ಮಂಗಳೂರು: ಮತ್ತೊಬ್ಬನ ಪಾಸ್‌ಪೋರ್ಟ್ ಮೂಲಕ ದುಬೈಗೆ ತೆರಳಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದ ಆರೋಪಿಗೆ 12 ವರ್ಷಗಳ ಬಳಿಕ ಮಂಗಳೂರು ನ್ಯಾಯಾಲಯವು ಜೈಲು ಶಿಕ್ಷೆ ವಿಧಿಸಿದೆ. ಬಂಟ್ವಾಳ ಸರಪಾಡಿ ಗ್ರಾಮದ ಬದ್ರುದ್ದೀನ್ ಶಿಕ್ಷೆಗೊಳಪಟ್ಟ ಅಪರಾಧಿ.ಬದ್ರುದ್ದೀನ್,ಹಸೈನಾರ್ ಎನ್ನುವವರ ಪಾಸ್‌ಪೋರ್ಟ್ ಬಳಸಿ 2010ರ ಫೆ.2ರ ರಾತ್ರಿ 7.37ಕ್ಕೆ ದುಬಾೖಗೆ ತೆರಳಲು ಪ್ರಯತ್ನಿಸಿದ್ದ.ಹಸೈನಾರ್ ನ ಪಾಸ್ ಪೋರ್ಟ್ ನ್ನು ಈತನಿಗೆ ಅಬ್ಬಾಸ್ ಕೊಟ್ಟಿದ್ದ. ಇಮಿಗ್ರೇಷನ್ ಅಧಿಕಾರಿ ಕೆ.ಎಂ. ಚಂದ್ರಶೇಖರ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಬಜಪೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಸಿ.ಜೆ.ಎಂ. ನ್ಯಾಯಾಲಯದ ನ್ಯಾಯಾಧೀಶೆ ಶಿಲ್ಪಾ ಅವರು 1ನೇ ಆರೋಪಿ ಬದ್ರುದ್ದೀನ್‌ಗೆ 1 ವರ್ಷ ಜೈಲು ಮತ್ತು 15 ಸಾವಿರ ರೂ.ದಂಡವನ್ನು ವಿಧಿಸಿದ್ದು, 2ನೇ ಆರೋಪಿ ಬಂಟ್ವಾಳ ಮಂಚಿ ಗ್ರಾಮದ ಅಬ್ನಾಸ್ ಅವರನ್ನು ಖುಲಾಸೆಗೊಳಿಸಲಾಗಿದೆ.
Author: main-admin
ಮಂಗಳೂರು: ಒಳ ಉಡುಪು, ಗುದನಾಳ, ಮಿಕ್ಸರ್ ಗ್ರೈಂಡರ್ ಮೋಟಾರ್ನಲ್ಲಿ ಅಕ್ರಮ ಚಿನ್ನ ಸಾಗಣೆ ಮಾಡುತ್ತಿರುವುದನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿ ಭಾರಿ ಪ್ರಮಾಣದ ಬಂಗಾರ ವಶಕ್ಕೆ ಪಡೆದುಕೊಂಡಿದ್ದಾರೆ. ಸೆ.25 ರಿಂದ 30 ವರೆಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿವಿಧ ಪ್ರಕರಣಗಳಲ್ಲಿ ಚಿನ್ನ ವಶಕ್ಕೆ ಪಡೆಯಲಾಗಿದೆ. ದುಬೈ ಮತ್ತು ಮಸ್ಕತ್ನಿಂದ ಬಂದ ಪ್ರಯಾಣಿಕರನ್ನು ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಸಾಗಿಸುತ್ತಿರುವುದು ಪತ್ತೆಯಾಗಿದೆ. ಕಾಸರಗೋಡು, ಭಟ್ಕಳ ಮತ್ತು ತ್ರಿವೇಂದ್ರಂ ಮೂಲದ ಐವರು ಪ್ರಯಾಣಿಕರು ಈ ಚಿನ್ನ ಸಾಗಿಸುತ್ತಿದ್ದರು. ಇವರಿಂದ 24 ಕ್ಯಾರೆಟ್ ಶುದ್ಧತೆಯ 1,703 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ರೂ. 86,09,730 ಎಂದು ಅಂದಾಜಿಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ 1.7 ಕೆಜಿ ಬಂಗಾರ ವಶಇವರಲ್ಲಿ ಕೆಲವು ಧರಿಸಿರುವ ಒಳಉಡುಪುಗಳ ಒಳಗೆ, ಗುದನಾಳದಲ್ಲಿ ಮತ್ತು ಮಿಕ್ಸರ್ ಗ್ರೈಂಡರ್ನ ಮೋಟಾರ್ ಒಳಗೆ ಬಚ್ಚಿಟ್ಟು ಚಿನ್ನ ಸಾಗಣೆ ಮಾಡುತ್ತಿರುವುದು ಪತ್ತೆಯಾಗಿದೆ. ಚಿನ್ನವನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ಮುಂದುವರಿಸಲಾಗಿದೆ
ಮಂಗಳೂರು : ನಗರದ ಮಿನಿವಿಧಾನಸೌಧದಲ್ಲಿರುವ ಮಂಗಳೂರು ತಾಲೂಕು ಕಚೇರಿಯಲ್ಲಿ ಶುಕ್ರವಾರ ಮಧ್ಯಾಹ್ನ ಮಂಗಳೂರು ತಹಶೀಲ್ದಾರ್ ಅವರ ಸಹಾಯಕ ಲಂಚ ಸ್ವೀಕರಿಸುತ್ತಿದ್ದ ವೇಳೆ ರೆಡ್‌ಹ್ಯಾಂಡ್ ಆಗಿ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾನೆ. ಶಿವಾನಂದ ನಾಟೇಕರ್ ಎಂಬಾತನನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದು, ಎನ್‌ಒಸಿಗಾಗಿ ನಾಗರಿಕರೊಬ್ಬರಿಂದ ಲಂಚ ಕೇಳಿ 4700 ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದಾನೆ. ಲೋಕಾಯುಕ್ತ ಎಸ್ಪಿ ಲಕ್ಷ್ಮಿ ಗಣೇಶ್ ಹಾಗೂ ಡಿವೈಎಸ್‌ಪಿ ಚೆಲುವರಾಜ್ ನೇತೃತ್ವದಲ್ಲಿ ಕಾರ್ಯಾಚರಣೆಯಲ್ಲಿ ನಡೆದಿದೆ. ಎಸಿಬಿ ರದ್ದಾಗಿ ಲೋಕಾಯುಕ್ತಕ್ಕೆ ಮತ್ತೆ ಅಧಿಕಾರ ಸಿಕ್ಕಿದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಪ್ರಕರಣ ಇದಾಗಿದೆ
ಬಂಟ್ವಾಳ: ಫರಂಗಿಪೇಟೆಯ ಕಾಂತಪ್ಪ ಪೂಂಜ ಸಂಕೀರ್ಣ ಎದುರು ನಿಂತಿದ್ದ ಎರಡು ಕಾರುಗಳಿಗೆ ವೋಕ್ಸ್ ವೆಗಾನ್ ಕಾರು ಢಿಕ್ಕಿ ಹೊಡೆದ ಪರಿಣಾಮ ಮೂರು ಕಾರುಗಳು ಕೂಡ ಜಖಂಗೊಂಡಿದೆ. ಬಿ.ಸಿ.ರೋಡು ಕಡೆಯಿಂದ ಅತಿ ವೇಗದಲ್ಲಿ ಬಂದ ಕಾರು, ಚಾಲಕನ ನಿಯಂತ್ರಣ ಕಳೆದುಕೊಂಡು ಫರಂಗಿಪೇಟೆಯಲ್ಲಿ ಹೆದ್ದಾರಿ ಬದಿ ನಿಲ್ಲಿಸಿದ್ದ ಮಾರುತಿ ಆಮ್ನಿ ಮತ್ತು ಮಾರುತಿ ಆಲ್ಟೊ ಕಾರಿಗೆ ಢಿಕ್ಕಿಯಾಗಿದ್ದು, ಅದರಲ್ಲಿ ಒಂದು ಕಾರು ರಿಪೇರಿಗೆ ನಿಲ್ಲಿಸಿದ್ದ ಟಿಪ್ಪರ್ ಗೆ ಢಿಕ್ಕಿಯಾಗಿದೆ. ಆಮ್ನಿ ಮತ್ತು ಟಿಪ್ಪರ್ ನಡುವೆ ಸಿಲಿಕಿದ ಮಾರುತಿ ಆಲ್ಟೊ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಂಗಳೂರು: ಡಿಸಿ ಮನ್ನ ಭೂಮಿಯನ್ನು ಅತಿಕ್ರಮಣ ಮಾಡಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಂಡು ಅದನ್ನು ತಕ್ಷಣ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಡಿಸಿ ಮನ್ನ ಭೂಮಿ ಅತಿಕ್ರಮಣ ಮಾಡಿ ಅಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡಿದಲ್ಲಿ ತಕ್ಷಣ ಸಂಬಂಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳ ಪರಿಶೀಲನೆ ನಡೆಸಿ, ಅದನ್ನು ಸ್ಥಗಿತಗೊಳಿಸಬೇಕು. 192(ಎ) ಪ್ರಕಾರ ಪ್ರಕರಣ ದಾಖಲಿಸಿ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು. ಪರಿಶಿಷ್ಟ ಜಾತಿ ಹಾಗೂ ಪಂಗಡದ ಹಿತಾಸಕ್ತಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳ ವ್ಯಾಪ್ತಿಗೆ ಬರುವ ವಿಚಾರಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸಲಾಗುತ್ತಿದೆ. ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸಗಳಿಗೆ ಸಂಬಂಧಿಸಿದವರು ಸಲ್ಲಿಸುವ ಮನವಿಯನ್ನು ಶಿಫಾರಸ್ಸು ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ. ಜಿಲ್ಲೆಯಲ್ಲಿರುವ ಸರ್ಕಾರದ ವಿವಿಧ ಕಚೇರಿಗಳಲ್ಲಿ ಬಾಹ್ಯ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಪರಿಶಿಷ್ಟ…
ಸುಬ್ರಹ್ಮಣ್ಯ : 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ದೂರಿನ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಮಹಿಳೆ ಸೇರಿ 14 ಮಂದಿಯ ವಿರುದ್ಧ ದೂರು ದಾಖಲಾಗಿದೆ. ಸುಬ್ರಹ್ಮಣ್ಯದ 14 ವರ್ಷದ ಬಾಲಕಿಯ ಮೇಲೆ 2015ರ ಜನವರಿಯಿಂದ 2022ರ ಮೇ ವರೆಗೆ ಬೇರೆ ಬೇರೆ ಆರೋಪಿಗಳು ಬೇರೆ ಬೇರೆ ಸ್ಥಳದಲ್ಲಿ ಅತ್ಯಾಚಾರ ನಡೆಸಿದ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ. ವೇದಾವತಿ, ವಿನೋದ್ ಮಣಿಯಾಣಿ, ಪ್ರವೀಣ್, ದಯಾನಂದ, ಹನುಮಂತ, ಆನಂದ, ಪ್ರದೀಪ್, ಅಚ್ಯುತಾ, ಸತೀಶ್ ಗೌಡ, ಜಯಪ್ರಕಾಶ್, ಜಯಪ್ರಕಾಶ್ ತಮ್ಮ, ಮಾಂಕು, ಗುತ್ತಿಗಾರಿನ ವ್ಯಕ್ತಿ, ವೇದಾವತಿ ಎಂಬವರ ಪ್ರಿಯತಮ ಎಂಬವರ ಮೇಲೆ ದೂರು ದಾಖಲಾಗಿದೆ. .ಬಾಲಕಿ 5ನೇ ತರಗತಿಯಲ್ಲಿ ಇರುವ ಸಂದರ್ಭದಲ್ಲಿ ಆಕೆಯ ಅತ್ತಿಗೆ ವೇದಾವತಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಬಳಿಕ ವಿವಿಧ ಆರೋಪಿಗಳು ಬೇರೆ ಬೇರೆ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬೆದರಿಕೆ ಒಡ್ಡಿರುವ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿದೆ. ಆರೋಪಿಗಳ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಲ್ಲಿ ಕಾನೂನು ಕ್ರಮಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ.…
ಬೆಳ್ತಂಗಡಿ: ಅಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಪ್ರಕರಣವೊಂದನ್ನು ಬೆಳ್ತಂಗಡಿ ಪೊಲೀಸರು ಪತ್ತೆ ಹಚ್ವಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ಸುಂದರ ಮೂಲ್ಯ ಎಂಬಾತನಾಗಿದ್ದು ಈತ ಪಿಕಪ್ ವಾಹನದಲ್ಲಿ ಹಿಂಸಾತ್ಮಕವಾದ ರೀತಿಯಲ್ಲಿ ದನವನ್ನು ತುಂಬಿಕೊಂಡು ಬರುತ್ತಿದ್ದಾಗ ಬೆಳ್ತಂಗಡಿ ಪೇಟೆಯಲ್ಲಿ ಪೊಲೀಸರು ವಾಹನವನ್ನು ನಿಲ್ಲಿಸಿ ಪರಿಶೀಲನೆ ನಡೆಸಿದಾಗ ಯಾವುದೇ ಪರವಾನಿಗೆಯಿಲ್ಲದೆ ದನ ಸಾಗಾಟ ಮಾಡುತ್ತಿರುವುದು ಸ್ಪಷ್ಟಗೊಂಡಿದ್ದು ಆರೋಪಿ ಸುಂದರ ಮೂಲ್ಯ ನನ್ನು ಬಂಧಿಸಿದ್ದಾರೆ. ಸಾಗಾಟಮಾಡುತ್ತಿದ್ದ ದನವನ್ನು ಹಾಗೂ ಸಾಗಾಟಕ್ಕೆ ಉಪಯೋಗಿಸಿದ ಪಿಕಪ್ ವಾಹನವನ್ನು ವಶಕ್ಕೆ ಪಡೆಯಲಾಗಿದ್ದು, ಇದರ ಒಟ್ಟು ಮೌಲ್ಯ 160,000 ಎಂದು ಅಂದಾಜಿಸಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಕೊಳ್ಳಲಾಗಿದೆ.
ಮಂಗಳೂರು: ಮಂಗಳೂರಿನ ಬಸ್‌ಗಳಲ್ಲಿ ಕನ್ನಡ ನಾಮ ಫಲಕ ಕಡ್ಡಾಯಗೊಳಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿರುವುದನ್ನು ಆಕ್ಷೇಪಿಸಿ ತುಳು ಭಾಷಾ ಸಂರಕ್ಷಣಾ ಸಮಿತಿ ಕುಡ್ಲ ವತಿಯಿಂದ ಇಂದು ಮಂಗಳೂರಿನ ಕ್ಲಾಕ್ ಟವರ್ ಬಳಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ತೌಳವ ನಾಡಿನಲ್ಲಿ ತುಳು ಭಾಷೆಯ ಮೇಲೆ ಕನ್ನಡದ ಸವಾರಿ, ಕನ್ನಡ ಕಡ್ಡಾಯದಿಂದ ತುಳುವಿಗೆ ಅನ್ಯಾಯ, ಜೈ ಜೈ ತುಳುನಾಡು, ತುಳು ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂಬಿತ್ಯಾದಿ ಘೋಷಣೆ ಕೂಗಿದರು. ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಆದರೆ ತುಳು ನಮಗೆ ಅಗತ್ಯ. ತುಳು ಭಾಷೆ ನಮ್ಮ ಮಾತೃ ಭಾಷೆ; ಅದಕ್ಕೆ ಪ್ರಾಮುಖ್ಯತೆ ನೀಡ ಬೇಕು ಇತ್ಯಾದಿ ಭಿತ್ತಿ ಪತ್ರ ಹಿಡಿದು ಪ್ರತಿಭಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜೈ ತುಳುನಾಡು ಸಂಘಟನೆ ಮತ್ತು ತುಳು ಭಾಷಾ ಸಂರಕ್ಷಣಾ ಸಮಿತಿಯ ಮುಖಂಡ ವಿಕಾಸ್ ಅವರು ತುಳು ಭಾಷೆಗೆ 2,500 ವರ್ಷಗಳಿಗೂ ಅಧಿಕ ಇತಿಹಾಸವಿದೆ. ತುಳುವಿನಲ್ಲಿ 1000 ಕ್ಕೂ ಮಿಕ್ಕಿ ಪಾಡ್ದನೆಗಳಿವೆ. ಇದು ಒಂದು ಧರ್ಮದ ಭಾಷೆಯಲ್ಲ. ಇದು ಒಂದು ಪ್ರದೇಶದ…
ಕಾರ್ಕಳ : ತಾಲೂಕಿನ ಬೈಲೂರು ಗುಡ್ಡೆಅಂಗಡಿ ಬಳಿ ಸರ್ಕಾರಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹಿರಿಯಡ್ಕ ಬೊಮ್ಮಾರಬೆಟ್ಟು ಗ್ರಾಮದ ನಿವಾಸಿ ಮನೋಹರ ಜೋಗಿ (30ವ) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಈ ಅಪಘಾತ ನಡೆದಿದ್ದು ಖಾಸಗಿ ಬಸ್‌ನ ಕಂಡಕ್ಟರ್ ಆಗಿದ್ದ ಮನೋಹರ ಜೋಗಿ ಕರ್ತವ್ಯ ಮುಗಿಸಿ ತನ್ನ ಬೈಕಿನಲ್ಲಿ ಮನೆಗೆ ತೆರಳುಗುತ್ತಿದ್ದಾಗ ಬೈಲೂರಿನ ಗುಡ್ಡೆಯಂಗಡಿ ಎಂಬಲ್ಲಿ ಸರ್ಕಾರಿ ಬಸ್ ಡಿಕ್ಕಿಯಾಗಿದೆ.
ವಿಟ್ಲ: ಬಂಟ್ವಾಳದ ವಿಟ್ಲ ಸಮೀಪದ ಕಡಂಬುವಿನ ಯುವಕ ಕೇರಳದಲ್ಲಿ ನಡೆದ ರೈಲು ಅಪಘಾತದಲ್ಲಿ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಇಲ್ಲಿನ ಕಡಂಬು ಸಮೀಪದ ಪಿಲಿವಲಚ್ಚಿಲ್ ನಿವಾಸಿ ಅಶ್ರಫ್ (19) ಮೃತಪಟ್ಟ ಯುವಕ. ವೃತ್ತಿಯಲ್ಲಿ ಎಸಿ ಮೆಕಾನಿಕ್ ಆಗಿದ್ದ ಈತ ಎಸಿ ಟ್ರೈನಿಂಗ್‌ಗಾಗಿ ಕೇರಳದ ಕೊಚ್ಚಿಗೆ ತೆರಳಿದ್ದರು. ತನ್ನ ಕೆಲಸ ಕಾರ್ಯ ಮುಗಿಸಿ, ಊರಿಗೆ ರೈಲಿನಲ್ಲಿ ಹಿಂತಿರುಗುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊರಗಡೆ ಎಸೆಯಲ್ಪಟ್ಟು, ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.