Author: main-admin

ನಿತ್ಯದ ಅಡುಗೆಯಲ್ಲಿ ನಾವು ಟೊಮೆಟೋ ಬಳಸುತ್ತೇವೆ. ಪ್ರತಿದಿನ ಟೊಮೆಟೋ ತಿನ್ನೋದ್ರಿಂದ ಹಲವು ಪ್ರಯೋಜನಗಳಿವೆ. ಹೊಟ್ಟೆ ಕ್ಯಾನ್ಸರ್ ನಿಂದ್ಲೂ ನೀವು ಬಚಾವ್ ಆಗ್ಬಹುದು. ಟೊಮೆಟೋ ಮತ್ತು ಟೊಮೆಟೋ ರಸ ಉತ್ಪಾದಿಸುವ ಜೀವಕೋಶಗಳು, ಕ್ಲೋನಿಂಗ್ ಅನ್ನು ತಡೆಯುತ್ತವೆ. ಅದರಿಂದಾಗಿ ಹೊಟ್ಟೆ ಕ್ಯಾನ್ಸರ್ ಬರುವುದಿಲ್ಲ. ಟೊಮೆಟೋ, ಕ್ಯಾನ್ಸರ್ ಜೀವಕೋಶಗಳನ್ನು ಸಾಯಿಸಲು ನೆರವಾಗುತ್ತದೆ. ಸ್ಯಾನ್ ಮರ್ಜಾನೋ ಹಾಗೂ ಇತರ ಟೊಮೆಟೋಗಳಲ್ಲಿ ಈ ಶಕ್ತಿಯಿದೆ. ಕರುಳಿನ ಕ್ಯಾನ್ಸರ್ ಗೆ ಇದೊಂದು ಉತ್ತಮ ಮನೆ ಮದ್ದು. ಚಿಕಿತ್ಸೆ ವೇಳೆ ಟೊಮೆಟೋ ಪ್ಯೂರೆ ಬಳಸುವುದರಿಂದ ಕ್ಯಾನ್ಸರ್ ಜೀವಕೋಶಗಳ ಕಾರ್ಯಾಚರಣೆಯನ್ನು ತಡೆಯಬಹುದು. ಜೊತೆಗೆ ಕ್ಯಾನ್ಸರ್ ಸೆಲ್ಸ್ ಟ್ರಾನ್ಸ್ ಫರ್ ಪ್ರಕ್ರಿಯೆ ಮೇಲೂ ಇದು ಪರಿಣಾಮ ಬೀರುವುದರಿಂದ, ಅವು ತಾನಾಗಿಯೇ ಸಾಯುತ್ತವೆ. ಈ ಬಗ್ಗೆ ಇನ್ನಷ್ಟು ಸಂಶೋಧನೆಯ ಅಗತ್ಯವಿದೆ ಎನ್ನುತ್ತಾರೆ ವಿಜ್ಞಾನಿಗಳು. ಗ್ಯಾಸ್ಟ್ರಿಕ್ ಕ್ಯಾನ್ಸರ್ ಅಥವಾ ಕರುಳಿನ ಕ್ಯಾನ್ಸರ್ ಈಗ ವಿಶ್ವದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಕರುಳಿನ ಕ್ಯಾನ್ಸರ್ ಗೆ ಜೆನೆಟಿಕ್ಸ್, ನಾವು ಸೇವಿಸುವ ಆಹಾರ, ಹೆಲಿಕೋಬ್ಯಾಕ್ಟರ್ ಸೋಂಕು ಸೇರಿದಂತೆ ಹಲವು ಅಂಶಗಳು ಕಾರಣ. ಇದರ…

Read More

ಮುಲ್ಕಿ: ಅಪ್ರಾಪ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಆಕೆಗೆ ಕಿರುಕುಳ ನೀಡುತ್ತಿದ್ದ ಯುವಕನನ್ನು ಪೋಷಕರು ಹಾಗೂ ಗ್ರಾಮಸ್ಥರೇ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗ ಥಳಿಸಿರುವ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡಿಸೆಂಬರ್ 13 ರಂದು ಇಲ್ಲಿನ ಕರೆಕಾಡು ಪ್ರದೇಶದಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಅದೇ ಊರಿನವನಾಗಿದ್ದ ಯುವಕ ದಿನವೂ ಬಾಲಕಿಯನ್ನು ಬೈಕ್‌ನಲ್ಲಿ ಹಿಂಬಾಲಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ, ಅಲ್ಲದೇ ಬಾಲಕಿಗೆ ಕಿರುಕುಳ ನೀಡುತ್ತಿದ್ದ. ಬಾಲಕಿಯಿಂದ ವಿಷಯ ತಿಳಿದ ಪೋಷಕರು ಮರುದಿನ ಹಿಂಬಾಲಿಸಿ, ಕಿರುಕುಳ ನೀಡುತ್ತಿದ್ದ ವೇಳೆ ಯುವಕನನ್ನು ಹಿಡಿದು ಕಂಬಕ್ಕೆ ಕಟ್ಟಿ ಮನಬಂದಂತೆ ಥಳಿಸಿದ್ದಾರೆ. ಸ್ಥಳೀಯರೂ ಇದಕ್ಕೆ ಸಾಥ್ ನೀಡಿದ್ದು, ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

Read More

ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ 45 ಡಿವೈಎಸ್ಪಿ ಹಾಗೂ 8 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆಗೊಳಿಸಿ ( DYSP and PI Transfer ) ಆದೇಶಿಸಿದೆ. ಈ ಕುರಿತಂತೆ ಪೊಲೀಸ್ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದ್ದು, ಈ ಕೂಡಲೇ ಜಾರಿಗೆ ಬರುವಂತೆ 45 ಡಿವೈಎಸ್ ಪಿ ಸಿವಿಲ್ ಅವರನ್ನು ವರ್ಗಾವಣೆಗೊಳಿಸಿ ಆದೇಶಿಸಿದ್ದಾರೆ.

Read More

ಉಡುಪಿ : ಅವಿಭಜಿತ ದ.ಕ.ಜಿಲ್ಲೆಯಲ್ಲಿ ಶಾಲಾ ಮಕ್ಕಳಲ್ಲಿ ಕಾಂಜಂಕ್ಟಿವಿಟಿಸ್ ಕಾಯಿಲೆ ಹೆಚ್ಚುತ್ತಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.ಈ ಸೋಂಕು ಕಣ್ಣುಗಳು ಕೆಂಪು ಅಥವಾ ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ಇದು ತುಂಬಾ ಸಾಂಕ್ರಾಮಿಕ ರೋಗ. ಉಡುಪಿಯಲ್ಲಿ ನವೆಂಬರ್‌ನಲ್ಲಿ 60 ಪ್ರಕರಣಗಳು ವರದಿಯಾಗಿದ್ದು, ಡಿಸೆಂಬರ್‌ನಲ್ಲಿ ಇದುವರೆಗೆ 15 ಪ್ರಕರಣಗಳು ಬೆಳಕಿಗೆ ಬಂದಿವೆ. ಕುಂದಾಪುರದ ಅಂಕಿಅಂಶಗಳು ನವೆಂಬರ್ ಮತ್ತು ಡಿಸೆಂಬರ್ ತಿಂಗಳಿಗೆ ಕ್ರಮವಾಗಿ 80 ಮತ್ತು 117 ಆಗಿದೆ. ಕಾರ್ಕಳದಲ್ಲಿ ನವೆಂಬರ್‌ನಲ್ಲಿ 124 ಕೆಂಗಣ್ಣು ಪ್ರಕರಣಗಳು ವರದಿಯಾಗಿದ್ದು, ಡಿಸೆಂಬರ್‌ನಲ್ಲಿ ಇದುವರೆಗೆ 395 ಪ್ರಕರಣಗಳು ಬೆಳಕಿಗೆ ಬಂದಿವೆ. ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಮದ್ರಾಸ್ ಕಣ್ಣಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಜಿಲ್ಲೆಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಲಭ್ಯವಿದೆ. ಸಾಮಾನ್ಯವಾಗಿ ಇದು ಒಂದು ವಾರದಲ್ಲಿ ಗುಣವಾಗುತ್ತದೆ. ಸೋಂಕಿತರು ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವಾಗ ಕನ್ನಡಕವನ್ನು ಧರಿಸುವುದು ಉತ್ತಮ

Read More

ಬಂಟ್ವಾಳ : ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳು ಬೆಂಕಿಗಾಹುತಿಯಾದ ಘಟನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ದೇವಂದಬೆಟ್ಟು ಎಂಬಲ್ಲಿ ನಡೆದಿದೆ. ಇಲ್ಲಿನ ದೇವಂದಬೆಟ್ಟು ನಿವಾಸಿಯಾಗಿರುವ ಸುಂದರಿ, ಶುಭ ಆನಂದ ಬಂಜನ್ ಎಂಬವರಿಗೆ ಸೇರಿರುವ ಮನೆಗೆ ನಿನ್ನೆ ರಾತ್ರಿ ಸುಮಾರು 10 .15 ರ ವೇಳೆಗೆ ಬೆಂಕಿ ಬಿದಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗಲಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಸುಮಾರು 6 ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ನಷ್ಟ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿ, ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.

Read More

ಉಡುಪಿ: ಬೈಕೊಂದು ನಿಯಂತ್ರಣ ತಪ್ಪಿ ರಸ್ತೆ ಮಧ್ಯೆ ಇರುವ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ಓರ್ವ ವಿದ್ಯಾರ್ಥಿ ಮೃತಪಟ್ಟು ಇಬ್ಬರು ಗಾಯಗೊಂಡ ಘಟನೆ ಉಡುಪಿ ಮಣಿಪಾಲದ ಟೈಗರ್ ಸರ್ಕಲ್ ಬಳಿ ನಡೆದಿದೆ. ಮೃತರನ್ನು ಸಹಸವಾರ ಶಿವಮೊಗ್ಗದ ಮೂಲದ ನಿಖಿಲ್ (23) ಎಂದು ಗುರುತಿಸಲಾಗಿದೆ. ಸವಾರ ನಿಹಾಲ್ ಹಾಗೂ ಇನ್ನೊರ್ವ ಸಹಸವಾರ ಮಹೇಂದ್ರ ಜಿ. ಎಂಬವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಇವರು ಮೂವರು ಮಣಿಪಾಲ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಟೆಕ್ ವಿದ್ಯಾರ್ಥಿಗಳಾಗಿದ್ದಾರೆ. ಇವರು ಮೂವರು ನಿನ್ನೆ ಬೆಳಗ್ಗೆ ಒಂದು ಬೈಕಿನಲ್ಲಿ ಕೆಳ ಪರ್ಕಳ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದು, ಈ ವೇಳೆ ನಿಂತ್ರಯಣ ತಪ್ಪಿದ ಬೈಕ್ ರಸ್ತೆಯ ಡಿವೈಡರ್‌ಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಮೂವರು ರಸ್ತೆಗೆ ಬಿದ್ದಿದ್ದು, ಇವರಲ್ಲಿ ತಲೆಗೆ ಗಂಭೀರವಾಗಿ ಗಾಯಗೊಂಡ ನಿಖಿಲ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಬೆಂಗಳೂರು: ಗಂಡ ಊಟಕ್ಕೆ ಬರಲಿಲ್ಲವೆಂದು ಬೇಸರಗೊಂಡು ಟೆಕ್ಕಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನೇಣಿಗೆ ಶರಣಾಗಿರುವ ಮಹಿಳೆಯನ್ನು ಸ್ವಾತಿ ಅಂತ ತಿಳಿದು ಬಂದಿದ್ದು, ಸ್ವಾತಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಆಕೆ ತನ್ನ ಬಾಲ್ಯದ ಗೆಳೆಯನ ಜೊತೆಗೆ ಕಳೆದೆರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು, ಅವರ ಮದುವೆಗೆ ಇಬ್ಬರ ಮನೆಯವರು ಕೂಡ ಒಪ್ಪಿಗೆ ನೀಡಿದ್ದರು ಎನ್ನಲಾಗಿದೆ. ಈ ನಡುವೆ ಎರಡು ದಿ‌ನದ ಹಿಂದೆ ಮನೆಯಲ್ಲಿ ಸ್ವಾತಿಗೆ ಇಶ್ಟವಿರದ ಅಡುಗೆ ಮಾಡಿದ್ದರಂತೆ. ಇದರಿಂದ ಬೇಸರಗೊಂಡಿದ್ದ ಸ್ವಾತಿ ಊಟ ಮಾಡದೇ ಮಲಗಿಕೊಂಡಿದ್ದರಂಂತೆ. ಮರು ದಿನ ಬೆಳಗ್ಗೆ ಗಂಡ ದಾಮೋದರ್‌, ಸ್ವಾತಿಗೆ ಕರೆ ಮಾಡಿ ಇಂದು ಮಧ್ಯಾಹ್ನ ಜೊತೆಯಲ್ಲಿ ಊಟ ಮಾಡೋಣ ಅಂತ ಹೇಳಿ ಸಮಾಧಾನ ಮಾಡಿದ್ದಾರೆ. ದಾಮೋದರ್‌ ಸ್ವಾತಿ ಆಫೀಸ್‌ಗೆ ಊಟವನ್ನು ಆನ್‌ಲೈನ್‌ ಮೂಲಕ ಬುಕ್‌ ಮಾಡಿದ್ದಾರೆ. ಆದರೆ ದಾಮೋದರ್‌ ಕೆಲಸದ ಒತ್ತಡದಿಂದ ಅಂದು ಸ್ವಾತಿ ಜೊತೆಗೆ ಊಟಕ್ಕೆ ಹೋಗಿಲ್ಲ ಎನ್ನಲಾಗಿದೆ. ಇದನ್ನೇ ಮನಸ್ಸಿಗೆ ಹಚ್ಚಿಕೊಂಡ ಸ್ವಾತಿ ಮನೆಗೆ ಬಂದು ಯಾರು…

Read More

ಬೆಳ್ತಂಗಡಿ: ಉಜಿರೆ ಸಮೀಪದ ಪೆರ್ಲದಲ್ಲಿ ಪುರಾತನ ಶಿವಲಿಂಗವೊಂದು ಪತ್ತೆಯಾದ ಘಟನೆ ನಡೆದಿದೆ. ಗ್ರಾಮಸ್ಥರಿಂದ ಪುರಾತನ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ನವೀಕರಣಕ್ಕಾಗಿ ದೈವಜ್ಞರಿಂದ ಅಷ್ಟಮಂಗಲ ಪ್ರಶ್ನೆ ಇಟ್ಟ ಸಂದರ್ಭದಲ್ಲಿ ದೇವಸ್ಥಾನದ ಕುರುಹು ಇದ್ದ ಪಕ್ಕದ ಮಣ್ಣಿನಡಿಯಲ್ಲಿ ಪುರಾತನ ಶಿವಲಿಂಗವೊಂದು ಡಿ.16 ರಂದು ಪತ್ತೆಯಾಗಿದೆ.ಡಿ.8 ಮತ್ತು 9 ಹಾಗೂ 15 ಮತ್ತು 16ರಂದು ದೈವಜ್ಞರಾದ ನೆಲ್ಯಾಡಿ ಶ್ರೀಧರ ಗೋರೆಯವರ ನೇತೃತ್ವದಲ್ಲಿ ಅಷ್ಟಮಂಗಲ ಪ್ರಶ್ನೆ ನಡೆಯುತ್ತಿತ್ತು. ಈ ವೇಳೆ ಪರಿಸರದಲ್ಲಿ ಶಿವನ ಸಾನಿಧ್ಯವಿದೆಯೆಂದು ಗೋಚರಿಸುತ್ತದೆ ಎಂದು ತಿಳಿಸಿದ್ದರು ಅಂತೆಯೇ ಅವರು ತಿಳಿಸಿದ ಜಾಗದಲ್ಲಿ ಅಗೆದಾಗ ಮಣ್ಣಿನಡಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ.ಸುಮಾರು 2 ರಿಂದ 3 ಅಡಿ ಉದ್ದದ ಶಿವಲಿಂಗದ ಪಾಣಿಪೀಠ ಇರುವ ಶಿವಲಿಂಗವಾಗಿದೆ.ಸುಮಾರು 400 ರಿಂದ 500 ವರ್ಷಗಳಷ್ಟು ಹಳೆಯದಾಗಿದೆ ಎಂದು ತಿಳಿದುಬಂದಿದ್ದು ಶಿವಲಿಂಗ ಪ್ರತಿಷ್ಟೆಯಾಗಬೇಕು ಎಂದು ಕಂಡುಬಂದಿದೆ.

Read More

ಮಂಗಳೂರು: ತಿಂಗಳ ಮೂರನೇ ಶನಿವಾರವಾದ ಸೆ.17ರ ಬೆಳಿಗ್ಗೆ 11 ಗಂಟೆಯಿಂದ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕಜೆಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಗ್ರಾಮ ವಾಸ್ತವ್ಯ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಅವರು ಅಲ್ಲಿನ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಕೆಲವೊಂದು ಸಮಸ್ಯೆಗಳನ್ನು ಆದಷ್ಟು ಸ್ಥಳದಲ್ಲಿಯೇ ಬಗೆಹರಿಸಲು ಉದ್ದೇಶಿಸಿರುತ್ತಾರೆ, ಕಾರಣ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ಅಪರ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕರಾವಳಿ ಭಾಗ ಸೇರಿದಂತೆ ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧ ಹೋರಾಟ ನಡೆಸುತ್ತಿದ್ದ ಬೆನ್ನಲ್ಲೇ ದಿನಕೊಂದು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇದೆ. ಇಂತಹದ್ದೇ ದ‌.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದ ದಾಸಕೋಡಿ ಬಳಿ ಹಿಂದೂ ಯುವತಿ- ಮುಸ್ಲಿಂ ಯುವಕನೊಂದಿಗೆ ಬೆಂಗಳೂರು ಬಸ್ಸಿನಲ್ಲಿ ಪ್ರಯಾಣಿಸುವುದು ಸಿಕ್ಕಿಬಿದಿದ್ದು, ಬಸ್ಸನ್ನುಅಡ್ಡಗಟ್ಟಿ ಭಜರಂಗದಳ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ. ಮುಸ್ಲಿಂ ಯುವಕ ಮಹಮ್ಮದ್ ರಾಯಿಫ್​ನೊಂದಿಗೆ ಹಿಂದೂ ಯುವತಿ ನಿಧಿ ಶೆಟ್ಟಿ ಪ್ರಯಾಣಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಕೂಡಲೇ ಭಜರಂಗದಳ ಕಾರ್ಯಕರ್ತರು ಬಸ್ಸು ತಡೆಯೋದಕ್ಕೆ ಮುಂದಾಗಿದ್ದು, ಈ ಸಂರ್ಭದಲ್ಲಿ ಭಜರಂಗ ದಳದ ಕಾರ್ಯಕರ್ತರಿಗೆ ಹಿಂದೂ ಯುವತಿ ಬಸ್ಸಿನಲ್ಲೆ ನಿಂತುಕೊಂಡು ರಂಪಾಟ ಮಾಡಿದ್ದಾಳೆ. ಹಿಂದೂ ಯುವತಿಗೆ ಭಜರಂಗದಳ ಕಾರ್ಯಕರ್ತರು ಕ್ಲಾಸ್ಟ್‌ ತೆಗೆದುಕೊಂಡು , ಬಂಟ್ವಾಳ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ನೈತಿಕ ಪೊಲೀಸ್ ಗಿರಿ ಮೆರೆದಿದ್ದಾರೆ

Read More