. 1,500 ಪುಟಗಳ ಚಾರ್ಜ್‌ಶೀಟ್‌ನಲ್ಲಿ 240 ಸಾಕ್ಷಿಗಳ ಹೇಳಿಕೆಗಳು ಒಳಗೊಂಡಿದ್ದು, ಒಟ್ಟು 20 ಆರೋಪಿಗಳನ್ನು ಉಲ್ಲೇಖೀಸಲಾಗಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 14 ಆರೋಪಿಗಳನ್ನು ಬಂಧಿಸಲಾಗಿದ್ದು, 6 ಮಂದಿಗಾಗಿ ಹುಡುಕಾಟ ನಡೆದಿದೆ. ಎನ್‌ಐಎ ಪರ ವಕೀಲರಾದ ಪಿ. ಪ್ರಸನ್ನ ಕುಮಾರ್‌ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಈ ನಡುವೆ ಪ್ರಕರಣದ ಆರೋಪಿಗಳಾಗಿ ತಲೆಮರೆಸಿಕೊಂಡಿರುವ ಬಂಟ್ವಾಳ ತಾಲೂಕಿನ ಕೊಡಾಜೆಯ ಮೊಹಮ್ಮದ್‌ ಷರೀಫ್, ನೆಕ್ಕಿಲಾಡಿಯ ಅಗ್ನಾಡಿ ಹೌಸ್‌ನ ಮಸೂದ್‌ ಕೆ.ಎ. ಅವರ ಸುಳಿವು ನೀಡಿದವರಿಗೆ ಎನ್‌ಐಎ ತಲಾ 10 ಲಕ್ಷ ರೂ. ಬಹುಮಾನ ಘೋಷಿಸಿದೆ. ಪ್ರವೀಣ್‌ ನೆಟ್ಟಾರು ಅವರನ್ನು 2022ರ ಜು. 26 ರಂದು ಬೆಳ್ಳಾರೆಯಲ್ಲಿರುವ ಅವರ ಕೋಳಿ ಅಂಗಡಿ ಬಳಿ ಹತ್ಯೆ ಮಾಡಲಾಗಿತ್ತು.

Read More

ವಾಹನಗಳಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ವಾಹನಗಳ ಇಂಧನ ಕ್ಷಮತೆಯನ್ನು ಹೆಚ್ಚಿಸಲು, ಭಾರತ ಸರ್ಕಾರವು ‘ವಾಹನ ಸ್ಕ್ರ್ಯಾಪ್ ನೀತಿ’ಯನ್ನು ಪರಿಚಯಿಸಿದೆ. ಈ ನೀತಿಯಡಿ ದೇಶದಲ್ಲಿ 15 ವರ್ಷ ಹಳೆಯ ನೋಂದಣಿಯನ್ನು ಕಡ್ಡಾಯವಾಗಿ ರದ್ದುಗೊಳಿಸಲಾಗುತ್ತದೆ. ನೋಂದಣಿಯನ್ನು ನವೀಕರಿಸಿದ (15 ವರ್ಷಗಳ ನಂತರ) ವಾಹನಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ. ಅಂತಹ ಎಲ್ಲಾ ಹಳೆಯ ವಾಹನಗಳನ್ನು ನೋಂದಾಯಿತ ಸ್ಕ್ರ್ಯಾಪ್ ಕೇಂದ್ರದಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಅಧಿಸೂಚನೆಯ ಪ್ರಕಾರ, 15 ವರ್ಷಕ್ಕಿಂತ ಹಳೆಯದಾದ ಎಲ್ಲಾ ಸರ್ಕಾರಿ ವಾಹನಗಳನ್ನು ಏಪ್ರಿಲ್ 1 ರಿಂದ ರದ್ದುಗೊಳಿಸಲಾಗುವುದು. ಈ ನಿಯಮವು ದೇಶದ ರಕ್ಷಣೆಗಾಗಿ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಮತ್ತು ಆಂತರಿಕ ಭದ್ರತೆಯ ನಿರ್ವಹಣೆಗಾಗಿ ಕಾರ್ಯಾಚರಣೆ ಉದ್ದೇಶಗಳಿಗಾಗಿ ಬಳಸುವ ವಿಶೇಷ ಉದ್ದೇಶದ ವಾಹನಗಳಿಗೆ (ಶಸ್ತ್ರಸಜ್ಜಿತ ಮತ್ತು ಇತರ ವಿಶೇಷ ವಾಹನಗಳಿಗೆ) ಅನ್ವಯಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಅಧಿಸೂಚನೆಯ ಪ್ರಕಾರ, ‘ವಾಹನದ ಆರಂಭಿಕ ನೋಂದಣಿ ದಿನಾಂಕದಿಂದ 15 ವರ್ಷಗಳು ಪೂರ್ಣಗೊಂಡ ನಂತರ ಅಂತಹ ವಾಹನಗಳನ್ನು…

Read More

ಪುತ್ತೂರು: ಹಣದ ವಿಚಾರದಲ್ಲಿ ತಂಡವೊಂದು ವ್ಯಕ್ತಿಯನ್ನು ಅಪಹರಣ ಮಾಡಿ, ಸಹೋದರನ ಮಾಹಿತಿಯನ್ನು ಪಡೆಯುವ ಜತೆಗೆ ಹಣಕ್ಕೆ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಿದ ಘಟನೆ ನಡೆದಿದೆ. ಕೊಯಿಲ ನಿವಾಸಿ ನಿಝಾಮ್ (25) ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಹೋದರ ಶಾರೂಕ್ (23) ಅವರನ್ನು ಅಪಹರಣ ಮಾಡಿದ್ದಾರೆಂದು ಹೇಳಲಾಗಿದೆ. ಮಂಗಳೂರಿನ ಮಲ್ಲೂರು ಭಾಗಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಿ, ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ. ಸಹೋದರನ ಮಾಹಿತಿ ಪಡೆದು ಆತನನ್ನು ಅಪಹರಣ ಮಾಡಿ ಹಣ ತರದೇ ಹೋದರೆ ತಮ್ಮನನ್ನು ಕೊಲೆ ಮಾಡುವುದಾಗಿ ಹೇಳಿದ್ದಾರೆ ಎಂದು ನಿಝಾಮ್ ಹೇಳಿದ್ದಾರೆ. ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Read More

ಗಜಯಾಬಾದ್: ರಸ್ತೆ ಬದಿಯ ಉಪಾಹಾರ ಗೃಹದಲ್ಲಿ ಚಪಾತಿಗೆಂದು ಕಲಸಿಟ್ಟ ಹಿಟ್ಟಿಗೆ ಉಗುಳಿ ಚಪಾತಿ ಮಾಡುತ್ತಿದ್ದ ಅಡುಗೆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ. ಕಿಶನ್ ಗಂಜ್ ಬಿಹಾರದ ನಾಸಿರುದ್ದೀನ್ ಬಂಧಿತ ಆರೋಪಿ. ಮೋಹನ್ ನಗರ ವಜೀರಾಬಾದ್ ರಸ್ತೆಯಲ್ಲಿರುವ ಪಸೋಂಡಾ ಗ್ರಾಮದಲ್ಲಿ ರಸ್ತೆ ಬದಿಯಲ್ಲಿರುವ ಉಪಾಹಾರ ಗೃಹದಲ್ಲಿ ಈತ ಅಡುಗೆ ಸಿಬ್ಬಂದಿಯಾಗಿದ್ದ. ಇಲ್ಲಿ ಚಪಾತಿ ಮಾಡಲೆಂದು ಕಲಸಿಟ್ಟ ಹಿಟ್ಟಿಗೆ ಈತ ಉಗುಳಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೀಡಿಯೋ ವೈರಲ್ ಆಗುತ್ತಿದ್ದಂತೆ ಆರೋಪಿಯನ್ನು ಪತ್ತೆ ಹಚ್ಚಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ ಸಾಹಿಬಾಬಾದ್ ವೃತ್ತದ ಸಹಾಯಕ ಪೊಲೀಸ್ ಆಯುಕ್ತ ಪೂನಂ ಮಿಶ್ರಾ ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆಯ 269 (ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ನಿರ್ಲಕ್ಷ್ಯದ ಕ್ರಿಯೆ) ಮತ್ತು 270 (ಜೀವಕ್ಕೆ ಅಪಾಯಕಾರಿ ಕಾಯಿಲೆಯ ಸೋಂಕನ್ನು ಹರಡುವ ಮಾರಣಾಂತಿಕ ಕೃತ್ಯ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ.

Read More

ಶ್ರೀ ಕ್ಷೇತ್ರ ಧರ್ಮಸ್ಥಳದ ಗೋಕುಲ ಗೋಶಾಲೆಯಲ್ಲಿದ್ದ, ಹೆಗ್ಗಡೆಯವರ‌ ಪ್ರೀತಿಯ ಗೀರ್ ತಳಿಯ ಎತ್ತು ಗಿರೀಶ ಜ.18 ರಂದು ರಾತ್ರಿ ವೇಳೆ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ. ಬಹಳ ವರ್ಷಗಳಿಂದ ಈ ಗೋಶಾಲೆಯಲ್ಲಿದ್ದ ಗಿರೀಶನಿಗೆ 18 ವರ್ಷ ವಯಸ್ಸು. ಕ್ಷೇತ್ರದ ಯಾವುದೇ ಉತ್ಸವಗಳಿಗೂ ಬಸವನಾಗಿ ಗಿರೀಶನೇ ಮುಂಚೂಣಿಯಲ್ಲಿತ್ತು. ಉತ್ಸವಗಳಿಗೆ ಹೋಗುವುದರಲ್ಲೇ ಸಂತೋಷ ಪಡುತ್ತಿದ್ದ ಈ ಬಸವ ಇದೀಗ ಹೃದಯಾಘಾತದಿಂದ ಕೊನೆಯುಸಿರೆಳೆದಿದೆ.ಎಲ್ಲರೊಂದಿಗೆ ಸಕ್ರೀಯವಾಗಿದ್ದ ಗಿರೀಶನಿಗೆ ದಿಢೀರ್ ಹೃದಯಾಘಾತ ಸಂಭವಿಸಿ ಉಸಿರುಚೆಲ್ಲಿದೆ. ಜ.19 ರಂದು ಬೆಳಗ್ಗೆ 11 ಗಂಟೆ ವೇಳೆ ಗೌರವಯುತವಾಗಿ ಆತನ ಅಂತ್ಯಸಂಸ್ಕಾರ ನಡೆಸಲಾಯಿತು. ಗಿರೀಶ ಶ್ರೀ ಕ್ಷೇತ್ರ ಧರ್ಮಸ್ಥಳದ ವಿಶೇಷತೆಯಾಗಿತ್ತು. ಗೋಶಾಲೆಯಲ್ಲಿ ಅತೀ ಹಿರಿಯನಾಗಿದ್ದ ಗಿರೀಶನಿಗೆ ಖಾವಂದರೆಂದರೆ ಬಲು ಪ್ರೀತಿ. ಕ್ಷೇತ್ರದ ಉತ್ಸವದಲ್ಲಿ ಖಾವಂದರು ಗಿರೀಶ ಎಂದು ಕರೆದರೆ ಗಿರೀಶನು ಪ್ರೀತಿಯಿಂದ ತಲೆ ಎತ್ತಿ ಖಾವಂದರನ್ನು ನೋಡುತ್ತಿದ್ದ. ಇವರಿಬ್ಬರ ಬಾಂಧವ್ಯ ಅನನ್ಯವಾಗಿತ್ತು. ಇತ್ತೀಚೆಗೆ ಧರ್ಮಸ್ಥಳಕ್ಕೆ ಆಗಮಿಸಿದ ಪುಂಗನೂರು ಹಸುವಿನೊಂದಿಗೆ ಗಿರೀಶನ ಒಡನಾಟ ಚೆನ್ನಾಗಿರುತ್ತಿತ್ತು. ಪುಂಗನೂರು ಕರು ಗಿರೀಶನಿಗೆ ಏನೇ ಮಾಡಿದರು ಸಿಟ್ಟಾಗದೆ ಪ್ರೀತಿಯಿಂದ ಸ್ವೀಕರಿಸುತ್ತಿದ್ದ. ಒಟ್ಟಾರೆ…

Read More

ಒಂಟಿ ಮನೆಯಲ್ಲಿ ಒಂದೇ ಕುಟುಂಬದ ಮೂವರು ಸಹೋದರಿಯರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ನಡೆದಿದೆ. ಒಂಬತ್ತು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ರಂಜಿತಾ (24), ಬಿಂದು (21), ಚಂದನ (18) ಆತ್ಮಹತ್ಯೆಗೆ ಶರಣಾದ ಸಹೋದರಿಯರಾಗಿದ್ದಾರೆ. ಈ ವಿಷಯ ಗುರುವಾರ (ಜ.19) ಬೆಳಕಿಗೆ ಬಂದಿದೆ. ಅನೇಕ ವರ್ಷಗಳ ಹಿಂದೆ ಪೋಷಕರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಅಂದಿನಿಂದ ಅಜ್ಜಿ ಜತೆಯಲ್ಲಿ ಇವರು ವಾಸವಿದ್ದರು. ಇತ್ತೀಚೆಗೆ ಅಜ್ಜಿ ಕೂಡ ಮೃತಪಟ್ಟಿದ್ದರು. ಅಜ್ಜಿ ಮರಣದ ಬಳಿಕ ಮಾನಸಿಕ ಖಿನ್ನತೆಗೆ ಇವರು ಒಳಗಾಗಿದ್ದರು ಎನ್ನಲಾಗಿದೆ. ಕಿಬ್ಬನಹಳ್ಳಿ ಬಳಿಯ ಗಾರ್ಮೆಂಟ್ಸ್‌ನಲ್ಲಿ ಇಬ್ಬರು ಸಹೋದರಿಯರು ಕೆಲಸ ಮಾಡುತ್ತಿದ್ದರು. 9 ದಿನಗಳ ಹಿಂದೆ ಒಂಟಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಶವ ಕೊಳೆತು ವಾಸನೆ ಬಂದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಮಂಗಳೂರು: ಕದ್ರಿ ಮಂಜುನಾಥ ಸ್ವಾಮಿ ದೇವಸ್ಥಾನದ ಮುಂಭಾಗ ಅನ್ಯಧರ್ಮೀಯರಿಗೆ ವ್ಯಾಪಾರ ನಿಷೇಧದ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ವಿಶ್ವ ಹಿಂದೂ ಪರಿಷತ್, ಬಜರಂಗದಳ ಶಿವಶಕ್ತಿ ಶಾಖೆ ಕದ್ರಿಯಿಂದ ಬ್ಯಾನರ್ ಅಳವಡಿಸಲಾಗಿದೆ. ಇದೇ ಬ್ಯಾನರ್​ನಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಆರೋಪಿಯ ಉಲ್ಲೇಖವೂ ಇರುವುದು ಹಲವರ ಗಮನ ಸೆಳೆದಿದೆ. ‘ಕದ್ರಿ ಮಂಜುನಾಥನ ಜಾತ್ರೆಯಲ್ಲಿ ಸನಾತನ ಧರ್ಮದ ಆಚರಣೆ ಹಾಗೂ ನಂಬಿಕೆಯಲ್ಲಿ ವಿಶ್ವಾಸವುಳ್ಳ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ’ ಎಂದು ಬ್ಯಾನರ್​ನಲ್ಲಿ ಹೇಳಲಾಗಿದೆ. ‘ಕುಕ್ಕರ್ ಬಾಂಬ್ ಆರೋಪಿಯು ಮೊದಲು ಕದ್ರಿ ದೇವಸ್ಥಾನವನ್ನೇ ಟಾರ್ಗೆಟ್ ಮಾಡಿದ್ದ. ಅಂಥ ಮನಸ್ಥಿತಿ ಇರುವವರಿಗೆ ಮತ್ತು ವಿಗ್ರಹಾರಾಧನೆಯನ್ನು ಹರಮ್ ಎಂದು ನಂಬಿರುವ ಯಾರಿಗೂ ಇಲ್ಲಿ ವ್ಯಾಪಾರಕ್ಕೆ ಅವಕಾಶವಿಲ್ಲ’ ಎಂದು ಬ್ಯಾನರ್​ನಲ್ಲಿ ಬರೆಯಲಾಗಿದೆ. ಕದ್ರಿ ಜಾತ್ರಾ ಮಹೋತ್ಸವವು ಜನವರಿ 14 ರಿಂದ ಜನವರಿ 23ರವರೆಗೆ ನಡೆಯಲಿದೆ. ಒಂಬತ್ತು ದಿನಗಳ ಜಾತ್ರಾ ಮಹೋತ್ಸವದಲ್ಲಿ ಸಾವಿರಾರು ಮಂದಿ ಭಾಗವಹಿಸಲಿದ್ದಾರೆ.

Read More