ಮಂಗಳೂರು : ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುವ ಮೀನು ಸಾಗಾಟದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಉಚ್ಚಿಲ ಸಮೀಪದ ನಡೆದಿದೆ. ಘಟನೆಯಿಂದಾಗಿ ಲಾರಿ ಚಾಲಕ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.ಲಾರಿ ಪಲ್ಟಿಯಾದ ಹಿನ್ನೆಲೆ ರಸ್ತೆಯಲ್ಲೆಲ್ಲಾ ಮೀನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ಈ ಬಗ್ಗೆ ತಿಳಿಯುತ್ತಿದ್ದಂತೆ ಹಲವಾರು ಜನ ಜಮಾವಣೆಗೊಂಡಿದ್ದಾರೆ.
Author: main-admin
ವಿಟ್ಲ: ಒಂದೂವರೆ ತಿಂಗಳ ಮಗುವಿಗೆ ಅವಧಿ ಮುಗಿದ ಚುಚ್ಚು ಮದ್ದು ನೀಡಿದ ಬೇಜವ್ದಾರಿ ಘಟನೆ ಪುತ್ತೂರಿನ ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ.ಕನ್ಯಾನ ದ ಜೀವನ್ ಪ್ರಕಾಶ್ ಡಿಸೋಜ ರವರ ಪತ್ನಿ ಹೆರಿಗೆಗೆಂದು ಪುತ್ತೂರು ಸಿಟಿ ಆಸ್ಪತ್ರೆಗೆ ತೆರಳಿದ್ದು,ಕಳೆದ ಸೆಪ್ಟಂಬರ್ 3ರಂದು ಡಾ. ಶೆಣೈ ರವರ ಚಿಕಿತ್ಸೆಯಲ್ಲಿ ಹೆರಿಗೆಯಾಗಿರುತ್ತದೆ. ಡಾ.ಶೆಣೈರವರ ಸೂಚನೆಯಂತೆ ಒಂದೂವರೆ ತಿಂಗಳ ನಂತರ ಮಗುವಿನ ಆರೋಗ್ಯ ದೃಷ್ಟಿಯಿಂದ ಒಂದೂವರೆ ತಿಂಗಳ ಚುಚ್ಚುಮದ್ದು ನೀಡಲು ಬರುವಂತೆ ತಿಳಿಸಿದ್ದರು.ಅದೇ ರೀತಿ ಅಕ್ಟೋಬರ್ 24ರಂದು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭ ಡಾ. ಶೆಣೈರವರ ಅನುಮತಿಯಂತೆ ಒಂದೂವರೆ ತಿಂಗಳ ಮಗುವಿಗೆ ನೀಡ ಬೇಕಾದ (DPT 1 Polio Hepatitis B 1 Hib1) ಎಂಬ ಹೆಸರಿನ ಚುಚ್ಚು ಮದ್ದನ್ನು ನೀಡುವಂತೆ ತನ್ನ ಸಹಾಯಕಿ ಶುಶ್ರುಕಿಗೆ ಸೂಚಿಸಿದ್ದರು.ಅದರಂತೆ ಶಿಶುವಿಗೆ ಚುಚ್ಚು ಮದ್ದು ನೀಡಿದ್ದು,ಚುಚ್ಚು ಮದ್ದಿನ ಸ್ಟಿಕ್ಕರ್ ನ್ನು ನವಜಾತ ಶಿಶುವಿನ ಆರೋಗ್ಯ ದಾಖಲೆ ಪುಸ್ತಕದಲ್ಲಿ ಅಂಟಿಸಿದ್ದರು.ಚುಚ್ಚು ಮದ್ದಿನ ಅವಧಿ 22/08/22 ಎಂದು ನಮೂದಿಸಲಾಗಿದ್ದು,ಅವಧಿ ಮುಗಿದು 2ತಿಂಗಳು ಕಳೆದ ಮದ್ದನ್ನು…
ಬಂಟ್ವಾಳ: ತಲೆನೋವಿನಿಂದ ಬಳಲುತ್ತಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಮಂಚಿಯಲ್ಲಿ ನಡೆದಿದೆ. ಭವ್ಯಾ, ಮೃತಪಟ್ಟ ವಿದ್ಯಾರ್ಥಿನಿ. ಭವ್ಯಾ ಅವಳು ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಕೆಲ ದಿನಗಳಿಂದ ತಲೆನೋವು ಎಂದು ಸ್ಥಳೀಯ ಖಾಸಗಿ ವೈದ್ಯರ ಬಳಿ ಪರೀಕ್ಷೆ ಮಾಡಿ ಮದ್ದು ಪಡೆಯುತ್ತಿದ್ದಳು. ಆದರೆ ಆದಿತ್ಯವಾರ ರಾತ್ರಿ ಸುಮಾರು 7 ಗಂಟೆ ವೇಳೆ ತಲೆ ನೋವು ಕಾಣಿಸಿಕೊಂಡು ವಾಂತಿ ಮಾಡಿದ್ದಳು.
ಉಪ್ಪಿನಂಗಡಿ: ತಾನು ಬಯಸಿದ ಸ್ಥಳದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸನ್ನು ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಕೋಪಗೊಂಡ ವ್ಯಕ್ತಿಯೊಬ್ಬ ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೇಗದೂತ ಬಸ್ ಗಾಜಿಗೆ ಕಲ್ಲು ಎಸೆದು ಪುಡಿಗಟ್ಟಿದ ಘಟನೆ ನಡೆದಿದೆ. ಅಕ್ಟೋಬರ್ 24 ರಂದು ಉಪ್ಪಿನಂಗಡಿಯಲ್ಲಿ ಈ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕಮದ್ಯದ ಅಮಲಿನಲ್ಲಿದ್ದು ಬಸ್ ನಿಲ್ಲಿಸಲು ಸೂಚಿಸಿದ್ದಾನೆ. ಬಸ್ ನಿಲ್ಲದೆ ಮುಂದುವರಿದು ಸಾಗಿದಾಗ ಬಳಿಕ ಬಸ್‌ನಿಂದ ಕೆಳಗಿಳಿದ ಕೂಡಲೇ ಬಸ್‌ನ ಗಾಜುಗೆ ಕಲ್ಲು ಎಸೆದು ಹಾನಿ ಮಾಡಿದ್ದಾನೆ.
ಮಂಡ್ಯ ಜಿಲ್ಲೆಯ ನಾಗಮಂಗಲದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕಾಂತಾರ ಸಿನಿಮಾ ನೋಡಿ ಹೊರಗೆ ಬರುತ್ತಿದ್ದಂತೆ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಾಗಮಂಗಲ ತಾಲ್ಲೂಕಿನ ಸಾರೆಮೇಗಲಕೊಪ್ಪ ನಿವಾಸಿ ರಾಜಶೇಖರ್ ಮೃತ ವ್ಯಕ್ತಿ. ನಿನ್ನೆ ಕಾಂತಾರ ಸಿನಿಮಾ ನೋಡಲು ವೆಂಕಟೇಶ್ ಚಿತ್ರಮಂದಿರಕ್ಕೆ ಬಂದಿದ್ದರು.45 ವಯಸ್ಸಿನ ರಾಜಶೇಖರ್ ಕಾಂತಾರ ಸಿನಿಮಾ ನೋಡಿ ಬರುತ್ತಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಅಲ್ಲಿಯೇ ಕುಸಿದಿದ್ದಾರೆ. ತೀವ್ರ ಹೃದಯಾಘಾತದಿಂದ ರಾಜಶೇಖರ್ ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಈ ಕುರಿತಂತೆ ನಾಗಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕಾಂತಾರ ಸಿನಿಮಾ ವಿಶ್ವಾದ್ಯಂತ ಖ್ಯಾತಿ ಗಳಿಸಿದೆ. ಭಾರತ ಚಿತ್ರರಂಗದಲ್ಲಿಯೇ ದೊಡ್ಡ ಹಿಟ್ ಆಗಿ ಹೊರಹೊಮ್ಮಿರುವ ರಿಷಬ್ ಶೆಟ್ಟಿ ಅವರ ಸಿನಿಮಾಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾಗೆ ಪಾಸಿಟಿವ್ ರೆಸ್ಪಾನ್ಸ್ ಬಂದಿರುವ ಹಾಗೆಯೇ ಕಾಲೆಳೆಯೋ ಕೆಲಸ ಕೂಡಾ ನಡೆದಿದೆ. ಸಿನಿಮಾದ ಹಾಡಿನ ಕುರಿತು ಈಗಾಗಲೇ ವಿವಾದ ಎದ್ದಿದ್ದು ಈಗ ಧರ್ಮದ ಬಣ್ಣದಲ್ಲಿ ಸಿನಿಮಾ ಚರ್ಚೆ ನಡೆಯುತ್ತಿದೆ. ಸಿನಿಮಾಗೆ ಧರ್ಮದ ಬಣ್ಣ ಬಳಿದು…
ಶಿವಮೊಗ್ಗ ನಗರದಲ್ಲಿ ಮತ್ತೆ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದ್ದು, ಬಜರಂಗದಳದ ಮೃತ ಹರ್ಷನ ಕುಟುಂಬಸ್ಥರಿಗೆ ದುಷ್ಕರ್ಮಿಗಳು ಬೆದರಿಕೆ ಹಾಕಿರುವ ಘಟನೆ ತಡರಾತ್ರಿ ನಡೆದಿದೆ.ಇದೀಗ ಹರ್ಷ ಸಹೋದರಿ ಅಶ್ವಿನಿ ಪ್ರತಿಕ್ರಿಯೆ ನೀಡಿದ್ದಾರೆ. ದುಷ್ಕರ್ಮಿಗಳಿಂದ ನಮಗೆ ಭಯ ಆಗುತ್ತಿದೆ. ನಮಗೆ ಸೂಕ್ತ ರಕ್ಷಣೆ ಬೇಕು ಎಂದು ಹೇಳಿದ್ದಾರೆ.ನಗರದಲ್ಲಿ ಮಾತನಾಡಿದ ಅವರು, ರಾತ್ರಿ 11.15 ರ ಸಮಯಕ್ಕೆ 3-4 ಬೈಕ್ ನಲ್ಲಿ ಯುವಕರು ಬಂದಿದ್ದರು. ಮಾರಕಾಸ್ತ್ರ ಹಿಡಿದುಕೊಂಡು ಓಡಾಡುತ್ತಿದ್ದರು ಎಂದು ಹೇಳಿದರು. ಹರ್ಷನ ತೆಗೆದಿದ್ದು ಸಾಲದಾ, ನಿಮ್ಮನ್ನೂ ತೆಗೆಯಬೇಕಾ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಯುವಕರ ಗುಂಪು ಅವಾಜ್ ಹಾಕಿದ್ದಾರೆ. ಇನ್ನು ಎಷ್ಟು ಮಂದಿ ಹಿಂದೂ ಯುವಕರ ಬಲಿಯಾಗಬೇಕು..?. ನನ್ನ ಸಹೋದರ ಹರ್ಷ ಹೋದ, ಪ್ರವೀಣ್ ನೆಟ್ಟಾರ್ ಹೋದ. ಆದರೂ ಅವರ ದಾಹ ಇನ್ನೂ ತೀರಿಲ್ಲ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ನಮಗೆ ಸೂಕ್ತ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಸುಳ್ಯ: ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷೆಯ ಪತಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದು ನಡೆದಿದೆ. ಗುಂಡು ಹಾರಿಸಿಕೊಂಡವರನ್ನು ಸುಳ್ಯ ನಗರ ಪಂಚಾಯತ್ ನ ಮಾಜಿ ಉಪಾಧ್ಯಕ್ಷರಾದ ಶಾಂತಿ ಪ್ರಭುರವರ ಪತಿ ಎನ್ನಲಾಗಿದೆ. ಸುಳ್ಯದ ಜಟ್ಟಿಪಳ್ಳ ನಿವಾಸಿ ಕೇಶವ ಪ್ರಭು ಎಂಬುವವರು ತಲೆಗೆ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈ ಘಟನೆಯು ಇಂದು ಪೂರ್ವಾಹ್ನ 11 ಗಂಟೆಯ ಸುಮಾರಿಗೆ ನಡೆದಿದೆ, ಅವರು ವಾಸವಿದ್ದ ಮನೆಯಲ್ಲಿಯೇ ಈ ಘಟನೆ ನಡೆದಿದ್ದು, ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗುಂಡು ಹಾರಿಸಿಕೊಳ್ಳಲು ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.
ಆಕ್ಟೋಬರ್ 25ರಮಂಗಳವಾರದಂದು ಸೂರ್ಯಗ್ರಹಣ ಆವರಿಸಲಿರುವ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಾಲಯದಲ್ಲಿ ದೇವರ ದರ್ಶನ ಸಮಯದಲ್ಲಿ ವ್ಯತ್ಯಾಸ ಆಗಲಿದ್ದು , ಭಕ್ತರು ಸಹಕರಿಸಬೇಕಾಗಿ ಕೋರಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮಂಜುನಾಥ ಸ್ವಾಮಿಯ ದರ್ಶನದ ಸಮಯವನ್ನು ಬದಲಾವಣೆ ಮಾಡಲಾಗಿದೆ. ಮಂಗಳವಾರದಂದು ಮಧ್ಯಾಹ್ನದವರೆಗೆ ಎಂದಿನಂತೆ ಭಕ್ತರಿಗೆ ದೇವರ ದರ್ಶನ ಮಾಡಲು ಅವಕಾಶವಿದ್ದು, ನಂತರ ಮಧ್ಯಾಹ್ನ 2:30ರಿಂದ ರಾತ್ರಿ 7:30ರವರೆಗೆ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಮಧ್ಯಾಹ್ನ 2:30ರವರೆಗೆ ಭೋಜನ ಪ್ರಸಾದದ ವ್ಯವಸ್ಥೆ ಇರಲಿದೆ. ಬಳಿಕ ರಾತ್ರಿ 7:30ರ ನಂತರ ಭೋಜನ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಆಡಳಿತ ಮಂಡಳಿ ಪ್ರಕಟಣೆ ಹೊರಡಿಸಿದೆ. ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲೂ ಸೂರ್ಯ ಗ್ರಹಣ ನಿಮಿತ್ತ ದೇವರ ದರ್ಶನದ ಸಮಯವನ್ನು ಬದಲಾವಣೆ ಮಾಡಲಾಗಿದೆ. ಮಂಗಳವಾರ ಮಧ್ಯಾಹ್ನ ಎಂದಿನಂತೆ ದೇವಸ್ಥಾನದಲ್ಲಿ ಅನ್ನ ಪ್ರಸಾದವಿರುತ್ತದೆ. ಗ್ರಹಣ ಆರಂಭಗೊಳ್ಳುವ ಅವಧಿಯಿಂದ ಬಿಡುವವರೆಗೆ ಭಕ್ತರಿಗೆ ದೇವಸ್ಥಾನಕ್ಕೆ ಪ್ರವೇಶವಿದ್ದು, ದೇವಸ್ಥಾನದಲ್ಲಿ ಜಪಮಾಡಬಹುದು. ಆದರೆ ಈ ಅವಧಿಯಲ್ಲಿ…
ಪ್ರಸ್ತುತ ಜಗತ್ತಿನಲ್ಲಿ ಯುವಜನತೆ ಮೊಬೈಲ್ ವೈಶಿಷ್ಟ್ಯಗಳಿಗೆ ಮಾರುಹೋಗಿರುವ ಹಿನ್ನೆಲೆ ಅನೇಕರು ಸ್ಮಾರ್ಟ್ ಫೋನ್ ಬಳಕೆ ಮಾಡುತ್ತಿದ್ದಾರೆ. ಸೌಂಡ್ ಬಂದರೆ ಬೇರೆಯವರಿಗೆ ತೊಂದರೆ ಆಗುತ್ತದೆ ಎಂದು ಭಾವಿಸಿ ಹೆಚ್ಚಿನವರು ಹಾಡುಗಳನ್ನು ಆಸ್ವಾದಿಸಲು ಇಯರ್ ಫೋನ್ ಬಳಸುತ್ತಾರೆ. ಈ ಸಾಧನವನ್ನು ಸೀಮಿತವಾಗಿ ಬಳಸಿದರೆ ತೊಂದರೆ ಇಲ್ಲ. ಅದರೆ ಅತಿಯಾಗಿ ಬಳಸುವವರು ಈ ಮುನ್ನೆಚ್ಚರಿಕೆಗಳನ್ನು ಅನುಸರಿಸದಿದ್ದರೆ ಮುಂದೆ ಶ್ರವಣ ಸಮಸ್ಯೆ ಜೊತೆಗೆ ಇನ್ನಷ್ಟು ಸಮಸ್ಯೆಗಳು ಎದುರಾಗಲಿವೆ ಎಂದು ತಜ್ಞರ ಹೇಳುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ (WHO)ಯೂ ಎಚ್ಚರಿಕೆ ನೀಡಿದೆ. ಇಯರ್‌ಫೋನ್‌ಗಳ ಅತಿಯಾದ ಬಳಕೆ ಕಿವಿಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕಿವಿಯಲ್ಲಿ ನೋವನ್ನು ಉಂಟುಮಾಡಬಹುದು. ಕ್ರಮೇಣ ಈ ಸಮಸ್ಯೆ ಹೆಚ್ಚಾಗಬಹುದು. ಕೆಲವರಿಗೆ ತಲೆಸುತ್ತು ಬರಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಇತರರು ಬಳಸಿದ ಇಯರ್‌ಫೋನ್‌ಗಳನ್ನು ಬಳಸುವುದು ಸೋಂಕುಗಳಿಗೆ ಕಾರಣವಾಗಬಹುದು. ಇಯರ್‌ಫೋನ್‌ಗಳನ್ನು ಬಳಸುವಾಗ ಧ್ವನಿ ಕಡಿಮೆ ಇಡಬೇಕು. ವಾಲ್ಯೂಮ್ 60 ಡೆಸಿಬಲ್‌ಗಳಿಗಿಂತ ಕಡಿಮೆಯಿದೆ ಎಂದು ಖಚಿತಪಡಿಸಿಕೊಳ್ಳಿ. 85 ಡೆಸಿಬಲ್‌ಗಿಂತ ಹೆಚ್ಚಿನ ಶಬ್ದವು ಶ್ರವಣ ನಷ್ಟಕ್ಕೆ ಕಾರಣವಾಗಬಹುದು. ಫೋನ್…
ಮಂಗಳೂರು: ನಾಡಿನೆಲ್ಲೆಡೆ ಇದೀಗ ದೀಪಾವಳಿ ಹಬ್ಬದ ಸಂಭ್ರಮ. ಈಗಾಗಲೇ ಜನತೆ ದೀಪಾವಳಿ ಹಬ್ಬದ ಸಡಗರದಲ್ಲಿ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇಂದು ನರಕಚತುರ್ದಶಿ ಸಂಭ್ರಮವಾಗಿದ್ದು, ನಾಡಿನ ಜನತೆ ಎಣ್ಣೆ ಹಚ್ಚಿ ಸ್ನಾನ ಮಾಡಿ, ದೇವರಿಗೆ ವಿಶೇಷ ಪೂಜೆ ಮಾಡಿದರು. ಇನ್ನು ದೀಪಾವಳಿ ಅಂದರೆ ಪಟಾಕಿ ಇರಲೇಬೇಕು. ಆದರೆ ಪಟಾಕಿ ಸಿಡಿಸುವ ಮುನ್ನ ಇರಲಿ ಎಚ್ಚರ ಎನ್ನುವುದು ಕಿವಿಮಾತು. ಕ್ಷಣ ಮಾತ್ರದ ಸಂಭ್ರಮಕ್ಕೆ ಇಡೀ ಬದುಕನ್ನು ಕತ್ತಲೆ ಮಾಡಿಕೊಳ್ಳುವವರು ಇದ್ದಾರೆ. ಹೀಗಾಗಿ ಪಟಾಕಿಸಿಡಿಸುವುದಿದ್ದರೂ ಅತ್ಯಂತ ಜಾಗರೂಕರಾಗಿ ಪಟಾಕಿ ಸಿಡಿಸಿರಿ ಎನ್ನುವುದು ಹಿರಿಯರ ಎಚ್ಚರಿಕೆ. ಇನ್ನು ಜನತೆ ಹಸಿರು ಪಟಾಕಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ. ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಶಬ್ಧ ಮಾಲಿನ್ಯ ನಿಯಂತ್ರಣದಲ್ಲಿಡುವ ಉದ್ದೇಶದಿಂದ 125 ಡೆಸಿಬಲ್ ಅಥವಾ 145 ಡಿಸಿಬಲ್ ಹೆಚ್ಚು ಶಬ್ಧ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳ ಮಾರಾಟ ಮತ್ತು ಉಪಯೋಗವನ್ನು ನಿಷೇಧಿಸಲಾಗಿದೆ. ರಾತ್ರಿ 10ರಿಂದ ಬೆಳಿಗ್ಗೆ 6ಗಂಟೆಯವರೆಗೆ ಪಟಾಕಿ, ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಲಾಗಿದೆ. ದಿನದ ಯಾವುದೇ…