ಮುಂಬೈ ; ಪೊಲೀಸ್ ಸಹಾಯವಾಣಿ ಸಂಖ್ಯೆ 112 ಗೆ ಅಂಧೇರಿ, ಜುಹು ಸೇರಿದಂತೆ ಮುಂಬೈನ ಮೂರು ಸ್ಥಳಗಳಲ್ಲಿ ಬಾಂಬ್ ಸ್ಫೋಟದ ಬೆದರಿಕೆ ಬಂದಿದ್ದು, ಈ ಕರೆ ಮಾಡಿದವರ ಬಗ್ಗೆ ಇನ್ನೂ ಮಾಹಿತಿ ಬಂದಿಲ್ಲ. ಇನ್ನು ಈ ಬೆದರಿಕೆ ಕರೆಗಳ ನಂತ್ರ ಪೊಲೀಸ್ ವ್ಯವಸ್ಥೆಯು ಎಚ್ಚೆತ್ತುಕೊಂಡಿದ್ದು, ತಪಾಸಣೆ ನಡೆಸುತ್ತಿದೆ. ಮುಂಬೈ ಪೊಲೀಸರ ಸಹಾಯವಾಣಿಗೆ ಕರೆ ಮಾಡಿದವರು ಅಂಧೇರಿಯ ಇನ್ಫಿನಿಟಿ ಮಾಲ್ ಮುಂಬೈ, ಜುಹುವಿನ ಪಿವಿಆರ್ ಮಾಲ್ ಮತ್ತು ಸಹಾರಾ ಹೋಟೆಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟ ಸಂಭವಿಸಲಿದೆ ಎಂದು ಹೇಳಿದ್ದಾರೆ. ಬೆದರಿಕೆ ಕರೆ ಸ್ವೀಕರಿಸಿದ ನಂತರ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದೆ. ಸಹಾರಾ ವಿಮಾನ ನಿಲ್ದಾಣ ಪೊಲೀಸರು, ಜುಹು, ಅಂಬೋಲಿ ಮತ್ತು ಬಂಗೂರ್ ನಗರ ಪೊಲೀಸ್ ಠಾಣೆಗಳು ಮತ್ತು ಸಿಐಎಸ್‌ಎಫ್ ಮತ್ತು ಬಿಡಿಡಿಎಸ್ ತನಿಖಾ ಕಾರ್ಯವನ್ನ ಪ್ರಾರಂಭಿಸಿವೆ. ಪೊಲೀಸರು ಎಲ್ಲಾ ಸ್ಥಳಗಳಲ್ಲಿ ಶೋಧ ನಡೆಸಿದ್ದಾರೆ. ಆದ್ರೆ, ಸ್ಥಳದಲ್ಲಿ ಯಾವುದೇ ಸ್ಫೋಟಕಗಳು ಅಥವಾ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ. ಪೊಲೀಸರು ಇನ್ನೂ ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.…
Author: main-admin
ನವದೆಹಲಿ : ಎಐಸಿಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಕಾಂಗ್ರೆಸ್ ನಾಯಕ ಖರ್ಗೆ ಕಾಂಗ್ರೆಸ್ ಗೆ ಕಿಂಗ್ ಆಗಿದ್ದಾರೆ. ಹೌದು, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಚುನಾವಣೆ (Congress president’s election) ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಆಯ್ಕೆಯಾಗಿದ್ದಾರೆ. ಇಂದು ಮತಎಣಿಕೆ ನಡೆದಿದ್ದು, ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು 7,897 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿಯಾದ ಶಶಿ ತರೂರ್ ಅವರಿಗೆ ಕೇವಲ 1072 ಮತಗಳನ್ನು ಪಡೆದಿದ್ದಾರೆ. ಈಮೂಲಕ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್(Congress)ಗೆ ಅಧ್ಯಕ್ಷೀಯ ಚುನಾವಣೆಯು ಅಕ್ಟೋಬರ್ 17 ಅಂದ್ರೆ, ಸೋಮವಾರ ನಡೆದಿತ್ತು. ಎಐಸಿಸಿ ನೂತನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಆಯ್ಕೆಯಾಗಿದ್ದು, ಈ ಹಿನ್ನೆಲೆ ದೆಹಲಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಅವರನ್ನು ಅವರ ಎದುರಾಳಿಯಾಗಿ…
ಪುತ್ತೂರು: ಲಾಡ್ಜ್ ವೊಂದರಲ್ಲಿ ಬೆಂಗಳೂರು ಮೂಲದ ವ್ಯಕ್ತಿಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ವರದಿಯಾಗಿದೆ. ಮೃತ ವ್ಯಕ್ತಿ ಅ.16 ರಂದು ಪುತ್ತೂರಿಗೆ ಬಂದು ಲಾಡ್ಜ್ ನಲ್ಲಿ ರೂಂ ಮಾಡಿಕೊಂಡಿದ್ದರು.ಅ.18ಕ್ಕೆ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳಕ್ಕೆ ಪುತ್ತೂರು ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೃತದೇಹವನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ಮೂಲದ ಪತ್ತೆ ಬಗ್ಗೆ ತನಿಖೆ ನಡೆಯುತ್ತಿದೆ.
ಉಡುಪಿ: ಸೂಡಾ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಹಾಗೂ ಬೆಳ್ಮಣ್ ನಿವಾಸಿ ಆದರ್ಶ್ (17) ಮಂಗಳವಾರ ಅಕ್ಟೋಬರ್ 18 ರಂದು ನಂದಿಕೂರು ಗ್ರಾಮದ ಬಳಿಯ ಕೊಳಚೂರು ಎಂಬಲ್ಲಿ ಗರೀಬ್ ರಥ ಎಕ್ಸ್‌ಪ್ರೆಸ್ ರೈಲಿನ ಚಕ್ರಕ್ಕೆ ಸಿಲುಕಿ ಶವವಾಗಿ ಪತ್ತೆಯಾಗಿದ್ದಾರೆ. ಹುಡುಗ ಪ್ರತಿಭಾವಂತ ಮತ್ತು ಕ್ರಿಕೆಟಿಗ ಕೂಡ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ರಾಜ್ಯಮಟ್ಟದ ಕ್ರಿಕೆಟ್ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಗರೀಬ್ ರಥ ಎಕ್ಸ್‌ಪ್ರೆಸ್‌ನ ಲೊಕೊ ಪೈಲಟ್ ಈ ಬಗ್ಗೆ ನಿಯಂತ್ರಣ ಕೊಠಡಿಗೆ ವರದಿ ಮಾಡಿದ್ದರು. ರೈಲ್ವೆ ಗ್ಯಾಂಗ್‌ಮ್ಯಾನ್ ಉಮೇಶ್ ಮಾರ್ಗದಲ್ಲಿ ಹುಡುಕಾಟ ನಡೆಸಿದಾಗ ಆದರ್ಶ್ ಅವರ ಮೃತದೇಹ ಪತ್ತೆಯಾಗಿದೆ. ರೈಲ್ವೆ ಹಳಿ ಬಳಿ ನಿಲ್ಲಿಸಿದ್ದ ಆತನ ಸ್ಕೂಟರ್‌ನಲ್ಲಿ ತಪಾಸಣೆ ನಡೆಸಿದಾಗ ಮೊಬೈಲ್ ಪತ್ತೆಯಾಗಿದ್ದು, ಆತನ ನಂಬರ್‌ಗೆ ಕರೆ ಮಾಡಿದಾಗ ಆದರ್ಶ್ ಗುರುತು ಪತ್ತೆಯಾಗಿದೆ.
ಸೋಮವಾರ ಮಂಗಳೂರಿಗೆ ಬಂದಿಳಿದ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನ ಬಾಲಕಿ ಭಾರ್ಗವಿ (14) ನಾಪತ್ತೆಯಾಗಿದ್ದಾರೆ. ಭಾರ್ಗವಿ ಅವರು ಸೋಮವಾರ ಮುಂಜಾನೆ 3 ಗಂಟೆಗೆ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದ ನಂತರ ನಾಪತ್ತೆಯಾಗಿದ್ದಾರೆ. ಇನ್ನು ಆಟೋ ಬಾಡಿಗೆಗೆ ಪಡೆದು ಮುಕ್ಕಾ ಬೀಚ್, ಕದ್ರಿ ಪಾರ್ಕ್ ಪ್ರವಾಸ ಮಾಡಿದ್ದಳು ಎನ್ನಲಾಗಿದ್ದು, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ತಲುಪಿದ ಬಳಿಕ ಆಟೋ ಚಾಲಕನೊಬ್ಬನಿಗೆ ತನ್ನ ಚಿಕ್ಕಮ್ಮನ ಮನೆಗೆ ಹೋಗುವುದಾಗಿ ಹೇಳಿದ್ದಾಳೆ ಎಂದು ತಿಳಿದುಬಂದಿದೆ. ಆದರೆ ಆಕೆ ಎಲ್ಲಿದ್ದಾಳೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಂಗಳೂರು: ವಿವಿಧ ಪ್ರಕರಣಗಳ ಸಂಬಂಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾದ ಬಳಿಕ, ಎಫ್‌ಐಆರ್ ಪ್ರತಿಯನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸೋದಕ್ಕೆ ತಡ ಮಾಡಲಾಗುತ್ತಿತ್ತು. ಈ ಹಿನ್ನಲೆಯಲ್ಲಿ ಸಲ್ಲಿಕೆಯಾದಂತ ಪಿಐಎಸ್ ಸಂಬಂಧ, ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಇಂದು ವಕೀಲ ಉಮಾಪತಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಮತ್ತು ನ್ಯಾಯಮೂರ್ತಿ ಕಿಣಿಗಿ ನೇತೃತ್ವದ ಕರ್ನಾಟಕ ವಿಭಾಗೀಯ ಪೀಠವು ಕರ್ನಾಟಕ ರಾಜ್ಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಡಿಪಿಎಆರ್ ಮತ್ತು ಎಡಿಜಿಪಿ ಲೋಮಾಯುಕ್ತ ಅವರಿಗೆ ನೋಟಿಸ್ ಜಾರಿ ಮಾಡಿದೆ. ನೋಂದಣಿಯಾದ 24 ಗಂಟೆಗಳ ಒಳಗೆ ತನ್ನ ವೆಬ್ಸೈಟ್ನಲ್ಲಿ ಎಫ್‌ಐಆರ್ ಅನ್ನು ಲೋಡ್ ಮಾಡದಿರುವ ಬಗ್ಗೆ ಉಚ್ಚ ನ್ಯಾಯಾಲಯವು ರಾಜ್ಯ ಸರ್ಕಾರ ಮತ್ತು ಎಡಿಜಿಪಿ ಲೋಕಾಯುಕ್ತರಿಗೆ ನೋಟಿಸ್ ಜಾರಿಗೊಳಿಸಿದೆ. ಈ ಬಳಿಕ ಪ್ರಕರಣವನ್ನು ನವೆಂಬರ್.9ಕ್ಕೆ ಮುಂದೂಡುವ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸುವಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿದೆ.
ಉತ್ತರಾಖಂಡ : ಪ್ರಸಿದ್ಧ ಕೇದಾರನಾಥ ಧಾಮದ ಬಳಿ ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನಲ್ಲಿದ್ದ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಕೇದಾರನಾಥ ದೇಗುಲದಿಂದ ಸುಮಾರು 2 ಕಿಮೀ ದೂರದಲ್ಲಿರುವ ಗರುಡ್ ಚಟ್ಟಿಯಲ್ಲಿ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಈ ದುರಂತ ಸಂಭವಿಸಿದೆ. ಮುಖ್ಯಮಂತ್ರಿ ಪುಷ್ಕರ್ ಧಾಮಿ ತನಿಖೆಗೆ ಆದೇಶಿಸಿದ್ದಾರೆ. ‘ಕೇದಾರನಾಥ ಬಳಿಯ ಗರುಡ ಚಟ್ಟಿಯಲ್ಲಿ ದುರದೃಷ್ಟಕರ ಹೆಲಿಕಾಪ್ಟರ್ ಅಪಘಾತದಲ್ಲಿ ಕೆಲವು ಜನರು ಸಾವನ್ನಪ್ಪಿದ ಬಗ್ಗೆ ಬಹಳ ದುಃಖದ ಸುದ್ದಿ ಬಂದಿದೆ. SDRF ಮತ್ತು ಜಿಲ್ಲಾಡಳಿತ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕಾಗಿ ಸ್ಥಳಕ್ಕೆ ಧಾವಿಸಿವೆ. ಈ ದುರಂತ ಘಟನೆಯ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಲಾಗಿದೆ, ‘ಎಂದು ಅವರು ಟ್ವೀಟ್ ಮಾಡಿದ್ದಾರೆ. ಯಾತ್ರಾರ್ಥಿಗಳನ್ನು ಹೊತ್ತ ಹೆಲಿಕಾಪ್ಟರ್ ಕೇದಾರನಾಥದಿಂದ ಫಾಟಾ ಹೆಲಿಪ್ಯಾಡ್‌ಗೆ ಹಾರುತ್ತಿತ್ತು. ಅಪಘಾತ ಸಂಭವಿಸಿದ ಕೂಡಲೇ ಎಸ್‌ಆರ್‌ಡಿಎಫ್ (ರಾಜ್ಯ ವಿಪತ್ತು ನಿರ್ವಹಣಾ ಪಡೆ) ತಂಡಗಳು ಮತ್ತು ಸ್ಥಳೀಯ ಪೊಲೀಸರು ಅಪಘಾತ ಸ್ಥಳಕ್ಕೆ ಧಾವಿಸಿದರು. ‘ಕೇದಾರನಾಥದಲ್ಲಿ ಹೆಲಿಕಾಪ್ಟರ್ ಅಪಘಾತವು ಅತ್ಯಂತ ದುರದೃಷ್ಟಕರವಾಗಿದೆ. ನಷ್ಟದ ಪ್ರಮಾಣವನ್ನು ಕಂಡುಹಿಡಿಯಲು ನಾವು ರಾಜ್ಯ…
ಮಂಗಳೂರು: ಸಾವಿರಾರು ಹೋರಾಟಗಾರರು ಸುರತ್ಕಲ್ ಟೋಲ್ ಸಂಗ್ರಹ ವಿರೋಧಿಸಿ ಟೋಲ್’ಗೇಟ್’ಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಬಿಜೆಪಿಗೆ ಧಿಕ್ಕಾರ, ನಳಿನ್ ಕುಮಾರ್ ಕಟೀಲ್’ಗೆ ಧಿಕ್ಕಾರ, ಕೂಡಲೇ ಟೋಲ್ ಸಂಗ್ರಹ ನಿಲ್ಲಿಸಬೇಕೆಂದು ಆಗ್ರಹಿಸಿದರು. ಕೆಲ ಹೊತ್ತು ಪೊಲೀಸರೊಂದಿಗೆ ವಾಗ್ದಾದ ನಡೆದು ನಂತರ ಆಕ್ರೋಶಿತ ಪ್ರತಿಭಟನಾಕಾರರು ಟೋಲ್’ಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು. ಭಾರೀ ಸಂಖ್ಯೆಯಲ್ಲಿ ನಿಯೋಜಿತ ಪೊಲೀಸರು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಹರ ಸಾಹಸ ಪಟ್ಟರು. ನಂತರ ಹೋರಾಟ ಸಮಿತಿ ಮುಖಂಡರನ್ನು ಮತ್ತು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಬೆಂಗಳೂರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ತಡೆದು ಬೆದರಿಕೆ ಒಡ್ಡಿದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ತಡೆದು ಬೆದರಿಕೆ ಒಡ್ಡಿದ ಆರೋಪಿ ರಿಯಾಜ್ ನನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಕರಣದ ಹಿಂದೆ ಯಾರ್ಯಾರಿದ್ದಾರೆ ಎಂಬ ಸತ್ಯ ಹೊರಬರಬೇಕು ಎಂಬ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿ ಆದೇಶ ಹೊರಡಿಸಿದೆ. ಕೆಲ ದಿನಗಳ ಹಿಂದೆ ಶಾಸಕ ಹರೀಶ್ ಪೂಂಜಾ ಕಾರನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಶಾಸಕರಿದ್ದ ಕಾರು ತಡೆದು ಆರೋಪಿ ರಿಯಾಜ್ ಅವಾಚ್ಯವಾಗಿ ನಿಂದನೆ ಮಾಡಿ ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಶಾಸಕರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಬೆಳ್ತಂಗಡಿ: ವೇಣೂರಿನಲ್ಲಿ ವ್ಯಕ್ತಿಯೊಬ್ಬರ ಮೇಲೆ ತಂಡವೊಂದು ತಲವಾರು ದಾಳಿ ನಡೆಸಿದ ಘಟನೆ ನಡೆದಿದ್ದು, ಪ್ರಕರಣದ ಆರೋಪಿಗಳನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಹಾವೇರಿ ನಿವಾಸಿಗಳಾಗಿರುವ ಲಿಂಗಪ್ಪ ಗುರುಪಾದಯ್ಯ ಹಿರೇಮಠ ಹಾಗೂನಾಗರಾಜ ಬಸಪ್ಪ ಎಂಬವರಾಗಿದ್ದಾರೆ. ಗಾಯಾಳು ಅಂಡಂಜೆ ಗ್ರಾಮದ ನಿವಾಸಿ ರಾಜೇಂದ್ರ ಜೈನ್ ಎಂಬವರಾಗಿದ್ದಾರೆ. ಇವರು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ವೇಳೆ ಕಾರಿನಲ್ಲಿ ಬಂದ ತಂಡ ತಲವಾರಿನಿಂದ ಹಲ್ಲೆ ನಡೆಸಿತ್ತು. ಬೊಬ್ಬೆ ಕೇಳಿ ಸ್ಥಳೀಯರು ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಪ್ರಕರಣ ದಾಖಲಿಸಿ ಕೊಂಡ ವೇಣೂರು ಪೊಲೀಸರು ಹುಡುಕಾಟ ನಡೆಸಿ ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ.ರಾಜೇಂದ್ರ ಅವರು ಇತ್ತೀಚೆಗೆ ಹಾವೇರಿ ಮೂಲದ ಯುವತಿಯನ್ನು ವಿವಾಹವಾಗಿದ್ದು ಹಲ್ಲೆಗೆ ಸ್ಪಷ್ಟವಾದ ಕಾರಣಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ. ವೇಣೂರು ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.