ಮಂಗಳೂರು: ಕಾನೂನುಬಾಹಿರ ಚಟುವಟಿಕೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಪಿಎಫ್ಐ ಸಂಘಟನೆ ಹಾಗೂ ಅದರ ಅಂಗ ಸಂಸ್ಥೆಗಳನ್ನು ಬ್ಯಾನ್ ಮಾಡಿರುವ ಬೆನ್ನಲ್ಲೇ ಇದೀಗ ಮಂಗಳೂರು ಪೊಲೀಸರು ಈ ಸಂಘಟನೆಗಳ 12 ಕಚೇರಿಗಳಿಗೆ ಬೀಗಮುದ್ರೆ ಜಡಿದಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 10 ಪಿಎಫ್ಐ ಕಚೇರಿಗಳು, 1 ಸಿಎಫ್ಐ ಕಚೇರಿ, 1 ಐಇ ಕಚೇರಿಗೆ ಬೀಗ ಜಡಿಯಲಾಗಿದೆ. ಪಣಂಬೂರು ಠಾಣಾ ವ್ಯಾಪ್ತಿಯ ಕಸಬಾ ಬೆಂಗ್ರೆ, ಸುರತ್ಕಲ್ ಠಾಣಾ ವ್ಯಾಪ್ತಿಯ ಚೊಕ್ಕಬೆಟ್ಟು, ಕಾಟಿಪಳ್ಳ -2ನೇ ಬ್ಲಾಕ್, ಬಜ್ಪೆ ಠಾಣಾ ವ್ಯಾಪ್ತಿಯ ಅಡ್ಡೂರು, ಕಿನ್ನಿಪದವು, ಉಳ್ಳಾಲ ಠಾಣಾ ವ್ಯಾಪ್ತಿಯ ಕೆ.ಸಿ.ರೋಡ್, ಕೊಣಾಜೆ ಠಾಣಾ ವ್ಯಾಪ್ತಿಯ ಇನೋಳಿ, ಮಂಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಲ್ಲೂರು, ಮಂಗಳೂರು ಸೌತ್ ಠಾಣಾ ವ್ಯಾಪ್ತಿಯ ನೆಲ್ಲಿಕಾಯಿ ರಸ್ತೆ, ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಕುದ್ರೋಳಿ – ಕರ್ಬಲಾ ರಸ್ತೆಯ ಕಚೇರಿಗಳು ಸೇರಿ ಪಿಎಫ್ಐನ ಒಟ್ಟು 10 ಕಚೇರಿಗಳಿಗೆ ಪೊಲೀಸರು ಬೀಗ ಜಡಿದಿದ್ದಾರೆ. ಅದೇ ರೀತಿ ಮಂಗಳೂರು ಉತ್ತರ ಠಾಣಾ ವ್ಯಾಪ್ತಿಯ ಅಝಿಝುದ್ದೀನ್ ರಸ್ತೆಯ…
Author: main-admin
ಉಳ್ಳಾಲ: ಕಾರ್ಯಕ್ರಮವೊಂದರ ಫ್ಲೆಕ್ಸ್ ನಲ್ಲಿ ಮಹಿಳೆಯ ಅನುಮತಿ ಇಲ್ಲದೆ ಫೋಟೋ ಅಳವಡಿಸಿದ ಬಗ್ಗೆ ಕೇರಳದ ಭಜರಂಗದಳದ ಕಾರ್ಯಕರ್ತರು ಕಾರ್ಯಕ್ರಮ ಆಯೋಜಕರಿಗೆ ಸರಿಯಾಗಿ ಕ್ಲಾಸ್ ಕೊಟ್ಟ ಘಟನೆ ಕೋಲ್ಯ ನಾರಾಯಣಗುರು ಸಭಾಭವನದಲ್ಲಿ ಬುಧವಾರ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಮಂಗಳೂರು ಗ್ರಾಮಾಂತರ ತಾಲೂಕು ಮಟ್ಟದ ಪೋಷಣ ಮಾಸಾಚರಣೆ ಕಾರ್ಯಕ್ರಮ,ಅನ್ನಪ್ರಾಶನ, ಪೌಷ್ಟಿಕ ಆಹಾರ ಹಾಗೂ ಸೀಮಂತ ಕಾರ್ಯಕ್ರಮ ಕೊಲ್ಯನಾರಾಯಣಗುರು ಸಭಾಂಗಣದಲ್ಲಿ ಬುಧವಾರ ನಡೆಯಿತು. ಕಾರ್ಯಕ್ರಮದ ಪ್ರಚಾರ ಪ್ರಯುಕ್ತ ಸಭಾಂಗಣದ ಮುಂದೆ ಅಳವಡಿಸಿದ್ದ ಫ್ಲೆಕ್ಸ್ ನಲ್ಲಿ ಹಿಂದೂ’ ಮಹಿಳೆಯೊಬ್ಬರ ಹಲವು ವರ್ಷಗಳ ಹಿಂದಿನ ಗರ್ಭಿಣಿ ಭಾವಚಿತ್ರವನ್ನು ಜಾಲತಾಣದಿಂದ ನಕಲು ಮಾಡಿ ಅಳವಡಿಸಲಾಗಿದೆ, ಪಕ್ಕದಲ್ಲೇ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಅವರ ಫೋಟೋ ಬಳಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕೆರಳಿದ ಭಜರಂಗ ದಳದ ಕಾರ್ಯಕರ್ತರು ಕಾರ್ಯಕ್ರಮ ನಡೆಯುತ್ತಿದ್ದ ನಾರಾಯಣಗುರು ಸಭಾಂಗಣದೊಳಗೆ ನುಗ್ಗಿ ಆಯೋಜಕರ ನಿರ್ಲಕ್ಷ್ಯತನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ಶಾಸಕರ ವಿರುದ್ಧ ಘೋಷಣೆ ಕೂಗಿದರು. ಮಹಿಳೆಯರ ಬಗ್ಗೆ…
ಕೊಡಗು : ಜಿಲ್ಲೆ ಮಡಿಕೇರಿ ತಾಲೂಕಿನ ಹೊಸ್ಕೇರಿ ಗ್ರಾಮದಲ್ಲಿ ರಾಜಕೀಯ ದ್ವೇಷದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಬಿಜೆಪಿ ಕಾರ್ಯಕರ್ತರ ನಡುವೆ ಕತ್ತಿಯಿಂದ ಹಲ್ಲೆ ನಡೆಸಲಾದ ಘಟನೆ ನಡೆದಿದೆ ರಾಜಕೀಯ ದ್ವೇಷದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತ ಪ್ರಭುಶೇಖರ-ಹೊಸ್ಕೇರಿ ಗ್ರಾ.ಪಂ.ಅಧ್ಯಕ್ಷ , ಬಿಜೆಪಿ ಕಾರ್ಯಕರ್ತ ತಾಲೂಕು ಪಂಚಾಯಿತಿ ಮಾಜಿ ಸದಸ್ಯನಾಗಿರುವ ಅಪ್ಪು ರವೀಂದ್ರ ಸೋದರರು ನಡುವೆಯೇ ಗಲಾಟೆ ತೀವ್ರಗೊಂಡು ಹಲ್ಲೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ಯಶ್ ದೋಲ್ಪಾಡಿ, ಖಜಾಂಜಿ ಚಂದನ್‌ಗೆ ಗಂಭೀರ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಸೋದರರಾದ ಪ್ರಭುಶೇಖರ, ಆನಂದ್, ರಘು , ರವೀಂದ್ರರಿಂದ ಹಲ್ಲೆಗೈಯ್ಯಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಮಲ್ಪೆ: ಮಲ್ಪೆ ಪಡುಕರೆ ಸೇತುವೆ ಬಳಿ ಬೈಕ್, ಚಪ್ಪಲಿ ಇರಿಸಿ, ನೀರಿಗೆ ಬಿದ್ದು ಕಣ್ಮರೆಯಾದ ನಾಟಕವಾಡಿದ ದಾವಣಗೆರೆಯ ಯುವಕ ಶಿವಪ್ಪ ನಾಯ್ಕ ಸೋಮವಾರ ದಾವಣಗೆರೆಯಲ್ಲಿ ಪತ್ತೆಯಾಗಿದ್ದಾನೆ. ಕಟ್ಟಿಕೊಂಡವಳನ್ನು ಬಿಟ್ಟು ಇಟ್ಟುಕೊಂಡವಳೊಂದಿಗೆ ಸಂಸಾರ ನಡೆಸುವ ಉದ್ದೇಶದಿಂದ ಪೊಲೀಸರ ಹಾದಿ ತಪ್ಪಿಸಲು ನೀರಿನಲ್ಲಿ ಮುಳುಗಿ ನಾಪತ್ತೆ ನಾಟಕವಾಡಿದ್ದ ಎನ್ನಲಾಗಿದೆ. ಇದೀಗ ಪೋಲೀಸರು ಆತನನ್ನು ಪತ್ತೆ ಹಚ್ಚಿ ಸೋಮವಾರ ಮಲ್ಪೆ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. 6 ತಿಂಗಳ ಹಿಂದೆ ದಾವಣಗೆರೆಯ ಉತ್ಕಟಿ ತಾಂಡದ ಆಶಾ ಅವರನ್ನು ಪ್ರೀತಿಸಿ ಮದುವೆಯಾಗಿ ಮಲ್ಪೆ ಕೊಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಹೋರುವ ಕೆಲಸ ಮಾಡಿಕೊಂಡಿದ್ದು, ಇದರ ಮಧ್ಯೆ ಹೊಸಪೇಟೆ ಹರಪ್ಪನಹಳ್ಳಿಯ ಕಮಲಿಯೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದ. ಇದೇ ವಿಚಾರದಲ್ಲಿ ಕೆಲವು ದಿನಗಳಿಂದ ಕಟ್ಟಿ ಕೊಂಡ ಹೆಂಡತಿಯೊಂದಿಗೆ ವೈಮನಸ್ಸು ಹೊಂದಿ ಜಗಳಕ್ಕೂ ಕಾರಣವಾಗಿತ್ತು. ಕಮಲಿಯೂ ಕೂಡ ಮೀನುಗಾರಿಕೆ ಬಂದರಿನಲ್ಲಿ ಕೆಲಸ ಮಾಡುತ್ತಿದ್ದಳು. ಈಶ್ವರ್ ಮಲ್ಪೆಯಿಂದಹೊಳೆಯಲ್ಲಿ ಹುಡುಕಾಟಸೆ. 23ರಂದು ಆತನ ಬೈಕ್ ಮತ್ತು ಚಪ್ಪಲಿಯು ಸೇತುವೆಯ ತಡೆಗೋಡೆಯಲ್ಲಿ ಕಂಡುಬಂದಿತ್ತು.…
ಪಡುಬಿದ್ರಿ: ನಾಲ್ಕು ವರ್ಷಗಳ ಹಿಂದೆ ಉಚ್ಚಿಲ ಪೊಲ್ಯ ನಿವಾಸಿ ಇರ್ಫಾನ್ ಶೇಖ್ ಅವರನ್ನು ವಿವಾಹವಾಗಿದ್ದ ಝಾಯಿದಾ (27) ಅವರು ಗಂಡ, ಅತ್ತೆ, ಮಾವ, ಬಾವ ಹಾಗೂ ಆತನ ಹೆಂಡತಿ ಸೇರಿ ಐವರ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಹಾಗೂ ಕೊಲೆಯತ್ನದ ದೂರನ್ನು ದಾಖಲಿಸಿದ್ದಾರೆ. ತನಗೆ ಗಂಡನೂ ಸೇರಿ ಅತ್ತೆ ಮನೆಯವರು ನಿರಂತರ 5 ಲಕ್ಷ ರೂ. ನಗದು ಹಾಗೂ ಚಿನ್ನವನ್ನು ತರುವಂತೆ ಕಿರುಕುಳ ನೀಡುತ್ತಿದ್ದರು. ಸೆ. 25ರ ರಾತ್ರಿ ತನ್ನನ್ನು ಕೊಲ್ಲುವ ಯತ್ನವನ್ನೂ ನಡೆಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದಲೂ ಈ ಕಿರುಕುಳವು ನಡೆಯುತ್ತಲೇ ಬಂದಿದೆ. ಈಗ ತಾನು ಮೂರು ವರ್ಷದ ಗಂಡು ಮಗುವಿನ ತಾಯಿಯಾಗಿದ್ದು, ಸೆ. 25ರ ರಾತ್ರಿ ಮಾವ ಸುಲೈಮಾನ್ ಶೇಖ್, ಅತ್ತೆ ಆಲೀಮಾ, ಬಾವ ಅಫ್ಜಲ್ ಶೇಖ್ ಹಾಗೂ ಆತನ ಪತ್ನಿ ಸಬೀನಾ ಒಟ್ಟು ಸೇರಿ ಕುತ್ತಿಗೆ ಹಿಸುಕಿ, ಕೈಬೆರಳನ್ನು ತಿರುಚಿ, ಸೀಮೆ ಎಣ್ಣೆ ಸುರಿದು ಸುಡಲು ಯತ್ನಿಸಿದ್ದಾರೆ. ಬಾವನ ಹೆಂಡ್ತಿ ತಲೆಗೂದಲನ್ನು…
ನವದೆಹಲಿ : ದೇಶಾದ್ಯಂತ ಎನ್ ಐಎ ದಾಳಿ ಬೆನ್ನಲ್ಲೇ ದೇಶದಲ್ಲಿ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಕೇಂದ್ರ ಗೃಹ ಇಲಾಖೆ ಆದೇಶ ಹೊರಡಿಸಿದ್ದು, ಕೇಂದ್ರ ಸರ್ಕಾರವು ಪಿಎಫ್‌ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಮತ್ತು ಅದರ ಸಹವರ್ತಿಗಳು ಅಥವಾ ಅಂಗಸಂಸ್ಥೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ಕಾನೂನುಬಾಹಿರ ಸಂಘಟನೆ ಎಂದು ಘೋಷಿಸಲಾಗಿದೆ. ಕೆಲ ದಿನಗಳ ಹಿಂದೆ ದೇಶಧ 15 ರಾಜ್ಯಗಳಲ್ಲಿ ಪಿಎಫ್ ಐ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ನಡೆಸಿ ನೂರಾರು ಕಾರ್ಯಕರ್ತರನ್ನು ಬಂಧಿಸಿದ್ದು, ಈ ಸಂಘಟನೆ ಉಗ್ರವಾದಕ್ಕೆ ಬೆಂಬಲ ನೀಡುತ್ತಿರುವ ಬಗ್ಗೆ ಸಂಗ್ರಹಿಸಿರುವ ಸಾಕ್ಷ್ಯಗಳ ಆಧಾರದಲ್ಲಿ ಪಿಎಫ್ ಐ ಅನ್ನು ದೇಶದಲ್ಲಿ 5 ವರ್ಷಗಳ ಕಾಲ ನಿಷೇಧಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ.
ಮಂಗಳೂರು: ನಗರದ ಹೊರವಲಯದ ಗಂಜಿಮಠ ಬಳಿಯ ಮಳಲಿ ಮಸೀದಿ ವಿವಾದ ಹಿನ್ನೆಲೆ ಸ್ಥಳದಲ್ಲಿ ಸರ್ವೇ ಮಾಡಿಸುವಂತೆ ಕೋರಿ ವಿಶ್ವ ಹಿಂದೂ ಪರಿಷತ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ 3ನೇ ಹೆಚ್ಚುವರಿ ಸಿವಿಲ್ ಕೋರ್ಟ್, ಆದೇಶವನ್ನು ಕಾಯ್ದಿರಿಸಿದೆ. ಅಲ್ಲದೆ ಅ.17ರಂದು ಆದೇಶ ಹೊರಡಿಸುವುದಾಗಿ ಸ್ಪಷ್ಟಪಡಿಸಿದೆ. ಏಪ್ರಿಲ್ 21ರಂದು ನಗರದ ಹೊರವಲಯದ ಮಳಲಿಯಲ್ಲಿರುವ ಅಸಯ್ಯಿದ್ ಅಬ್ದುಲ್ಲಾಹಿಲ್ ಮದನಿ ಮಸೀದಿಯನ್ನು ನವೀಕರಣ ಹಿನ್ನೆಲೆಯಲ್ಲಿ ಕೆಡವಿ ಹಾಕಲಾಗಿತ್ತು. ನವೀಕರಣಕ್ಕೆ ಮುಂದಾದಾಗ ಹಿಂದೂ ದೇಗುಲ ಹೋಲುವ ಆಕೃತಿಯ ವಾಸ್ತುಶಿಲ್ಪದ ಕಟ್ಟಡ ಪತ್ತೆಯಾಗಿತ್ತು.ಇದು ವಿವಾದಕ್ಕೆ ಕಾರಣವಾಗಿದೆ.
ಉಪ್ಪಿನಂಗಡಿ;ಸರಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿರುವ ಘಟನೆ ಬೆಳಕಿಗೆ ಬಂದಿದೆ. ಸೋಮವಾರ ಸಂಜೆ ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಪಿಯು ವಿದ್ಯಾರ್ಥಿಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿದೆ.ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ವಾಗ್ವಾದ ನಡೆಸಿ ಹೊಡೆದಾಟ ಮಾಡಿದ ಬಗ್ಗೆ ವರದಿಯಾಗಿದೆ. ಇನ್ನು ಈ ಸಂಬಂಧ ಮೂವರನ್ನು ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ಸಿಕ್ಕಿದೆ. ಇತ್ತೀಚೆಗೆ ಇದೇ ಕಾಲೇಜಿನ ವಿದ್ಯಾರ್ಥಿಗಳ ನಡುವಿನ ಗಲಾಟೆ ಪೊಲೀಸರ ಮಧ್ಯಪ್ರವೇಶದಿಂದ ಬಗೆಹರಿದಿತ್ತು.
ಸುರತ್ಕಲ್: ಚಿಟ್ ಫಂಡ್ ವ್ಯವಹಾರದಲ್ಲಿ ವಂಚನೆ ಮಾಡಿರುವ ಘಟನೆ ಸುರತ್ಕಲ್ ಸಮೀಪದ ಇಡ್ಯಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಫೈನಾನ್ಸ್ ಮೂಲಕ ಚಿಟ್ ಫಂಡ್ ವ್ಯವಹಾರ ನಡೆಸುತ್ತಿದ್ದ ಅಶೋಕ್ ಭಟ್, ವಿದ್ಯಾ ಹಾಗೂ ಪ್ರಿಯಾಂಕ ಭಟ್ ಎಂಬವರು ತನಗೆ 10 ಲಕ್ಷ ರೂಪಾಯಿಯನ್ನು ನೀಡದೇ ವಂಚಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಆರೋಪಿಗಳ ಫೈನಾನ್ಸ್ ನಲ್ಲಿ ನಾನು 10 ಲಕ್ಷ ರೂಪಾಯಿ ಮೌಲ್ಯದ ಚಿಟ್ ಫಂಡ್ ಗೆ ಸೇರಿದ್ದು, 2019ರ ಸೆಪ್ಟೆಂಬರ್ ನಿಂದ ಪ್ರತೀ ತಿಂಗಳು 50 ಸಾವಿರ ರೂಪಾಯಿ ಚಿಟ್ ಫಂಡ್ ಗೆ ಪಾವತಿಸಲು ತಿಳಿಸಿದ್ದರು. ಅದಕ್ಕೆ ಒಪ್ಪಿದ ಬಳಿಕ ಆರೋಪಿತರು ಪ್ರತಿದಿನ 1,500 ರೂಪಾಯಿಯನ್ನು ನನ್ನಿಂದ ಪಡೆದುಕೊಂಡು ಹೋಗುತ್ತಿದ್ದರು. ತಿಂಗಳಿಗೊಮ್ಮೆ ಕಚೇರಿಗೆ ಹೋಗಿ ವ್ಯಹಾರದ ಪಾಸ್ ಪುಸ್ತಕದಲ್ಲಿ ಹಣ ಕಟ್ಟಿರುವ ಬಗ್ಗೆ ನಮೂದಿಸಿ ಸಹಿ ಪಡೆದುಕೊಂಡು ಬರುತ್ತಿದ್ದೆ. 2021ರ ಮಾರ್ಚ್ 28ರಂದು ಫಂಡ್ ಮುಕ್ತಾಯವಾಗಿದ್ದು, ನಂತರದ ದಿನಗಳಲ್ಲಿ ಹಣ ಪಾವತಿಸುವುದಾಗಿ ಫೈನಾನ್ಸ್ ಮಾಲಕರು ತಿಳಿಸಿದ್ದರು.…
ಬಂಟ್ವಾಳ: ಮಂಗಳವಾರ ನಸುಕಿನ ವೇಳೆ ಪಿಎಫ್ಐ ಜಿಲ್ಲಾಧ್ಯಕ್ಷ ಇಜಾಜ್ ಅಹಮದ್ ಸೇರಿದಂತೆ ಮೂವರನ್ನು ಬಂಟ್ವಾಳ ಪೊಲೀಸರು ವಶಕ್ಕೆ ಪಡೆದು (Preventive arrest) ತಹಶೀಲ್ದಾರ್ ಮುಂದೆ ಹಾಜರುಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಬಿ.ಸಿ.ರೋಡ್ ಸುತ್ತಮುತ್ತ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಗೂಡಿನ ಬಳಿಯ ಫಿರೋಜ್ ಮತ್ತು ರಾಝಿಕ್ ಇತರ ಇಬ್ಬರು. ಈಗಾಗಲೇ ಕೆಲ ದಿನಗಳಿಂದ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪಿಎಫ್ಐ ಕಾರ್ಯಕರ್ತರ ಬಂಧನ ಹಾಗೂ ವಿಚಾರಣೆ ನಡೆಯುತ್ತಿದ್ದು, ಇದರ ಒಂದು ಭಾಗವಾಗಿ ಈ ಕಾರ್ಯಾಚರಣೆ ವರಿಷ್ಠ ಪೊಲೀಸ್ ಅಧಿಕಾರಿಗಳ ಸೂಚನೆಯಂತೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸರು ಕೈಗೊಂಡಿದ್ದಾರೆ. ಬಂಟ್ವಾಳ ಸುತ್ತಮುತ್ತಲಿರುವ ಪಿಎಫ್ಐ ಕಾರ್ಯಕರ್ತರ ಮನೆಗಳಿಗೆ ತೆರಳಿದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಅವರನ್ನು ಪ್ರತಿಬಂಧಕ ಕಾಯ್ದೆಯಡಿ ಗರಿಷ್ಠ ಅವಧಿಯ ಮುಚ್ಚಳಿಕೆಗಾಗಿ ಕಾರ್ಯನಿರ್ವಾಹಕ ನ್ಯಾಯಾಧೀಶರೂ ಆಗಿರುವ ಬಂಟ್ವಾಳ ತಹಶೀಲ್ದಾರ್ ಡಾ. ಸ್ಮಿತಾ ರಾಮು ಅವರ ಮುಂದೆ ಹಾಜರುಪಡಿಸಿದ್ದಾರೆ.