ಬೆಂಗಳೂರು: ಮೊನ್ನೆಯಷ್ಟೇ ರಾತ್ರಿ ಓಡಾಡುತ್ತಿದ್ದ ದಂಪತಿಯಿಂದ ದಂಡ ವಸೂಲಿ ಮಾಡಿ ಪೊಲೀಸರು ಅಮಾನತುಗೊಂಡ ಪ್ರಕರಣ ಮಾಸುವ ಮುನ್ನವೇ ನಗರದಲ್ಲಿ ಮತ್ತೊಂದು ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಸಾರ್ವಜನಿಕರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ.ಆಡುಗೋಡಿ ಠಾಣೆ ಕಾನ್‌ಸ್ಟೇಬಲ್‌ಗಳಾದ ಅರವಿಂದ್ ಮತ್ತು ಮಾಳಪ್ಪ ಬಿ.ವಾಲಿಕಾರ್ ಅಮಾನತುಗೊಂಡಿದ್ದಾರೆ.ಚೈತ್ರ ರತ್ನಾಕರ್ ಹಾಗೂ ಚೀರಾಸ್ ಎಂಬವರು ಕೋರಮಂಗಲದ ನೆಕ್ಸಾಸ್ ಮಾಲ್ ಬಳಿ ಸಿಗರೇಟ್ ಸೇದುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಇಬ್ಬರು ಪೇದೆಗಳು, ಹಣ ನೀಡುವಂತೆ ಹೇಳಿದ್ದಾರೆ. ಇಲ್ಲದಿದ್ದರೆ ಎಫ್‌ಐಆರ್ ದಾಖಲು ಮಾಡ್ತೀವಿ ಎಂದು ಬೆದರಿಸಿದ್ದಾರೆ.ಪೊಲೀಸರ ಅವಾಜ್‌ಗೆ ಹೆದರಿದ ರತ್ನಾಕರ್ ಮತ್ತು ಚೀರಾಸ್, ಕಾನ್‌ಸ್ಟೇಬಲ್‌ಗಳಿಗೆ ಪರಿಚಿತರ ಟೀ ಅಂಗಡಿಯವರಿಂದ 4 ಸಾವಿರ ರೂ. ಹಣವನ್ನು ಫೋನ್‌ಪೇ ಮಾಡಿಸಿದ್ದಾರೆ. ಈ ಬಗ್ಗೆ ರತ್ನಾಕರ್ ಎಂಬಾತ ಡಿಜಿ-ಐಜಿಪಿಗೆ ಟ್ವೀಟ್ ಮಾಡಿ ದೂರು ನೀಡಿದ್ದರು.
Author: main-admin
ನವದೆಹಲಿ: ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ದೀಪಂಕರ್ ದತ್ತಾ(Dipankar Datta) ಅವರು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ನ್ಯಾಯಮೂರ್ತಿ ದತ್ತಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಇದರೊಂದಿಗೆ ಸಿಜೆಐ ಸೇರಿದಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ಕೇಂದ್ರ ಕಾನೂನು ಸಚಿವಾಲಯದ ನ್ಯಾಯಾಂಗ ಇಲಾಖೆಯು ಭಾನುವಾರ ನ್ಯಾಯಮೂರ್ತಿ ದತ್ತಾ ಅವರನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕ ಮಾಡುವ ಅಧಿಸೂಚನೆಯನ್ನು ಪ್ರಕಟಿಸಿತ್ತು. ಫೆಬ್ರವರಿ 9, 1965 ರಂದು ಜನಿಸಿದ ನ್ಯಾಯಮೂರ್ತಿ ದತ್ತಾ ಅವರು, ಸುಪ್ರೀಂ ಕೋರ್ಟ್‌ನಲ್ಲಿ ಫೆಬ್ರವರಿ 8, 2030 ರವರೆಗೆ ಅಧಿಕಾರಾವಧಿಯನ್ನು ಹೊಂದಿರುತ್ತಾರೆ.
ಉಳ್ಳಾಲ: ಸಮುದ್ರಕ್ಕೆ ಸ್ಥಾನಕ್ಕೆ ಇಳಿದ ವ್ಯಕ್ತಿ ಸಮುದ್ರಪಾಲಾಗಿರುವ ಘಟನೆ ಉಳ್ಳಾಲ ಸೋಮೇಶ್ವರ ಸಮುದ್ರತೀರದಲ್ಲಿ ಸಂಭವಿಸಿದೆ. ಅಂಬಿಕಾರೋಡ್ ನಿವಾಸಿ ಪ್ರಶಾಂತ್ ಬೇಕಲ್ (47) ಮೃತರು. ಪ್ರಶಾಂತ್ ಉಳ್ಳಾಲ ಸೋಮೇಶ್ವರ ಸಮದ್ರಕ್ಕೆ ಪುತ್ರ ಚಿರಾಯು, ಸಹೋದರ ವರದರಾಜ್ ಅವರ ಪುತ್ರ ವಂದನ್, ಸ್ನೇಹಿತ ಮಣಿ ಎಂಬವರ ಜತೆಗೆ ತೆರಳಿ ಈಜಲು ಸಮುದ್ರಕ್ಕೆ ಇಳಿದಿದ್ದರು. ಮೃತ ಪ್ರಶಾಂತ್ ಅವರ ಪುತ್ರ ಚಿರಾಯು ಈಜುಪಟುವಾಗಿದ್ದಾನೆ. ತಂದೆ ನೀರುಪಾಲಾಗುವುದು ನೋಡಿ ಹಗ್ಗದ ಸಹಾಯದಿಂದ ಅಲೆಗಳ ನಡುವಿನಿಂದ ಮೇಲಕ್ಕೆತ್ತಿದ್ದಾನೆ. ಆದರೆ ಪ್ರಶಾಂತ್ ಮೃತಪಟ್ಟಿದ್ದಾರೆ
ಬಂಟ್ವಾಳ: ನ್ಯಾಯವಾದಿ ಮೇಲೆ ದೌರ್ಜನ್ಯ ನಡೆಸಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯ ಎಸ್ ಐ ಸುತೇಶ್ ಅಮಾನತುಗೊಂಡಿದ್ದಾರೆ. ನ್ಯಾಯವಾದಿ ಕುಲದೀಪ್ ಶೆಟ್ಟಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಎಸ್ ಐ ಸುತೇಶ್ ಅವರನ್ನು ಅಮಾನತು ಮಾಡಿ ಪಶ್ಚಿಮ ವಲಯದ ಡಿಐಜಿ ಡಾ. ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.ಜಾಗದ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಕುಲದೀಪ್ ಶೆಟ್ಟಿ ಅವರ ಮನೆಗೆ ನುಗ್ಗಿದ ಪೂಂಜಾಲಕಟ್ಟೆ ಪೊಲೀಸರು ಅವರ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೆ, ಈ ವಿಚಾರಕ್ಕೆ ಸಂಬಂಧಿಸಿದಂತೆ ವಕೀಲರು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿದ್ದರು.ಹಲ್ಲೆ ನಡೆಸಿದ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಎಸ್ ಐ ಸುತೇಶ್ ಅವರನ್ನು ದ.ಕ. ಜಿಲ್ಲಾ ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಕಠಿಣ ಕ್ರಮಕ್ಕೆ ಆಗ್ರಹಿಸಿ ವಕೀಲರು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದರು. ಇದೀಗ ಪಶ್ಚಿಮ ವಲಯ ಡಿಐಜಿ ಡಾ. ಚಂದ್ರಗುಪ್ತ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಮಂಗಳೂರು : ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರು ಬಜರಂಗದಳದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಬಂಧಿತರನ್ನು ಶಿಬಿನ್, ಗಣೇಶ್, ಪ್ರಕಾಶ್, ಚೇತನ್ ಎಂಬವರನ್ನು ಬಂಧಿಸಲಾಗಿದೆ.ಡಿ.6ರಂದು ಘಟನೆ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಕಂಕನಾಡಿಯ ಜ್ಯುವೆಲರಿ ಶಾಪ್ಗೆ ನುಗ್ಗಿದ ಬಜರಂಗದಳದ ಕಾರ್ಯಕರ್ತರು ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಇದೀಗ ಪೊಲೀಸರು ನಾಲ್ವರು ಬಜರಂಗದಳದ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಮಂಗಳೂರಿನ ಕಂಕನಾಡಿನ ಬಳಿ ಇರುವ ಜ್ಯುವೆಲ್ಲರಿ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಅನ್ಯಕೋಮಿನ ಯುವಕ ಹಿಂದೂ ಯುವತಿ ಜೊತೆ ಇದ್ದದ್ದನ್ನು ಕಂಡು ಲವ್ ಜಿಹಾದ್ ಆರೋಪ ಮಾಡಿ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. . ಹಿಂದೂ ಸಂಘಟನೆ ಕಾರ್ಯಕರ್ತರು ಬಂಟ್ವಾಳ ಮೂಲದ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಉಡುಪಿ: ಉಡುಪಿ ಸಬ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದ ಸದಾನಂದ ಸೇರಿಗಾರ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಪಂಚೆಯಿಂದ ನೇಣು ಬಿಗಿದು ಇಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುಮಾರು 20 ಮಂದಿ ಕೈದಿಗಳಿದ್ದ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಇದನ್ನು ಗಮನಿಸಿದ ಸಹ ಕೈದಿಗಳು ನೇಣಿನ ಕುಣಿಕೆಯಿಂದ ಬಿಡಿಸಿದ್ದರು. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದ್ದಾನೆ. ಕಾರ್ಕಳ ಮೂಲದ ಸದಾನಂದ ಸೇರಿಗಾರ್, ಸರ್ವೇಯರ್ ಆಗಿದ್ದ. ಜಿಲ್ಲೆಯ ಬೈಂದೂರು ತಾಲೂಕಿನ ಒತ್ತಿನೆಣೆ ಎಂಬಲ್ಲಿ ಸುಟ್ಟ ಕಾರಿನಲ್ಲಿ ತಾನೇ ಸತ್ತಿರುವುದಾಗಿ ಬಿಂಬಿಸಲು ಹೊರಟು ಬಂಧಿಯಾಗಿದ್ದ ಆರೋಪಿ ಈತ.ಕುರುಪ್ ಸಿನಿಮಾ ಮಾದರಿಯಲ್ಲಿ ಕೊಲೆ ಮಾಡಿ ಗಮನ ಸೆಳೆದಿದ್ದ ಪ್ರಕರಣ ಇದಾಗಿತ್ತು.ಬಳಿಕ ಈತನನ್ನು ಬಂಧಿಸಿ ಸಬ್ ಜೈಲಿನಲ್ಲಿ ಇಡಲಾಗಿತ್ತು.
ಮಂಗಳೂರು: ಸುತ್ತಾಡುತ್ತಿದ್ದ ಯುವಕ, ಯುವತಿಯರ ಮೇಲೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆಗೆ ಯತ್ನಿಸಿರುವ ಘಟನೆ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿರುವುದಾಗಿ ವರದಿಯಾಗಿದೆ. ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಯುವಕ, ಯುವತಿಯರು ಮಂಗಳೂರು ನಗರದ ಕೊಟ್ಟಾರದ ಹೊಟೇಲ್ ವೊಂದಕ್ಕೆ ಊಟ ಮಾಡಲು ಬಂದಿದ್ದರು ಎನ್ನಲಾಗಿದೆ. ಇವರನ್ನು ಕಂಡ ಸಂಘಪರಿವಾರದ ಕಾರ್ಯಕರ್ತರು “ಮಧ್ಯರಾತ್ರಿ ಯಾವ ಹೊಟೇಲ್ ಇದೆ ಅಂತ ಹೇಳಿ” ಹಲ್ಲೆಗೆ ಯತ್ನಿಸಿರುವುದಾಗಿ ತಿಳಿದುಬಂದಿದೆ. ಪೊಲೀಸರು ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ತಿಳಿಗೊಳಿಸಿ, ಯುವಕ, ಯುವತಿಯರನ್ನು ಮನೆಗೆ ಕಳುಹಿಸಲಾಯಿತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರುಗಳು ದಾಖಲಾಗಿಲ್ಲ.
ಚಳಿಗಾಲದಲ್ಲಿ ಮೂಲಂಗಿ ಒಂದು ಔಷಧಿಗೆ ಕಡಿಮೆ ಏನಿಲ್ಲ. ಚಳಿಗಾಲದಲ್ಲಿ ಉಪ್ಪಿನಕಾಯಿ ಅಥವಾ ಯಾವುದೇ ಒಂದು ಕರ್ರಿಯ ಜೊತೆಗೆ ಮೂಲಂಗಿ ಪರಾಠ ತಿನ್ನಲು ಜನ ಹೆಚ್ಚಿಗೆ ಇಷ್ಟಪಡುತ್ತಾರೆ, ಆದರೆ ಈ ಮೂಲಂಗಿ ಎಲ್ಲರಿಗೂ ಪ್ರಯೋಜನಕಾರಿಯಲ್ಲ ಎಂದು ನಿಮಗೆ ತಿಳಿದಿದೆಯೇ. ಕೆಲವು ಕಾಯಿಲೆಗಳಲ್ಲಿ, ಇದನ್ನು ತಿನ್ನುವುದು ವಿಷಕ್ಕೆ ಸಮಾನ. ಏಕೆಂದರೆ ಆ ಕಾಯಿಲೆಗಳನ್ನು ಉಲ್ಬಣಿಸುವ ಕೆಲಸ ಮಾಡುತ್ತದೆ. ಆದ್ದರಿಂದ, ನೀವು ಮೂಲಂಗಿಯನ್ನು ತಿನ್ನಲು ಇಷ್ಟಪಡುತ್ತಿದ್ದರೆ, ಯಾವ ಕಾಯಿಲೆಗಳು ಇರುವ ಸಂದರ್ಭದಲ್ಲಿ ಮೂಲಂಗಿಯು ಪ್ರಯೋಜನಕ್ಕೆ ಬದಲಾಗಿ ಹಾನಿಯನ್ನು ಉಂಟು ಮಾಡುತ್ತದೆ ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು. ನೀವು ಅಧಿಕ ರಕ್ತದ ಸಕ್ಕರೆ, ಕಿಡ್ನಿ ಅಥವಾ ಕಡಿಮೆ ಬಿಪಿಯಂತಹ ಸಮಸ್ಯೆಗಳಿಂದ ಬಳಸುತ್ತಿದ್ದರೆ, ಮೂಲಂಗಿಯನ್ನು ತಿನ್ನುವ ಮೊದಲು ಈ ವಿಷಯವನ್ನು ಖಂಡಿತವಾಗಿ ತಿಳಿದುಕೊಳ್ಳಿ.1. ಗ್ಯಾಸ್ ಸಮಸ್ಯೆ ಇರುವವರುನಿಮಗೂ ಕೂಡ ಗ್ಯಾಸ್ ಸಮಸ್ಯೆ ಇದ್ದರೆ, ರಾತ್ರಿಯಲ್ಲಿ ಮರೆತೂ ಕೂಡ ಮೂಲಂಗಿಯನ್ನು ಸೇವಿಸಬೇಡಿ, ಏಕೆಂದರೆ ಹೀಗೆ ಮಾಡುವುದರಿಂದ ಹೊಟ್ಟೆಯ ತೊಂದರೆಗಳು ಹೆಚ್ಚಾಗಬಹುದು ಮತ್ತು ಜಠರದುರಿತದಿಂದ ನಿದ್ರೆಗೆ ತೊಂದರೆಯಾಗಬಹುದು ಮತ್ತು ಇತರರಿಗೂ ಕೂಡ…
ಮಂಗಳೂರು : ಶಿರಾಡಿ ಘಾಟ್ ರಸ್ತೆಗೆ ಶಾಶ್ವತ ಪರಿಹಾರ ನೀಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರೊಂದಿಗೆ ಈ ವಾರದಲ್ಲಿ ವಿಶೇಷ ಸಭೆ ಕರೆದು ಚರ್ಚಿಸಿ ಸಮಗ್ರ ಪರಿಹಾರ ಒದಗಿಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಡಾ: ಪ್ರಭಾಕರ್ ಕಲ್ಲಡ್ಕ ಅವರ ಶಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಡಾಂಬರೀಕರಣ, ವೈಟ್ ಟಾಪಿಂಗ್ ಹಾಗೂ ಸುರಂಗ ಮಾಡುವ ಬಗ್ಗೆ ಸಮಗ್ರವಾಗಿ ಈ ವಾರದಲ್ಲಿ ಚರ್ಚಿಸಿ ಪರಿಹಾರ ಒದಗಿಸಿಕೊಡಲಾಗುವುದು ಎಂದರು.
ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66 ಕಟಪಾಡಿ ಜಂಕ್ಷನ್ ನಲ್ಲಿ ಪ್ರತಿದಿನ ಅಪಘಾತ ಸಂಭವಿಸುತ್ತಿದೆ. ಕಳೆದ ಒಂದು ತಿಂಗಳಲ್ಲಿ ಇಲ್ಲಿ ಹಲವು ಜೀವಗಳು ಅಪಘಾತಕ್ಕೆ ಬಲಿಯಾಗಿವೆ. ಅವೈಜ್ಞಾನಿಕ ರಸ್ತೆ ನಿರ್ಮಾಣ ಒಂದೆಡೆಯಾದರೆ, ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸದೇ ಇರುವುದೂ ಅಪಘಾತಗಳಿಗೆ ಕಾರಣವಾಗುತ್ತಿವೆ. ಇವತ್ತು ಪೊಲೀಸ್ ಇಲಾಖೆಯಿಂದ ಮುಂಜಾಗ್ರತಾ ಕ್ರಮವಾಗಿ ವಾಹನ ಸವಾರರಿಗೆ ಜಾಗೃತಿ ಮೂಡಿಸುವ ಸೂಚನಾ ಫಲಕವನ್ನು ಕಟಪಾಡಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಅಳವಡಿಸಲಾಯಿತು. ಕಾಪು ವೃತ್ತ ನಿರೀಕ್ಷಕರಾದ ಪೂವಯ್ಯ, ಕಾಪು ಠಾಣಾಧಿಕಾರಿ ಶ್ರೀಶೈಲ ಮುರಗೋಡ ಮತ್ತು ಕಟಪಾಡಿ ಉಪ ಠಾಣಾ ಸಿಬ್ಬಂದಿ ರುಕ್ಮಯ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.