Author: main-admin

ಬೆಂಗಳೂರು: ಒಂದೇ ಠಾಣೆಯಲ್ಲಿ ಪೋಲಿಸ್‌ ದಂಪತಿಗಳಿಗೆ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಅಂತ ಡಿಜಿ & ಐಜಿಪಿ ಪ್ರವೀಣ್ ಸೂದ್​ ಅವರು ಹೇಳಿದ್ದಾರೆ ಅವರು ಇಂದು ನಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು. ಇದೇ ವೇಳೆ ಅವರು ಮಾತನಾಡಿ, ಹೆಂಡ್ತಿ ಒಂದು ಕಡೆ ಗಂಡ ಒಂದು ಕಡೆ ಕೆಲಸ ಮಾಡುತ್ತಿದ್ದರೇ ಅದು ಸರಿ ಬರೋದಿಲ್ಲ,. ಈ ಬಗ್ಗೆ ಸಿಎಂ ಮತ್ತು ಗೃಹ ಸಚಿವರ ಗಮನಕ್ಕೆ ತರಲಾಗಿದ್ದು, ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಅಂತ ತಿಳಿಸಿದರು. ಇನ್ನೂ ಕೆ.ಆರ್​.ಪುರಂ ಠಾಣೆ ಇನ್ಸ್​ಪೆಕ್ಟರ್​​ ನಂದೀಶ್​ ಸಾವು ಬಗ್ಗೆ ತನಿಖೆ ನಡೆಸಲು ಸಿಎಂ ಸೂಚಿಸಿದ್ದಾರೆ ಅಂತ ಅವರು ಹೇಳಿದ್ದು, ಇದೇ ವೇಳೆ ಅವರು ಈ ಬಗ್ಗೆ ನಾವು ಇಲಾಖೆ ಮಟ್ಟದಲ್ಲಿ ತನಿಖೆ ಮಾಡುತ್ತೇವೆ. ಪ್ರಕರಣದ ತನಿಖೆ ಮಾಡಿದ ವರದಿ ಸಲ್ಲುತ್ತೇವೆ ಅಂತ ಇದೇ ವೇಳೆ ತಿಳಿಸಿದರು.

Read More

ಮಂಗಳೂರು: ಹರೇಕಳ-ಅಡ್ಯಾರ್ ಅಣೆಕಟ್ಟು ಬಳಿ ದೋಣಿಯೊಂದು ಮಗುಚಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರವಿವಾರ ನಡೆದಿರುವುದಾಗಿ ವರದಿಯಾಗಿದೆ.ಅಡ್ಯಾರ್ ಕಟ್ಟೆ ನಿವಾಸಿ ರಾಬರ್ಟ್ (70) ಮೃತಪಟ್ಟವರು ಎಂದು ಗುರುತಿಸಲಾಗಿದೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಅವರನ್ನು ತಕ್ಷಣ ಸ್ಥಳೀಯರು ರಕ್ಷಿಸಿದರು.ತೀವ್ರ ಅಸ್ವಸ್ಥಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಬರ್ಟ್ ಮೃತಪಟ್ಟರು ಎಂದು ಪ್ರಕರಣ ದಾಖಲಿಸಿರುವ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ತಿಳಿಸಿದ್ದಾರೆ

Read More

ಮಂಗಳೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನೀಡಲ್ಪಡುವ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದೆ. ವಿವಿಧ ಕ್ಷೇತ್ರದ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರಾವಳಿಯಿಂದ ಪ್ರತಿಷ್ಠಿತ ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಸಮಾಜ ಸೇವಕ ಹೊನ್ನಯ್ಯ ಕುಲಾಲ್ ರವರು ಆಯ್ಕೆಯಾಗಿದ್ದರೆ. ಇವರ ಹಿನ್ನೆಲೆ: ಅದೆಷ್ಟೋ ನಿರ್ಗತಿಕರಿಗೆ,ಆಸರೆ ಕಲ್ಪಿಸಿ,ಸಮಾಜದಲ್ಲಿ ನೊಂದವರಿಗೆ ಸಹಾಯ ಮಾಡಿ,ಜತೆಗೆ ಜನ ಜಾಗೃತಿ ಮೂಡಿಸಿ ಬಡ ಜನರ ಆಶಕ್ತರ ಅಪತ್ ಬಾಂಧವರರಾಗಿ ದಿವಂಗತ ಗೋಪಾಲ ಸಾಲ್ಯಾನ್ ರವರ ಪುತ್ರ ಹೊನ್ನಯ್ಯ ಕುಲಾಲ್ ರವರು ಶ್ರೀಗುರು ಚೈತನ್ಯ ಸೇವಾ ಪ್ರತಿಷ್ಠಾನ ಚಾರಿಟೇಬಲ್ ಟ್ರಸ್ಟ್ ಎಂಬ ಸಂಸ್ಥೆ ಯನ್ನು ಕಳೆದ 2006ನೇ ಇಸವಿಯಲ್ಲಿ ಸ್ಥಾಪಿಸಿ ಸಮಾಜ ಸೇವೆಗೈದವರು.ಮೂಲತ: ಮಂಗಳೂರು ತಾಲೂಕಿನ ಕಾಟಿಪಳ್ಳ ಹುಟ್ಟೂರಾದರೆ, ಬೆಳ್ತಂಗಡಿ ತಾಲೂಕಿನ ಗುಂಡೂರಿ ಗ್ರಾಮದಲ್ಲಿ ಶಾಶ್ವತ ನೆಲೆನಿಂತು ಅಲ್ಲೇ ಅಬಲೆಯರ ಪುನರ್ವಸತಿ ಕೇಂದ್ರ ಸ್ಥಾಪಿಸಿ ಇತರೇ ಫಲಾಪೇಕ್ಷೆ ‌ಪಡೆಯದೇ ಜನಸೇವೆ ಮಾಡುತ್ತಾ‌ ಬಂದಿರುತ್ತಾರೆ. ಇವರು 2022ನೇ‌ ಸಾಲಿನ ಸಮಾಜ ಸೇವೆಗಾಗಿ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗೆ ಭಾಜನರಾಗಿದ್ದಾರೆ.

Read More

ಮುಂಬೈ : ಸರ್ಕಾರಿ ಗೌಪ್ಯತೆ ಕಾಯ್ದೆಯಡಿ ವ್ಯಾಖ್ಯಾನಿಸಲಾದ ನಿಷೇಧಿತ ಸ್ಥಳದಲ್ಲಿ ಪೊಲೀಸ್ ಠಾಣೆಯನ್ನ ಸೇರಿಸಲಾಗಿಲ್ಲ. ಆದ್ದರಿಂದ ಅದರೊಳಗೆ ವೀಡಿಯೊ ರೆಕಾರ್ಡಿಂಗ್ ಮಾಡುವುದನ್ನ ಅಪರಾಧ ಎನ್ನಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋಟ್‍ ನಾಗ್ಪುರ ಪೀಠ ಹೇಳಿದೆ. ನ್ಯಾಯಮೂರ್ತಿಗಳಾದ ಮನೀಶ್ ಪಿತಾಲೆ ಮತ್ತು ವಾಲ್ಮೀಕಿ ಮೆನೆಜಸ್ ಅವರ ವಿಭಾಗೀಯ ಪೀಠವು 2018ರ ಮಾರ್ಚ್‍ನಲ್ಲಿ ಪೊಲೀಸ್ ಠಾಣೆಯೊಳಗೆ ವೀಡಿಯೊವನ್ನ ರೆಕಾರ್ಡ್ ಮಾಡಿದ್ದಕ್ಕಾಗಿ ಅಧಿಕೃತ ರಹಸ್ಯ ಕಾಯ್ದೆ (OSA) ಅಡಿಯಲ್ಲಿ ರವೀಂದ್ರ ಉಪಾಧ್ಯಾಯ ಎಂಬವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನ ಈ ವರ್ಷದ ಜುಲೈನಲ್ಲಿ ರದ್ದುಗೊಳಿಸಿತ್ತು. ನ್ಯಾಯಪೀಠವು ತನ್ನ ಆದೇಶದಲ್ಲಿ, ನಿಷೇಧಿತ ಸ್ಥಳಗಳಲ್ಲಿ ಬೇಹುಗಾರಿಕೆಗೆ ಸಂಬಂಧಿಸಿದ ಒಎಸ್‌ಎಯ ಸೆಕ್ಷನ್ 3 ಮತ್ತು ಸೆಕ್ಷನ್ 2 (8) ಅನ್ನು ಉಲ್ಲೇಖಿಸಿದೆ. ಪೊಲೀಸ್ ಠಾಣೆಯು ಕಾಯ್ದೆಯಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾದ ನಿಷೇಧಿತ ಸ್ಥಳವಲ್ಲ ಎಂದು ನ್ಯಾಯಪೀಠವು ಗಮನಿಸಿದೆ. ‘ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 2(8)ರಲ್ಲಿ ನೀಡಲಾದ ನಿಷೇಧಿತ ಸ್ಥಳದ ವ್ಯಾಖ್ಯಾನವು ಪ್ರಸ್ತುತವಾಗಿದೆ. ಇದು ಒಂದು ಸಂಪೂರ್ಣ ವ್ಯಾಖ್ಯಾನವಾಗಿದೆ, ಇದು ಪೊಲೀಸ್ ಠಾಣೆಯನ್ನ ನಿಷೇಧಿತ…

Read More

ಬಂಟ್ವಾಳ: ಮನೆಯೊಂದರಲ್ಲಿ ಚಿನ್ನ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೇರಳ ರಾಜ್ಯದ ತಳಿಪರಂಬದ 42 ವರ್ಷದ ಮಹಮ್ಮದ್‌ ಕೆ.ಯು. ಎಂದು ಗುರುತಿಸಲಾಗಿದೆ. ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಎಂಬಲ್ಲಿರುವ ಹಂಝ ಮುರ ಉಮ್ಮರ್‌ ಎಂಬುವವರ ಮನೆಯಲ್ಲಿ ಸಂಬಂಧಿಕರು ಹಾಗೂ ಮನೆಯವರು ಮನೆಯಲ್ಲಿ ಇರುವಾಗಲೇ ಮಾರ್ಚ್ 9 ರ ರಾತ್ರಿ ಸಮಯ 11 ಗಂಟೆಯಿಂದ ದಿನಾಂಕ 10-03-2022 ರಂದು ಬೆಳಗ್ಗಿನ ಜಾವ 4 ಗಂಟೆಯ ಸಮಯ ಮನೆಯ ಹಿಂಬಾಗಿಲು ಮುರಿದು ಮನೆಯ ಕಪಾಟಿನಲ್ಲಿದ್ದ ಒಟ್ಟು 107 ಗ್ರಾಂ ನಷ್ಟು ಚಿನ್ನವನ್ನು ಕಳ್ಳತನ ಮಾಡಲಾಗಿತ್ತು. ಕಳವಾಗಿದ್ದ ಇದರ ಅಂದಾಜು ಮೌಲ್ಯ 4,28,000 ರೂಪಾಯಿ ಆಗಿತ್ತು. ಈ ಕುರಿತು  ನೀಡಿದ ದೂರಿನ ಆಧಾರದಲ್ಲಿ ವಿಟ್ಲ ಪೊಲೀಸ್‌  ಠಾಣಾ ಅಕ್ರ 38/2022 ಕಲಂ 457 380  ಐಪಿಸಿಯಂತೆ  ಪ್ರಕರಣ ದಾಖಲಾಗಿ ತನಿಖೆಯಲ್ಲಿತ್ತು. ಆರೋಪಿಯನ್ನು ವಶಕ್ಕೆ ಪಡೆದು ಅದರಂತೆ ಈ ಮೇಲಿನ ಪ್ರಕರಣದ ಬಗ್ಗೆ ವಿಚಾರಿಸಿದಾಗ ಕಳ್ಳತನವಾದ ಸ್ವತ್ತುಗಳನ್ನು ಕಾಸರಗೂಡಿನಲ್ಲಿ ಮಾರಾಟ ಮಾಡಿದ…

Read More

ಕಡಬ, ಅ.30: ಕಾರು ಹಾಗೂ ಜೀಪ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಗಂಭೀರ ಗಾಯಗೊಂಡ ಘಟನೆ ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಿಳಿನೆಲೆ ಎಂಬಲ್ಲಿ ರವಿವಾರ ಬೆಳಗ್ಗೆ ನಡೆದಿದೆ. ಸುಬ್ರಹ್ಮಣ್ಯದಿಂದ ಕಡಬ ಕಡೆಗೆ ಹೋಗುತ್ತಿದ್ದ ಜೀಪ್ ಹಾಗೂ ಸುಬ್ರಹ್ಮಣ್ಯ ಕಡೆಗೆ ತೆರಳುತ್ತಿದ್ದ ಕಾರು ನಡುವೆ ಬಿಳಿನೆಲೆ ಸೇತುವೆಯ ಸಮೀಪ ಮುಖಾಮುಖಿ ಢಿಕ್ಕಿಯಾಗಿದೆ. ಘಟನೆಯಲ್ಲಿ ಜೀಪಿ‌ನಲ್ಲಿದ್ದ ಇಬ್ಬರು ಹಾಗೂ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Read More

ನಾನ್ ವೆಜ್ ಪ್ರಿಯರಿಗೆ ಇಷ್ಟವಾದ ಅಡುಗೆಗಳಲ್ಲಿ ಚೈನೀಸ್ ಚಿಕನ್ ಫ್ರೈಡ್ ರೈಸ್ ಕೂಡ ಒಂದಾಗಿದೆ. ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಚೈನೀಸ್ ಫ್ರೈಡ್ ರೈಸ್ ಕುರಿತ ವಿವರ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು: ½ ಕೆ.ಜಿ. ಕೋಳಿ ಮಾಂಸ, 50 ಗ್ರಾಂ ಎಣ್ಣೆ, 50 ಗ್ರಾಂ ಈರುಳ್ಳಿ, 50 ಗ್ರಾಂ ಕ್ಯಾರೆಟ್, 1 ಸ್ಪೂನ್ ಕರಿಮೆಣಸಿನ ಪುಡಿ, 50 ಗ್ರಾಂ ದೊಣ್ಣೆ ಮೆಣಸಿನಕಾಯಿ, 50 ಗ್ರಾಂ ಬೀನ್ಸ್, ½ ಕೆ.ಜಿ. ಜೀರಾ ರೈಸ್, 2 ಮೊಟ್ಟೆ, ಚಿಟಿಕೆ ಅಜಿನೊಮೊಟೊ, ಸೋಯಾಸಾಸ್, ರುಚಿಗೆ ತಕ್ಕಷ್ಟು ಉಪ್ಪು. ತಯಾರಿಸುವ ವಿಧಾನ: ಮೊದಲಿಗೆ ಕೋಳಿ ಮಾಂಸವನ್ನು ಬೇಯಿಸಿಕೊಂಡು ಮೂಳೆ ತೆಗೆದು ಸಣ್ಣದಾಗಿ ತುಂಡರಿಸಿ ಇಟ್ಟುಕೊಳ್ಳಿ. ಅಕ್ಕಿಯನ್ನು ಮುಕ್ಕಾಲು ಭಾಗ ಬೇಯಿಸಿ ಇಡಿ. ಕ್ಯಾರೆಟ್, ಬೀನ್ಸ್ ಸಣ್ಣಗೆ ಕತ್ತರಿಸಿ ಬೇಯಿಸಿಕೊಳ್ಳಿ. ಈರುಳ್ಳಿ ಮತ್ತು ದೊಣ್ಣೆ ಮೆಣಸಿನಕಾಯಿಯನ್ನು ಎಣ್ಣೆಯಲ್ಲಿ ಕರಿಯಿರಿ. 2 ನಿಮಿಷವಾದ ನಂತರ ಮೊಟ್ಟೆಯನ್ನು ಒಡೆದು ಹಾಕಿ, ತಿರುಗಿಸಿರಿ. ಅದಕ್ಕೆ ಬೇಯಿಸಿದ ಅನ್ನ, ತರಕಾರಿ, ಚಿಕನ್ ಹಾಕಿ ಕೆಲವು ನಿಮಿಷಗಳ…

Read More

ಸುಳ್ಯ :10 ದಿನದ ಮಗುವನ್ನು ತಾಯಿಯೋರ್ವಳು ಬಾವಿಗೆ ಎಸೆದು ಕೊಂದಿರುವ ಹೃದಯ ವಿದ್ರಾವಕ ಘಟನೆ ಸುಳ್ಯ ಕೂತ್ಕುಂಜ ಗ್ರಾಮದಲ್ಲಿ ನಡೆದಿದೆ. ಪಂಜ ಸಮೀಪದ ಕೂತ್ಕುಂಜ ಗ್ರಾಮದ ಬಸ್ತಿಕಾಡು ಪವಿತ್ರಾ ಮಗುವನ್ನು ಬಾವಿಗೆ ಎಸೆದಿರುವ ತಾಯಿ ಪವಿತ್ರಾಗೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮಣಿಕಂಠ ಅವರನ್ನು ವರ್ಷದ ಹಿಂದೆ ವಿವಾಹವಾಗಿದ್ದು,ಅ.10ರಂದು ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ಗಂಡು ಮಗು ನನಗೆ ಇಷ್ಟವಿಲ್ಲ ಎಂದು ಹೇಳಿ ಮಗುವನ್ನು ಎತ್ತಿಕೊಂಡು ಆಕೆ ಮನೆಯ ಎದುರಿನ ಬಾವಿಗೆ ಎಸೆದಿದ್ದಾಳೆ. ಮಾಹಿತಿ ತಿಳಿದು ಬಾವಿಗೆ ಇಳಿದು ಮಗುವನ್ನು ತೆಗೆದು ಮೇಲಕ್ಕೆತ್ತಿ ಪಂಜ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.ಆದರೆ ಈ ವೇಳೆ‌ ಮಗು ಮೃತಪಟ್ಟಿರುವುದು‌ ತಿಳಿದು ಬಂದಿದೆ. ಪವಿತ್ರಾ ಗರ್ಭಿಣಿಯಾದಾಗ ಆಕೆಗೆ ಹೆಣ್ಣು ಮಗುವಿನಲ್ಲಿ ಆಸೆ ಇತ್ತಂತೆ,ಅವಳ ಇಷ್ಟ ನೇರವೇರದೆ ಇದ್ದುದರಿಂದ ಹುಟ್ಟಿದ ಗಂಡು ಮಗುವನ್ನು ಆಕೆ ಬಾವಿಗೆ ಎಸೆದು ಕೊಲೆ ಮಾಡಿದ್ದಾಳೆ ಎಂದು ತಿಳಿದು‌ ಬಂದಿದೆ. ಪವಿತ್ರಾ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು,ಈ ಮೊದಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.ಶನಿವಾರ…

Read More

ಉಡುಪಿ: ಕಾರು ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇಜಿನ ಬಳಿ ನಡೆದಿದೆ. ಮೃತ ಯುವಕನನ್ನು ಹಿರಿಯಡಕ ಸಮೀಪದ ಪುತ್ತಿಗೆ ನಿವಾಸಿ 18ವರ್ಷ ಪ್ರಾಯ ಸ್ಟ್ಯಾಲಿನ್ ಎಂದು ಗುರುತಿಸಲಾಗಿದೆ. ಈತ ಇಂದು ಮಧ್ಯಾಹ್ನ ಹಿರಿಯಡಕ ಪೇಟೆಯಿಂದ ಪುತ್ತಿಗೆ ಕಡೆಗೆ ಹೋಗುತ್ತಿದ್ದನು. ಈ ವೇಳೆ ಎದುರಿನಿಂದ ಬಂದ ಸ್ಕೋಡಾ ಕಾರೊಂದು ಡಿಕ್ಕಿಯಾಗಿದೆ. ಇದರಿಂದ ಬೈಕ್ ಸಮೇತ ರಸ್ತೆಗೆ ಬಿದ್ದ ಸ್ಟ್ಯಾಲಿನ್ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಉಸಿರುಚೆಲ್ಲಿದ್ದಾನೆ ಎನ್ನಲಾಗಿದೆ. ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ‌. ಇದೇ ಸಂದರ್ಭದಲ್ಲಿ ಸ್ಟ್ಯಾಲಿನ್ ನ ಹಿಂದಿನಿಂದ ಬರುತ್ತಿದ್ದ ಇಕೋ ಸ್ಪೋರ್ಟ್ಸ್ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಬಡಿದು, ರಸ್ತೆಯ ಬದಿಯ ಪೊದೆಗೆ ನುಗ್ಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ, ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Read More

ನೆಲ್ಯಾಡಿ: ಪೊಲೀಸ್ ಠಾಣೆಯ ಮುಂಭಾಗದಲ್ಲೇ ಜೀಪಿನ ಚಕ್ರ ಕಳಚಿದ ಘಟನೆ ಶುಕ್ರವಾರ ಉಪ್ಪಿನಂಗಡಿಯಲ್ಲಿ ನಡೆದಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೊತ್ತು ಸಹಿತ ಪೊಲೀಸ್ ಠಾಣೆಗೆ ಕರೆ ತರುವಾಗ ಜೀಪಿನ ಚಕ್ರ ಕಳಚಿದೆ. ಖಚಿತ ಮಾಹಿತಿಯ ಮೇರೆಗೆ ನೆಲ್ಯಾಡಿ ಹೊರ ಠಾಣಾ ವ್ಯಾಪ್ತಿಯ ಉದನೆ ಎಂಬಲ್ಲಿ ವ್ಯಕ್ತಿಯೋರ್ವ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಆರೋಪಿಯಲ್ಲಿದ್ದ ಮದ್ಯವನ್ನು ವಶಕ್ಕೆ ಪಡೆದು, ಆರೋಪಿಯನ್ನು ಪೊಲೀಸ್ ಜೀಪಿನಲ್ಲಿ ಕುಳ್ಳಿರಿಸಿ ಉಪ್ಪಿನಂಗಡಿ ಠಾಣೆಗೆ ಕರೆ ತರುತ್ತಿದ್ದರು. ಪೊಲೀಸ್‌ ಠಾಣೆ ಸಮೀಪಿಸುವ ವೇಳೆ ಜೀಪಿನ ಮುಂಭಾಗದ ಚಕ್ರ ಜೀಪಿನಿಂದ ಕಳಚಲ್ಪಟ್ಟು ಅಪಾಯಕ್ಕೆ ಸಿಲುಕಿತ್ತು. ಅದೃಷ್ಟವಶಾತ್ ಯಾರಿಗೂ ಅಪಾಯವಾಗಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Read More